ದಿನ ಭವಿಷ್ಯ: 08 ನವೆಂಬರ್, 2018!!

0
474
ದಿನ ಭವಿಷ್ಯ

Astrology in kannada | kannada news ದಿನ-ಭವಿಷ್ಯ: 08 ನವೆಂಬರ್, 2018!!

ದಿನ-ಭವಿಷ್ಯ: 08 ನವೆಂಬರ್, 2018!!

ಮೇಷ:

ದಿನ ಭವಿಷ್ಯ

ಮೇಷ:- ಇಷ್ಟು ದಿನ ಕಷ್ಟಗಳನ್ನು ಎದುರಿಸಿದ್ದ ನಿಮಗೆ, ಮಹತ್ವಾಕಾಂಕ್ಷೆಯು ಮೂಡಿ ದೊಡ್ಡ ಮಟ್ಟಕ್ಕೆ ಬೆಳೆಯುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಸಕಾರಾತ್ಮಕ ಚಿಂತನೆಯಿಂದ ಈ ಕಾರ್ತೀಕ ಮಾಸ ನಿಮಗೆ ಅತ್ಯಂತ ಲಾಭಗಳನ್ನು ತರಲಿದೆ.

ವೃಷಭ:

ದಿನ ಭವಿಷ್ಯ

ವೃಷಭ:- ಮಕ್ಕಳಿಂದ ನಿಮಗೆ ಕೀರ್ತಿ, ಸಂಪತ್ತು ಹೆಸರು ಬರಲಿದೆ. ಈ ಬಲಿ ಪಾಡ್ಯಮಿಯಂದು ದೇವತಾ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ನೀವು ಕೈಗೊಂಡಿರುವ ಎಲ್ಲಾ ಕಾರ್ಯಗಳಲ್ಲಿಯೂ ಯಶವನ್ನು ಕಾಣಲಿದ್ದೀರಿ.

ಮಿಥುನ:

ದಿನ ಭವಿಷ್ಯ

ಮಿಥುನ:- ಕಂಕಣ ಮತ್ತು ಸಂತಾನ ಅಪೇಕ್ಷಕರಿಗೆ ಒಳ್ಳೆಯ ಸುದ್ದಿ ಕೇಳಿ ಬರಲಿದೆ. ಮುಂದಿನ ಕೆಲ ದಿನಗಳು ವಾಹನ ಓಡಿಸುವಾಗ ಎಚ್ಚರವಿರಲಿ, ಗಣೇಶನಿಗೆ ಪ್ರಾರ್ಥಿಸುವುದು ಒಳಿತು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಕಷ್ಟಗಳು ಬಂದಿವೆ ಅಂತ ಮಾನಸಿಕ ಉದ್ವೇಗಗೊಳಗಾಗುವುದು ಬೇಡ, ಸಂಯಮದಿಂದ ಬಂದ ಕಷ್ಟಗಳ ಬಗ್ಗೆ ನಿಮ್ಮ ಹತ್ತಿರದವರೊಡನೆ ಮಾತನಾಡಿ; ಅವರಿಂದ ಎಂಥ ಕ್ಲಿಷ್ಟ ಪರಿಸ್ಥಿತಿ ಇದ್ದರೂ ಜಯಸಲಿದ್ದೀರಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಶ್ರಮ ಪಟ್ಟರೆ ಮಾತ್ರ ಯಶಸ್ಸು ಸಿಗುತ್ತೆ, ಶ್ರಮವಿಲ್ಲದೇ ಕೇವಲ ಅದೃಷ್ಟದಿಂದ ಏನೂ ಆಗುವುದಿಲ್ಲವೆಂದು ನಿಮಗೇ ಕೆಲವು ವರ್ಷಗಳಿಂದ ಮನವರಿಕೆಯಾಗಿರಬೇಕು. ಇನ್ನಾದರೂ ಫಲದ ಬಗ್ಗೆ ಯೋಚನೆ ಬಿಟ್ಟು ನಿಮ್ಮ ಶ್ರಮದ ಮೇಲಷ್ಟೇ ಗಮನ ಹರಿಸಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಜೋಕೆ ಇನ್ನೊಬರಿಗೆ ಕೆಡಕು ಬಯಸಿದರೆ ಅದರ ದುಪ್ಪಟ್ಟು ಕೆಡಕು ನಿಮಗೇ ಆಗಲಿದೆ. ನಿಮಗೆ ಕಷ್ಟ ಬಂದಿರುವುದು ನಿಜ, ಇನ್ನು ಸ್ವಲ್ಪ ದಿನ ನೀವು ತಾಳ್ಮೆಯಿಂದಿದ್ದರೆ ನಿಮಗೆ ಭಾಗ್ಯದ ಬಾಗಿಲು ತೆರೆಯುತ್ತದೆ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ನೀವು ಮಾಡುವ ಕೆಲಸ ಅಚ್ಚುಕಟ್ಟಿನದಾಗಿರುತ್ತದೆ. ಅಂತೆಯೆ ಮಾನಸಿಕ ತೃಪ್ತಿಯು ನಿಮಗೆ ಲಭ್ಯವಿದೆ. ಆದರೆ ಇದಕ್ಕಾಗಿ ಸಂದಾಯವಾಗಬೇಕಾಗಿದ್ದ ಹಣಕಾಸು ತಮಗೆ ತಡವಾಗಿ ತಲುಪುವ ಸಾಧ್ಯತೆ ಇರುತ್ತದೆ

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ನಿಮ್ಮ ಜೀವನವನ್ನು ಇನ್ನೊಬ್ಬರ ಜೀವನಕ್ಕೆ ಹೋಲಿಕೆ ಮಾಡಿಕೊಂಡು ಕೊರಗಬೇಡಿ, ನೀವು ಪಟ್ಟಿರುವ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುವ ಕಾಲ ಹತ್ತಿರವಾಗುತ್ತಿದೆ. ಸ್ವಲ್ಪ ಸಮಯ ದೂರದ ಪ್ರಯಾಣ ಮಾಡದಿರುವುದು ಒಳಿತು.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ಗುರುವಿನ ಕೃಪೆಯಿಂದ ಒಳಿತಾಗುವುದು. ಕೋರ್ಟು ಕಚೇರಿಯ ಕೆಲಸದಲ್ಲಿ ನಿಮ್ಮಂತೆ ತೀರ್ಮಾನ ಹೊರಬೀಳುವುದು. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಇದು ನಿಮಗೆ ಸಕಾಲ, ಹೊಸ ಕೆಲಸ ಶುರು ಮಾಡಬೇಕೆಂದಿದ್ದರೆ ತಡಮಾಡದೆ ಶುರು ಮಾಡಿ. ನೀವು ಹೊಸ ಆಸ್ತಿ, ವಾಹನ ಖರಿದಿಸುವುದಕ್ಕೂ ಇದು ಒಳ್ಳೆಯ ಸಮಯ, ಆದರೆ ಭರಿಸಲಾಗದ ಸಾಲದ ಹೊರೆಯ ಬಗ್ಗೆ ಗಮನವಿರಲಿ.

ಕುಂಭ:

ದಿನ ಭವಿಷ್ಯ

ಕುಂಭ:- ಹಣದ ಹರಿವು ಕಡಿಮೆಯಿದ್ದರೂ, ನಿಮ್ಮ ಜೀವನದಲ್ಲಿ ಹಾಗು ಕುಟುಂಬದಲ್ಲಿ ನೆಮ್ಮದಿಯಿದೆ. ಹಣದ ಹರಿವು ಕೂಡ ಇನ್ನೆರಡು ತಿಂಗಳಲ್ಲಿ ಸರಿಹೋಗಲಿದೆ, ತಾಳ್ಮೆ ಕಳೆದುಕೊಂಡು ಹಣದ ಹಿಂದೆ ಹೋಗದಿರಿ, ಈಗಿರುವ ಕುಟುಂಬದ ನೆಮ್ಮದಿಯೂ ಕೈ ತಪ್ಪಬಹುದು.

ಮೀನ:

ದಿನ ಭವಿಷ್ಯ

ಮೀನ:- ಉತ್ತಮ ಆರೋಗ್ಯ, ಹಣಕಾಸು ವ್ಯವಹಾರಗಳಲ್ಲಿ ಯಶಸ್ಸು, ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು. ಸಂಘ-ಸಂಸ್ಥೆಗಳಿಂದ ಮಾನ ಸನ್ಮಾನವಾಗುವ ಸಾಧ್ಯತೆ. ಮನಸ್ಸು ಪ್ರಫುಲ್ಲವಾಗುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ-ಭವಿಷ್ಯ: 08 ನವೆಂಬರ್, 2018!!