ದಿನ ಭವಿಷ್ಯ: 09 ಸೆಪ್ಟೆಂಬರ್, 2019!!

0
253

Astrology in kannada | kannada news ದಿನ ಭವಿಷ್ಯ: 09 ಸೆಪ್ಟೆಂಬರ್, 2019!!

ದಿನ ಭವಿಷ್ಯ: 09 ಸೆಪ್ಟೆಂಬರ್, 2019!!

ಮೇಷ:

ದಿನ ಭವಿಷ್ಯ

ಮೇಷ:- ಸಮಯಕ್ಕೆ ಸರಿಯಾಗಿ ಎಲ್ಲವೂ ಸುಗಮವಾಗಿ ಸಾಗುವುದರಿಂದ ಯಶಸ್ಸು ನಿಮ್ಮ ಪಾಲಿಗಿದೆ. ಬರಲಿರುವ ಲಾಭವನ್ನು ಉತ್ತಮ ರೀತಿಯಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಿದರೆ ಒಳ್ಳೆಯದು.

ವೃಷಭ:

ದಿನ ಭವಿಷ್ಯ

ವೃಷಭ:- ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದು. ಉನ್ನತ ವಿದ್ಯಾಭ್ಯಾಸದ ಆಯ್ಕೆಯಲ್ಲಿ ಗೊಂದಲ ಮೂಡುವುದು. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳ ಹಾಕುವುದಕ್ಕಿಂತ ಇದ್ದದ್ದನ್ನೇ ಮುಂದುವರಿಸಿಕೊಂಡು ಹೋಗುವುದು ಒಳ್ಳೆಯದು. ಸದ್ಯಕ್ಕೆ ಪ್ರಯಾಣ ಮುಂದೂಡಿ.

ಮಿಥುನ:

ದಿನ ಭವಿಷ್ಯ

ಮಿಥುನ:- ಕೆಲವೊಮ್ಮೆ ಅತಿಯಾದ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಇದೆ. ಕೌಟುಂಬಿಕ ಸಮಸ್ಯೆಗಳು ಬೆಳೆಯದಂತೆ ನೋಡಿಕೊಳ್ಳಿ. ಆಸ್ತಿಗೆ ಸಂಬಂಧಪಟ್ಟ ವಿಚಾರವನ್ನು ನಾಜೂಕಾಗಿ ಬಗೆಹರಿಸಲು ಪ್ರಯತ್ನಿಸಿ. ಸದ್ಯಕ್ಕೆ ನಿಮ್ಮ ಪ್ರತಿ ಕಾರ್ಯಗಳು ಫಲಕಾರಿಯಾಗದೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ವಿಪರೀತ ಮಾನಸಿಕ ಚಂಚಲತೆ ನಿಮ್ಮನ್ನು ಹೈರಾಣಾಗಿಸುವುದಲ್ಲದೇ ನಿಮ್ಮ ದೈನಂದಿನ ಬದುಕಿನ ಮೇಲೆ ಅಡ್ಡ ಪರಿಣಾಮ ಬೀರುವುದು. ಬಂಧು ಮಿತ್ರರೊಂದಿಗೆ ತಾಳ್ಮೆಯಿಂದಿರಿ. ಸ್ತ್ರೀಯರಿಂದ ಆರ್ಥಿಕ ನೆರವು ದೊರೆಯುವ ಸಾಧ್ಯತೆ ಇದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಿ.

ಸಿಂಹ:

ದಿನ ಭವಿಷ್ಯ

ಸಿಂಹ:- ನೀವು ಸದಾ ಎಚ್ಚರದಿಂದಿರುವುದು ಉತ್ತಮ. ನಿಮ್ಮಿಂದ ಉಪಕಾರ ಪಡೆದವರೇ ನಿಮ್ಮ ವಿರುದ್ಧ ಪಿತೂರಿ ನಡೆಸುವರು. ಮತ್ತೊಬ್ಬರಿಗೆ ಸಹಾಯ ರೂಪದಲ್ಲಿ ಕೊಟ್ಟ ಹಣ ನಿಮ್ಮ ಸಮಯಕ್ಕೆ ಬರದೆ ನೀವೇ ಸಾಲಗಾರರಾಗುವ ಸಂದರ್ಭ ಬರುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಹಿಂದೆ ನೀವು ಪಟ್ಟ ಶ್ರಮಕ್ಕೆ ಎಂಬಂತೆ ಆದಾಯ ಮೂಲದಲ್ಲಿ ಸಾಕಷ್ಟು ಹೆಚ್ಚಳ ಕಂಡು ಬರಲಿದೆ. ಸೋದರರು ಪರಸ್ಪರ ತಪ್ಪು ತಿಳುವಳಿಕೆಯಿಂದ ನಿಮ್ಮೊಂದಿಗೆ ವಾಗ್ವಾದ ನಡೆಸಲಿದ್ದಾರೆ. ಈ ಪ್ರಸಂಗದಲ್ಲಿ ನೀವು ಮೌನಕ್ಕೆ ಶರಣಾಗುವುದು ಒಳ್ಳೆಯದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ನೀವು ತೆಗೆದುಕೊಳ್ಳುವ ನಿರ್ಧಾರಗಳೆಲ್ಲವೂ ಉತ್ತಮ ರೀತಿಯಲ್ಲಿಯೇ ಇರುತ್ತವೆ. ಮನೆಯಲ್ಲಿ ಶಾಂತಿ ಕರ್ಮಾದಿಗಳು ನಡೆಯುವವು. ಬೇರೆಯವರ ನೆರವನ್ನು ಸದುಪಯೋಗ ಪಡಿಸಿಕೊಳ್ಳಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ನೀವು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಸರಿ ತಪ್ಪುಗಳ ವಿವೇಚನೆಯಿಲ್ಲದೆ ನೀವು ಮಾತ್ರವಲ್ಲದೆ ನಿಮ್ಮನ್ನು ನಂಬಿದವರೂ ತಪ್ಪು ದಾರಿ ತುಳಿಯುವ ಸಾಧ್ಯತೆ ಇದೆ. ಅನಿಯಂತ್ರಿತ ಖರ್ಚು. ಮಾತಿನಲ್ಲಿ ಹತೋಟಿ ಕಾಯ್ದುಕೊಳ್ಳದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸುವಿರಿ.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ಉದಾಸೀನವೇ ಅಧೋಗತಿಗೆ ಮೂಲ ಎಂದರು ಅನುಭಾವಿಗಳು. ನಿಮಗೆ ಯಾವುದೇ ಕೆಲಸಗಳಲ್ಲಿ ಉತ್ಸಾಹವಿರದು. ಮನೆಯಲ್ಲಿ ಹಿರಿಯರ ಆರೋಗ್ಯ ವ್ಯತ್ಯಾಸವಾಗಿ ಆಸ್ಪತ್ರೆ ಖರ್ಚು ಎದುರಾಗುವ ಸಂಭವವಿದೆ. ಶ್ರಮಕ್ಕೆ ತಕ್ಕ ಆದಾಯವಿರುವುದರಿಂದ ಹಣಕಾಸಿನ ತೊಂದರೆ ಇರುವುದಿಲ್ಲ..

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಮನೆ, ಆಸ್ತಿ, ಭೂಮಿ ಖರೀದಿಯಿಂದ ಹೆಚ್ಚಿನ ಲಾಭವಿದೆ. ಆದಾಯದ ಹೆಚ್ಚಾಗಲಿದೆ. ಅದು ನಿಮ್ಮ ಹೊಸ ಯೋಜನೆಗಳಿಗೆ ನೆರವಾಗಲಿದೆ. ದೂರ ಪ್ರಯಾಣ ಅನಿವಾರ್ಯವಾದರೂ ಲಾಭದಾಯಕವಾಗುವುದು.

ಕುಂಭ:

ದಿನ ಭವಿಷ್ಯ

ಕುಂಭ:- ಅತಿಯಾದ ದೈಹಿಕ ಶ್ರಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಸಹೋದ್ಯೋಗಿಗಳೊಂದಿಗೆ ಸೌಹಾರ್ದದಿಂದ ಇರುವುದು ಒಳ್ಳೆಯದು. ಮಡದಿ ಮಕ್ಕಳು ಮಾಡುವ ಖರ್ಚಿಗೊಂದು ಕಡಿವಾಣ ಹಾಕದಿದ್ದಲ್ಲಿ ಎಷ್ಟೇ ಸಂಪಾದನೆಯಿದ್ದರೂ ಸಾಲದೇ ಹೋಗಬಹುದು..

ಮೀನ:

ದಿನ ಭವಿಷ್ಯ

ಮೀನ:- ಮತ್ಯಾರೋ ಮಾಡಿದ ತಪ್ಪು ನಿಮ್ಮ ಮೇಲೆ ಬರಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಿಲ್ಲದಿದ್ದರೂ ನಷ್ಟವಂತೂ ಖಂಡಿತಾ ಇಲ್ಲ. ಮಕ್ಕಳ ವಿದ್ಯಾಭ್ಯಾಸದಲ್ಲಿ ಅವರದೇ ಆದ ಸೋಮಾರಿತನದಿಂದಾಗಿ ಹಿನ್ನಡೆಯಾಗಲಿದೆ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 09 ಸೆಪ್ಟೆಂಬರ್, 2019!!