ದಿನ ಭವಿಷ್ಯ: 1 ಅಕ್ಟೋಬರ್, 2018!!

0
315
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ: 1 ಅಕ್ಟೋಬರ್, 2018!!

ಮೇಷ:

ದಿನ ಭವಿಷ್ಯ

ಕಚೇರಿ ಕೆಲಸಗಳು ಸುಗಮವಾಗಿ ನಡೆಯುವುದು. ಕೌಟುಂಬಿಕ ವಿಚಾರಗಳಲ್ಲಿ ಹಿರಿಯರ ಮಾರ್ಗದರ್ಶನ ಪಡೆಯಿರಿ. ನಿಮ್ಮ ಕೌಶಲ್ಯ, ಸಾಮರ್ಥ್ಯ‌ ನಿರೂಪಿಸುವ ಇಲ್ಲವೇ ಸಾಬೀತು ಪಡಿಸುವ ಅವಕಾಶ ಸಿಕ್ಕರೆ ಬಿಡಬೇಡಿ.

ವೃಷಭ:

ದಿನ ಭವಿಷ್ಯ

ಮಾನಸಿಕವಾಗಿ ಸಣ್ಣ ಪುಟ್ಟ ಕಿರಿಕಿರಿಗಳು ಇಂದು ಕಾಡುವ ಸಾಧ್ಯತೆ. ವಾಹನ ಚಾಲನೆ ವೇಳೆ ರಸ್ತೆಯ ಕಡೆಗೆ ನಿಗಾ ಇರಲಿ. ಆರೋಗ್ಯ ಸಮಸ್ಯೆ ಬಗೆಹರಿಯುವುದು. ಆಹಾರ-ವಿಹಾರದಲ್ಲಿ ಎಚ್ಚರ. ಕೆಲವರಿಗೆ ಉದರಶೂಲೆ ಕಾಡುವ ಸಾಧ್ಯತೆ ಇದೆ.

ಮಿಥುನ:

ದಿನ ಭವಿಷ್ಯ

ನಿಮ್ಮ ದೌರ್ಬಲ್ಯ ಎಂದರೆ ಅತಿ ಮುಂಗೋಪ. ಸಿಟ್ಟಿನಿಂದ ಕೆಲವು ಅವಕಾಶಗಳನ್ನು ಇಂದು ಕಳೆದುಕೊಳ್ಳುವಿರಿ. ನಿಮ್ಮನ್ನು ಕೆರಳಿಸುವ, ಪ್ರಚೋದಿಸುವ ಹಲವು ವಿದ್ಯಾಮಾನಗಳು ನಡೆಯಬಹುದು. ಯಾವುದಕ್ಕೂ ಪ್ರತಿಕ್ರಿಯಿಸದೇ ಸುಮ್ಮನಿದ್ದು ಬಿಡಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಈದಿನ ಧ್ಯಾನ ಮತ್ತು ಅಧ್ಯಾತ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಕಾಲ ಕಳೆಯುವ ನೀವು ಸಹಜವಾಗಿಯೇ ಮನಃಶಾಂತಿಯನ್ನು ಹೊಂದುವಿರಿ. ಮತ್ತು ಮಾನಸಿಕವಾಗಿ ದೃಢವಾಗುವುದರಿಂದ ಜೀವನದಲ್ಲಿ ಬರುವ ಕಷ್ಟಗಳನ್ನು ಧೈರ್ಯವಾಗಿ ಎದುರಿಸುವಿರಿ.

ಸಿಂಹ:

ದಿನ ಭವಿಷ್ಯ

ಜಗತ್ತಿನ ಎಲ್ಲ ವೈಭೋಗಗಳು ನಿಮ್ಮಲ್ಲಿವೆ ಎಂದು ಭಾವಿಸುವಿರಿ. ಗುರುವಿನ ಕೃಪೆಯಿಂದ ಅಂತಃಶಕ್ತಿಯನ್ನು ಗಳಿಸುವ ನಿಮ್ಮ ಮುಖದಲ್ಲಿ ತೇಜಸ್ಸು ಹೊರಹೊಮ್ಮುವುದು. ಸಂಗಾತಿಯ ಸಾಂಗತ್ಯ, ಸಲ್ಲಾಪ ಮುದ ನೀಡುವುದು.

ಕನ್ಯಾ:

ದಿನ ಭವಿಷ್ಯ

ನಿಮ್ಮ ಕರ್ತವ್ಯಪರತೆಯೇ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುವುದು. ಸ್ವಾಭಾವಿಕವಾಗಿ ಆ ಕಾರಣದಿಂದ ಈದಿನ ಆನಂದ ನಿಮ್ಮ ಕೆಲಸದಲ್ಲಿ ಪ್ರಕಟಗೊಳ್ಳುವುದು. ಶತ್ರುಗಳು ನಿಮ್ಮ ವಿಚಾರಧಾರೆಯನ್ನು ಒಪ್ಪಿಕೊಳ್ಳುವರು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ವೃತ್ತಿ ನಿರತರು ಅದ್ಭುತ ಸಾಧನೆ ಮಾಡುವರು. ಬರವಣಿಗೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವವರಿಗೆ ವಿಶೇಷ ಗೌರವ ಲಭಿಸುವುದು. ಕೆಲವರಿಗೆ ಕಚೇರಿಯಲ್ಲಿ ಕೆಲಸದ ಒತ್ತಡ ಜಾಸ್ತಿ ಆಗುವುದು. ತಾಳ್ಮೆಯಿಂದ ಪರಿಸ್ಥಿತಿ ಎದುರಿಸಿರಿ.

ವೃಶ್ಚಿಕ:

ದಿನ ಭವಿಷ್ಯ

ಈದಿನ ವೃತ್ತಿಗೆ ಸಂಬಂಧಿಸಿದಂತೆ ಉತ್ತಮ ಭರವಸೆ ನೀಡುವ ದಿನವಾಗಿದೆ. ಸಕಾರಾತ್ಮಕ ಚಿಂತನೆಯು ಯಶಸ್ಸು ತಂದುಕೊಡುವುದು. ಊರು ಎಂದರೆ ಹೊಲಗೇರಿ ಇರುವಂತೆ ನಿಮ್ಮನ್ನು ಕಂಡರೆ ಆಗದವರು ಇದ್ದಾರೆ. ಈಬಗ್ಗೆ ಎಚ್ಚರ ಅಗತ್ಯ.

ಧನಸ್ಸು:

ದಿನ ಭವಿಷ್ಯ

ನೀವು ಈದಿನ ಪ್ರಯಾಣವನ್ನು ಹಮ್ಮಿಕೊಳ್ಳದಿರುವುದು ಮೇಲು. ಆಸ್ತಿ ವಿಚಾರದಲ್ಲಿ ಇದ್ದ ಸಮಸ್ಯೆಗಳು ಅಚ್ಚರಿ ಎಂಬಂತೆ ಬಗೆಹರಿಯುವುದು. ಈದಿನ ಕುಟುಂಬದ ಸದಸ್ಯರೊಡನೆ ಸಮಯ ಕಳೆಯುವುದು ಒಳ್ಳೆಯದು. ಆರ್ಥಿಕ ಸ್ಥಿತಿ ಉತ್ತಮವಾಗಿದೆ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಕಚೇರಿ ಕೆಲಸದಲ್ಲಿ ಬಡ್ತಿ ದೊರೆಯುವುದು. ಈ ಸಂಭ್ರಮ ಆಚರಿಸಲು ಸ್ನೇಹಿತರಿಗೆ, ಸಹೋದ್ಯೋಗಿಗಳಿಗೆ ಭೋಜನ ಕೂಟ ಏರ್ಪಡಿಸುವಿರಿ. ಕೆಲವು ಕ್ಲಿಷ್ಟ ಸಮಸ್ಯೆಗಳನ್ನು ಬಹು ಚಾಣಾಕ್ಷ ತನದಿಂದ ಬಗೆಹರಿಸಿಕೊಳ್ಳುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮ.

ಕುಂಭ:

ದಿನ ಭವಿಷ್ಯ

ದಿಢೀರನೆ ಪ್ರಯಾಣ ಮಾಡಬೇಕಾಗಿ ಬರುವುದರಿಂದ ಖರ್ಚುಗಳು ಏಕಾಏಕಿ ಹೆಚ್ಚಾಗುವುದು. ಹಣಕಾಸಿನ ವಿಚಾರದಲ್ಲಿ ಈದಿನ ಕೈಗಡ ಪಡೆಯಬೇಕಾಗುವುದು. ನಿಮ್ಮ ಆತ್ಮೀಯ ಸ್ನೇಹಿತ ಈ ಸಂದರ್ಭದಲ್ಲಿ ಸಹಕಾರಿಯಾಗಿ ಬೆಂಬಲ ಸೂಚಿಸುವರು.

ಮೀನ:

ದಿನ ಭವಿಷ್ಯ

ಸ್ನೇಹಿತರು ಮತ್ತು ಬಂಧುಗಳ ಜತೆಗಿನ ಬಾಂಧವ್ಯ ವೃದ್ಧಿಗೆ ಗಮನ ನೀಡುವಿರಿ. ವೈಯಕ್ತಿಕವಾಗಿ ಸಂಕಷ್ಟದಿಂದ ಪಾರಾಗುವ ದಿನ. ನಿಮ್ಮ ಧೋರಣೆಯಲ್ಲೂ ಸಾಕಷ್ಟು ಬದಲಾವಣೆಗಳು ಕಂಡು ಬರುವುದು. ಕೌಟುಂಬಿಕ ಸದಸ್ಯರ ಬೆಂಬಲ ದೊರೆಯುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 1 ಅಕ್ಟೋಬರ್, 2018!!