ದಿನ ಭವಿಷ್ಯ: 11 ಡಿಸೆಂಬರ್, 2018!!

0
327
ದಿನ ಭವಿಷ್ಯ

Astrology in kannada | kannada news ದಿನ-ಭವಿಷ್ಯ: 11 ಡಿಸೆಂಬರ್, 2018!!

ದಿನ-ಭವಿಷ್ಯ: 11 ಡಿಸೆಂಬರ್, 2018!!

ಮೇಷ:

ದಿನ ಭವಿಷ್ಯ

ಮೇಷ:- ಯಾರು ರಾಜ್ಯವಾಳಿದರೇನು, ರಾಯನಿಗೆ ರಾಜ್ಯಭಾರ ಸಿಕ್ಕರೆ ಮನೆಯಲ್ಲಿ ರಾಗಿ ಬೀಸುವುದು ತಪ್ಪಲ್ಲ ಎನ್ನುವಂತೆ ನಿಮ್ಮ ರಟ್ಟೆಬಲದ ಮೇಲೆ ವಿಶ್ವಾಸವಿಟ್ಟು ದುಡಿಯಿರಿ ಒಳಿತಾಗುವುದು.

ವೃಷಭ:

ದಿನ ಭವಿಷ್ಯ

ವೃಷಭ:- ಹೊಸಬರ ಪರಿಚಯ ಸಾಧ್ಯತೆ ಇದೆ. ಅವರೊಂದಿಗೆ ನಗುಮುಖದಿಂದ ವ್ಯವಹಾರ ಮಾಡಿ. ಇದರಿಂದ ಧನಲಾಭದ ಸರಳ ಮಾರ್ಗಗಳು ಗೋಚರಿಸುತ್ತವೆ. ಅಗತ್ಯಕ್ಕೆ ತಕ್ಕಷ್ಟು ಹಣ ಡ್ರಾ ಮಾಡುವುದು ಒಳ್ಳೆಯದು.

ಮಿಥುನ:

ದಿನ ಭವಿಷ್ಯ

ಮಿಥುನ:- ವಿದೇಶ ಪ್ರವಾಸ ಅವಕಾಶಗಳು ಬರುವ ಸಾಧ್ಯತೆ ಇದೆ. ಆದರೆ ನೀವು ಈ ಬಗ್ಗೆ ಚಿಂತಿಸದೆ ಇರುವುದರಿಂದ ವಿದೇಶ ಪ್ರವಾಸ ಮಾಡುವ ಯೋಗ ತಪ್ಪಿಹೋಗುವ ಸಾಧ್ಯತೆ ಇದೆ.

ಕಟಕ:

ದಿನ ಭವಿಷ್ಯ

ಕಟಕ:- ಮನ ಬಿಚ್ಚಿ ಮಾತನಾಡುವ ನಿಮ್ಮ ಶಕ್ತಿಯೇ ಕೆಲವೊಮ್ಮೆ ದೌರ್ಬಲ್ಯ ಎನಿಸುವುದು. ಹಾಗಾಗಿ ಎಲ್ಲರೊಡನೆ ಎಲ್ಲಾ ವಿಷಯಗಳನ್ನು ಚರ್ಚಿಸದಿರಿ. ಹಣಕಾಸಿನ ಮುಗ್ಗಟ್ಟು ಬಾಧಿಸುವುದು.

ಸಿಂಹ:

ದಿನ ಭವಿಷ್ಯ

ಸಿಂಹ:- ನಿಮ್ಮನ್ನು ಆದರಿಸುವ ಜನರು ಒಳ್ಳೆಯ ಕೆಲಸವೊಂದನ್ನು ಮಾಡಲು ವಿಶೇಷ ಸ್ಫೂರ್ತಿ ಆಗಲಿದ್ದಾರೆ. ಹಾಗಾಗಿ ಸೋಲಿನ ಮನೋಭೂಮಿಕೆಯಿಂದ ಹೊರಬನ್ನಿ. ಜಗತ್ತು ವಿಶಾಲವಾಗಿದ್ದು ನಿಮ್ಮಲ್ಲಿನ ಒಳ್ಳೆಯತನಕ್ಕೆ ಗೌರವ ಸಿಗಲಿದೆ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಹೊಸದಾದ ಯೋಜನೆಗಳನ್ನು ಹಮ್ಮಿಕೊಳ್ಳುವಿರಿ. ಅದರಿಂದ ಅದ್ಭುತ ಎಂದೆನಿಸುವ ಅನೇಕ ಕಾರ್ಯಗಳನ್ನು ಮಾಡುವಿರಿ. ಮನೆಯಲ್ಲಿನ ಒಂಟಿತನದಿಂದ ಹೊರಬಂದು ಸಮಾಜದ ಜನರೊಂದಿಗೆ ಬೆರೆಯಿರಿ.

ತುಲಾ:

ತುಲಾ:- ಯಾರನ್ನು ಅಲಕ್ಷಿಸಲು ಹೋಗಬೇಡಿ. ಸಮಯ ಬಂದಾಗ ಒಂದು ಹುಲ್ಲುಕಡ್ಡಿಯ ನೆರವು ಬೇಕಾಗುತ್ತದೆ. ನಿಮ್ಮನ್ನು ಆದರಿಸುವ ಜನರ ಜತೆ ನಿಮ್ಮನ್ನು ವಿರೋಧಿಸುವವರ ಸ್ನೇಹವನ್ನೂ ಪಡೆದಲ್ಲಿ ಅನುಕೂಲವಾಗುವವು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಪರರ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ತೋರಿ ಅವರ ವ್ಯವಹಾರದಲ್ಲಿ ಮೂಗು ತೂರಿಸದಿರಿ. ನಿಮ್ಮಲ್ಲಿ ಸಲಹೆ ಕೇಳಿದರೆ ಮಾತ್ರ ಅವರಿಗೆ ಉತ್ತರಿಸಿ. ಇಲ್ಲವೆ ಮಧ್ಯವರ್ತಿಗಳಾಗಿ ಸಹಾಯ ಮಾಡಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಗುರು ಹಿರಿಯರ ಬಳಿ ತಗ್ಗಿ, ಬಗ್ಗಿ ನಡೆಯುವುದು ಒಳ್ಳೆಯದು. ಇದರಿಂದ ಜೀವನದ ನಿಗೂಢ ರಹಸ್ಯಗಳನ್ನು ತಿಳಿಯಲು ಸಹಕಾರಿಯಾಗುವವು ಮತ್ತು ನಿಮ್ಮ ಕಷ್ಟಕಾಲದಲ್ಲಿ ಸಹಾಯಕ್ಕೆ ಬರುತ್ತವೆ.

ಮಕರ:

ದಿನ ಭವಿಷ್ಯ

ಮಕರ:- ಯಾವುದೇ ಪರಿಸ್ಥಿತಿಯಲ್ಲಿಯೂ ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಡದಿರಿ. ಇದರಿಂದ ಹೆಚ್ಚಿನ ತೊಂದರೆ ನಿಮಗಾಗುವುದು. ನಿಮ್ಮ ತಾಳ್ಮೆ ಪರೀಕ್ಷಿಸುವ ಇಲ್ಲವೆ ನೀವು ಸಿಟ್ಟುಗೊಳ್ಳುವಂತೆ ಮಾಡುವ ಜನರು ನಿಮ್ಮ ಸುತ್ತ ಇರುವರು.

ಕುಂಭ:

ದಿನ ಭವಿಷ್ಯ

ಕುಂಭ:- ಹಳೆಯ ಕಡತಗಳ ನಾಶಕ್ಕೆ ಮುಂದಾಗದಿರಿ. ಆ ಕಡತಗಳಲ್ಲಿ ಕೆಲವು ಮಹತ್ತರ ಪತ್ರಗಳು ಇರುವ ಸಾಧ್ಯತೆ ಇರುತ್ತವೆ. ಅವು ಒಂದು ವೇಳೆ ಅಚಾತುರ್ಯೆದಿಂದ ನಾಶವಾದಲ್ಲಿ ಜೀವನ ಪರ್ಯಂತ ಪಶ್ಚಾತ್ತಾಪ ಪಡಬೇಕಾಗುವುದು.

ಮೀನ:

ದಿನ ಭವಿಷ್ಯ

ಮೀನ:- ದುಂದುವೆಚ್ಚ ಮಾಡುವ ಹವ್ಯಾಸ ನಿಮ್ಮದಲ್ಲ. ಆದರೆ ಇತ್ತೀಚಿನ ದಿಢೀರ್‌ ಹಣದ ಸಂಚಲನದಿಂದಾಗಿ ಅಧಿಕ ಖರ್ಚು ಮಾಡುವ ಮನಸ್ಸು ಬರಬಹುದು. ಆದರೆ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು.

ದಿನ-ಭವಿಷ್ಯ: 11 ಡಿಸೆಂಬರ್, 2018!!