ದಿನ ಭವಿಷ್ಯ: 11 ಜುಲೈ, 2018!!

0
407
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ: 11 ಜುಲೈ, 2018!!

ಮೇಷ:

ದಿನ ಭವಿಷ್ಯ

ಭವಿಷ್ಯದ ಬಗೆಗಿನ ಅತಂತ್ರಗಳಿಗೆ ವಿರಾಮ ಸಿಗುವ ಸಾಧ್ಯತೆ ಇದೆ. ಮನೆಯ ಹಿರಿಯರೊಬ್ಬರ ಸಹಾಯ, ಸಹಕಾರ ದೊರೆಯಲಿದ್ದು ಸರ್ಕಾರದ ವತಿಯಿಂದ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುವಂಥ ಆದೇಶ ನಿಮ್ಮ ಕೈ ಸೇರುವುದು.

ವೃಷಭ:

ದಿನ ಭವಿಷ್ಯ

ಮುಂದಿನ ದಿನಗಳ ಬಗೆಗಿನ ಮುಂದಾಲೋಚನೆ ಬೇಡವೆಂದಿಲ್ಲ. ಆದರೆ ನಾಳೆಯ ಊಟವನ್ನು ಇಂದೇ ಮಾಡಿ ಮುಗಿಸಲು ಸಾಧ್ಯವಿಲ್ಲ. ಹಾಗಾಗಿ ಈ ದಿನದ ಕಾರ್ಯಕ್ರಮವನ್ನು ಹೇಗೆ ಶಿಸ್ತುಬದ್ಧವಾಗಿ ಪೂರ್ಣಗೊಳಿಸಬೇಕೆನ್ನುವುದರ ಬಗ್ಗೆ ಚಿಂತಿಸಿ.

ಮಿಥುನ:

ದಿನ ಭವಿಷ್ಯ

ಗುರುವಿನ ಶುಭ ಸಂಚಾರವು ಹಣದ ಮುಗ್ಗಟ್ಟು ಉಂಟು ಮಾಡುವುದಿಲ್ಲ. ಆದರೆ ಅನವಶ್ಯಕ ಸಂಗತಿಗಳಿಗೆ ಹಣ ವ್ಯಯಿಸುವುದನ್ನು ನಿಲ್ಲಿಸುವುದು ಪ್ರಮುಖ ಕರ್ತವ್ಯವಾಗಿದೆ. ಈ ಬಗ್ಗೆ ಮನೆಯ ಸದಸ್ಯರೂ ಸಹಕರಿಸುವರು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಅಡಿಕೆ ಕದ್ದ ಮಾನ ಆನೆ ಕೊಟ್ಟರೂ ಹೋಗದು ಎಂಬ ಗಾದೆ ಮಾತನ್ನು ಕೇಳಿರುತ್ತೀರಿ. ಅಂತೆಯೇ ನಿಮ್ಮ ವ್ಯವಹಾರದಲ್ಲಿನ ಕಿಂಚಿತ್‌ ಲೋಪವು ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಸಾಧ್ಯತೆ ಇದೆ. ಕುಲದೇವರ ಮೊರೆ ಹೋಗುವುದು ಒಳ್ಳೆಯದು.

ಸಿಂಹ:

ದಿನ ಭವಿಷ್ಯ

ಸ್ವಾಭಿಮಾನ ಮತ್ತು ದುರಭಿಮಾನಗಳಿಗೆ ಕೂದಲೆಳೆ ಅಂತರ ಮಾತ್ರ. ನೀವು ಅತಿ ಚಾಣಾಕ್ಷ ಮತಿ ಎಂದು ಎಲ್ಲರೂ ಬಲ್ಲರು. ಆದರೆ ಅದೇ ನಿಮಗೆ ಅಹಂಕಾರವಾಗಿದೆ. ಹಾಗಾಗಿ ಸಾರ್ವತ್ರಿಕವಾಗಿ ತಲೆಬಾಗಿ ನಡೆಯುವುದು ಕ್ಷೇಮ.

ಕನ್ಯಾ:

ದಿನ ಭವಿಷ್ಯ

ನಿಮ್ಮನ್ನು ಜನರು ಹಿಂದಿನಿಂದ ಟೀಕಿಸುತ್ತಾರೆ ಎಂಬ ಪೂರ್ವಗ್ರಹಿಕೆ ಇಟ್ಟುಕೊಳ್ಳದೆ ಕಾರ್ಯ ಪ್ರವೃತ್ತರಾಗಿ. ಟೀಕಿಸುವ ಜನ ಯಾವಾಗಲೂ ಇರುತ್ತಾರೆ. ಅವರ ಟೀಕೆಯಲ್ಲಿನ ಧನಾತ್ಮಕ ಗುಣಗಳನ್ನು ಅಳವಡಿಸಿಕೊಂಡು ಅವರ ಬಾಯಿಗೆ ಬೀಗ ಹಾಕುವಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ನಿಮ್ಮನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಸಹೋದರ, ಸಹೋದರಿಯರು ಸಹಾಯ ಮಾಡುವರು. ಆದಾಗ್ಯೂ ಮನಸ್ಸಿನ ಅವ್ಯಕ್ತ ಭಯ ನಿವಾರಣೆಗಾಗಿ ಮನೋನಿಯಾಮಕ ರುದ್ರದೇವರನ್ನು ಭಜಿಸಿ.

ವೃಶ್ಚಿಕ:

ದಿನ ಭವಿಷ್ಯ

ವಿರೋಧಿಗಳು ಕಣ್ಣಾಮುಚ್ಚಾಲೆಯಾಟ ಆಡುವುದು ಇದ್ದಿದ್ದೆ. ಗ್ರಹಗಳು ಕೆಟ್ಟಾಗ ಮಡದಿ ಮಕ್ಕಳೇ ಮಾತು ಕೇಳದ ಇರುವ ಪರಿಸ್ಥಿತಿ ಇರುತ್ತದೆ. ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ನೀವು ನಂಬಿದ ದೈವವನ್ನು ಮನಸಾ ಸ್ಮರಿಸಿ.

ಧನಸ್ಸು:

ದಿನ ಭವಿಷ್ಯ

ಸರ್ರನೆ ಮನಸ್ಸಿಗೆ ಬಂದಿದ್ದನ್ನು ಕಾರ್ಯಗತಗೊಳಿಸಬೇಡಿ. ಸದ್ಯದ ಪರಿಸ್ಥಿತಿಯಲ್ಲಿ ನೀವು ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ಶನಿ ಪ್ರಭಾವವೇ ಅಂತಹದು. ಎಂತಹವರನ್ನು ಸಂಕಷ್ಟಕ್ಕೆ ದೂಡುವನು. ಆಂಜನೇಯ ಸ್ತೋತ್ರ ಪಠಿಸಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಾತಿಗೆ ಮಾತು ಬೆಳೆದು ತೀವ್ರವಾದ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇರುವುದು. ಹಾಗಾಗಿ ಮಾತಿನಲ್ಲಿ ಸೋತು ಎದುರಾಳಿಯ ಹೃದಯ ಗೆಲ್ಲುವ ಚಾಕಚಕ್ಯತೆ ತೋರಿ. ಹಾಗಾಗಿ ಶಾಂತಿಯಿಂದ ಕಾರ್ಯ ನಿರ್ವಹಿಸಿ.

ಕುಂಭ:

ದಿನ ಭವಿಷ್ಯ

ನೀವು ಅಂದುಕೊಂಡಿದ್ದಕ್ಕಿಂತ ಬೇಗನೆ ನಿಮ್ಮ ಕಾರ್ಯ ಯೋಜನೆಗಳು ಮುಗಿಯುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಸುತ್ತಮುತ್ತಲೂ ಪ್ರಭಾವಿ ಜನರ ಹಸ್ತಕ್ಷೇಪ ಇರುತ್ತದೆ. ಇದರಿಂದ ನಿಮಗೆ ಒಳಿತೇ ಅಗುವುದು.

ಮೀನ:

ದಿನ ಭವಿಷ್ಯ

ಅಗತ್ಯಕ್ಕಿಂತ ಹೆಚ್ಚು ಹಣ ಖರ್ಚಾಗುವ ಸಂದರ್ಭವಿದೆ. ದೂರದಿಂದ ನೆಂಟರು ದಿಢೀರನೆ ಮನೆಗೆ ಆಗಮಿಸುವ ಸಾಧ್ಯತೆ ಇದೆ. ಬಹುದಿನಗಳ ನಂತರ ಮನಸ್ಸಿನ ದುಃಖವನ್ನು ಪರರ ಮುಂದೆ ತೋಡಿಕೊಳ್ಳುವಿರಿ. ಇದರಿಂದ ಮನಸ್ಸು ಹಗುರವಾಗುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 11 ಜುಲೈ, 2018!!