ದಿನ ಭವಿಷ್ಯ: 11 ನವೆಂಬರ್, 2018!!

0
214

Astrology in kannada | kannada news ದಿನ-ಭವಿಷ್ಯ: 11 ನವೆಂಬರ್, 2018!!

ದಿನ-ಭವಿಷ್ಯ: 11 ನವೆಂಬರ್, 2018!!

ಮೇಷ:

ದಿನ ಭವಿಷ್ಯ

ಮೇಷ ರಾಶಿ:- ಇಂದು ನಿಮ್ಮ ಕಾರ್ಯಗಳಲ್ಲಿ ತಾಳ್ಮೆ ವಹಿಸಿರಿ. ಅವಸರದಿಂದ ಕಾರ್ಯ ಸಿದ್ಧಿಸುವುದಿಲ್ಲ. ಈ ದಿನ ಉತ್ತಮ ವಾರ್ತೆಯನ್ನು ಕೇಳುವಿರಿ. ಸ್ಥಿರಾಸ್ತಿ ಖರೀದಿಗೆ ಚಿಂತಿಸುವಿರಿ. ತಾಯಿಯವರ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

ವೃಷಭ:

ದಿನ ಭವಿಷ್ಯ

ವೃಷಭ ರಾಶಿ:- ಪರಾಕ್ರಮ ಕೆಲಸ ಕಾರ್ಯಗಳಲ್ಲಿ ಗೆಲುವು ನಿಮ್ಮದಾಗುವುದು. ವ್ಯವಹಾರಗಳಲ್ಲಿ ಮಂದ ಪ್ರಗತಿ, ಸ್ತ್ರೀಯೊಬ್ಬರಿಂದ ಮಹತ್ವದ ಸಹಾಯ ಪ್ರಾಪ್ತವಾಗಲಿದೆ. ಕೌಟುಂಬಿಕವಾಗಿ ನೆಮ್ಮದಿಯ ದಿನ. ಉತ್ತಮ ಆರೋಗ್ಯವಿರುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ವ್ಯಾಪಾರ-ವ್ಯವಹಾರಗಳಲ್ಲಿ ನಿರೀಕ್ಷೆಗಿಂತ ಅಧಿಕ ಲಾಭವಾಗಿ ಉತ್ಸಾಹ, ಸಂತೋಷಗಳು ತುಂಬುತ್ತವೆ. ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರುವುದು. ನಿಮ್ಮ ಹಿತಚಿಂತಕರನ್ನು ಬೆಂಬಲಿಸುವಿರಿ. ನೆಮ್ಮದಿಯ ದಿನ ಕಾಣುವಿರಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಮನಸ್ಸಿನ ತಾಕಲಾಟದಲ್ಲಿ ಗೊಂದಲ ಏರ್ಪಡುವುದು. ಯಾವ ಕೆಲಸವನ್ನು ಮಾಡಲು ಉತ್ಸಾಹ ಇಲ್ಲದಂತಹ ಪರಿಸ್ಥಿತಿ. ಒಂದಲ್ಲ ಒಂದು ದುಃಖದ ಪ್ರಸಂಗಗಳು ಎದುರಾಗುವುದು. ಧೈರ್ಯ ಕಳೆದುಕೊಳ್ಳಬೇಡಿ. ಗುರುಹಿರಿಯರ ಆಶೀರ್ವಾದ ಪಡೆಯಿರಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಮಕ್ಕಳ ಅಭ್ಯುದಯದಲ್ಲಿ ಅಲ್ಪ ಹಿನ್ನಡೆಯಿಂದಾಗಿ ಮನಸ್ಸಿಗೆ ಬೇಸರ ಉಂಟಾಗುವುದು. ಕೆಲವರಿಗೆ ಆರ್ಥಿಕ ಪರಿಸ್ಥಿತಿ ಹಾಗೂ ಸಾಮಾಜಿಕ ಸ್ಥಾನಮಾನಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದ್ದು ಕುಲದೇವರನ್ನು ಪ್ರಾರ್ಥಿಸಿಕೊಳ್ಳಿರಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಸಮಾಜದಲ್ಲಿ ನಿಮ್ಮ ಪ್ರತಿಷ್ಠೆಯು ಬೆಳೆದು ಸನ್ಮಾನಾದಿಗಳು ಉಂಟಾಗುವ ಸಾಧ್ಯತೆ. ನಿಮ್ಮಿಂದ ದೂರ ಹೋದವರು ಪುನಃ ನಿಮ್ಮ ದಾರಿಗೆ ಬರುವರು. ಉನ್ನತ ಅಧಿಕಾರಿಗಳ ಭೇಟಿಯಿಂದ ಮಹತ್ವದ ನಿರ್ಧಾರ ತಳೆಯುವಿರಿ. ಹರ್ಷಯುತ ವಾತಾವರಣ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ವ್ಯಾಪಾರ-ವ್ಯವಹಾರದಲ್ಲಿ ನಂಬಿಕೆಗೆ ದ್ರೋಹವಾಗುವ ಸಾಧ್ಯತೆ. ಕೈಕೆಳಗಿನ ಕೆಲಸಗಾರರು ಅಸಹಕಾರ ತೋರುವರು. ಹಾಗಾಗಿ ಹಮ್ಮಿಕೊಂಡ ಪ್ರಾಜೆಕ್ಟ್ ಅನ್ನು ಸರಿಯಾದ ಸಮಯಕ್ಕೆ ಮುಗಿಸಲು ಆಗುವುದಿಲ್ಲ. ಆರೋಗ್ಯದತ್ತ ಗಮನ ನೀಡಿರಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಮಿತ್ರರ ಬಳಗ ಹೆಚ್ಚಾಗುವ ಸಂಭವ. ಶತ್ರುಗಳು ಸಹ ಪಶ್ಚಾತ್ತಾಪದಿಂದ ಪರಿವರ್ತಿತರಾಗಿ ಮಿತ್ರರಾಗುತ್ತಾರೆ. ಎಲೆಕ್ಟ್ರಿಕಲ್‌ ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭವುಂಟಾಗುವುದು. ನೂತನ ಯೋಜನೆಗಳ ಅನುಷ್ಠಾನಕ್ಕೆ ಇಂದು ಶುಭ ದಿನ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ದೇಹದಲ್ಲಿ ಅನಾರೋಗ್ಯ ಕಾಡುವ ಸಾಧ್ಯತೆ. ದೈನಂದಿನ ಚಟುವಟಿಕೆಗಳಿಗೆ ತೊಂದರೆ. ಮಿತ್ರರು ನಿಮ್ಮ ಯೋಗ ಕ್ಷೇಮವನ್ನು ವಿಚಾರಿಸುವರು. ನಿಮ್ಮನ್ನು ಬೆಂಬಲಿಸುವ ಸ್ನೇಹಿತರನ್ನು ಸಂಪರ್ಕಿಸುವಿರಿ. ಆರ್ಥಿಕ ಸ್ಥಿತಿ ಉತ್ತಮ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಮನೆಯಲ್ಲಿ ಭೋಗ-ಭಾಗ್ಯಗಳನ್ನು ಕಾಣುವಿರಿ. ಎಲ್ಲರೂ ನಿಮ್ಮನ್ನು ಕೊಂಡಾಡುವರು. ಸ್ನೇಹಕೂಟದಲ್ಲಿ ಭಾಗವಹಿಸುವಿರಿ. ಪರಿಶ್ರಮಕ್ಕೆ ತಕ್ಕ ಪ್ರತಿಫಲವಿದೆ. ಕುಟುಂಬದಲ್ಲಿ ಆನಂದ ಹೆಚ್ಚಾಗಲಿದೆ.

ಕುಂಭ:

ದಿನ ಭವಿಷ್ಯ

ಕುಂಭ:- ವೈವಾಹಿಕ ಜೀವನವು ಇಂದು ಸಿಹಿ ಅನುಭವ ನೀಡುವುದು. ವಿವಾಹ ಯೋಗ್ಯರಿಗೆ ಸೂಕ್ತ ಸಂಗಾತಿಯ ಆಯ್ಕೆ ನಡೆಯುವುದು. ನಿಮ್ಮ ಕಾರ್ಯ-ಕುಶಲತೆಯನ್ನು ಎಲ್ಲರೂ ಕೊಂಡಾಡುವರು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಮೀನ:

ದಿನ ಭವಿಷ್ಯ

ಮೀನ:- ಕೆಲವರಿಗೆ ಪುತ್ರ ಸಂತಾನದ ಸಂಭ್ರಮವಾದರೆ ಕೆಲವರಿಗೆ ಉನ್ನತ ವ್ಯಾಸಂಗಕ್ಕಾಗಿ ಸೀಟು ದೊರೆಯುವ ಸಾಧ್ಯತೆ. ಹಿರಿಯರಿಗೆ ಮಾನಸಿಕ ನೆಮ್ಮದಿ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವರು. ಈದಿನ ಸಂತಸದ ಕ್ಷಣಗಳನ್ನು ಅನುಭವಿಸುವಿರಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ-ಭವಿಷ್ಯ: 11 ನವೆಂಬರ್, 2018!!