ದಿನ ಭವಿಷ್ಯ: 12 ಆಗಸ್ಟ್, 2018!!

0
454

Astrology in kannada | kannada news

ದಿನ ಭವಿಷ್ಯ: 12 ಆಗಸ್ಟ್, 2018!!

ಮೇಷ:

ದಿನ ಭವಿಷ್ಯ

ಮೇಷ:- ಹಬ್ಬದ ಕರಿದಿನವಾದ ಇಂದು ನೂತನ ಕಾರ್ಯಗಳನ್ನು ಹಮ್ಮಿಕೊಳ್ಳುವುದು ಸೂಕ್ತವಲ್ಲ. ಹಣಕಾಸಿನ ವ್ಯವಹಾರದಲ್ಲಿ ಜಾಗ್ರತೆ ಅಗತ್ಯ. ಕೌಟುಂಬಿಕ ಜೀವನದಲ್ಲಿಯ ನೆಮ್ಮದಿಗಾಗಿ ಗುರುವಿನ ಆಶೀರ್ವಾದ ಪಡೆಯಿರಿ ಮತ್ತು ಗುರು ಸ್ತೋತ್ರ ಪಠಿಸಿರಿ.

ವೃಷಭ:

ದಿನ ಭವಿಷ್ಯ

ವೃಷಭ:- ಮಕ್ಕಳೆಲ್ಲರು ಒಂದೇ ಕಡೆ ಸೇರುವುದರಿಂದ ಮನೆಯಲ್ಲಿನ ಹಬ್ಬದ ಸಂಭ್ರಮಕ್ಕೆ ಎಣೆ ಇರುವುದಿಲ್ಲ. ಮಕ್ಕಳಿಗೆ ನೂತನ ವಸ್ತ್ರವನ್ನು ಖರೀದಿಸುವಿರಿ. ವಿವಾಹ ಯೋಗ್ಯ ವಧು ವರರಿಗೆ ಸಂತಸದ ಸುದ್ದಿ ದೊರೆಯಲಿದೆ.

ಮಿಥುನ:

ದಿನ ಭವಿಷ್ಯ

ಮಿಥುನ:- ಗುರುವು ಕೇಂದ್ರಸ್ಥನಾಗಿ ಸಂಚರಿಸುವ ಮೂಲಕ ಆಸ್ತಿ, ಜಮೀನು, ಮನೆಯ ಖರೀದಿ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕು. ಮಾತೃ ಸೌಖ್ಯದಲ್ಲಿ ಸ್ವಲ್ಪ ವ್ಯತ್ಯಯವಾಗುವುದು. ಸೂಕ್ತ ವೈದ್ಯಕೀಯ ಚಿಕಿತ್ಸೆ ಮಾಡಿಸಿರಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಪರಾಕ್ರಮ ಕೆಲಸ ಕಾರ್ಯಗಳು ಯಶಸ್ಸಿನತ್ತ ಸಾಗುವುದು. ಸಹೋದರರು ನಿಮ್ಮ ಕಾರ್ಯಕ್ಕೆ ಬೆಂಬಲ ನೀಡುವರು. ಹೊಸ ಎಲೆಕ್ಟ್ರಾನಿಕ್ಸ್ ವಸ್ತುಗಳ ಖರೀದಿಗೆ ಮನಸ್ಸು ಮಾಡುವಿರಿ. ಸ್ವಕೀಯ ಜನರಿಂದ ಮಾನ ಸನ್ಮಾನಗಳು ಏರ್ಪಡುವವು.

ಸಿಂಹ:

ದಿನ ಭವಿಷ್ಯ

ಸಿಂಹ:- ಉದ್ಯೋಗದಲ್ಲಿ ಪ್ರಗತಿ. ಮಕ್ಕಳ ವಿದ್ಯಾಭ್ಯಾಸವು ಕುಂದಿಲ್ಲದೆ ಮುಂದೆ ಸಾಗುವುದು. ಆರ್ಥಿಕ ವಿಚಾರದಲ್ಲಿ ಹೆಚ್ಚಿನ ಅನುಕೂಲತೆ ಕಂಡುಬರುವುದು. ಮನೆಯ ವಾತಾವರಣದಲ್ಲಿ ನೆಮ್ಮದಿಯು ಕಂಡುಬರುವುದು. ಮಾತಿನ ಮೂಲಕ ಗೌರವ ಹೊಂದುವಿರಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ಕಂಡು ಬರುವುದು. ನೂತನ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೊದಲು ಹಳೆಯ ಬಾಕಿ ಕೆಲಸಗಳನ್ನು ಶೀಘ್ರವಾಗಿ ಮುಗಿಸುವುದು ಒಳ್ಳೆಯದು. ನಿಮ್ಮ ಕಾರ್ಯಭಾರ ದಿನದಿಂದ ದಿನಕ್ಕೆ ಹೆಚ್ಚುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಪರಿಶ್ರಮಕ್ಕೆ ತಕ್ಕ ಫಲವುಂಟು, ಕೆಲಸ ಕಾರ್ಯದಲ್ಲಿ ಉದಾಸೀನತೆಯನ್ನು ತೋರಿದಲ್ಲಿ ಹಾನಿ ಸಂಭವ. ಗುರು-ಹಿರಿಯರ ಹಿತವಚನವನ್ನು ಆಲಿಸಿರಿ. ಮತ್ತು ಪಾಲಿಸಿರಿ. ಇದರಿಂದ ನಿಮ್ಮ ಅರ್ಧದಷ್ಟು ಸಮಸ್ಯೆಗಳು ಬಗೆಹರಿಯುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಹೊಸ ಜವಾಬ್ದಾರಿಯು ಹೆಗಲೇರುವುದು. ಇದರಿಂದ ನಿಮ್ಮ ಘನತೆ ಹೆಚ್ಚುವುದು. ಅಧಿಕಾರದ ಅಮಲಿನಲ್ಲಿ ಮಾತಿನ ಮೇಲೆ ಹಿಡಿತವಿರಲಿ. ಶನಿ ಮಹಾರಾಜರು ಯಾವಾಗಲೂ ಸತ್ಯ, ಧರ್ಮ ನಿಷ್ಟೆಗೆ ಒಳಗಾದವರು. ಶನಿಯ ಮಂತ್ರವನ್ನು ಪಠಿಸಿರಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಜನ್ಮಸ್ಥ ಶನಿಮಹಾರಾಜರು ಕೆಲಸ ಕಾರ್ಯದಲ್ಲಿ ನಿಧಾನತೆಯನ್ನು ಮಾಡುವ ವೃತ್ತಿಯಲ್ಲಿ ಆಲಸ್ಯವನ್ನು ತಂದುಕೊಡುವರು. ಆಂಜನೇಯ ಸ್ತೋತ್ರ ಪಠಿಸಿರಿ. ಮತ್ತು ದೀನದಲಿತರಿಗೆ ಆಹಾರವನ್ನು ನೀಡಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಹಬ್ಬದ ಸಂಭ್ರಮ ಮುಗಿಸಿ ದೂರದ ಪ್ರವಾಸವನ್ನು ಕೈಕೊಳ್ಳಲು ತಯಾರಿ ನಡೆಸುವಿರಿ. ಮಕ್ಕಳ ಪರೀಕ್ಷೆಯ ನೆಪದಿಂದ ಹಮ್ಮಿಕೊಂಡ ಕಾರ್ಯಗಳು ಮುಂದೂಡಲ್ಪಡುವುದು. ಆದಾಗ್ಯೂ ನಿಮ್ಮ ಕಾರ್ಯಕ್ಷಮತೆಗೆ ಬೆಂಬಲ ದೊರೆಯುವುದು.

ಕುಂಭ:

ದಿನ ಭವಿಷ್ಯ

ಕುಂಭ:- ಪರೀಕ್ಷಾ ಸಮಯದಲ್ಲಿ ಓದಿದ್ದು ಮರೆತು ಹೋಗುವ ಸಂದರ್ಭ. ಹಾಗೆ ಆಗದಿರಲು ಆಂಜನೇಯ ಸ್ತೋತ್ರ ಪಠಿಸಿರಿ. ಗುರು-ಹಿರಿಯರನ್ನು ನೆನೆದು ಪರೀಕ್ಷೆಯನ್ನು ಎದುರಿಸಿರಿ. ನಿಮಗೆ ಶುಭವಾಗುವುದು.

ಮೀನ:

ದಿನ ಭವಿಷ್ಯ

ಮೀನ:- ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವುದು. ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ. ಹೊರಗಡೆಯಿಂದ ಬರಬೇಕಾಗಿದ್ದ ಹಣವು ಈದಿನ ನಿಮ್ಮ ಕೈಸೇರುವುದು. ಆತ್ಮೀಯ ಗೆಳೆಯರ ಭೇಟಿ ಸಂಭವ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 12 ಆಗಸ್ಟ್, 2018!!