ದಿನ ಭವಿಷ್ಯ: 12 ಫೆಬ್ರವರಿ, 2019!!

0
416
ದಿನ ಭವಿಷ್ಯ

Astrology in kannada | kannada news ದಿನ-ಭವಿಷ್ಯ: 12 ಫೆಬ್ರವರಿ, 2019!!

ದಿನ-ಭವಿಷ್ಯ: 12 ಫೆಬ್ರವರಿ, 2019!!

ಮೇಷ:

ದಿನ ಭವಿಷ್ಯ

ಮೇಷ:- ಎಲ್ಲಾ ರೀತಿ ಸವಾಲುಗಳನ್ನು ಎದುರಿಸುತ್ತಲೇ ಬಂದಿರುವ ನಿಮಗೆ ಶುಭ ದಿನ. ನಿಮಗೆ ಮುದ ನೀಡುವ ಒಂದು ವಾರ್ತೆ ನಿಮ್ಮನ್ನು ಉತ್ಸಾಹಿತರನ್ನಾಗಿ ಮಾಡುವುದು. ವಿವಿಧ ಮೂಲಗಳಿಂದ ಹಣ ಹರಿದು ಬರುವುದು.

ವೃಷಭ:

ದಿನ ಭವಿಷ್ಯ

ವೃಷಭ:- ನಿಮ್ಮದೇ ಆದ ವಿಧಾನವನ್ನು ಗುರುತಿಸಿಕೊಳ್ಳಿ. ಈಡೇರಬೇಕಾದ ಹಲವಾರು ವಿಚಾರಗಳು ಬಗೆಹರಿಯುವವು. ಆರೋಗ್ಯದ ಕಡೆ ತುಸು ಗಮನ ಕೊಡುವುದು ಒಳ್ಳೆಯದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಅಲ್ಪ ಹಿನ್ನಡೆ ಉಂಟಾಗುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ಬದಲಾದ ಕಾಲಧರ್ಮಕ್ಕೆ ಹೊಂದಿಕೊಳ್ಳುವ ವಿಚಾರದಲ್ಲಿ ನೀವು ಅನೇಕ ರೀತಿಯ ಪ್ರಗತಿಯನ್ನು ಸಾಧಿಸಲಿದ್ದೀರಿ. ಪೂರ್ವಪುಣ್ಯದ ಬಲದಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಿರಿಯರ ಆಶೀರ್ವಾದವೂ ದೊರೆಯುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಮನೆ, ಆಫೀಸ್‌, ಮಿತ್ರರು, ವ್ಯಾವಹಾರಿಕ ಪ್ರಪಂಚ ಇತ್ಯಾದಿಗಳಲ್ಲಿ ಚುರುಕುತನ ತೋರುವುದರಿಂದ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ಮುಗಿಯುವವು. ಇದರಿಂದ ಮನಸ್ಸಿನಲ್ಲಿ ಪ್ರಶಾಂತತೆ ಇರುವುದು.

ಸಿಂಹ:

ದಿನ ಭವಿಷ್ಯ

ಸಿಂಹ:- ಆತ್ಮವಿಶ್ವಾಸ ಬಹಳ ಉತ್ತಮವಾದುದು. ನಿಮ್ಮ ಧೈರ್ಯ ಸ್ಥೈರ್ಯಗಳು ಅಸಾಧ್ಯ ಎನಿಸಿದ್ದನ್ನು ಸಾಧಿಸಿಕೊಡಲಿವೆ. ಮಕ್ಕಳ ವಿವಾಹದ ವಿಚಾರದಲ್ಲಿ ಒಂದು ದೃಢ ನಿರ್ಧಾರ ತಳೆಯುವುದು ಒಳ್ಳೆಯದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಎಲ್ಲಾ ವಿಚಾರಗಳಿಗೂ ಗೆಳೆಯರನ್ನು ಆಶ್ರಯಿಸುವುದು ಸೂಕ್ತವಲ್ಲ. ಕೆಲವು ವಿಚಾರಗಳಲ್ಲಿ ಸ್ವತಂತ್ರ ನಿರ್ಧಾರ ತಳೆಯುವುದು ಒಳ್ಳೆಯದು. ಅಂತೆಯೇ ಕುಟುಂಬ ಸದಸ್ಯರ ಸಲಹೆಗಳು ಅಷ್ಟೇ ಮಹತ್ವಪೂರ್ಣವಾಗಿರುತ್ತವೆ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಸರಳತನ ಇರಬೇಕು. ಆದರೆ ಬೇರೆಯವರು ನಮ್ಮ ಮೇಲೆ ಸವಾರಿ ಮಾಡುವಷ್ಟು ಇರಬಾರದು. ಕೆಲವು ವಿಷಯಗಳಲ್ಲಿ ನೀವು ಹುಂಬುತನದಿಂದ ವರ್ತಿಸುವುದನ್ನು ಬಿಟ್ಟಲ್ಲಿ ಆರ್ಥಿಕ ಸಂಕಷ್ಟದಿಂದ ಪಾರಾಗುವಿರಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ವಾಸಕ್ಕೊಂದು ಮನೆ ಬಯಸುತ್ತಿರುವ ನೀವು ನಿಮ್ಮ ಯೋಜನೆಗೆ ಒಂದು ನಿಶ್ಚಿತವಾದ ರೂಪ ಕೊಡುವುದು ಒಳ್ಳೆಯದು. ಸಾಡೇಸಾತ್‌ ಶನಿಯ ಪ್ರಭಾವದಲ್ಲಿಯೇ ಮನೆ ಕಟ್ಟುವ ಅಥವಾ ಖರೀದಿಸುವ ಯೋಗ ಬರುವುದು.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ನಿರಾಯಾಸ ಮಾತುಗಳಿಂದ ಹತ್ತು ಹಲವು ಕೆಲಸಗಳನ್ನು ಸಾಧಿಸುವಿರಿ. ಆದರೆ ಅದೇ ಅಹಂ ಆಗದಿರಲಿ. ಅತಿಯಾದ ಆತ್ಮವಿಶ್ವಾಸ ಮತ್ತು ಅಹಂಕಾರ ಮನುಷ್ಯನ ಅಧಃಪತನಕ್ಕೆ ಕಾರಣವಾಗುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದೇನೆ ಎಂಬ ಹಿಂಜರಿಕೆಯನ್ನು ನಿಯಂತ್ರಿಸಿ ಬುದ್ಧಿ ಚಾತುರ‍್ಯದಿಂದಲೇ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವಿರಿ ಮತ್ತು ನಿಮ್ಮ ಹೋರಾಟದಲ್ಲಿ ಜಯ ಸಾಧಿಸುವಿರಿ.

ಕುಂಭ:

ದಿನ ಭವಿಷ್ಯ

ಕುಂಭ:- ಊರಿಗೆ ಪ್ರಯಾಣ ಬೆಳೆಸುವಂತಹ ಜರೂರು ಉಂಟಾಗುವುದು. ಆದರೆ ಅದಕ್ಕೆ ಸೂಕ್ತ ತಯಾರಿ ನಡೆಸುವುದು ಮುಖ್ಯ. ಸಹೋದರ ಸಹಾಯ ಅಗತ್ಯವಿದ್ದಲ್ಲಿ ಬಳಸಿಕೊಳ್ಳಿ.

ಮೀನ:

ದಿನ ಭವಿಷ್ಯ

ಮೀನ:- ನಿರಂತರವಾದ ವಾದವಿವಾದಗಳು ಪ್ರಯೋಜನ ನೀಡಲಾರವು. ಮೌನದಿಂದ ಕೆಲಸ ಸಾಧಿಸಿ ನಿರಾಳತೆಯಿಂದ ಬದುಕಿ. ಅಗತ್ಯಕ್ಕೆ ತಕ್ಕಷ್ಟು ಹಣ ಖರ್ಚು ಮಾಡುವುದು ಒಳ್ಳೆಯದು. ಕುಲದೇವತಾ ಸ್ಮರಣೆ ಮಾಡಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ-ಭವಿಷ್ಯ: 12 ಫೆಬ್ರವರಿ, 2019!!