ದಿನ ಭವಿಷ್ಯ: 12 ಜುಲೈ, 2018!!

0
358
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ: 12 ಜುಲೈ, 2018!!

ಮೇಷ:

ದಿನ ಭವಿಷ್ಯ

ಕಾರಣವಿಲ್ಲದೆ ಜಗಳಕ್ಕೆ ಬರುವವರ ಬಗ್ಗೆ ಎಚ್ಚರವಿರಲಿ. ಇಂತಹ ಜನರನ್ನು ದೂರವಿಡುವುದು ಒಳಿತು. ಸಂಗಾತಿಯ ಸಕಾಲಿಕ ಎಚ್ಚರಿಕೆಯ ಮಾತನ್ನು ಆಲಿಸಿ ಮತ್ತು ಪಾಲಿಸಿ. ಇದರಿಂದ ಶುಭವಾಗುವುದು.

ವೃಷಭ:

ದಿನ ಭವಿಷ್ಯ

ಕೆಲವು ದಿನಗಳಿಂದಲೂ ಬರಲಿಲ್ಲವಲ್ಲ ಎಂದು ತಿಳಿದುಕೊಂಡ ಹಣದ ಬಾಬ್ತನ್ನು ನಿರಾಯಾಸವಾಗಿ ಸ್ವೀಕರಿಸುವಿರಿ. ಇದರಿಂದ ನೀವು ಮಾಡಿದ ಸಾಲ ತೀರುವಳಿಗೆ ಸಹಾಯ ಆಗುವುದು. ಗುರು ಕರುಣೆಯನ್ನು ಸ್ಮರಿಸಿ.

ಮಿಥುನ:

ದಿನ ಭವಿಷ್ಯ

ಮಕ್ಕಳ ಮೂಲಕ ಹೊಸ ಆಸ್ತಿ, ವಾಸ ಸ್ಥಳ, ನಿವೇಶನ ಇತ್ಯಾದಿ ಹೊಂದಲು ಕಾಲ ಕೂಡಿ ಬರುತ್ತದೆ. ಇದರಿಂದ ಮನೆ ಸದಸ್ಯರು ಖುಷಿಯಾಗುವರು. ಗೆಳೆಯರು ಅಥವಾ ಆತ್ಮೀಯರು ನಿಮಗೆ ಸಹಾಯ ನೀಡುವರು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಹೊಸ ಕಾರ್ಯಕ್ರಮ ಅಥವಾ ಯೋಜನೆಗಳ ಅನುಷ್ಠಾನಕ್ಕೆ ಕಾಲ ಪಕ್ವವಾಗಿದೆ. ವಾಹನ ಖರೀದಿ ಬಗ್ಗೆ ಚಿಂತಿಸುವಿರಿ. ನಿಮ್ಮ ಮನಸ್ಸಿಗೆ ಒಪ್ಪುವ ವಾಹನ ಖರೀದಿ ಮಾಡುವಿರಿ.

ಸಿಂಹ:

ದಿನ ಭವಿಷ್ಯ

ತೋಟಗಾರಿಕೆಗೆ ಚಟುವಟಿಕೆಗಳಲ್ಲಿ ನಿಮ್ಮ ಪರಿಶ್ರಮ ಹಾಗೂ ಬಂಡವಾಳ ಸಫಲವಾಗುವವು. ಹಣಕಾಸಿನ ವಿಷಯದಲ್ಲಿ ಚಾಣಾಕ್ಷ ಮತಿಗಳಾದ ನೀವು ವ್ಯವಹಾರದಲ್ಲಿ ಕುಶಲತೆಯಿಂದ ಇರುವಿರಿ.

ಕನ್ಯಾ:

ದಿನ ಭವಿಷ್ಯ

ನಿಮ್ಮ ಸೀದಾಸಾದಾ ಗುಣ ನಿಮ್ಮನ್ನು ಎಲ್ಲರೂ ಗೌರವಾದರಗಳಿಂದ ಕಾಣುವಂತೆ ಮಾಡುವುದು. ಒಂದು ದೊಡ್ಡ ಸಮಸ್ಯೆ ಮಂಜಿನಂತೆ ಕರಗಿ ಹೋಗುವುದರಿಂದ ಮನಸ್ಸು ನಿರಾಳವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ನೀವು ನಂಬಿದ್ದ ನಿಮ್ಮ ಹತ್ತಿರದವರು ನಿಮಗೆ ಬೇಸರವಾಗುವಂತೆ ನಿಮ್ಮ ವಿರುದ್ಧ ವೈರ ಸಾಧಿಸುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರದಿಂದ ಇರುವುದು ಒಳ್ಳೆಯದು. ಮಕ್ಕಳ ಕಲರವ ನಿಮಗೆ ಹೆಚ್ಚಿನ ಸಂತೋಷ ಉಂಟು ಮಾಡುವುದು.

ವೃಶ್ಚಿಕ:

ದಿನ ಭವಿಷ್ಯ

ಸುಖಾಸುಮ್ಮನೆ ಹತ್ತಿರದವರೊಬ್ಬರನ್ನು ಎದುರು ಹಾಕಿಕೊಳ್ಳುವ ಭಯವಿರುತ್ತದೆ. ಹಾಗಾಗಿ ಇನ್ನೊಬ್ಬರ ವ್ಯವಹಾರದಲ್ಲಿ ಮೂಗು ತೂರಿಸದಿರುವುದು ಒಳ್ಳೆಯದು. ಆಂಜನೇಯ ಸ್ತೋತ್ರ ಪಠಿಸಿ. ಆಹಾರ ದಾನ ಮಾಡಿ.

ಧನಸ್ಸು:

ದಿನ ಭವಿಷ್ಯ

ತುಂಬಾ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸವೊಂದು ಅಲ್ಪ ಶ್ರಮಕ್ಕೆ ಸುಖಾಂತ್ಯವಾಗುವುದು. ಗುರು ಹಿರಿಯರ ಆಶೀರ್ವಾದ ಪಡೆದು ಕೆಲಸ ಆರಂಭಿಸಿ. ದಿನದ ಕೊನೆಗೆ ಸಿಹಿ ಸುದ್ದಿ ಕೇಳುವಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ವೃತ್ತಿಯಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಹಾಗಾಗಿ ವೃತ್ತಿಯಲ್ಲಿ ಹೊಸ ರೀತಿಯ ಗಳಿಕೆ ಲಭ್ಯವಾಗಲಿದೆ. ಹೊಸ ಖರೀದಿ ಮಾಡಲು ನೂತನ ಅವಕಾಶ ಸಿಗುವುದು.

ಕುಂಭ:

ದಿನ ಭವಿಷ್ಯ

ನಿಮ್ಮ ಸಾಧನೆಗೆ ತಕ್ಕ ಗೌರವ ಆದರಗಳು ಸಿಗುವ ಸಾಧ್ಯತೆಯಿದೆ. ಜನರನ್ನು ವಿಶ್ವಾಸಕ್ಕೆ ಪಡೆದು ಅವರಿಂದ ಕೆಲಸ ಮಾಡಿಸಿಕೊಳ್ಳುವಿರಿ. ಸಹೋದ್ಯೋಗಿಗಳು ನಿಮ್ಮ ಬೆಂಬಲಕ್ಕೆ ನಿಲ್ಲುವರು.

ಮೀನ:

ದಿನ ಭವಿಷ್ಯ

ನಿಮ್ಮ ನಿರೀಕ್ಷೆಗೆ ಸರಿಹೊಂದುವ ಬಾಳಸಂಗಾತಿಯ ಆಯ್ಕೆ ಬಗ್ಗೆ ಯಶಸ್ವಿಯಾಗುವ ಅವಕಾಶಗಳಿವೆ. ಹೆಚ್ಚಿನ ಲಾಭ ಪಡೆಯಲು ಗುರು ಸ್ತೋತ್ರ ಪಠಿಸಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 12 ಜುಲೈ, 2018!!