ದಿನ ಭವಿಷ್ಯ: 12 ಜುಲೈ, 2019!!

0
174

Astrology in kannada | kannada news ದಿನ ಭವಿಷ್ಯ: 12 ಜುಲೈ, 2019!!

ದಿನ ಭವಿಷ್ಯ: 12 ಜುಲೈ, 2019!!

ಮೇಷ:

ದಿನ ಭವಿಷ್ಯ

ಮೇಷ:- ಗೆಳೆಯರ ಬಳಿ ಸ್ನೇಹದಿಂದ ಇರುವುದು ಉತ್ತಮ. ಆದರೆ ಯಾರಿಗೂ ಸಾಲ ಕೊಡುವುದು ಕೊಡಿಸುವುದು ಮಾಡದಿರಿ. ನೀವೂ ಸಾಲ ಪಡೆಯದಿರಿ. ಮನೆಯ ಲೆಕ್ಕಪತ್ರ ಅಥವಾ ಕಡತಗಳ ವಿಚಾರ ವಿವಾದಗಳಿಗೆ ಕಾರಣವಾಗುವ ಸಂದರ್ಭ ಎದುರಾಗುವುದು.

ವೃಷಭ:

ದಿನ ಭವಿಷ್ಯ

ವೃಷಭ:- ಅನೇಕ ದೊಡ್ಡ ಯೋಜನೆಗಳನ್ನು ನಿರ್ವಹಿಸಿ ಅಗಾಧವಾದುದನ್ನು ಸಂಪಾದಿಸಲು ಕಾಲಘಟ್ಟ ಸೂಕ್ತವಾಗಿದೆ. ಆದರೂ ಕಾಣದ ಯಾವುದೋ ಒಂದು ಕೈ ತಮ್ಮ ಪ್ರಗತಿಯನ್ನು ಹಿಂದಕ್ಕೆ ತಳ್ಳಲು ಪ್ರಯತ್ನಿಸುತ್ತಿದೆ. ಗುರು ರಾಘವೇಂದ್ರರನ್ನು ಪಾಹಿ ಪ್ರಭೋ ಎಂದು ಪ್ರಾರ್ಥಿಸಿ.

ಮಿಥುನ:

ದಿನ ಭವಿಷ್ಯ

ಮಿಥುನ:- ಕಚೇರಿಯ ಆವರಣದಲ್ಲಿ ನಿಮ್ಮ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಸಂಚು ಬಯಲಾಗುವುದು. ಇದರಿಂದ ಬೇಸತ್ತ ನೀವು ನಿಮ್ಮ ಕೆಲಸಕ್ಕೆ ರಾಜೀನಾಮೆ ಕೊಡುವ ತೀರ್ಮಾನ ಮಾಡುವಿರಿ. ಇದಕ್ಕಿಂತ ನೀವು ಬೇರೆಡೆಗೆ ವರ್ಗಾವಣೆ ಕೇಳುವುದು ಒಳ್ಳೆಯದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ನಿಮ್ಮದೇ ಆದ ಮನೆ ರೂಪಿಸುವ ವಿಚಾರದಲ್ಲಿ ಮಹತ್ವದ ಬೆಳವಣಿಗೆಯೊಂದು ನಿಮಗೆ ಸಹಕಾರಿಯಾಗಲಿದೆ. ಆದರೆ ಅದಕ್ಕಾಗಿ ಸಾಲ ಮಾಡಬೇಕಾಗುವುದು. ಎಷ್ಟೇ ಶ್ರೀಮಂತಿಕೆ ಇದ್ದರೂ ಮನೆ ಕಟ್ಟುವ ವಿಚಾರದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಾಲ ಮಾಡುವರು.

ಸಿಂಹ:

ದಿನ ಭವಿಷ್ಯ

ಸಿಂಹ:- ಪ್ರತ್ಯೇಕ ಪ್ರಕರಣಗಳಲ್ಲಿ ಸಿಹಿ ಮತ್ತು ಕಹಿ ಸುದ್ದಿಗಳೆರಡರ ಮಿಶ್ರಣ ಲಭ್ಯವಾಗಲಿದೆ. ನೀವು ಹಮ್ಮಿಕೊಳ್ಳಬೇಕೆಂದಿರುವ ಬೃಹತ್‌ ಯೋಜನೆಗೆ ಸರ್ಕಾರ ಅನುಮೋದನೆ ನೀಡುವ ಸಿಹಿ ಸುದ್ದಿ ಒಂದೆಡೆ ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಹಣದ ಕೊರತೆಯು ಕಹಿ ಎನಿಸುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯನ್ನು ನೀಡುತ್ತಿರುವುದು ನಿಮ್ಮ ಒಳ್ಳೆಯದಕ್ಕೆ. ಬೆಳ್ಳಗಿರುವುದೆಲ್ಲಾ ಹಾಲು ಎಂದು ನಂಬಿ ಹೋಗುವ ನಿಮ್ಮ ಮನಸ್ಥಿತಿಯನ್ನು ಪರಿವರ್ತಿಸಿಕೊಳ್ಳಬೇಕಾಗಿದೆ. ಹಣದ ಉಳಿತಾಯದ ಬಗ್ಗೆ ಗಮನ ಹರಿಸಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ನೆರೆಹೊರೆಯವರಲ್ಲಿ ಹೆಚ್ಚಿನ ಮಾತುಕತೆಯಿರಲಿ ಹಾಗೂ ಅದು ಸ್ನೇಹಪೂರ್ಣವಾಗಿರಲಿ ಮತ್ತು ಸೌಜನ್ಯ ಪೂರಕವಾಗಿರಲಿ. ಆದರೆ ಎಲ್ಲರನ್ನೂ ಪೂರ್ತಿಯಾಗಿ ನಂಬದಿರಿ. ಸಲಹೆಗಳು ನಿಮ್ಮದು ತೀರ್ಮಾನ ನನ್ನದು ಎಂಬ ಧೋರಣೆ ಇರಲಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಮುಂದಿನ ದಿನಗಳ ಪ್ರಮುಖ ಕಾರ್ಯ ಯೋಜನೆಗಳಿಗಾಗಿನ ಪೂರ್ವಭಾವಿ ಮಾತುಕತೆಗಳಿಗೆ ಸಕಾಲವಾಗಿದೆ. ನಿಮ್ಮ ಬಳಗದ ಸ್ನೇಹಿತರು ಮತ್ತು ಸಮಾನ ಮನಸ್ಕರೊಡನೆ ಕುಳಿತು ಚರ್ಚಿಸಿ ಕಾರ್ಯಕ್ರಮಗಳ ರೂಪುರೇಷೆಗಳನ್ನು ನಿರ್ಧರಿಸಿ.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ನಾಗಬನದಲ್ಲಿ ನಾಗರ ಕಲ್ಲುಗಳಿಗೆ ಅಕ್ಷ ತೆ ಮತ್ತು ಗರಿಕೆ ಏರಿಸಿ ಬನ್ನಿ. ಇದರಿಂದ ಜನ್ಮಸ್ಥ ರಾಹು ನಿಮಗೆ ನೆಮ್ಮದಿಯನ್ನು ನೀಡುವ ಸಾಧ್ಯತೆ ಇದೆ ಮತ್ತು ಗುರುವಿನ ಆಶೀರ್ವಾದವು ದೊರೆಯುವ ಸಾಧ್ಯತೆ ಇರುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಕೆಲಸದ ಸ್ಥಳದಲ್ಲಿ ಬಾಸ್‌ ಅನವಶ್ಯಕ ಕಿರಿಕಿರಿ ಎಬ್ಬಿಸಿದರೂ ರೇಗಾಟ ಮಾಡಬೇಡಿ. ಮೈಕೊಡವಿ ಬಾಸ್‌ ಮೆಚ್ಚುವಂತೆ ಕೆಲಸ ಮಾಡಿ. ಅದರಿಂದ ಪ್ರಶಂಸೆ ಪಡೆಯುವಿರಿ. ಅನ್ಯರೊಡನೆ ವಾದ ವಿವಾದದಿಂದ ದೂರವಿರಿ.

ಕುಂಭ:

ದಿನ ಭವಿಷ್ಯ

ಕುಂಭ:- ವ್ಯಾಜ್ಯಗಳು ಇದ್ದರೂ ಗೊಂದಲಕ್ಕೆ ಅವಕಾಶ ಬೇಡ. ಸ್ನೇಹಿತರ ಸೂಕ್ತವಾದ ಸಹಾಯದಿಂದ ಒತ್ತಡಗಳಿಗೆ ವಿರಾಮ ಹಾಕುವಿರಿ. ಮಕ್ಕಳ ಪ್ರಗತಿಯು ಮತ್ತು ಮೊಮ್ಮಕ್ಕಳ ತುಂಟತನವು ನಿಮ್ಮ ಮುಖದಲ್ಲಿ ಮಂದಹಾಸ ಮೂಡಿಸುವುದು.

ಮೀನ:

ದಿನ ಭವಿಷ್ಯ

ಮೀನ:- ಹುಟ್ಟುಗುಣ ಘಟ್ಟ ಹತ್ತಿದರೂ ಹೋಗದು ಎಂಬ ಮಾತನ್ನು ನೆನಪಿಡಿ. ಹೊಸ ಪರಿಸರ ಅಥವಾ ಹೊಸ ಜನರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ತಿಳಿಯಿರಿ. ಬದಲಾವಣೆಗೆ ಅವಕಾಶ ಇರಲಿ. ಇದರಿಂದ ಮಹತ್ತರವಾದುದನ್ನು ಸಾಧಿಸಬಹುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 12 ಜುಲೈ, 2019!!