ದಿನ ಭವಿಷ್ಯ: 13 ಆಗಸ್ಟ್, 2019!!

0
155

Astrology in kannada | kannada news ದಿನ ಭವಿಷ್ಯ: 13 ಆಗಸ್ಟ್, 2019!!

ದಿನ ಭವಿಷ್ಯ: 13 ಆಗಸ್ಟ್, 2019!!

ಮೇಷ:

ದಿನ ಭವಿಷ್ಯ

ಮೇಷ:- ಆನೆ ನಡೆದದ್ದೇ ದಾರಿ ಎನ್ನುವಂತೆ ನೀವು ಯೋಚಿಸುವ ಮತ್ತು ಕಾರ್ಯಪ್ರವೃತ್ತರಾಗುವ ದಾರಿ ವಿಶಿಷ್ಟವಾಗಿರುತ್ತದೆ. ಇದರಿಂದ ನಿಮ್ಮ ಆತ್ಮವಿಶ್ವಾಸವೂ ಅಭಿವೃದ್ಧಿಯಾಗುವುದು ಹಾಗೂ ಪರರಿಗೆ ಅಸೂಯೆಯನ್ನುಂಟು ಮಾಡುವುದು.

ವೃಷಭ:

ದಿನ ಭವಿಷ್ಯ

ವೃಷಭ:- ಮಕ್ಕಳ ಪ್ರಗತಿ ಕಂಡು ಅವರ ಬೆನ್ನು ತಟ್ಟಿ ಹುರಿದುಂಬಿಸಿ. ಅವರು ನಿಮ್ಮ ಮನೋಭಾವನೆಗಳನ್ನು ಗುರುತಿಸಿ ಗೌರವಿಸುವರು. ಇದರಿಂದ ನಿಮಗೂ ಆನಂದ ಮತ್ತು ಕುಟುಂಬದಲ್ಲಿ ನೆಮ್ಮದಿ ಮೂಡುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ಯಾವುದೇ ರೀತಿಯ ಒತ್ತಡಗಳು ಬಂದರೂ ಜಾಣತನದಿಂದ ಅದನ್ನು ನಿಭಾಯಿಸಿ. ಇದರಿಂದ ನಿಮಗೆ ಉತ್ತಮ ಮಾರ್ಗ ಗೋಚರಿಸುವುದು. ಗುರು ಹಿರಿಯರ ಸಲಹೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿ ಎನ್ನುವ ಗಾದೆ ಮಾತನ್ನು ನೀವು ನೆನಪಿಸಿಕೊಳ್ಳಿ. ನೀವು ನೋಡುವ ಅಥವಾ ಕೇಳುವ ವಿಚಾರಗಳು ಮನಸ್ಸಿಗೆ ಘಾಸಿ ಉಂಟು ಮಾಡುವವು. ಆದಾಗ್ಯೂ ಅವನ್ನು ತಾಳ್ಮೆಯಿಂದ ಪರೀಕ್ಷಿಸಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಹೊಸಬರ ಸಂಗಡ ಚಾಣಾಕ್ಷ ತನದಿಂದ ಮಾತುಗಳನ್ನು ಆಡುವಿರಿ. ಅವರು ನೀವೆಷ್ಟು ವಿವೇಚನಾಶಾಲಿಗಳು ಎಂದು ಕೊಂಡಾಡುವರು. ಆದರೆ ನಿಮ್ಮ ಆಂತರ್ಯವನ್ನು ಅವರ ಎದುರು ಬಹಿರಂಗ ಪಡಿಸದಿರಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಈಗಾಗಲೆ ಮಾಡಿರುವ ಸಾಲ ಬೆಟ್ಟದಷ್ಟಿದೆ. ಸಾಲದಲ್ಲಿ ಸಾಲ ಎಂದು ಪುನಃ ಭಂಡ ಧೈರ್ಯದಿಂದ ಸಾಲ ಮಾಡದಿರಿ. ನಿಮ್ಮ ಮೇಲಿನ ಅಭಿಮಾನಕ್ಕೆ ಯಾರಾದರೂ ಸಾಲ ಕೊಡಲು ತಯಾರಿರುತ್ತಾರೆ. ಆದರೆ ಸಾಲ ತೀರುಸುವ ದಾರಿ ತಿಳಿದುಕೊಳ್ಳಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಒಂದೇ ಸಲಕ್ಕೆ ದೊಡ್ಡ ಬಂಡವಾಳದ ಕಾರ್ಯ ಯೋಜನೆಗೆ ಕೈಹಾಕದಿರಿ. ನೀವು ಮಾಡುತ್ತಿರುವ ಕಾರ್ಯದ ಮೇಲೆ ನಿಗಾ ಇರಲಿ. ಹಣಕಾಸಿನ ವಿಷಯದಲ್ಲಿ ಸ್ವಯಂ ನಿಯಂತ್ರಣ ಹಾಕಿಕೊಳ್ಳಿ. ಹಣ ಖರ್ಚು ಮಾಡುವುದು ಸುಲಭ ಗಳಿಸುವುದು ಕಠಿಣ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಸದ್ಯದ ಪರಿಸ್ಥಿತಿಯಲ್ಲಿ ಹಗ್ಗ ಕೂಡ ಹಾವೆಂದು ಭ್ರಮಿಸಿ ಭಯ ಪಡುವ ಕ್ಷ ಣಗಳಾಗಿವೆ. ಅದಕ್ಕೆ ಈಗಿರುವ ಆರ್ಥಿಕ ಸಂಕಷ್ಟದ ದಿನಗಳೇ ಕಾರಣ. ಯಾವುದೇ ಬೃಹತ್‌ ಪ್ರಮಾಣದ ಯೋಜನೆಗಳನ್ನು ಹಾಕಿಕೊಳ್ಳುವುದು ಸೂಕ್ತವಲ್ಲ.

ಧನಸ್ಸು:

ದಿನ ಭವಿಷ್ಯ

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಧನಸ್ಸು:- ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿಯುವ ದಡ್ಡತನ ತೋರದಿದ್ದರೇ ಕ್ಷೇಮ. ಆದಷ್ಟು ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. ಬಡವರಿಗೆ ಆಹಾರ ನೀಡಿ.

ಮಕರ:

ದಿನ ಭವಿಷ್ಯ

ಮಕರ:- ಮನೆ ಕಟ್ಟುವ ವಿಚಾರದಲ್ಲಿ ಅತಿಯಾದ ಅವಸರ ಬೇಡ. ಒಂದಿಷ್ಟು ವಿಚಾರಗಳನ್ನು ಯೋಚಿಸಿ ಮುಂದಡಿ ಇಡುವುದು ಒಳ್ಳೆಯದು. ಕಚೇರಿ ಕೆಲಸ ಕಾರ್ಯದಲ್ಲಿ ಮೇಲಧಿಕಾರಿಗಳ ಕಿರಿಕಿರಿ ಇರುತ್ತದೆ. ಆಂಜನೇಯ ಸ್ತೋತ್ರ ಪಠಿಸಿ.

ಕುಂಭ:

ದಿನ ಭವಿಷ್ಯ

ಕುಂಭ:- ಸಕಲ ಅಭಯಗಳನ್ನು ಒದಗಿಸಿ ಚೈತನ್ಯಕ್ಕೆ ಕಾರಣವಾಗುವಂತಹ ಮಾತಾ ದುರ್ಗಾದೇವಿ ಪ್ರಾರ್ಥನೆ ಮಾಡಿ. ಸಾಧ್ಯವಾದರೆ ದೇವಿ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿಕೊಂಡು ಬನ್ನಿ.

ಮೀನ:

ದಿನ ಭವಿಷ್ಯ

ಮೀನ:- ನಿಮ್ಮದೇ ಆದ ಉತ್ತಮ ಕಾರ್ಯತಂತ್ರಗಳನ್ನು ಮೇಲಧಿಕಾರಿಗಳು ಶ್ಲಾಘಿಸಲಿದ್ದಾರೆ. ಅದರಿಂದ ನಿಮ್ಮ ಮನಸ್ಸು ಪ್ರಫುಲ್ಲವಾಗಿರುವುದು. ಮನೆಯಲ್ಲೂ ಮಡದಿ ಮಕ್ಕಳು ಸಂತಸವನ್ನುಂಟು ಮಾಡುವರು..

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 13 ಆಗಸ್ಟ್, 2019!!