ದಿನ ಭವಿಷ್ಯ: 13 ಜುಲೈ, 2018!!

0
404
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ: 13 ಜುಲೈ, 2018!!

ಮೇಷ:

ದಿನ ಭವಿಷ್ಯ

ವಯಸ್ಸಿನ ಹಿರಿತನ ಮತ್ತು ಬುದ್ಧಿಕೌಶಲ್ಯದಿಂದ ಸಾಮಾಜಿಕ ಜೀವನದಲ್ಲಿ ಹೆಸರು ಪಡೆಯುವಿರಿ. ಪುಸ್ತಕ ಪ್ರಕಾಶನದಂತಹ ಕೆಲಸಗಳಿಂದ ಅಧಿಕ ಮೊತ್ತ ಕೈ ಸೇರುವುದು. ಆರೋಗ್ಯದ ಕಡೆ ಗಮನ ಕೊಡಿರಿ.

ವೃಷಭ:

ದಿನ ಭವಿಷ್ಯ

ಸಂಗೀತ ಕ್ಷೇತ್ರ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಿರಿ. ಮೇಲಧಿಕಾರಿಗಳು ನಿಮ್ಮ ಕಾರ್ಯಕ್ಷ ಮತೆಯನ್ನು ಗಮನಿಸುತ್ತಿರುವರು. ನೀವು ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವಿರಿ.

ಮಿಥುನ:

ದಿನ ಭವಿಷ್ಯ

ನೆರೆಹೊರೆಯವರೊಂದಿಗೆ ಪ್ರೀತಿ-ವಿಶ್ವಾಸದಿಂದ ಇರಿ. ಅನಗತ್ಯ ವಿಷಯಗಳಲ್ಲಿ ಮೂಗು ತೂರಿಸಿ ಮನಸ್ತಾಪಕ್ಕೆ ಒಳಗಾಗುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನತೆಯಿಂದ ಮಗ್ನರಾಗಿರಿ. ಭಗವಂತನ ಆಶೀರ್ವಾದ ದೊರೆಯುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಹೊಸ ಹೊಸ ವಿಚಾರಗಳು ನಿಮ್ಮ ತಲೆಯಲ್ಲಿ ಮಿಂಚಿ ಮಾಯವಾಗುವುದು. ದೂರದೃಷ್ಟಿಯಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ಆರ್ಥಿಕ ಸದೃಢತೆಯು ನಿಮ್ಮ ಮನಸ್ಸಿಗೆ ಹರ್ಷವನ್ನುಂಟು ಮಾಡುವುದು.

ಸಿಂಹ:

ದಿನ ಭವಿಷ್ಯ

ನಿಮ್ಮ ಸಮಸ್ಯೆಗಳಿಗೆ ವಾಸ್ತುದೋಷ ಕಾರಣವೆಂದು ತಿಳಿದು ಖಿನ್ನರಾಗುವಿರಿ. ಆದರೆ ವಸ್ತುಸ್ಥಿತಿ ಬೇರೆಯೇ ಇದೆ. ಕುಲದೇವರ ಅನುಗ್ರಹ ಪಡೆಯಿರಿ. ಆತ್ಮೀಯ ಗೆಳೆಯನಿಂದ ಸಹಾಯ ದೊರೆಯುವುದು.

ಕನ್ಯಾ:

ದಿನ ಭವಿಷ್ಯ

ಪ್ರಯಾಣದಿಂದ ದೇಹಾಲಸ್ಯ ಉಂಟಾಗುವ ಸಾಧ್ಯತೆ. ದೇಹಕ್ಕೆ ಮತ್ತು ಮನಸ್ಸಿಗೆ ಸ್ವಲ್ಪ ವಿಶ್ರಾಂತಿಯ ಅಗತ್ಯವಿದೆ. ಮಧ್ಯಾಹ್ನದ ನಂತರ ಚುರುಕಾಗುವಿರಿ. ಹೊಸ ಕೆಲಸ ಮಾಡಲು ಉತ್ಸಾಹ-ಹುಮ್ಮಸ್ಸು ಬರುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ಆತ್ಮೀಯರ ಆಗಮನದಿಂದ ಮನಃಶಾಂತಿ ದೊರೆಯಲಿದೆ. ನೀವು ಹಮ್ಮಿಕೊಂಡ ಕೆಲಸ ಕಾರ್ಯಗಳನ್ನು ಇಂದು ಬೇಗನೆ ಮುಗಿಸುವಿರಿ. ಇದರಿಂದ ಮೇಲಧಿಕಾರಿಗಳು ನಿಮ್ಮ ಬಗ್ಗೆ ಗೌರವ ಭಾವನೆ ತಾಳುವರು.

ವೃಶ್ಚಿಕ:

ದಿನ ಭವಿಷ್ಯ

ಹಿರಿಯರ ಆಸ್ತಿಯ ವಿವಾದ ಒಂದು ಹಂತ ತಲುಪಲಿದೆ. ಎಲ್ಲ ಆಸ್ತಿಯು ನನಗೆ ದಕ್ಕಬೇಕೆಂಬ ಸಂಕುಚಿತ ಮನೋಭಾವನೆ ಬಿಡಿ. ಸಹೋದರ-ಸಹೋದರಿಯರಿಗೆ ಕೊಡಬೇಕಾದ್ದನ್ನು ಕೊಟ್ಟುಬಿಡಿ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು.

ಧನಸ್ಸು:

ದಿನ ಭವಿಷ್ಯ

ಎಲ್ಲರೊಂದಿಗೂ ಮುಕ್ತವಾಗಿ ಬೆರೆಯುವಿರಿ. ಧನಾತ್ಮಕ ಆಲೋಚನೆಗಳಿಂದ ನಿಮ್ಮ ಕೆಲಸದಲ್ಲಿ ಯಶಸ್ಸು ದೊರೆಯಲಿದೆ. ಉಪಾಧ್ಯಾಯ ವೃತ್ತಿಯಲ್ಲಿರುವವರಿಗೆ ಉತ್ತಮ ದಿನ. ಬಾಕಿ ಬರಬೇಕಾಗಿದ್ದ ಹಣವು ಇಂದು ನಿಮ್ಮ ಕೈ ಸೇರುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಹಣದ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರಿ. ಇಲ್ಲದಿದ್ದರೆ ಅನಗತ್ಯ ಸನ್ನಿವೇಶಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ಪರಾಕ್ರಮದ ಕೆಲಸಗಳಲ್ಲಿ ಯಶಸ್ಸು ಹೊಂದುವಿರಿ. ಈದಿನ ಹಿರಿಯ ಸಹೋದರನ ಸಹಕಾರ ಸಿಗುವುದು.

ಕುಂಭ:

ದಿನ ಭವಿಷ್ಯ

ನಿಮ್ಮ ಕೆಲಸ ಕಾರ್ಯಗಳ ಮೂಲಕ ಸಾಮಾಜಿಕ ಜೀವನದಲ್ಲಿ ಹೆಸರು ಗಳಿಸುವಿರಿ. ಎಲ್ಲ ವಿಷಯಗಳಲ್ಲೂ ಯೋಚಿಸಿ ಪ್ರತಿಕ್ರಿಯೆ ನೀಡಿ. ಉದ್ವೇಗದ ಭರದಲ್ಲಿ ಆಡಿದ ಮಾತಿಗೆ ಪಶ್ಚಾತ್ತಾಪ ಪಡಬೇಕಾಗುವುದು.

ಮೀನ:

ದಿನ ಭವಿಷ್ಯ

ಯಾರದೋ ಮಾತುಗಳಿಂದ ಉದ್ವಿಗ್ನರಾಗದೆ ಸಮಚಿತ್ತದಿಂದ ವರ್ತಿಸಿ ಸಂಭ್ರಮದಿಂದಿರಿ. ಇದಕ್ಕೆ ಪೂರಕವಾಗಿ ಗ್ರಹಗಳು ನಿಮಗೆ ಸಹಾಯ ಮಾಡುವರು. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 13 ಜುಲೈ, 2018!!