ದಿನ ಭವಿಷ್ಯ: 13 ಜುಲೈ, 2019!!

0
199

Astrology in kannada | kannada news ದಿನ ಭವಿಷ್ಯ: 13 ಜುಲೈ, 2019!!

ದಿನ ಭವಿಷ್ಯ: 13 ಜುಲೈ, 2019!!

ಮೇಷ:

ದಿನ ಭವಿಷ್ಯ

ಮೇಷ:- ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡುವಾಗ ಉದಾಸೀನ ಬೇಡ. ಧಾರ್ಮಿಕ ಕಾರ್ಯಗಳಿಗೆ ದಾನ ಮಾಡುವುದರಿಂದ ಕಷ್ಠಗಳು ದೂರವಾಗುವುದು. ಒಳ್ಳೆಯ ಉದ್ಯೋಗಗಳು ನಿಮ್ಮನ್ನು ಹುಡುಕಿಕೊಂಡು ಬರುವವು. ಮಕ್ಕಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಂಭ್ರಮಿಸುವರು.

ವೃಷಭ:

ದಿನ ಭವಿಷ್ಯ

ವೃಷಭ:- ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ವ್ಯಾಪಾರ-ವ್ಯವಹಾರದಲ್ಲಿ ಅನಿರೀಕ್ಷಿತ ತಿರುವು ಕಂಡುಬರಲಿದೆ. ಕೆಲವು ನಿರ್ಧಾರಗಳನ್ನು ಧೈರ್ಯದಿಂದ ತೆಗೆದುಕೊಳ್ಳುವಿರಿ. ಇದರಿಂದ ಸಂಗಾತಿಯು ತಮ್ಮ ಹರ್ಷವನ್ನು ವ್ಯಕ್ತಪಡಿಸುವರು.

ಮಿಥುನ:

ದಿನ ಭವಿಷ್ಯ

ಮಿಥುನ:- ಕದಡಿದ್ದ ಕುಟುಂಬದ ನೆಮ್ಮದಿ ಈಗ ತಿಳಿಗೊಳ್ಳುವುದು. ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಚಿಂತಿಸುವಿರಿ. ಮಕ್ಕಳ ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯುವುದು. ವ್ಯವಹಾರದಲ್ಲಿ ಅಧಿಕ ಲಾಭಾಂಶ ಕಂಡುಬರುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ. ನಿಮಗೆ ದಕ್ಕಬೇಕಾದಷ್ಟೆ ಈ ದಿನ ನಿಮ್ಮ ಕೈಸೇರುವುದು. ಶುಭ ಕಾರ್ಯಗಳು ಸುಸೂತ್ರವಾಗಿ ನಡೆಯುವವು. ಪ್ರಮುಖ ನಿರ್ಧಾರಗಳನ್ನು ಸದ್ಯಕ್ಕೆ ಕೈಗೊಳ್ಳುವುದು ಬೇಡ. ಆರ್ಥಿಕ ಸಫಲತೆ ನಿಮ್ಮಲ್ಲಿ ಪೂರ್ಣ ಧೈರ್ಯವನ್ನು ತುಂಬುವುದು.

ಸಿಂಹ:

ದಿನ ಭವಿಷ್ಯ

ಸಿಂಹ:- ದೈನಂದಿನ ಚಟುವಟಿಕೆಗಳಿಗೆ ಯಾವುದೇ ವ್ಯತ್ಯಯವಾಗುವುದಿಲ್ಲ. ಸರ್ಕಾರಿ ನೌಕರರಿಗೆ ಬಿಡುವಿಲ್ಲದ ಕೆಲಸ. ವಿನಾಕಾರಣ ದಂಪತಿಗಳಲ್ಲಿ ವಿರಸ ತಲೆದೋರುವ ಸಾಧ್ಯತೆ ಇದೆ. ಖಾಸಗಿ ಕಂಪನಿ ಉದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ವಿವಾದಗಳು ಇತ್ಯರ್ಥಗೊಂಡು ನೆಮ್ಮದಿ ಕಾಣುವಿರಿ. ನಿಮ್ಮ ಮೇಲಿನ ಬಹತ್ ಜವಾಬ್ದಾರಿಯನ್ನು ಈ ದಿನ ಕಳೆದುಕೊಳ್ಳುವಿರಿ. ಮನಸ್ಸು ಹಕ್ಕಿಯಂತೆ ಹಾರಾಡುವುದು. ಮಹಿಳೆಯರು ಉದ್ವೇಗಕ್ಕೆ ಒಳಗಾಗದೆ ತಾಳ್ಮೆಯಿಂದ ಇರುವುದು ಒಳ್ಳೆಯದು. ನಿಮ್ಮ ಸಹನೆಯೇ ಬಾಂಧವ್ಯವನ್ನು ವದ್ಧಿಸಲಿದೆ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ತಾಯಿಯ ಆರೋಗ್ಯದ ಸಲುವಾಗಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸುವಿರಿ. ರಕ್ತ ಸಂಬಂಧಗಳು ಹಾಳಾಗದಂತೆ ನೋಡಿಕೊಳ್ಳಿರಿ. ಅನಾವಶ್ಯಕ ವ್ಯವಹಾರಗಳಿಂದ ದೂರವಿರಿ. ರಾಜಕೀಯ ಪಕ್ಷದಲ್ಲಿ ಉತ್ತಮ ಸ್ಥಾನ ಲಭಿಸುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಅತಿಯಾದ ಸಂಕೋಚ ಸ್ವಭಾವದಿಂದಾಗಿ ಕೆಲಸ ಕಾರ್ಯಗಳಲ್ಲಿ ಭಾರಿ ಹಿನ್ನಡೆ ಆಗುವುದು. ಪಾಲುದಾರರಿಂದಲೇ ಮೋಸ ಹೋಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯಗಳಲ್ಲಿ ಬಿಗಿ ಹಿಡಿತ ಇರಲಿ. ಅನಿರೀಕ್ಷಿತವಾಗಿ ದಂಪತಿಗಳಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇರುವುದು.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು. ಮಡದಿ ಮಕ್ಕಳ ಕೋರಿಕೆಗಳನ್ನು ಪೂರೈಸಲು ಪ್ರಯತ್ನಿಸಿ. ನಿಮ್ಮ ಸದಭಿಪ್ರಾಯಕ್ಕೆ ಮನೆಯಲ್ಲಿ ಮನ್ನಣೆ ದೊರೆಯಲಿದೆ. ಹೊಟ್ಟೆನೋವು ಕೆಲವರಿಗೆ ಕಾಡುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಆರ್ಥಿಕ ಸ್ಥಿತಿ ಉತ್ತಮವಿರುವುದರಿಂದ ಬಂದ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುವಿರಿ. ಬಾಕಿ ಸಾಲಗಳು ಸದ್ಯದಲ್ಲೇ ತೀರುತ್ತಾ ಬರಲಿವೆ. ಔದ್ಯೋಗಿಕವಾಗಿ ಬದಲಾವಣೆಯ ಗಾಳಿ ಬೀಸುತ್ತಿರುವುದು ಶುಭದ ಸಂಕೇತ.

ಕುಂಭ:

ದಿನ ಭವಿಷ್ಯ

ಕುಂಭ:- ಚಿಲ್ಲರೆ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಕಂಡುಬರುವುದು. ಮನಸ್ಸಿನ ಸಮತೋಲನವನ್ನು ಕಾಯ್ದುಕೊಂಡು ವ್ಯವಹರಿಸುವ ನಿಮ್ಮ ಜಾಣ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವುದು. ಉದ್ಯೋಗದಲ್ಲಿ ಹೆಚ್ಚಿನ ಪ್ರಗತಿಗಾಗಿ ಅನುಭವಿಗಳ ಮಾರ್ಗದರ್ಶನ ಪಡೆಯಿರಿ.

ಮೀನ:

ದಿನ ಭವಿಷ್ಯ

ಮೀನ:- ಜನರ ಹಾಗೂ ಬಂಧುಗಳ ಪ್ರೀತಿಯ ಮಹಾಪೂರವೇ ಹರಿದು ಬರಲಿದೆ. ಬೇರೆಯವರ ಮಾತಿಗೆ ಅಷ್ಟುಮಹತ್ವ ಕೊಡುವ ಅಗತ್ಯವಿಲ್ಲ. ಕೈಗಾರಿಕೋದ್ಯಮಿಗಳಿಗೆ ತುಸು ನೆಮ್ಮದಿಯ ದಿನ. ಹೊಸ ವ್ಯವಹಾರ ಅಥವಾ ಒಪ್ಪಂದಗಳಿಗೆ ಸಹಿ ಹಾಕುವುದು ಬೇಡ. ಆರೋಗ್ಯದ ಕಡೆ ಜಾಗೃತರಾಗಿರಿ. .

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 13 ಜುಲೈ, 2019!!