ದಿನ-ಭವಿಷ್ಯ: 13 ಮಾರ್ಚ್, 2019!!

0
523

Astrology in kannada | kannada news ದಿನ-ಭವಿಷ್ಯ: 13 ಮಾರ್ಚ್, 2019!!

ದಿನ-ಭವಿಷ್ಯ: 13 ಮಾರ್ಚ್, 2019!!

ಮೇಷ:

ದಿನ ಭವಿಷ್ಯ

ಮೇಷ:- ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಪ್ರೇಮಿಗಳ ವಿವಾಹಕ್ಕೆ ಹಿರಿಯರ ಅನುಮತಿ ದೊರೆಯಲಿದೆ. ಬರಲಿರುವ ಎಲ್ಲಾ ವಿಘ್ನಗಳು ಕುಲದೇವತಾನುಗ್ರಹದಿಂದ ದೂರವಾಗಲಿದೆ.

ವೃಷಭ:

ದಿನ ಭವಿಷ್ಯ

ವೃಷಭ:- ಕೌಟುಂಬಿಕ ವಾತಾವರಣ ಉತ್ತಮವಾಗಿದ್ದು ಮಾನಸಿಕ ನೆಮ್ಮದಿ ಕಂಡುಬರಲಿದೆ. ಕುಲದೇವತಾರಾಧನೆಯಿಂದ ಉದ್ಯಮದಲ್ಲಿ ಪ್ರಗತಿ ಕಂಡು ಬರುವುದು. ವಿರೋಧಿಗಳು ತಾವಾಗಿಯೇ ನಿಮ್ಮಿಂದ ದೂರ ಸರಿಯಲಿದ್ದಾರೆ. ನಿರೀಕ್ಷಿಸಿದ್ದ ಶುಭ ವಾರ್ತೆಗಳನ್ನು ಕೇಳುವಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

ಮಿಥುನ:

ದಿನ ಭವಿಷ್ಯ

ಮಿಥುನ:- ನಿಮ್ಮ ಸುತ್ತು ಹುಟ್ಟಿಕೊಳ್ಳುವ ಸಮಸ್ಯೆಗಳನ್ನು ಉಪಾಯವಾಗಿ ಪರಿಹರಿಸಲು ಪ್ರಯತ್ನಿಸಿರಿ. ಪ್ರೀತಿಪಾತ್ರರಿಂದ ಸಮಯೋಚಿತ ಭರವಸೆ ಹಾಗೂ ಬೆಂಬಲ ದೊರೆಯಲಿದೆ. ತಂದೆಯವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಕೆಲವು ವಿಚಾರಗಳಲ್ಲಿ ಅನಿವಾರ್ಯವಾಗಿ ರಾಜಿಯಾಗಲೇಬೇಕಾದ ಸನ್ನಿವೇಶ ಇರುತ್ತದೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಸಂಶೋಧನಾ ಕಾರ್ಯದಲ್ಲಿ ಪ್ರಗತಿ ಕಂಡುಬರುವುದರೊಂದಿಗೆ ನಿಮ್ಮ ಕೀರ್ತಿಯು ಹೆಚ್ಚಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರಿಗೆ ಅನಿರೀಕ್ಷಿತ ವರ್ಗಾವಣೆ ಆಗುವುದು. ಅನಾವಶ್ಯಕವಾಗಿ ಬೇರೆಯವರ ವಿಷಯದಲ್ಲಿ ತಲೆ ಹಾಕಬೇಡಿ. ಇದರಿಂದ ನಷ್ಟದ ಜೊತೆಗೆ ಅಪಮಾನವನ್ನು ಅನುಭವಿಸಬೇಕಾಗುವುದು.

ಸಿಂಹ:

ದಿನ ಭವಿಷ್ಯ

ಸಿಂಹ:- ಆಧ್ಯಾತ್ಮ ಪ್ರಪಂಚ ನಿಮ್ಮನ್ನು ಆಕರ್ಷಿಸುವುದು. ಪತ್ರಿಕಾರಂಗದವರಿಗೆ ಸರ್ಕಾರದಿಂದ ನೆರವು ದೊರೆಯಲಿದೆ. ಆಸ್ತಿ ಸಂಬಂಧ ವ್ಯವಹಾರ ಸುಲಭವಾಗಿ ಪರಿಹಾರವಾಗಲಿದೆ. ಸಾಂಸಾರಿಕ ನೆಮ್ಮದಿ ಆನಂದವನ್ನುಂಟು ಮಾಡುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಎಲ್ಲವೂ ನನ್ನಿಂದಲೇ ಆಗಬೇಕೆಂಬ ಮನೋವೃತ್ತಿಯನ್ನು ಬಿಡುವುದು ಉತ್ತಮ. ಬಿಡುವಿಲ್ಲದ ಕಾರ್ಯಕ್ರಮದಿಂದಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗುವುದು. ಕೆಲಸದ ನಿಮಿತ್ತ ದೂರಪ್ರವಾಸವನ್ನು ಹಮ್ಮಿಕೊಳ್ಳುವಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಸಹೋದ್ಯೋಗಿಗಳ ಬೆಂಬಲ ನಿಮಗುಂಟು. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲವನ್ನು ಕಾಣುವಿರಿ. ಸ್ಥಿರಾಸ್ಥಿ ಖರೀದಿ ಬಗ್ಗೆ ಚಿಂತನೆ ನಡೆಸುವಿರಿ. ಅನಾವಶ್ಯಕ ಚಿಂತನೆಗಳನ್ನು ಮಾಡದಿರುವುದೇ ಕ್ಷೇಮಕರ. ಪ್ರಯಾಣದಲ್ಲಿ ಮತ್ತು ಬೆಂಕಿಸಂಬಂಧ ಉಪಕರಣಗಳನ್ನು ಬಳಸುವಾಗ ಎಚ್ಚರಿಕೆ ಅಗತ್ಯ. ದುರ್ಗಾಜಪವನ್ನು ಮಾಡಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ವ್ಯವಹಾರದಲ್ಲಿ ತೋರುವ ಜಾಣತನದಿಂದಾಗಿ ಹೆಚ್ಚಿನ ಲಾಭ ಗಳಿಸುವಿರಿ. ನಿಮ್ಮ ಮಾತಿನ ಮೋಡಿಗೆ ಎಲ್ಲರೂ ತಲೆದೂಗುವರು. ಒಮ್ಮೆ ಹರಿದು ಹೋದ ನೀರು ಮತ್ತೆ ಹಿಂದಕ್ಕೆ ಬರುವುದಿಲ್ಲ ಎಂಬುದು ನೆನಪಿರಲಿ. ಅನುಭವಿಗಳ ಮಾತನ್ನು ಅಲಕ್ಷಿಸುವುದರಿಂದ ನೀವೇ ತೊಂದರೆಯನ್ನು ಅನುಭವಿಸಬೇಕಾಗುವುದು.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ವ್ಯವಹಾರದಲ್ಲಿ ಅತಿಯಾದ ನಂಬಿಕೆ ಒಳ್ಳೆಯದಲ್ಲ. ಲೆಕ್ಕಾಚಾರ ಪಕ್ಕಾ ಇರುವಂತೆ ನೋಡಿಕೊಳ್ಳಿರಿ. ಅನಿರೀಕ್ಷಿತ ಏರಿಳಿತಗಳಿಗೆ ಮಾನಸಿಕವಾಗಿ ಈಗಲೇ ಸಿದ್ಧರಾಗುವುದು ಒಳ್ಳೆಯದು. ಸೋದರ ಸಮಸ್ಯೆಗಳನ್ನು ಬಗೆಹರಿಸಲು ನೀವು ಅಲೆದಾಡಬೇಕಾಗುವುದು. ಗಣ್ಯವ್ಯಕ್ತಿಗಳ ಸಂಪರ್ಕ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಅಮೂಲ್ಯ ವಸ್ತುಗಳ ಬಗ್ಗೆ ಜಾಗ್ರತೆಯಾಗಿರಿ. ಯಾರದೋ ಚಾಡಿ ಮಾತು ಕೇಳಿ ಸ್ನೇಹಿತರೊಂದಿಗೆ ಮನಸ್ತಾಪ ಮಾಡಿಕೊಳ್ಳದಿರಿ. ಷೇರು ವ್ಯವಹಾರ ಲಾಭದಾಯಕ. ಕೆಲಸದ ನಿಮಿತ್ತ ಅತಿಯಾದ ತಿರುಗಾಟದಿಂದಾಗಿ ಸಂಸಾರದಲ್ಲಿ ವಿರಸ ಮೂಡುವ ಸಂದರ್ಭ. ಅತಿಯಾದ ಒತ್ತಡದ ಜೀವನ ಆರೋಗ್ಯಕ್ಕೆ ಒಳ್ಳೆಯದಲ್ಲ.

ಕುಂಭ:

ದಿನ ಭವಿಷ್ಯ

ಕುಂಭ:- ಮಾತಿನ ಮೇಲೆ ಹಿಡಿತವಿರಲಿ. ಕೃಷಿಕರು ಗಮನವಿಟ್ಟು ಕೆಲಸ ಮಾಡುವುದು ಉತ್ತಮ. ಔದ್ಯೋಗಿಕ ಸಮಸ್ಯೆಗಳು ತಾತ್ವಿಕವಾಗಿ ಬಗೆಹರಿಯಲಿವೆ. ಆರ್ಥಿಕವಾಗಿ ಸದೃಢರಾಗಿ ಬೆಳೆಯುವಿರಿ. ಹಳೆ ವಾಹನಗಳ ರಿಪೇರಿ ಖರ್ಚನ್ನು ಭರಿಸಬೇಕಾಗುವುದು.

ಮೀನ:

ದಿನ ಭವಿಷ್ಯ

ಮೀನ:- ವೈಯಕ್ತಿಕ ವಿಷಯಗಳ ಬಗ್ಗೆ ಜಾಗ್ರತರಾಗಿರಿ. ಗಂಭೀರ ವಿಷಯಗಳ ಬಗ್ಗೆ ಎಲ್ಲರೊಡನೆ ಚರ್ಚೆ ಬೇಡ. ಹಿರಿಯರ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ನಿಮ್ಮ ನೆಮ್ಮದಿಗೆ ಭಂಗ ತರುತ್ತಿದ್ದ ಆಸ್ತಿ ವಿಚಾರ ಈ ವಾರದೊಳಗೆ ಇತ್ಯರ್ಥವಾಗುವುದು. ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿರುವ ಮಿತ್ರನಿಗೆ ಸಹಾಯ ಮಾಡುವಿರಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ-ಭವಿಷ್ಯ: 13 ಮಾರ್ಚ್, 2019!!