ದಿನ ಭವಿಷ್ಯ: 13 ನವೆಂಬರ್, 2018!!

0
412
ದಿನ ಭವಿಷ್ಯ

Astrology in kannada | kannada news ದಿನ-ಭವಿಷ್ಯ: 13 ನವೆಂಬರ್, 2018!!

ದಿನ-ಭವಿಷ್ಯ: 13 ನವೆಂಬರ್, 2018!!

ಮೇಷ:

ದಿನ ಭವಿಷ್ಯ

ಮೇಷ ರಾಶಿ:- ಸ್ಪಷ್ಟವಾಗಿ ತಿಳಿದಿದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ಯಾರೋ ಸಲಹೆ ನೀಡಿದರೆಂದು ತಿಳಿಯದೆ ಮುನ್ನುಗ್ಗುವುದಕ್ಕೆ ಹೋಗದಿರಿ. ಇದರಿಂದ ತೊಂದರೆ ಎದುರಾಗುವುದು. ಪಿತ್ರಾರ್ಜಿತ ಆಸ್ತಿಯು ಸದ್ಯಕ್ಕೆ ದೊರೆಯುವುದಿಲ್ಲ.

ವೃಷಭ:

ದಿನ ಭವಿಷ್ಯ

ವೃಷಭ ರಾಶಿ:- ವಿವಾದಗಳನ್ನು ಸೃಷ್ಟಿ ಮಾಡುವಂತಹ ವಿಚಾರಗಳ ಪ್ರತಿಪಾದನೆಗೆ ಖಂಡಿತವಾಗಿ ಮುಂದಾಗದಿರಿ. ಒಬ್ಬರ ಆಂತರಿಕ ವಿಷಯವನ್ನು ಮತ್ತೊಬ್ಬರ ಮುಂದೆ ಹೇಳಿ ಮಧುರ ಬಾಂಧವ್ಯವನ್ನು ಹಾಳು ಮಾಡಿಕೊಳ್ಳದಿರಿ. ಆದಷ್ಟು ಮೌನ ವಹಿಸಿ.

ಮಿಥುನ:

ದಿನ ಭವಿಷ್ಯ

ಮಿಥುನ:- ಒಂದೇ ಒಂದು ದಾರಿ ಎಂಬುದಕ್ಕೆ ಜೋತು ಬೀಳದೆ ನಿಮ್ಮ ಕಣ್ಣುಗಳನ್ನು ವಿವಿಧ ಕೋನಗಳತ್ತ ಹೊರಳಿಸಿದಾಗ ವಿವಿಧ ದಾರಿಗಳು ನಿಮಗೆ ಗೋಚರಿಸುತ್ತವೆ ಮತ್ತು ಇದರಿಂದ ನಿಮ್ಮ ಮನೋಕಾಮನೆಗಳನ್ನು ಪೂರೈಸಿಕೊಳ್ಳಲು ಅನುಕೂಲವಾಗುವುದು.

Also read: ಎಲ್ಲರಿಗು ಮಚ್ಛೆ ಇರುವುದು ಸಾಮಾನ್ಯ, ಮಚ್ಛೆಯಿಂದ ಅದೃಷ್ಟ ಅಥವಾ ದುರದೃಷ್ಟ ಫಲಗಳ ಬಗ್ಗೆ ತಿಳಿದುಕೊಳ್ಳಿ….!!

ಕಟಕ:

ದಿನ ಭವಿಷ್ಯ

ಕಟಕ:- ಶಾಸನಬದ್ಧವಾದ ಚೌಕಟ್ಟಿನ ಇತಿಮಿತಿಗಳನ್ನು ಚೆನ್ನಾಗಿ ತಿಳಿದುಕೊಂಡಿರುವಿರಿ. ಆ ನಿಮ್ಮ ತಿಳುವಳಿಕೆಯು ನಿಮಗೆ ಸಹಾಯ ಮಾಡುವುದು. ಇದರಿಂದ ನಿಮ್ಮದೇ ಆದ ಹೋರಾಟಕ್ಕೆ ಜಯ ಸಿಗುವುದು.

ಸಿಂಹ:

ದಿನ ಭವಿಷ್ಯ

ಸಿಂಹ:- ಅನವಶ್ಯಕವಾದ ಕಾರಣಗಳನ್ನು ಮುಂದಿಟ್ಟುಕೊಂಡು ವ್ಯಾಜ್ಯಕ್ಕೆ ಹೋಗುವಂತಹ ಮಂದಿ ಅಪಾಯವನ್ನು ತಂದೊಡ್ಡುವ ಸಾಧ್ಯತೆಗಳಿವೆ. ಅಂತಹ ವ್ಯಕ್ತಿಗಳು ಬೆಳೆಯದಂತೆ ಮೂಲದಲ್ಲಿಯೇ ಚಿವುಟಿ ಬಿಡಿ. ಇದರಿಂದ ನಿಮ್ಮ ದಾರಿ ಸುಗಮವಾಗುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ನೀತಿಯನ್ನು ಬೋಧಿಸಿ ನಾಟಕವಾಡುವ ಜನರು ನಿಮ್ಮನ್ನು ಸಂಧಿಸುತ್ತಾರೆ. ಅಂತಹವರನ್ನು ತಾಳ್ಮೆಯಿಂದಲೇ ಸಾಗಹಾಕಿ. ಇಲ್ಲದೆ ಇದ್ದಲ್ಲಿ ನಿಮ್ಮ ಸ್ನೇಹಿತರ ನಡುವೆ ಮನಸ್ತಾಪವನ್ನು ಮತ್ತು ಒಡಕನ್ನು ಉಂಟು ಮಾಡುವರು.

Also read: ನಿಮ್ಮ ಜಾತಕದಲ್ಲೂ ಇಂಥ ಯೋಗಾಯೋಗ ಇರಬಹುದು ಎಂದು ನಿಮಗೆ ತಿಳಿದಿದೆಯೇ..!!

ತುಲಾ:

ದಿನ ಭವಿಷ್ಯ

ತುಲಾ:- ವರಮಾನ ತೆರಿಗೆ ಮತ್ತು ಸಂಪತ್ತು ತೆರಿಗೆಗಳ ವಿಷಯಗಳನ್ನು ಅರಿಯುವಿರಿ. ಇದರಿಂದ ಕಾಲಕಾಲಕ್ಕೆ ಕಟ್ಟಬೇಕಾದ ತೆರಿಗೆಯ ಮಾಹಿತಿ ದೊರೆಯುವುದು. ಇದನ್ನು ನಿಜ ಜೀವನದಲ್ಲಿ ಪಾಲಿಸಿದಲ್ಲಿ ಸುಖಿ ಜೀವನ ನಡೆಸಬಹುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಸ್ವಾರ್ಥ ಇರುವುದು ತಪ್ಪೇನಲ್ಲ. ಆದರೆ ನಿಮ್ಮ ಸ್ವಾರ್ಥದಿಂದ ಅನ್ಯರಿಗೆ ತೊಂದರೆ ಆಗದಿರಲಿ. ಮನಸ್ಸಿನ ತುಮುಲಗಳನ್ನು ಹತೋಟಿಗೆ ತಂದುಕೊಳ್ಳಲು ಶಿವಪಂಚಾಕ್ಷ ರಿ ಮಂತ್ರವನ್ನು ಪಠಿಸಿ ಮತ್ತು ಮಾತಾ ದುರ್ಗಾದೇವಿಯ ದರ್ಶನ ಪಡೆಯಿರಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ವಿವೇಕಿಗಳಾದ ನಿಮ್ಮಿಂದ ಹಲವು ರೀತಿಯ ಪ್ರೌಢಿಮೆಗಳ ಪ್ರದರ್ಶನಕ್ಕೆ ಹೇರಳ ಅವಕಾಶಗಳು ಬರುವುದು. ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ಹೊಂದಲು ಗುರುವಿನ ಆಶೀರ್ವಾದವೂ ಕಾರಣವಾಗಿರುತ್ತದೆ.

Also read: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ರಾಶಿಗನುಗುಣವಾಗಿ ಯಾವ ರತ್ನವನ್ನು ಧರಿಸುವುದರಿಂದ ಯಾವ ಫಲ ಸಿಗುವುದೆಂದು ತಿಳಿದುಕೊಳ್ಳಿ…!!

ಮಕರ:

ದಿನ ಭವಿಷ್ಯ

ಮಕರ:- ಶ್ರಮಪಡದೆ ಯಾವುದೇ ವಸ್ತುವು ದೊರೆಯುವುದಿಲ್ಲ. ಅಂತೆಯೇ ಸುಲಭವಾಗಿ ದೊರೆತ ಹಣ ಅಷ್ಟೇ ವೇಗವಾಗಿ ಖರ್ಚಾಗುವುದು. ಹಾಗಾಗಿ ನ್ಯಾಯಯುತವಾಗಿ ಹಣ ಸಂಪಾದಿಸಿ.

ಕುಂಭ:

ದಿನ ಭವಿಷ್ಯ

ಕುಂಭ:- ನಿಮ್ಮ ಏಕಾಗ್ರತೆ ಹಾಗೂ ಕಠಿಣ ಪರಿಶ್ರಮಗಳಿಂದ ನಿಮ್ಮ ಮೇಲಿನ ಅಧಿಕಾರಿಗಳಿಗೆ ಹೆಚ್ಚಿನ ಸಂತೋಷ ಲಭ್ಯವಾಗಲಿದೆ. ಇದರಿಂದ ಅವರು ನಿಮಗೆ ಗುರುತರವಾದ ಜವಾಬ್ದಾರಿಯನ್ನು ನಿಭಾಯಿಸಲು ನೇಮಿಸುವರು.

ಮೀನ:

ದಿನ ಭವಿಷ್ಯ

ಮೀನ:- ಕಾಯ್ದೆ ಕಾನೂನುಗಳ ಮೂಲಕ ಪರಿಹಾರವಾಗಬೇಕಿದ್ದ ವಿಚಾರಗಳು ಸರಳ ಪರಿಹಾರವನ್ನು ಕಾಣಲಿದೆ. ಬೆಲೆಬಾಳುವ ವಸ್ತುಗಳ ಖರೀದಿಯನ್ನು ಮುಂದೂಡುವುದು ಒಳಿತು.

Also read: ವಾಸ್ತು ಶಾಸ್ತ್ರದ ಪ್ರಕಾರ ಈ ದಿಕ್ಕುಗಳಲ್ಲಿ ಬಾಗಿಲುಗಳನ್ನ ನಿರ್ಮಿಸಿದರೆ, ನಿಮ್ಮ ಅದೃಷ್ಟ ಬದಲಾಗುತ್ತೆ..

ದಿನ-ಭವಿಷ್ಯ: 13 ನವೆಂಬರ್, 2018!!