ದಿನ ಭವಿಷ್ಯ: 13 ಅಕ್ಟೋಬರ್, 2018 !!

0
281
ದಿನ ಭವಿಷ್ಯ

Astrology in kannada | kannada news | ದಿನ ಭವಿಷ್ಯ: 10 ಅಕ್ಟೋಬರ್!!

ಮೇಷ:

ದಿನ ಭವಿಷ್ಯ

ನಿಮ್ಮ ಮೇಲಿನ ಪ್ರೀತಿ ಅನುರಾಗಗಳನ್ನು ಈ ಹಿಂದಿನಂತೆ ನಿಮ್ಮ ಗೆಳೆಯರು ತೋರುತ್ತಿಲ್ಲ ಎಂಬ ಕೊರಗು ಈ ದಿನ ಕಾಡುವುದು. ನಂಬಿದ ಸ್ನೇಹಿತರು ನಿಮ್ಮಿಂದ ದೂರ ಸರಿಯುವರು. ಸಣ್ಣಪುಟ್ಟ ಅನಾರೋಗ್ಯದ ದೆಸೆಯಿಂದ ಆಸ್ಪತ್ರೆ ಖರ್ಚು ಬರುವ ಸಾಧ್ಯತೆ ಇದೆ. ಈ ದಿನ ನಿಮ್ಮ ಮುಂಗೋಪವನ್ನು ಕಡಿಮೆ ಮಾಡಿಕೊಳ್ಳುವುದು ಲೇಸು.

ವೃಷಭ:

ದಿನ ಭವಿಷ್ಯ

ವೈಯಕ್ತಿಕ ವಿಚಾರಗಳನ್ನು ಪರರ ಮುಂದೆ ಹೇಳಿ ನಗೆಪಾಟಲಿಗೆ ಒಳಗಾಗದಿರಿ. ನಿಮ್ಮ ಸಂಗಾತಿಗೆ ಈ ದಿನ ಆತ್ಮಸ್ಥೈರ್ಯವನ್ನು ತುಂಬುವಿರಿ. ಮಗಳ ವಿವಾಹ ಸಮಸ್ಯೆಗೆ ಒಂದು ಪರಿಹಾರ ದೊರೆಯುವುದು. ದೇವಿ ಆರಾಧನೆಯಿಂದ ಒಳಿತಾಗುವುದು.

ಮಿಥುನ:

ದಿನ ಭವಿಷ್ಯ

ಕಚೇರಿ ಕೆಲಸದ ಒತ್ತಡದಿಂದ ಹೈರಾಣಾಗುವಿರಿ. ಕಚೇರಿಯ ಒತ್ತಡವನ್ನು ಅಲ್ಲೆ ಬಿಟ್ಟು ಮನೆಯಲ್ಲಿ ಮನೆ ಮಂದಿಯ ಜೊತೆ ಬೆರೆಯಿರಿ. ಇದರಿಂದ ನಿಮ್ಮ ಸಂಗಾತಿ ಮತ್ತು ಮಕ್ಕಳ ಪ್ರೀತಿ ವಿಶ್ವಾಸವನ್ನು ಪಡೆಯುವಿರಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ನಿಮ್ಮ ಅದೃಷ್ಟಕ್ಕೆ ಇಂದು ಸುಗಮ ದಾರಿಗಳಿದ್ದು ಯಶಸ್ಸಿನ ಶಿಖರ ತಲುಪುವಿರಿ. ಪರಾಕ್ರಮ ಕೆಲಸಗಳಲ್ಲಿ ಯಶಸ್ಸನ್ನು ಹೊಂದುವಿರಿ. ಆದರೆ ಯಶಸ್ಸಿನ ಹಿನ್ನಡೆಯಲ್ಲಿ ಅಹಂಕಾರದ ಮಾತುಗಳನ್ನು ಆಡದಿರಿ. ಇದರಿಂದ ಕೆಲವರ ವಿರೋಧವನ್ನು ಕಟ್ಟಿಕೊಳ್ಳುವಿರಿ.

ಸಿಂಹ:

ದಿನ ಭವಿಷ್ಯ

ಮನೆಯಲ್ಲಿನ ವಾತಾವರಣವು ನಿಮ್ಮ ಸೂಕ್ಷ ್ಮ ಮನಸ್ಸನ್ನು ಕಲುಕುವುದು. ಸಂಗಾತಿಯ ಸಲಹೆಗಳನ್ನು ಸ್ವೀಕರಿಸಿದಲ್ಲಿ ಕೌಟುಂಬಿಕ ಸಮಸ್ಯೆಗೆ ಪರಿಹಾರ ಸಿಗುವುದು. ಮಗನ ಮದುವೆಯ ವಿಷಯವು ಈ ದಿನ ಹೆಚ್ಚು ಚಿಂತೆಯನ್ನುಂಟು ಮಾಡುವುದು.

ಕನ್ಯಾ:

ದಿನ ಭವಿಷ್ಯ

ವ್ಯಯ ಸ್ಥಾನದ ರಾಹು ದೂರದ ಪ್ರವಾಸವನ್ನು ತಿಳಿಸುವುದು. ಪತಿ-ಪತ್ನಿಯ ಮಧ್ಯೆ ಮನಸ್ತಾಪಗಳು ವಿರಸಗಳು ಉಂಟಾಗುವ ಸಾಧ್ಯತೆ. ಸಣ್ಣ ವಿಷಯವನ್ನು ದೊಡ್ಡದು ಮಾಡುವುದು ಒಳ್ಳೆಯದಲ್ಲ. ಆದಷ್ಟು ಮೌನವ್ರತ ಮಾಡಿರಿ. ಶಿವಸ್ತುತಿಯನ್ನು ಪಠಿಸುವುದು ಉತ್ತಮ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ಸ್ವಯಂಕೃತ ಅಪರಾಧಗಳಿಗೆ ಇತರೆಯವರನ್ನು ದೂರಿ ಪ್ರಯೋಜನವಿಲ್ಲ. ಅದಷ್ಟು ನಿಮ್ಮ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಿರಿ. ದೂರದ ಬಂಧುವಲಯದಿಂದ ನಿರೀಕ್ಷೆಗೂ ಮೀರಿ ಸಹಾಯ ಬರುವುದು. ಬರುವ ಸಹಾಯವನ್ನು ತಿರಸ್ಕರಿಸದಿರಿ.

ವೃಶ್ಚಿಕ:

ದಿನ ಭವಿಷ್ಯ

ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಂಭವವಿರುತ್ತದೆ. ಆದರೆ ಧೈರ್ಯಗುಂದುವ ಕಾರಣವಿಲ್ಲ. ಗುರುವಿನ ಶುಭ ಸಂಚಾರದಿಂದ ಒಳಿತಾಗುವುದು. ಪ್ರಯಾಣದಲ್ಲಿ ಎಚ್ಚರಿಕೆಯಿರಲಿ. ಸ್ನೇಹಿತರ ಹಣಕಾಸಿನ ವ್ಯವಹಾರದಲ್ಲಿ ಮಧ್ಯಪ್ರವೇಶ ಮಾಡದಿರಿ.

ಧನಸ್ಸು:

ದಿನ ಭವಿಷ್ಯ

ದುಡ್ಡಿದ್ದವನೇ ದೊಡ್ಡಪ್ಪ. ಆದರೆ ಈ ದಿನ ಹಣಕಾಸು ಬರುವ ವಿಚಾರದಲ್ಲಿ ವಿಳಂಬತೆ ತೋರುವುದು. ಧನಸ್ಥಾನದ ಶನಿಯು ವ್ಯಯಸ್ಥಾನದಲ್ಲಿ ಇರುವುದರಿಂದ ಅನಾವಶ್ಯಕ ಖರ್ಚುಗಳು ಉಂಟಾಗುವುದು. ಖರ್ಚಿನ ವಿಷಯದಲ್ಲಿ ಜಾಗರೂಕರಾಗಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಬಹಳ ದಿನಗಳ ಯೋಜನೆಯು ಕಾರ್ಯ ರೂಪಕ್ಕೆ ಬರುವುದು. ವಿವಿಧ ಮೂಲಗಳಿಂದ ಹಣಕಾಸು ಬರುವುದು. ಆದರೆ ಕಾರ್ಯ ಯೋಜನೆಗೆ ತರಾತುರಿ ಬೇಡ. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ವಿದ್ಯಾರ್ಥಿಗಳಿಗೆ ಉತ್ತಮ ಕಾಲ.

ಕುಂಭ:

ದಿನ ಭವಿಷ್ಯ

ನಿಮ್ಮ ಮೇಲೆ ನೀವು ನಂಬಿಕೆಯನ್ನು ಇಟ್ಟುಕೊಳ್ಳಿರಿ. ಆತ್ಮವಿಶ್ವಾಸವೇ ಆತ್ಮೋನ್ನತಿಗೆ ದಾರಿ. ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ಮೇಲಧಿಕಾರಿಗಳ ಹಸ್ತಕ್ಷೇಪ. ಕೆಲಸವನ್ನು ಅತಿಶ್ರದ್ಧೆಯಿಂದ ಮಾಡಿರಿ.

ಮೀನ:

ದಿನ ಭವಿಷ್ಯ

ಗುರುವಿನ ಆಶೀರ್ವಾದವಿದೆ. ಕೌಟುಂಬಿಕ ನೆಮ್ಮದಿಗಾಗಿ ಸಹೋದರಿಯರ ನೆರವು ಪಡೆಯುವಿರಿ. ಮಕ್ಕಳು ನಿಮ್ಮ ಇಚ್ಛೆಗೆ ತಕ್ಕಂತೆ ನಡೆಯುವರು. ಖಾಸಗಿ ನೌಕರದಾರರಿಗೆ ಉತ್ತಮ ದಿನ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 10 ಅಕ್ಟೋಬರ್!!