ದಿನ ಭವಿಷ್ಯ: 13 ಸೆಪ್ಟೆಂಬರ್, 2019!!

0
316

Astrology in kannada | kannada news ದಿನ ಭವಿಷ್ಯ: 13 ಸೆಪ್ಟೆಂಬರ್, 2019!!

ದಿನ ಭವಿಷ್ಯ: 13 ಸೆಪ್ಟೆಂಬರ್, 2019!!

ಮೇಷ:

ದಿನ ಭವಿಷ್ಯ

ಮೇಷ:- ಮನೆಯಲ್ಲಿ ಚಿಕ್ಕವರ ಆಸೆಗಳು ಹೆಚ್ಚುವುದರಿಂದ ಖರ್ಚು ಅಧಿಕಗೊಳ್ಳಲಿದೆ. ಪ್ರಮುಖ ವ್ಯಕ್ತಿಯೊಬ್ಬರ ಪರಿಚಯದಿಂದ ವ್ಯವಹಾರಗಳು ಸರಾಗವಾಗಿ ಅಭಿವೃದ್ಧಿ ಕಾಣುವಿರಿ. ನ್ಯಾಯಾಂಗದಲ್ಲಿ ಜಯವಿದೆ. ನಾಯಕತ್ವದ ಗುಣಗಳನ್ನು ಕಂಡು ಜನ ನಿಮ್ಮ ಸುತ್ತ ತಿರುಗುವರು.

ವೃಷಭ:

ದಿನ ಭವಿಷ್ಯ

ವೃಷಭ:- ಸ್ನೇಹಿತರ ಆಗಮನದಿಂದ ಹರ್ಷವೆನಿಸಲಿದೆ. ಗ್ರಹಾಲಂಕಾರ ವಸ್ತುಗಳ ಖರೀದಿಯಿಂದ ಮನೆಯವರಿಂದ ಪ್ರಶಂಸೆ ಬರಲಿದೆ. ಮಹತ್ವದ ಕೆಲಸಗಳಿಗಾಗಿ ದೂರದ ಪ್ರಯಾಣ ಸಂಭವವಿದ್ದು, ವೇಗವಾಗಿ ಹೋಗುವುದು ಬೇಡ.

ಮಿಥುನ:

ದಿನ ಭವಿಷ್ಯ

ಮಿಥುನ:- ವೈವಾಹಿಕ ಜೀವಿಗಳಿಗೆ ತೃಪ್ತಿ ತರಲಿದೆ. ಮಗನ ವ್ಯಾಸಂಗಕ್ಕೆ ಪ್ರಗತಿ ಇದ್ದು, ಮತ್ತೆ ಖರ್ಚು ಒದಗಿ ಬರಲಿದೆ. ದೀರ್ಘ ಆಲೋಚನೆಯಿಂದ ಗುರಿ ತಲುಪಿವಿರಿ. ಅಧಿಕಾರಿಗಳ ಸಹಾಯದಿಂದ ಉದ್ಯೋಗದಲ್ಲಿ ನೆಮ್ಮದಿ ಎನಿಸಲಿದೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ನಿರುದ್ಯೋಗಿಗಳಿಗೆ ಉದ್ಯೋಗ ದೊರಕಲಿದೆ. ವರಿಷ್ಠ ಸ್ಥಾನದಲ್ಲಿರುವವರಿಗೆ ಉನ್ನತ ಸ್ಥಾನದಿಂದ ಗೌರವ ಹೆಚ್ಚಲಿದೆ. ನ್ಯಾಯವಾದಿಗಳಿಗೆ ಪ್ರಗತಿ ಇದೆ. ಲಾಭವಿದೆ. ಸಂಬಂಧಿಗಳಲ್ಲಿ ಗಾಢ ಬಾಂಧವ್ಯ ವೃದ್ಧಿಗೊಳ್ಳಲಿದೆ.

ಸಿಂಹ:

ದಿನ ಭವಿಷ್ಯ

ಸಿಂಹ:- ನಿಮ್ಮ ಜವಾಬ್ದಾರಿಯುತ ಮಾತಿನಿಂದ ಸುತ್ತಲಿನವರ ಪ್ರೀತಿಗೆ ಪಾತ್ರರಾಗುವಿರಿ. ಸತ್ಕಾರ್ಯ ನಿಷ್ಠೆಯಿಂದ ಕುಟುಂಬದಲ್ಲಿ ಸಂತಸ ತರಲಿದೆ. ವ್ಯಾಪಾರಿಗಳಿಗೆ ಸಕಾರಾತ್ಮಕ ಬದಲಾವಣೆಯಿಂದ ಲಾಭವಿದೆ. ಸಾಮಾಜಿಕ ಕಾರ್ಯಗಳಿಂದ ಪ್ರಶಂಸೆ ಹೆಚ್ಚಲಿದೆ..

ಕನ್ಯಾ:

ದಿನ ಭವಿಷ್ಯ

ಕನ್ಯಾ:- ದಾಯಾದಿಗಳ ಕಲಹದಿಂದ ಮುಕ್ತಿ ಪಡೆಯುವಿರಿ. ಸರಕಾರಿ ಉದ್ಯೋಗಿಗಳಿಗೆ ಅಧಿಕಾರಿಗಳ ಸಹಾಯದಿಂದ ಬದಲಾವಣೆ ಕಾಣುವಿರಿ. ಸಾವಧಾನದಿಂದ ಹೆಜ್ಜೆ ಹಾಕಿದರೆ ಯಸಸ್ಸು ಸಾಧಿಸುವಿರಿ. ತಾಂತ್ರಿಕರಿಗೆ ಶುಭಫಲ ತೋರಿ ಬರಲಿದೆ..

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಬುದ್ಧಿ ಜೀವಿಗಳ ಸಲಹೆಯಿಂದ ಉನ್ನತ ಮಟ್ಟದ ಸಾಧನೆಯಾಗಲಿದೆ. ಚಿಕ್ಕವರ ಕನಸು ನನಸಾಗಲಿದೆ. ಉನ್ನತ ಮಟ್ಟದ ಸಾಧನೆ ಮಾಡುವವರಿಗೆ ಪ್ರೋತ್ಸಾಹ ಸಿಗಲಿದೆ. ಯಾವುದೇ ರೀತಿಯ ಪರದಾಟವಿಲ್ಲದೇ ಅನುಕೂಲಕ್ಕೆ ತಕ್ಕಂತೆ ಆದಾಯದ ಜತೆಗೆ ಪ್ರಚಾರ ಕೂಡ ಲಭಿಸಲಿದೆ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ನಿಮ್ಮ ಎಲ್ಲ ಕೆಲಸಗಳಿಗೆ ಎಲ್ಲರ ಪ್ರೋತ್ಸಾಹದಿಂದ ಉತ್ತೇಜನಕಾರಿ ಎನಿಸಲಿದೆ. ಬಂಧುಗಳಲ್ಲಿ ಬಾಂಧವ್ಯ ವೃದ್ಧಿಗೊಳ್ಳುವಿಕೆಯಿಂದ ಜೀವನ ಮಟ್ಟ ಸುಧಾರಿಸಲಿದೆ. ಹಿತ ಮಿತ್ರರು ನಿಮ್ಮನ್ನು ಸಹಾಯ ಯಾಚಿಸಿ ಬರುವ ಸಂಭವವಿದ್ದು, ಆಲೋಚಿಸಿ ಮುನ್ನಡೆದರೆ ಒಳಿತು.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ಅಧಿಕಾರ ಸ್ಥಾನದಲ್ಲಿ ಕೆಲಸ ಮಾಡುವವರಿಗೆ ಸಾಮಾನ್ಯರಿಂದಲೂ ಪ್ರೋತ್ಸಾಹ, ಸಹಕಾರ ದೊರಕಲಿದೆ. ರಾಜಕೀಯ ವ್ಯಕ್ತಿಗಳು ತಮ್ಮ ವಾಕ್ ಚಾತುರ್ಯದಿಂದ ಸ್ಥಾನದಲ್ಲಿ ವೃದ್ಧಿ ಕಾಣುವಿರಿ. ಭೂ ವಿವಾದಕ್ಕೆ ಸಂಬಂಧಿಸಿದ ಕಲಹಗಳು ನಿರಾಯಾಸವಾಗಿ ಬಗೆಹರಿದು ಮನೆಯಲ್ಲಿ ಸಂತಸ ಮೂಡಲಿದೆ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಒಳ್ಳೆಯ ಆದಾಯದಿಂದ ಸಾಲ ತೀರುವ ಸಂಭವವಿದ್ದು, ಉನ್ನತ ವ್ಯಾಸಂಗದವರಿಗೆ ತೃಪ್ತಿ ಇದೆ. ಮಂಗಲ ಕಾರ್ಯಗಳಿಗೆ ನೆರವು ಸಿಗಲಿದೆ. ನಿಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಳ್ಳಿ. ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡಿ.

ಕುಂಭ:

ದಿನ ಭವಿಷ್ಯ

ಕುಂಭ:- ನಿಮ್ಮ ಛಲ ಸ್ವಭಾವದಿಂದ ದೊಡ್ಡ ಕನಸನ್ನು ನನಸಾಗಿಸಿಕೊಳ್ಳುವಿರಿ. ಸಂತರು ನೀಡಿದ ಸಲಹೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಗಮಗೊಳ್ಳಲಿದೆ. ಆಗದವರು ಮಿತ್ರರಾಗುವ ಸಂದರ್ಭ ಕೂಡಿ ಬಂದು ವಿವಾದದಿಂದ ಬಿಡುಗಡೆ ಹೊಂದುವರಿ. ಅಲ್ಪ ತೃಪ್ತಿ ಸಮಾಧಾನ ತರಲಿದೆ.

ಮೀನ:

ದಿನ ಭವಿಷ್ಯ

ಮೀನ:- ಸ್ವತಂತ್ರ ಉದ್ಯೋಗ ಹೊಂದಿದವರು ತಮ್ಮ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಏರುವ ಸಂಭವವಿದೆ. ಮಹಿಳೆಯರಿಗೆ ಆದ್ಯತೆ ಲಭಿಸಿ ಸ್ಥಾನಮಾನ ಗಳಿಸುವಿರಿ. ಆರೋಗ್ಯದಲ್ಲಿನ ಸಮಸ್ಯೆಗಳಿಂದ ಮುಕ್ತಿ ಕಾಣುವಿರಿ. ಇದರಿಂದ ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ತಂತ್ರಜ್ಞರು, ನೌಕರರು, ಸ್ವಂತ ಉದ್ಯೋಗಿಗಳಿಗೆ ಅಡ್ಡಿ ಇಲ್ಲ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 13 ಸೆಪ್ಟೆಂಬರ್, 2019!!