ದಿನ ಭವಿಷ್ಯ: 14 ಸೆಪ್ಟೆಂಬರ್, 2019!!

0
191

Astrology in kannada | kannada news ದಿನ ಭವಿಷ್ಯ: 14 ಸೆಪ್ಟೆಂಬರ್, 2019!!

ದಿನ ಭವಿಷ್ಯ: 14 ಸೆಪ್ಟೆಂಬರ್, 2019!!

ಮೇಷ:

ದಿನ ಭವಿಷ್ಯ

ಮೇಷ:- ಬೇರೆಯವರ ಸಂಸಾರ ಸರಿಮಾಡಲು ಹೋಗಿ ನಿಮ್ಮ ಕುಟುಂಬ ಜೀವನದಲ್ಲಿ ಅಶಾಂತಿಯನ್ನು ತಂದುಕೊಳ್ಳದಿರಿ. ವಿದೇಶದಿಂದ ಮಗ ಹಾಗೂ ಅವರ ಕುಟುಂಬದ ಆಗಮನವಾಗಲಿದೆ. ಸಾಮಾಜಿಕ ಸೇವೆಯಲ್ಲಿಯೇ ಸಂತೃಪ್ತಿ ಕಾಣುವ ನಿಮಗೆ ಅದರಲ್ಲೇ ಕೀರ್ತಿ, ಗೌರವ ಪ್ರತಿಷ್ಠೆ ಹೆಚ್ಚಲಿದೆ. ಸ್ನೇಹಿತರು ಸಕಾಲದಲ್ಲಿ ಬೆಂಬಲ ನೀಡುವರು.

ವೃಷಭ:

ದಿನ ಭವಿಷ್ಯ

ವೃಷಭ:- ದೂರದ ಪ್ರವಾಸ ನಿಂತು ಹೋಗುವ ಸಾಧ್ಯತೆ ಇರುವುದು. ವ್ಯವಹಾರದಲ್ಲಿ ಅಪರಿಚಿತರೊಡನೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಕೆಲವರಿಗೆ ಸ್ಥಾನ ಬದಲಾವಣೆ ಉಂಟು.ಸಂಗಾತಿಯ ಬುದ್ಧಿಮತ್ತೆ ಆದರಿಸಿ ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಆದರಗಳನ್ನು ಹೊಂದುವಿರಿ. ಇದರಿಂದ ನಿಮ್ಮ ವೈಯಕ್ತಿಕ ಪ್ರತಿಷ್ಠೆಯು ಹೆಚ್ಚಾಗುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ಸತತ ಪರಿಶ್ರಮ ಹಾಗೂ ಕಾರ್ಯ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ. ಈ ಬಗ್ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ನಿಮ್ಮ ನೆಚ್ಚಿನ ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧೆ ಕಂಡುಬರುವುದು. ಆದರೆ ಯಶಸ್ಸು ಮಾತ್ರ ನಿಮ್ಮದೇ ಆಗುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ನೀವು ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡಾ ಅದು ಖರ್ಚುವೆಚ್ಚಗಳಿಗೆ ಸರಿ ಹೊಂದುವುದು. ಆದರೆ ಹಣ ಉಳಿತಾಯ ಮಾಡಲು ಆಗುವುದಿಲ್ಲ. ವಹಿಸಿಕೊಂಡ ಜವಾಬ್ದಾರಿ ನೀವು ಅಂದುಕೊಂಡಷ್ಟು ಶುಭವಲ್ಲ. ಬೇರೆಯವರ ಸಲಹೆಗಳನ್ನು ನಮ್ರತೆಯಿಂದ ಸ್ವೀಕರಿಸುವುದನ್ನು ಕಲಿಯಿರಿ.

ಸಿಂಹ:

ದಿನ ಭವಿಷ್ಯ

ಸಿಂಹ:- ವಿದ್ಯಾರ್ಥಿಗಳಿಗೆ ಓದು ಬರಹದಲ್ಲಿ ಆಸಕ್ತಿ ಮೂಡುವುದು. ಕುಟುಂಬದ ಸದಸ್ಯರೊಡನೆ ವಿನಾಕಾರಣ ಮನಸ್ತಾಪ ಮಾಡಿಕೊಳ್ಳದಿರಿ. ರಕ್ತಸಂಬಂಧಿ ಸಮಸ್ಯೆಗಳು ಕಾಡುವ ಸಾಧ್ಯತೆ ಇರುವುದು. ಖರ್ಚಿನ ವಿಷಯದಲ್ಲಿ ಕಡಿವಾಣ ಹಾಕುವುದು ಉತ್ತಮ..

ಕನ್ಯಾ:

ದಿನ ಭವಿಷ್ಯ

ಕನ್ಯಾ:- ನಿಮ್ಮ ಉತ್ಸಾಹದ ವೇಗಕ್ಕೆ ಎದುರಾಳಿಗಳು ಕೂಡಾ ಬೆಚ್ಚಿ ಬೀಳುವರು. ಕಠಿಣ ಪರಿಶ್ರಮದಿಂದ ಯಶಸ್ಸು ದೊರೆಯುವುದು. ನಿಮ್ಮನ್ನು ನೋಡಿ ಮಾತ್ಸರ್ಯ ಪಡುವ ವ್ಯಕ್ತಿಗಳನ್ನು ಕಂಡು ತಲೆ ಕೆಡಿಸಿಕೊಳ್ಳಬೇಡಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ವ್ಯವಹಾರದಲ್ಲಿ ಸ್ನೇಹಿತರು, ಅನುಭವಿಗಳ ಹಾಗೂ ಹಿರಿಯರ ಸಹಾಯ ದೊರೆಯಲಿದೆ. ಅದು ದುರುಪಯೋಗವಾಗದಂತೆ ಎಚ್ಚರ ವಹಿಸಿರಿ. ಕಾರ್ಯವೈಖರಿಯಲ್ಲಿ ಬದಲಾವಣೆ ಮಾಡಿಕೊಳ್ಳುವಿರಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಬಹಳ ಆಲೋಚಿಸಿ ಕಾರ್ಯ ಪ್ರವೃತ್ತರಾದಲ್ಲಿ ಯಶಸ್ಸು ದೊರೆಯುವುದು. ಆದಾಯ ಮೂಲಗಳ ಹೆಚ್ಚಳದಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಯೋಜನಾಬದ್ಧ ನಿರ್ಧಾರಗಳಿಂದ ಮಾತ್ರ ವ್ಯವಹಾರದಲ್ಲಿ ಚೇತರಿಕೆ ಕಂಡುಬರುವುದು.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ಮಕ್ಕಳ ಭವಿಷ್ಯದ ಬಗೆಗೆ ಈಗಲೇ ಒಂದು ನಿರ್ಧಾರಕ್ಕೆ ಬರುವುದು ಉತ್ತಮ. ಗುರು ದೇವತಾನುಗ್ರಹದಿಂದ ಹೆಚ್ಚಿನ ಆತ್ಮಬಲ ಬರಲಿದೆ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು. ದೇವತಾ ದರ್ಶನದಿಂದ ಮಾನಸಿಕ ನೆಮ್ಮದಿ ಕಂಡುಕೊಳ್ಳುವಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಲು ಪ್ರಯತ್ನಿಸಿ. ಆತ್ಮೀಯರೊಂದಿಗೆ ರಹಸ್ಯ ಸಮಾಲೋಚನೆ ನಡೆಯಲಿದೆ. ಆರ್ಥಿಕವಾಗಿ ಹೆಚ್ಚಳ ಕಂಡು ಬರುವುದು. ಖಾಸಗಿ ಕಂಪನಿ ನೌಕರರಿಗೆ ಹಳೆಯ ಕಂಪನಿಯಿಂದ ಹೆಚ್ಚಿನ ವೇತನದ ಮರು ಅವಕಾಶ ಒದಗಿ ಬರುವ ಸಾಧ್ಯತೆ ಇರುತ್ತದೆ.

ಕುಂಭ:

ದಿನ ಭವಿಷ್ಯ

ಕುಂಭ:- ಮನೆಗೆ ಬಂಧುಮಿತ್ರರ ಆಗಮನದಿಂದ ಸಂತಸ. ಹೆಚ್ಚಿನ ಖರ್ಚಿಗೆ ದಾರಿಯಾಗುವುದು. ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಯೋಗ ಮತ್ತು ಧ್ಯಾನದ ಮೊರೆಹೋಗುವುದು ಅನಿವಾರ್ಯ. ಸ್ನೇಹಿತರಿಂದ ಸಿಕ್ಕ ಉತ್ತಮ ಸಲಹೆ ಮನೆಯಲ್ಲಿ ಶಾಂತಿ ವಾತಾವರಣ ಮೂಡಿಸುವುದು. ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡಿ.

ಮೀನ:

ದಿನ ಭವಿಷ್ಯ

ಮೀನ:- ನಿಮ್ಮ ಬುದ್ಧಿವಂತಿಕೆ ಹಾಗೂ ಚಾಣಾಕ್ಷ ತನದಿಂದಾಗಿ ಶತ್ರುಗಳ ಪಿತೂರಿ ಬಯಲಾಗಲಿದೆ. ಮತ್ತಾರದೋ ತಂಟೆ ಬಗೆಹರಿಸಲು ಹೋಗಿ ನೀವು ಹಣ ಕಳೆದುಕೊಳ್ಳುವಿರಿ. ಬರಲಿರುವ ಸವಾಲುಗಳನ್ನು ಸುಲಭವಾಗಿ ನಿಭಾಯಿಸುವಿರಿ. ಹಣಕಾಸು ವಿವಿಧ ಮೂಲದಿಂದ ಕೈಸೇರಲಿದೆ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 14 ಸೆಪ್ಟೆಂಬರ್, 2019!!