ನಿತ್ಯ ಭವಿಷ್ಯ: ಜನವರಿ 15, 2019

0
723
ದಿನ ಭವಿಷ್ಯ

Astrology in kannada | kannada news ದಿನ-ಭವಿಷ್ಯ: ಜನವರಿ 15, 2019!!

ದಿನ-ಭವಿಷ್ಯ: ಜನವರಿ 15, 2019!!

ಮೇಷ:

ದಿನ ಭವಿಷ್ಯ

ಮೇಷ:- ನಿಮ್ಮದೇ ಆದ ವಿಚಾರ ಲಹರಿ ಹಾಗೂ ಚಾತುರ‍್ಯಪೂರ್ಣ ಕೆಲಸಗಳ ವಿಧಾನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ. ಅಂತೆಯೇ ಮೇಲಧಿಕಾರಿಗಳು ಸಹ ಮಹತ್ತರ ಕೆಲಸಗಳಿಗೆ ನಿಮ್ಮಿಂದ ಸಲಹೆ, ಸೂಚನೆಗಳನ್ನು ಬಯಸುವರು. ಇದು ನಿಮಗೆ ಅದೃಷ್ಟವನ್ನು ತಂದುಕೊಡುವುದು .

ವೃಷಭ:

ದಿನ ಭವಿಷ್ಯ

ವೃಷಭ:- ಗುರುವಿನ ಶ್ರೀರಕ್ಷೆ ಕಡಿಮೆ ಆಗಿರುವ ಈ ದಿನಗಳಲ್ಲಿ ನಿಮ್ಮನ್ನು ವೃಥಾ ಆರೋಪದ ಸುಳಿಗೆ ಎಳೆದು ತರುವ ಪ್ರಕ್ರಿಯೆ ಆರಂಭಗೊಳ್ಳುವುದು. ಆದರೆ ಅದಕ್ಕಾಗಿ ಭಯ ಪಡುವ ಅಗತ್ಯವಿಲ್ಲ. ಧೈರ್ಯಂ ಸರ್ವತ್ರ ಸಾಧನಂ ಎನ್ನುವಂತೆ ಧೈರ್ಯದಿಂದ ಇರಿ. ತೊಂದರೆ ಇಲ್ಲ .

ಮಿಥುನ:

ದಿನ ಭವಿಷ್ಯ

ಮಿಥುನ:– ನಿಮ್ಮನ್ನು ನೀವು ಅಥೈರ್‍ಸಿಕೊಳ್ಳುವ ಪರಿ ಎಲ್ಲರಿಗೂ ಸೋಜಿಗವನ್ನುಂಟು ಮಾಡುವುದು. ನಿಮ್ಮಲ್ಲಿನ ವಿದ್ವತ್ತು, ಜಾಣ್ಮೆ ಸಾಮಾಜಿಕವಾಗಿ ಗೌರವಿಸಲ್ಪಡುವುದು. ಮಕ್ಕಳು ನಿಮಗೆ ಕೀರ್ತಿ ತರುವ ಪ್ರಯತ್ನ ಮಾಡುವರು. ಒಟ್ಟಿನಲ್ಲಿ ಸಂತಸದ ಕ್ಷ ಣಗಳನ್ನು ಕಾಣುವಿರಿ .

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ನೀವು ನಿಮ್ಮ ಮುಂಗೋಪವನ್ನು ಸ್ವಲ್ಪ ಹತೋಟಿಗೆ ತಂದುಕೊಂಡಲ್ಲಿ ಮಹತ್ತರವಾದುದನ್ನು ಸಾಧಿಸಲು ಸಹಕಾರಿ ಆಗುವುದು. ಸ್ನೇಹಿತರೊಂದಿಗೆ ಬಂಧುಗಳೊಂದಿಗೆ ವಿನಾಕಾರಣ ಜಗಳಕ್ಕೆ ಇಳಿಯದಿರಿ. ಮನೋನಿಯಾಮಕ ರುದ್ರದೇವರನ್ನು ಭಜಿಸಿ .

ಸಿಂಹ:

ದಿನ ಭವಿಷ್ಯ

ಸಿಂಹ:- ಬಹಿರಂಗವಾಗಿ ನಿಮ್ಮನ್ನು ಹೊಗಳಿ ಹಿಂದೆಯಿಂದ ನಿಮ್ಮನ್ನು ಟೀಕಿಸುವವರ ವಿರುದ್ಧ ನಿರ್ಲಕ್ಷ್ಯೆ ವಹಿಸುವುದೇ ಒಳಿತು. ನಿಮ್ಮ ಮನೋಗತ ಇಚ್ಛೆಯನ್ನು ಕಾರ್ಯಗೊಳಿಸುವಲ್ಲಿ ವಿಫಲರಾಗುವ ಸಾಧ್ಯತೆ ಇದೆ. ಆದರೆ ಅದು ನಿಮಗೆ ಉತ್ತಮ ಅನುಭವ ನೀಡುವುದು .

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಧನಸ್ಥಾನದ ಗುರುವು ನಿಮಗೆ ಅನುಕೂಲನಾಗಿರುವುದರಿಂದ ಭೂ ಸಂಬಂಧ ವ್ಯವಹಾರಗಳಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದು. ವಿವಿಧ ಮೂಲಗಳಿಂದ ಹರಿದು ಬರುವ ಹಣವು ನಿಮಗೆ ಆರ್ಥಿಕ ಸದೃಢತೆಯನ್ನು ತಂದುಕೊಡುವುದು .

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಹೇಳಿದ್ದನ್ನೆ ಮತ್ತೆ ಮತ್ತೆ ಹೇಳಿ ತಲೆ ತಿನ್ನುವ ಜನರು ನಿಮ್ಮನ್ನು ಭೇಟಿ ಆಗುವರು. ಹಾಗಾಗಿ ಮನಸ್ಸಿಗೆ ಸ್ವಲ್ಪ ಕಿರಿಕಿರಿ ಎನಿಸುವುದು. ಕೆಲವೊಮ್ಮೆ ಇದು ಅನಿವಾರ್ಯವೂ ಆಗಬಹುದು. ಶಿವನ ಆರಾಧನೆ ಮಾಡಿ .

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ದಿನನಿತ್ಯದ ಕೆಲಸಗಳು ಇದ್ದೇ ಇರುತ್ತದೆ. ಆದರೆ ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಮಾಡಲು ಪ್ರಶಸ್ತವಲ್ಲ. ಜ್ಞಾನಕಾರಕ ಗುರುವನ್ನು ಆರಾಧಿಸುವುದರಿಂದ ಒಳಿತಾಗುವುದು. ಪ್ರಯಾಣದಲ್ಲಿ ತುಸು ಎಚ್ಚರಿಕೆ ಅಗತ್ಯ .

ಧನಸ್ಸು:

ದಿನ ಭವಿಷ್ಯ

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಧನುಸ್ಸು:– ಕಾಲೇಜು ಪ್ರಾಧ್ಯಾಪಕರು ಇಲ್ಲವೆ ಉಪನ್ಯಾಸ ವೃತ್ತಿ, ಶಿಕ್ಷ ಣ ಇಲಾಖೆಗೆ ಸಂಬಂಧಪಟ್ಟ ಕೆಲಸಗಳು ಸರಾಗವಾಗಿ ನಡೆಯುವವು. ಪ್ರತಿನಿತ್ಯ ಆಂಜನೇಯ ಸ್ತೋತ್ರ ಪಠಿಸುವುದು ಕ್ಷೇಮ .

ಮಕರ:

ದಿನ ಭವಿಷ್ಯ

ಮಕರ:- ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇದೆ. ಕೆಲವರಿಗೆ ಮನೆ ಬದಲಿಸುವ ಸಂಗತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಆಗುವುದಿಲ್ಲ. ಮೊದಲು ನೋಡಿದ ವ್ಯಕ್ತಿಯೊಂದಿಗೆ ವಿವಾಹದ ವಿಷಯದಲ್ಲಿ ಸೂಕ್ತ ನಿರ್ಧಾರ ತಳೆಯಿರಿ .

ಕುಂಭ:

ದಿನ ಭವಿಷ್ಯ

ಕುಂಭ:- ಕಾಲೇಜು ಪ್ರಾಧ್ಯಾಪಕರು, ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ ಉತ್ತಮ ಗೌರವ ಒದಗಿ ಬರುವುದು. ನಿಮ್ಮ ಸಾಮಾಜಿಕ ಕಾಳಜಿಯನ್ನು ಜನ ಕೊಂಡಾಡುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ .

ಮೀನ:

ದಿನ ಭವಿಷ್ಯ

ಮೀನ:- ಮಕ್ಕಳು ಸ್ವಲ್ಪ ಕಿರಿಕಿರಿ ಮಾಡಿ ತಲೆ ತಿನ್ನುವ ವಿಚಾರಕ್ಕೆ ಮೈಪರಚಿಕೊಳ್ಳಬೇಕಾಗುವುದು. ಇತ್ತ ಜೋರಾಗಿ ಗದರಿಸುವಂತಿಲ್ಲ. ಇಲ್ಲವೆ ಅವರ ಕಿರಿಕಿರಿಯನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಆದಷ್ಟು ಏಕಾಂತ ಸ್ಥಳಕ್ಕೆ ಹೋಗಿ ಮನಸ್ಸಿನ ನೆಮ್ಮದಿ ಕಂಡುಕೊಳ್ಳಿ .

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ-ಭವಿಷ್ಯ: ಜನವರಿ 15, 2019