ದಿನ ಭವಿಷ್ಯ: 15 ಜೂನ್, 2018!!

0
390
ದಿನ ಭವಿಷ್ಯ

Astrology in kannada | kannada news

ಮೇಷ:

ನೀವು ಸರಿಯಾದ ದಾರಿಯಲ್ಲಿ ಕ್ರಮಿಸುತ್ತಿರುವಿರಿ. ಹಾಗಾಗಿ ನಿಮ್ಮನ್ನು ಕಂಡರೆ ಎಲ್ಲರಿಗೂ ಪ್ರೀತಿ-ಗೌರವ. ಬಂದ ಗೌರವಾದಿಗಳನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಿಮ್ಮದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ವೃಷಭ:

ನಿಮ್ಮ ಕಾರ್ಯ ಯೋಜನೆಗಳು ನೀವು ಬಯಸಿದಂತೆ ಆಗುವುದರಿಂದ ವಿರೋಧಿಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸುವುದು. ಸಹೋದ್ಯೋಗಿಗಳು ನಿಮ್ಮ ಬೆನ್ನು ಚಪ್ಪರಿಸಿ ನಿಮ್ಮನ್ನು ಉತ್ತೇಜಿಸುವರು.

ಮಿಥುನ:

ಆಶಾವಾದವೇ ಜೀವನ, ನಿರಾಶಾವಾದವೇ ಮರಣ ಎನ್ನುವಂತೆ ಈದಿನ ಆಶಾವಾದದಿಂದ ಇರುವ ದಿನ. ನಿಮ್ಮ ಎಲ್ಲ ಧನಾತ್ಮಕ ಚಿಂತನೆಗಳು ಒಂದುಗೂಡುವುದರಿಂದ ಶುಭ ವಾರ್ತೆಯನ್ನು ಕೇಳುವಿರಿ. ಅದರಿಂದ ಸಂತಸವಾಗುವುದು.

ಕಟಕ:

ಸರಿ ಕಂಡಿದ್ದನ್ನು ಧೈರ್ಯವಾಗಿ ಮಾತನಾಡಿ. ದೈಬಬಲ ಇದೆ. ಕುಟುಂಬದಲ್ಲಿ ಸೌಹಾರ್ದಯುತ ವಾತಾವರಣ ಇರುವುದು. ಕಚೇರಿ ಕಾರ್ಯದಲ್ಲಿ ಬಿಕ್ಕಟ್ಟು ನಿವಾರಣೆಯಾಗಿ ನೆಮ್ಮದಿಯ ಉಸಿರನ್ನು ಬಿಡುವಿರಿ. ಹಿರಿಯರ ಜತೆ ಸಮಾಲೋಚಿಸಿ ಕಾರ್ಯ ಪ್ರವೃತ್ತರಾಗಿರಿ.

ಸಿಂಹ:

ಯಾರೊಂದಿಗೂ ಇಂದು ಅಸಮಾಧಾನ ವ್ಯಕ್ತಪಡಿಸುವುದು ಒಳ್ಳೆಯದಲ್ಲ. ಇನ್ನೊಬ್ಬರ ವಿಷಯದಲ್ಲಿ ಮೂಗು ತೂರಿಸದಿರಿ. ವೈಯಕ್ತಿಕ ಕಾರ್ಯಕಲಾಪಗಳಲ್ಲಿ ಯಶಸ್ಸು ದೊರೆಯುವುದು. ಮಕ್ಕಳ ಪ್ರಗತಿಯು ತುಸು ನೆಮ್ಮದಿ ನೀಡುವುದು.

ಕನ್ಯಾ:

ಪ್ರಮುಖ ಕೆಲಸ ಕಾರ್ಯಗಳಲ್ಲಿ ಇಂದು ಯಶಸ್ಸು ದೊರೆಯುವುದು. ಜೀವನ ಮತ್ತು ವೃತ್ತಿಯ ಬದುಕಿನಲ್ಲಿ ಬದಲಾವಣೆ ಕಂಡುಬರುವುದು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಹಣಕಾಸಿನ ಚಿಂತೆ ಇಲ್ಲ.

ತುಲಾ:

ನೀವು ಹೋಗುತ್ತಿರುವ ದಾರಿ ಸರಿಯಾದುದೇ. ಆದರೆ ನಿಮ್ಮ ಸಂಗಡ ಇತರರನ್ನು ಕರೆದುಕೊಂಡು ಹೋಗಬೇಕೆನ್ನುವ ನಿಮ್ಮ ಜಾಣ್ಮೆ ಮೆಚ್ಚುವಂತಹದು. ಈ ಬಗ್ಗೆ ಸಮಾಜದಲ್ಲಿ ಗೌರವಿಸಲ್ಪಡುವಿರಿ. ಹಣಕಾಸು ಸ್ಥಿತಿ ಉತ್ತಮವಾಗಿರುವುದು.

ವೃಶ್ಚಿಕ:

ಆಶಾವಾದ ಮತ್ತು ಧನಾತ್ಮಕ ಚಿಂತನೆ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತಗೊಳಿಸುವುದು. ಈದಿನ ನಿಮ್ಮ ಮನಸ್ಸಿಗೆ ಮುದ ನೀಡುವ ವಾರ್ತೆಯನ್ನು ಕೇಳುವಿರಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ನಿಷ್ಠೆ ತೋರುವರು.

ಧನಸ್ಸು:

ವೃತ್ತಿ ಪರರಿಗೆ ವಿಶ್ರಾಂತಿ ಲಭಿಸುತ್ತದೆ. ಬಂಧು ಮಿತ್ರರಿಂದ ವಿಮರ್ಶೆ, ಟೀಕೆಗಳು ಬರುವ ಸಾಧ್ಯತೆ ಇರುವುದು. ಸಹೋದರನಿಂದ ಸಹಕಾರ ದೊರೆಯುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಮಕರ:

ಹಣದ ಹರಿವು ಹೆಚ್ಚಾಗಲಿದೆ. ಖರ್ಚು ವೆಚ್ಚಗಳ ಮೇಲೆ ನಿಗಾ ಇಡಿ. ಕುಟುಂಬದವರ ಅಭಿಪ್ರಾಯಗಳಿಗೆ ಮನ್ನಣೆ ಕೊಡುವಿರಿ. ಇದರಿಂದ ಸಮಾಜದಲ್ಲಿ ನಿಮ್ಮ ಸ್ಥಾನಮಾನಗಳು ಹೆಚ್ಚಾಗುವುದು.

ಕುಂಭ:

ಸ್ನೇಹಿತರು ಮತ್ತು ಬಂಧುಗಳ ಜತೆಗಿನ ಬಾಂಧವ್ಯ ವೃದ್ಧಿಗೆ ಗಮನ ನೀಡುವಿರಿ. ವೈಯಕ್ತಿಕ ಸಂಕಷ್ಟದಿಂದ ಪಾರಾಗುವಿರಿ. ಕೌಟುಂಬಿಕ ಸದಸ್ಯರ ಸಕಾರಾತ್ಮಕ ಬೆಂಬಲ ನಿಮಗಿದೆ.

ಮೀನ:

Meena1

ಬರವಣಿಗೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರಿಗೆ ವಿಶೇಷ ಗೌರವ ಲಭಿಸುವುದು. ಕೆಲವರಿಗೆ ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗುವುದು. ತಾಳ್ಮೆಯಿಂದ ಪರಿಸ್ಥಿತಿಯನ್ನು ಎದುರಿಸಿರಿ.

Also read: ಅಧಿಕ ಜ್ಯೇಷ್ಠ ಮಾಸ ಶುರುವಾಗಿದೆ..! ಹಾಗಾದರೆ ಈ ಮಾಸದ ಮಹತ್ವ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೇ ಸಂಪೂರ್ಣ ಮಾಹಿತಿ..