ದಿನ ಭವಿಷ್ಯ: 15 ಸೆಪ್ಟೆಂಬರ್, 2018!!

0
318
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ: 15 ಸೆಪ್ಟೆಂಬರ್, 2018!!

ಮೇಷ:

ದಿನ ಭವಿಷ್ಯ

ಮೇಷರಾಶಿ:- ಉಷ್ಣಸಂಬಂಧಿ ಅಥವಾ ವಾತ ಸಂಬಂಧಿ ದೋಷಗಳು ನಿಮ್ಮನ್ನು ಕಾಡುವವು. ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ಆತ್ಮೀಯ ಗೆಳೆಯನ ಭೇಟಿ ಸಂಭವ. ವಾಹನ ಖರೀದಿಗಾಗಿ ಹಣ ಖರ್ಚು ಮಾಡುವಿರಿ.

ವೃಷಭ:

ದಿನ ಭವಿಷ್ಯ

ವೃಷಭರಾಶಿ:- ಸಂಗಾತಿ ಮತ್ತು ಮಕ್ಕಳ ಸಹಕಾರದಿಂದ ಯೋಜಿತ ಕಾರ್ಯ ನಿರಾಯಾಸವಾಗಿ ನೆರವೇರುವುದು. ಗುರು ಸ್ತೋತ್ರ ಪಠಿಸಿರಿ. ಗುರುಹಿರಿಯರ ಆಶೀರ್ವಾದ ಪಡೆಯಿರಿ. ವೃತ್ತಿಯಲ್ಲಿ ಸಂತಸ ತರುವ ದಿನವಾಗಿದೆ.

ಮಿಥುನ:

ದಿನ ಭವಿಷ್ಯ

ಮಿಥುನ:- ಧೈರ್ಯಂ ಸರ್ವತ್ರ ಸಾಧನಂ ಎನ್ನುವಂತೆ ಈದಿನ ಮುನ್ನುಗ್ಗಿ ಹೋಗಿ ಮಾಡಿದ ಕೆಲಸಗಳು ಯಶಸ್ಸಿನತ್ತ ಸಾಗುವುದು. ಬಂದದ್ದೆಲ್ಲ ಬರಲಿ ಗೋವಿಂದನ ದಯೆ ಒಂದು ಇರಲಿ ಎನ್ನುವಂತೆ ಆಂಜನೇಯ ಸ್ತೋತ್ರ ಪಠಿಸಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಇಂದೇಕೋ ಕೆಲಸದಲ್ಲಿ ಚುರುಕುತನ ಕಂಡುಬರುವುದಿಲ್ಲ. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಒಳಿತಾಗುವುದು. ದೀನದಲಿತರಿಗೆ ಆಹಾರ ದಾನ ಮಾಡಿ. ಪ್ರಯಾಣದಲ್ಲಿ ಎಚ್ಚರ. ಆರ್ಥಿಕ ಸ್ಥಿತಿ ಸಾಧಾರಣ ಮಟ್ಟದ್ದಾಗಿರುತ್ತದೆ.

ಸಿಂಹ:

ದಿನ ಭವಿಷ್ಯ

ಸಿಂಹ:- ನಡೆಯುವ ವ್ಯಕ್ತಿ ಎಡವುದು ಸಹಜ. ಆದರೆ ಅದಕ್ಕೆ ಅಂಜಿ ಮುನ್ನಡಿ ಇಡದೆ ಇರುವುದು ಮುಂದಿನ ಪ್ರಗತಿಗೆ ತೊಂದರೆ ಆಗುವುದು. ಭವಿಷ್ಯದ ನಿರ್ಧಾರ ತೆಗೆದುಕೊಳ್ಳವುದು ಸೂಕ್ತ ಸಮಯ. ಗುರು ಸ್ತೋತ್ರ ಪಠಿಸಿರಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಕೆಲಸಗಳ ಬದಲಾವಣೆಯೇ ವಿಶ್ರಾಂತಿ ಎಂದರು ಅನುಭವಿಗಳು. ಹಾಗಾಗಿ ಬಿಡುವಿಲ್ಲದ ಕೆಲಸದ ನಡುವೆಯೂ ಮಕ್ಕಳ/ಮೊಮ್ಮಕ್ಕಳ ಜೊತೆಯಲ್ಲಿ ಕಾಲ ಕಳೆಯಿರಿ. ಸಂಗಾತಿಯ ಸಲಹೆಗಳನ್ನು ತಿರಸ್ಕರಿಸದಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವಿರಿ. ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡುಬರುವುದು. ಕುಟುಂಬದ ಹಿರಿಯರ ಅಭಿಪ್ರಾಯಗಳಿಗೆ ಮನ್ನಣೆ ಕೊಡಿ. ಈ ದಿನ ಹೆಚ್ಚು ಉಲ್ಲಾಸದಿಂದ ಕಾಲ ಕಳೆಯುವಿರಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಸರಕಾರಿ ನೌಕರರಿಗೆ ಬಡ್ತಿ ದೊರೆಯುವ ಸಾಧ್ಯತೆ. ಖಾಸಗಿ ನೌಕರರಿಗೂ ಉತ್ತಮ ಅನುಕೂಲ. ಮಕ್ಕಳ ಕಲರವ ಮನೆಯಲ್ಲಿ ನಿನಾದಿಸುವುದು. ಮನೆಯಲ್ಲಿ ಸಂಭ್ರಮದ ವಾತಾವರಣ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಮನಸ್ಸಿನಲ್ಲಿ ಭಯಗೊಂಡು ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ ಕಡಿಮೆ ಆಗುವುದು. ಕೌಟುಂಬಿಕ ಜೀವನದಲ್ಲಿ ಸಣ್ಣಪುಟ್ಟ ವಿರಸಗಳು ತಲೆದೋರುವುದು. ಉಷ್ಣ ಸಂಬಂಧದಿಂದ ಕೆಮ್ಮು ಜಾಸ್ತಿ ಆಗುವ ಸಂಭವ. ಕರಿದ ಪದಾರ್ಥಗಳ ಸೇವನೆ ಕಡಿಮೆ ಮಾಡಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಭೂಮಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಮುನ್ನಡೆ ಸಾಧಿಸುವಿರಿ. ಔಷಧ ವ್ಯಾಪಾರಸ್ಥರಿಗೆ ಉತ್ತಮ ದಿನ. ಗ್ರಹಗಳ ಶುಭ ದೃಷ್ಟಿಯಿಂದಾಗಿ ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡುಬರುವುದು. ನೆಮ್ಮದಿಯ ದಿನ.

ಕುಂಭ:

ದಿನ ಭವಿಷ್ಯ

ಕುಂಭ:- ಸರಕಾರದ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ಸಾಗುವವು. ಮಹತ್ವಾಕಾಂಕ್ಷೆ ಈಡೇರುವುದು. ಪ್ರತಿಯೊಂದು ಕಾರ್ಯದಲ್ಲೂ ಮುಂದಾಳುತನ ವಹಿಸುವಿರಿ. ಕೌಟುಂಬಿಕವಾಗಿ ಸಂತಸದ ದಿನ ಕಾಣುವಿರಿ.

ಮೀನ:

ದಿನ ಭವಿಷ್ಯ

ಮೀನ:- ಪರಾಕ್ರಮ ಹಾಗೂ ಧೈರ್ಯದ ಕೆಲಸದಲ್ಲಿ ಪ್ರಚಂಡ ಜಯ. ಉದ್ಯೋಗದಲ್ಲಿ ಪ್ರಗತಿ. ವಾದ ಸ್ಪರ್ಧೆಯಲ್ಲಿ ಯಶಸ್ಸು, ಶತ್ರುನಾಶ, ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ. ಆರ್ಥಿಕ ಸ್ಥಿತಿಯು ಉತ್ತಮಗೊಳ್ಳುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 15 ಸೆಪ್ಟೆಂಬರ್, 2018!!