ದಿನ ಭವಿಷ್ಯ: 16 ಜುಲೈ, 2019!!

0
172

Astrology in kannada | kannada news ದಿನ ಭವಿಷ್ಯ: 16 ಜುಲೈ, 2019!!

ದಿನ ಭವಿಷ್ಯ: 16 ಜುಲೈ, 2019!!

ಮೇಷ:

ದಿನ ಭವಿಷ್ಯ

ಮೇಷ:- ನಿಮ್ಮ ಆಲೋಚನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಸ್ನೇಹಿತರ ಸಹಕಾರದಿಂದ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ನಿಮ್ಮ ಉನ್ನತಿಗೆ ಎಲ್ಲರಿಂದಲೂ ಸಹಾಯ ದೊರೆಯಲಿದೆ. ಅನಗತ್ಯ ಖರ್ಚು ಹೆಚ್ಚಾಗುವ ಸಂಭವ. ಹಣಕಾಸಿನ ಪರಿಸ್ಥಿತಿಯಲ್ಲಿ ವ್ಯತ್ಯಯ..

ವೃಷಭ:

ದಿನ ಭವಿಷ್ಯ

ವೃಷಭ:- ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಮಕ್ಕಳ ನಡಾವಳಿಯಲ್ಲಿ ವ್ಯತ್ಯಾಸ ಕಂಡುಬರುವುದು. ಇದರಿಂದಾಗಿ ಮನೆಯಲ್ಲಿ ಅಶಾಂತಿ ಮೂಡುವುದು. ಹಿರಿಯರ ಸಲಹೆ ಪಡೆಯಿರಿ.

ಮಿಥುನ:

ದಿನ ಭವಿಷ್ಯ

ಮಿಥುನ:- ನಿಮ್ಮ ಆರ್ಥಿಕ ಪರಿಸ್ಥಿತಿಯು ಹಳಿ ತಪ್ಪದಂತೆ ನೋಡಿಕೊಳ್ಳಿರಿ. ಬಂಧುಗಳ ಅಪರೂಪದ ಭೇಟಿ ಸಂತಸ ತರಲಿದೆ. ಕೆಲವೊಮ್ಮೆ ಸಹೋದ್ಯೋಗಿಗಳ ವಿರೋಧದ ನಡುವೆ ಕೆಲಸ ಮಾಡಬೇಕಾದ ಪ್ರಸಂಗ ಬರಬಹುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಹಮ್ಮಿಕೊಂಡ ಕೆಲಸ ಕಾರ್ಯಗಳು ಗುರುವಿನ ಕೃಪೆಯಿಂದ ಪೂರ್ಣಗೊಳ್ಳುವವು. ಕಷ್ಟದಲ್ಲಿರುವ ನಿಮ್ಮ ಸ್ನೇಹಿತರಿಗೆ ನಿಮ್ಮ ಸಹಾಯ ಬೇಕಾಗುವುದು. ಮಕ್ಕಳ ಅಲಕ್ಷದಿಂದಾಗಿ ವ್ಯವಹಾರದಲ್ಲಿ ನೀವು ಕಿರಿಕಿರಿ ಅನುಭವಿಸಬೇಕಾಗುವುದು. ಲೇವಾದೇವಿ ವ್ಯವಹಾರದಲ್ಲಿ ಅತಿಯಾದ ನಂಬಿಕೆಯಿಂದ ಅಪಾರ ನಷ್ಟ ಅನುಭವಿಸುವಿರಿ.

ಸಿಂಹ:

ದಿನ ಭವಿಷ್ಯ

ಸಿಂಹ:-ಅಪರಿಚಿತ ವ್ಯಕ್ತಿಗಳಿಂದ ವ್ಯವಹಾರ ಚಾತುರ್ಯವನ್ನು ಕಲಿಯುವಿರಿ. ಅನಪೇಕ್ಷಿತ ಭೋಗ ವಸ್ತುಗಳಿಗಾಗಿ ವಿಪರೀತ ಖರ್ಚು ಮಾಡುವಿರಿ.ಹಿರಿಯರಿಂದ ಬರುವ ಸಲಹೆಗಳನ್ನು ತಿರಸ್ಕರಿಸದಿರಿ. ಹಳೆ ವ್ಯಾಜ್ಯಗಳ ರಾಜೀ ಪಂಚಾಯ್ತಿಯೊಂದಿಗೆ ಬಗೆಹರಿಯಲಿವೆ. ಮಾತೇ ನಿಮ್ಮ ಮುಖ್ಯ ಬಂಡವಾಳ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಹಿರಿಯರಿಂದ ಬರುವ ಸಲಹೆಗಳನ್ನು ತಿರಸ್ಕರಿಸದಿರಿ. ಹಳೆ ವ್ಯಾಜ್ಯಗಳ ರಾಜೀ ಪಂಚಾಯ್ತಿಯೊಂದಿಗೆ ಬಗೆಹರಿಯಲಿವೆ. ಮಾತೇ ನಿಮ್ಮ ಮುಖ್ಯ ಬಂಡವಾಳ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಕೆಲಸ ಕಾರ್ಯಗಳಲ್ಲಿ ವಿಪರೀತ ಒತ್ತಡ ಕಂಡುಬರುವುದರಿಂದ ತುಸು ಎಚ್ಚರ ವಹಿಸಿರಿ. ನಿಮ್ಮ ತಪ್ಪು ಲೆಕ್ಕಾಚಾರ ಭಾರಿ ನಷ್ಟವನ್ನುಂಟು ಮಾಡುವುದು. ಬಂಧುಗಳ ಭರವಸೆ ನಿಮ್ಮಲ್ಲಿ ಹೊಸ ಚೈತನ್ಯವನ್ನು ತುಂಬುತ್ತದೆ. ಆತ್ಮೀಯರೊಂದಿಗೆ ರಹಸ್ಯ ಸಮಾಲೋಚನೆ ನಡೆಯಲಿದೆ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಬಂಧುವರ್ಗದೊಂದಿಗಿದ್ದ ಭಿನ್ನಾಭಿಪ್ರಾಯ ದೂರವಾಗಲಿದೆ. ಮನೋಬಲ ವೃದ್ಧಿಸಿಕೊಳ್ಳಲು ಧ್ಯಾನ ಮಾಡಿರಿ. ನಿಮ್ಮ ಕೆಲಸ ಕಾರ್ಯಗಳಿಗೆ ಸಕಾಲದಲ್ಲಿ ಆರ್ಥಿಕ ನೆರವು ದೊರೆಯುವುದು. ಮಡದಿಯ ಆರೋಗ್ಯದ ಕಡೆಗೆ ಗಮನ ಹರಿಸುವುದು ಕ್ಷೇಮ.

ಧನಸ್ಸು:

ದಿನ ಭವಿಷ್ಯ

ಧನುಸ್ಸು:-ಅಂದುಕೊಂಡ ಶುಭ ಕಾರ್ಯಗಳು ನಿಗದಿತ ವೇಳೆಯಲ್ಲಿ ನಡೆಯಲಿವೆ. ಅದರ ಯಶಸ್ಸಿನ ಫಲ ಬಹುಪಾಲು ನಿಮ್ಮದಾಗಲಿದೆ. ನಿಮ್ಮ ಆರೋಗ್ಯದಲ್ಲಿ ದಿಢೀರನೆ ವ್ಯತ್ಯಯ ಕಂಡುಬರುವುದು. ಹೊಸ ಸ್ನೇಹಿತರ ಭೇಟಿ ಆಗಲಿದೆ. ಶಿವ ಪಂಚಾಕ್ಷರಿ ಮಂತ್ರ ಪಠಿಸಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಗುರುವಿನ ಬಲ ಕಡಿಮೆಯಾಗುತ್ತಿದೆಯೆಂದು ನಿಮ್ಮ ಆತ್ಮಬಲವನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಿಕೊಳ್ಳದಿರಿ. ಇದರಿಂದ ಕೆಲಸಗಳಲ್ಲಿ ನಿರಾಸಕ್ತಿ ಮೂಡುವುದು. ಮಕ್ಕಳ ನಡವಳಿಕೆಗಳು ನಿಮಗೆ ಬೇಸರವನ್ನುಂಟು ಮಾಡುವುದು. ಅಜೀರ್ಣ ಸಮಸ್ಯೆ ನಿಮ್ಮನ್ನು ಬಾಧಿಸುವುದು.

ಕುಂಭ:

ದಿನ ಭವಿಷ್ಯ

ಕುಂಭ:- ಲೇವಾದೇವಿ ವ್ಯವಹಾರದಲ್ಲಿ ಲಾಭದಾಯಕವಾಗಲಿದೆ. ಸಗಟು ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಬಿಡುವಿಲ್ಲದ ಕಾರ್ಯಗಳ ನಡುವೆಯೂ ಸಂಬಂಧಿಕರ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ನಿಮ್ಮ ಮೇಲೆ ವಿಶೇಷ ಅಭಿಮಾನ ವ್ಯಕ್ತವಾಗುವುದು.

ಮೀನ:

ದಿನ ಭವಿಷ್ಯ

ಮೀನ:- ಅನಾವಶ್ಯಕ ಖರೀದಿ, ಮೋಜು, ಮಸ್ತಿಯಿಂದಾಗಿ ಬಂದ ಲಾಭ ಕರಗಿ ಹೋಗುವುದು. ನಿಮ್ಮ ಸಮಯೋಚಿತ ಪ್ರಜ್ಞೆಯನ್ನು ಎಲ್ಲರೂ ಕೊಂಡಾಡುವರು. ಸಂಶೋಧನಾ ಕಾರ್ಯದಲ್ಲಿರುವವರಿಗೆ ವಿಶೇಷ ಯಶಸ್ಸು ದೊರೆಯಲಿದೆ. ಕಚೇರಿಗಳಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಅತ್ಯಗತ್ಯ.

Also read: ಪರಿಹಾರ ಜ್ಯೋತಿಷ್ಯದ ಪ್ರಕಾರ ಯಾವ ರಾಶಿಯವರು ಯಾವ ರುದ್ರಾಕ್ಷಿ ಧರಿಸುದರೆ ಶಿವನ ಕೃಪೆಗೆ ಪಾತ್ರವಾಗುವುದು ಅಂತ ತಿಳಿಯಿರಿ..!!

ದಿನ ಭವಿಷ್ಯ: 16 ಜುಲೈ, 2019!!