ನಿತ್ಯ ಭವಿಷ್ಯ: ಜನವರಿ 16, 2019

0
484
ದಿನ ಭವಿಷ್ಯ

Astrology in kannada | kannada news ದಿನ-ಭವಿಷ್ಯ: ಜನವರಿ 16, 2019!!

ದಿನ-ಭವಿಷ್ಯ: ಜನವರಿ 16, 2019!!

ಮೇಷ:

ದಿನ ಭವಿಷ್ಯ

ಮೇಷ:- ನಿಮ್ಮ ಪರಿಶ್ರಮಕ್ಕೆ ತಕ್ಕಷ್ಟು ವರಮಾನ ದೊರೆಯಲಿದೆ. ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಿರಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಹೊಂದುವರು. ಮನೆಯಲ್ಲಿ ಕೌಟುಂಬಿಕ ನೆಮ್ಮದಿ ಮೂಡುವುದು.

ವೃಷಭ:

ದಿನ ಭವಿಷ್ಯ

ವೃಷಭ:- ಸರ್ಕಾರಿ ಕೆಲಸ ಕಾರ್ಯಗಳು ಸುಗಮವಾಗಿ ಆಗುವುದು. ಆತ್ಮೀಯರಿಂದ ಶುಭ ಸಮಾಚಾರ ಕೇಳಿ ಬರುವುದು. ಖಾಸಗಿ ನೌಕರದಾರರಿಗೆ ಉದ್ಯೋಗದಲ್ಲಿ ಹಿನ್ನಡೆಯುಂಟಾಗುವುದು. ಇಲ್ಲಸಲ್ಲದ ವಿಚಾರಗಳಿಂದ ದೂರವಿರಿ.

ಮಿಥುನ:

ದಿನ ಭವಿಷ್ಯ

ಮಿಥುನ:- ವೈಯಕ್ತಿಕ ಜೀವನದಲ್ಲಿ ಕಳೆದು ಹೋಗಿದ್ದ ಆಸಕ್ತಿ ಮತ್ತೆ ಚಿಗುರಲಿದೆ. ಹೊಸ ಉದ್ಯಮ ಲಾಭದೆಡೆಗೆ ಸಾಗುವುದು. ಮಗಳ ದಾಂಪತ್ಯ ಜೀವನದಲ್ಲಿ ಕೆಲವು ಸಲಹೆಗಳನ್ನು ನೀಡಬೇಕಾಗುವುದು. ದಾಯಾದಿಗಳು ನಿಮ್ಮ ತೇಜೋವಧೆಗೆ ಪ್ರಯತ್ನಿಸುವರು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಆತ್ಮವಿಶ್ವಾಸದಿಂದ ಬಂದ ಸಮಸ್ಯೆಗಳನ್ನು ಎದುರಿಸುವಿರಿ. ದಂಪತಿಗಳ ನಡುವೆ ಇದ್ದ ಮನಸ್ತಾಪ ದೂರವಾಗಲಿದೆ. ಉತ್ತಮ ತಿಳುವಳಿಕೆ ಮತ್ತು ಹೊಂದಾಣಿಕೆಯಿಂದ ಜೀವನ ಸುಮಧುರವಾಗಲಿದೆ. ಮಿತ್ರರ ಪ್ರಶಂಸೆ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚು ಮಾಡುವುದು.

ಸಿಂಹ:

ದಿನ ಭವಿಷ್ಯ

ಸಿಂಹ:- ಮಿತಿಮೀರಿದ ಕಾರ್ಯದೊತ್ತಡ ನಿಮ್ಮನ್ನು ಹೈರಾಣಾಗಿಸುವುದು. ದ್ವಿಚಕ್ರ ವಾಹನಗಳನ್ನು ನಡೆಸುವಾಗ ಎಚ್ಚರಿಕೆ. ಸ್ಥಿರಾಸ್ಥಿ ಖರೀದಿಸುವಾಗ ದಾಖಲೆಗಳನ್ನು ಆಮೂಲಾಗ್ರವಾಗಿ ಪರಿಶೀಲಿಸುವುದು ಒಳ್ಳೆಯದು./p>

ಕನ್ಯಾ:

ದಿನ ಭವಿಷ್ಯ

ಕನ್ಯಾ:- ದೈನಂದಿನ ಚಟುವಟಿಕೆಗಳು ಎಂದಿನಂತೆ ಮುಂದುವರೆಯಲಿದೆ. ವೈಯಕ್ತಿಕ ಗುಟ್ಟಿನ ವಿಚಾರಗಳು ಗುಟ್ಟಾಗಿದ್ದಷ್ಟು ಒಳ್ಳೆಯದು. ನೂತನ ವಾಹನ ಖರೀದಿಗೆ ಮನಸ್ಸು ಮಾಡುವಿರಿ. ಕೆಲವರು ನೂತನ ವಾಹನ ಖರೀದಿ ಮಾಡುವರು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ನಿಮ್ಮ ಲೆಕ್ಕಾಚಾರದಂತೆಯೇ ಪ್ರತಿಯೊಂದು ನಡೆಯಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವರು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ತಂಟೆ, ತಗಾದೆಗಳಿಂದ ದೂರವಿರಿ. ವ್ಯಾಪಾರ-ವ್ಯವಹಾರದಲ್ಲಿ ನಿಮ್ಮ ನಿರೀಕ್ಷೆ ಮೀರಿ ಲಾಭಾಂಶ ಬರಲಿದೆ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ‘ಕೈ ಕೆಸರಾದರೆ ಬಾಯಿ ಮೊಸರು. ನಿಮ್ಮ ಕಾರ್ಯ ಕೌಶಲ್ಯವನ್ನು ಪ್ರತಿಯೊಬ್ಬರು ಮೆಚ್ಚುವರು. ಸಕಾಲದಲ್ಲಿ ಆದ ಕೆಲಸಗಳು ನಿಮ್ಮಲ್ಲಿ ಸ್ಫೂರ್ತಿ ತುಂಬಲಿದೆ. ಸಂಘ-ಸಂಸ್ಥೆಗಳಿಂದ ಸನ್ಮಾನ ನಡೆಯಲಿದೆ. ಧರ್ಮಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ಆತ್ಮ ಸಂತೋಷ ಪಡೆಯುವಿರಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಗುರುವಿನ ಕೃಪೆಯಿಂದ ಕೋರ್ಟು ಕಚೇರಿಯ ಕೆಲಸಗಳು ಸುಗಮವಾಗಿ ಆಗುವವು. ವೃತ್ತಿ ಜೀವನದಲ್ಲಿ ನೆಮ್ಮದಿ ಕಾಣುವಿರಿ. ಸೋದರನು ತಿಳಿಸಿದ ಸಮಾಚಾರ ನಿಮ್ಮ ಆತಂಕವನ್ನು ದೂರಗೊಳಿಸಲಿದೆ. ವ್ಯಾಪಾರ-ವ್ಯವಹಾರದಲ್ಲಿ ಹಾಕಿದ ಬಂಡವಾಳಕ್ಕೆ ಉತ್ತಮ ಲಾಭಾಂಶ ದೊರೆಯುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಸ್ನೇಹಿತರ ಮತ್ತು ಗುರುಹಿರಿಯರ ಸಲಹೆಯಂತೆ ಮುಂದುವರೆಯಿರಿ. ವಿದೇಶಿ ವ್ಯವಹಾರಗಳಿಂದ ಲಾಭಾಂಶ ಕಂಡುಬರುವುದು. ದೇಹಾರೋಗ್ಯದ ಬಗ್ಗೆ ಆಲಕ್ಷ್ಯೆ ಬೇಡ. ಪ್ರಯಾಣ ಇಷ್ಟವಿಲ್ಲದಿದ್ದರೂ ಮಾಡಲೇಬೇಕಾದ ಅನಿವಾರ್ಯತೆ ಎದುರಾಗುವುದು.

ಕುಂಭ:

ದಿನ ಭವಿಷ್ಯ

ಕುಂಭ:- ನೆರೆ ಹೊರೆಯವರೊಂದಿಗೆ ಹೊಂದಾಣಿಕೆ ಅನಿವಾರ್ಯ. ಇಡೀ ಕುಟುಂಬದ ಸದಸ್ಯರ ಬೆಂಬಲ ನಿಮಗಿದೆ. ಯಾರಿಂದಲೇ ಆಗಲಿ ಪ್ರತಿಫಲದ ಅಪೇಕ್ಷೆ ಬೇಡ. ಇದರಿಂದ ನಿರಾಸೆಯೇ ಕಾಣಬಹುದು. ಪ್ರಯಾಣ ಕಾಲದಲ್ಲಿ ವಿಪರೀತ ಖರ್ಚು.

ಮೀನ:

ದಿನ ಭವಿಷ್ಯ

ಮೀನ:- ನಿರೀಕ್ಷಿತ ಲಾಭಗಳನ್ನು ವ್ಯವಹಾರದಲ್ಲಿ ಪಡೆಯುವಿರಿ. ಸಂಘ-ಸಂಸ್ಥೆಗಳಿಂದ ಆರ್ಥಿಕ ಬೆಂಬಲ ದೊರೆಯುವುದು. ನಿಮ್ಮ ಕಡೆಯಿಂದ ಉತ್ಪನ್ನವಾದ ವಸ್ತುಗಳು ಶೀಘ್ರವೇ ಮಾರಾಟ ಆಗುವುದು. ನಿಮ್ಮ ಜಾಣತನಕ್ಕೆ ವಿರೋಧಿಗಳು ಕೂಡಾ ತಲೆದೂಗುವರು. ಕೈತಪ್ಪಿ ಹೋಗಿದ್ದ ವಸ್ತುಗಳು / ಕೆಲಸಗಳು ಪುನಃ ನಿಮ್ಮನ್ನು ಅರಸಿಕೊಂಡು ಬರುವವು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ-ಭವಿಷ್ಯ: ಜನವರಿ 16, 2019!!