ದಿನ ಭವಿಷ್ಯ: 16 ನವೆಂಬರ್, 2018!!

0
304
ದಿನ ಭವಿಷ್ಯ

Astrology in kannada | kannada news ದಿನ-ಭವಿಷ್ಯ: 16 ನವೆಂಬರ್, 2018!!

ದಿನ-ಭವಿಷ್ಯ: 16 ನವೆಂಬರ್, 2018!!

ಮೇಷ:

ಮೇಷ:- ಹಣಕಾಸಿನ ವ್ಯವಹಾರದ ನಿಮ್ಮ ನಿರ್ವಹಣಾ ಸಾಮರ್ಥ್ಯ‌ವು ನಿಮಗೆ ಹೆಚ್ಚಿನ ಪ್ರಶಂಸೆಯನ್ನು ತಂದುಕೊಡುವುದು. ನಿಮ್ಮಂತಹ ಮನಸ್ಥಿತಿಯುಳ್ಳವರೇ ದೊಡ್ಡ ದೊಡ್ಡ ಕಾರ್ಯಗಳನ್ನು ಲೀಲಾಜಾಲವಾಗಿ ಮಾಡಿ ಮುಗಿಸುವಂತವರು.

ವೃಷಭ:

ವೃಷಭ- ಎಲ್ಲಾ ವಿಚಾರಕ್ಕೂ ಪರರ ಸಲಹೆಯನ್ನು ಕೇಳುತ್ತಾ ಕೂತರೆ ಉತ್ತಮ ಅವಕಾಶ ತಪ್ಪಿ ಹೋಗುವುದು. ಅಂಜಿಕೆ, ಅಧೈರ್ಯ ಬದಿಗಿಟ್ಟು ಕಾರ್ಯವನ್ನು ಮುನ್ನುಗ್ಗಿ ಮಾಡಿ. ದೈವಬಲವಿದೆ. ನೀವು ಯಶಸ್ಸನ್ನು ಹೊಂದುವಿರಿ.

ಮಿಥುನ:

ಮಿಥುನ:- ನಂಬಿದ ಜನರು ಕೈಕೊಡುತ್ತಿದ್ದಾರೆ ಎಂದು ಬೇಸರಿಸುವುದರಲ್ಲಿ ಅರ್ಥವಿಲ್ಲ. ಬೇವು ಬಿತ್ತಿ ಮಾವು ಪಡೆಯಲು ಸಾಧ್ಯವಿಲ್ಲ. ಅಂತೆಯೇ ನಿಮ್ಮ ನಡೆನುಡಿಗಳಲ್ಲಿ ಬದಲಾವಣೆ ತಂದುಕೊಂಡಲ್ಲಿ ಒಳಿತಾಗುವುದು.

ಕಟಕ:

ಕಟಕ:- ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಕಹಿ ಸತ್ಯ ನಿಮಗೆ ಗೊತ್ತಾಗುವ ಹೊತ್ತಿಗೆ ಅಧಿಕ ಹಣವನ್ನು ಕಳೆದುಕೊಳ್ಳುವಿರಿ. ಹಾಗಾಗಿ ವ್ಯವಹಾರ ಮಾಡುವಾಗ ಎದುರಾಳಿಯ ಪೂರ್ವಾಪರ ವಿಚಾರಗಳನ್ನು ತಿಳಿದುಕೊಳ್ಳಿ.

ಸಿಂಹ:

ಸಿಂಹ:- ನಿಮ್ಮ ಕೋಪತಾಪಗಳನ್ನು ಬದಿಗಿಟ್ಟು ಅನ್ಯರೊಡನೆ ಬೆರೆತಲ್ಲಿ ಅತ್ಯಂತ ಸಂತಸದ ದಿನವನ್ನಾಗಿಸಿಕೊಳ್ಳಬಹುದು ಮತ್ತು ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದಲು ಮನಸ್ಸಿನ ಶಾಂತತೆಯನ್ನು ಕಾಯ್ದುಕೊಳ್ಳವುದು ಒಳ್ಳೆಯದು.

ಕನ್ಯಾ:

ಕನ್ಯಾ:- ನಿಮ್ಮ ಮೇಲಧಿಕಾರಿಗಳ ಇಲ್ಲವೆ ಮನೆಯ ಹಿರಿಯರ ಒಲುಮೆ ಹೇಗೆ ಗಳಿಸಿಕೊಳ್ಳಬೇಕೆಂದು ನಿಮಗೆ ಪ್ರತ್ಯೇಕವಾಗಿ ಹೇಳಿಕೊಡುವ ಅವಶ್ಯಕತೆಯಿಲ್ಲ. ಆದಾಗ್ಯೂ ನಿಮ್ಮ ನಡತೆಯು ಹೆಚ್ಚು ಪ್ರಶಂಸೆಗೆ ಒಳಪಡುವುದು.

ತುಲಾ:

ತುಲಾ:- ಬಾಳಸಂಗಾತಿಯ ಜೊತೆಯಲ್ಲಿನ ಒಂದು ಸುತ್ತಾಟ ನಿಮ್ಮ ಮನಸ್ಸಿನ ಭಾವನೆಗಳು ಬದಲಾಗಲು ಸಹಕಾರಿಯಾಗುವುದು. ನಿಮ್ಮಲ್ಲಿ ವೈವಿಧ್ಯಮಯ ಚೈತನ್ಯ ಮೂಡಿ ಬರಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ವೃಶ್ಚಿಕ:

ವೃಶ್ಚಿಕ:- ಕೆಲಸ ಸಾಧನೆಗಾಗಿ ಹಲವು ಪ್ರಮುಖರನ್ನು ಭೇಟಿ ಮಾಡಬೇಕಾಗುವುದು. ಮನೆಯಿಂದ ಹೊರಗಡೆ ಹೊರಡುವ ಮುನ್ನ ಮನೆಯಲ್ಲಿನ ಹಿರಿಯರಿಗೆ ನಮಸ್ಕರಿಸಿ ಹೋದಲ್ಲಿ ಕೆಲಸ ಸಿದ್ಧಿಸುವುದು.

ಧನಸ್ಸು:

ಧನಸ್ಸು:- ಜೀವನದಲ್ಲಿ ಕಷ್ಟ ಸುಖಗಳು ಬೆಳಕು ಕತ್ತಲೆಯಂತೆ. ಕತ್ತಲು ಕಳೆದು ಬೆಳಕು ಹರಿವಂತೆ ಸದ್ಯದ ಕಷ್ಟಗಳು ಕರಗಿ ಬೆಳಕೆಂಬ ಸುಖದ ಜೀವನವು ನಿಮ್ಮ ಪಾಲಿಗಿದೆ. ಚಿಂತಿಸದಿರಿ.

Also read: ಶುಭ ಮುಹೂರ್ತಗಳಿಗೆ ನೋಡಬೇಕಾದ ವಿಷಯಗಳು!!

ಮಕರ:

ಮಕರ:- ಅತ್ಯಂತ ಚುರುಕುತನದಿಂದ ಇದ್ದ ನೀವು ಆಲಸ್ಯತನ ತೋರುವುದರಿಂದ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನು ಅನುಭವಿಸಬೇಕಾಗುವುದು. ಮನೋವೇಗವುಳ್ಳ ಆಂಜನೇಯನನ್ನು ಸ್ಮರಿಸಿ ಆಲಸ್ಯತನದಿಂದ ಹೊರಬನ್ನಿ.

ಕುಂಭ:

ಕುಂಭ:- ಟೀಕಿಸುವಂತಹ ಜನರ ಕುರಿತು ಆತಂಕ ಪಡಬೇಕಾಗಿಲ್ಲ. ನಿಮ್ಮ ಸುತ್ತಮುತ್ತಲ ಜನರೇ ನಿಮ್ಮನ್ನು ಅಡ್ಡಹಾದಿಗೆ ಎಳೆಯುತ್ತಿರುವರು. ಹಾಗಾಗಿ ನಿಮ್ಮ ಬಳಿ ಬರುವ ಜನರ ಬಗ್ಗೆ ಎಚ್ಚರದಿಂದಿರಿ.

ಮೀನ:

ಮೀನ:- ಒಂದು ದೊಡ್ಡದಾದ ಯೋಜನೆಯೊಂದು ನಿಮ್ಮ ಬುದ್ಧಿ ಕೌಶಲ್ಯಕ್ಕೆ ಎದುರಾಗುವುದು. ದೈವಕೃಪೆಯಿಂದ ಮತ್ತು ಮೇಲಧಿಕಾರಿಗಳ ಸಹಾಯದಿಂದ ಆ ಕಾರ್ಯದ ಸೂಕ್ಷ ್ಮತೆಯನ್ನು ನೀವು ಕಂಡು ಹಿಡಿಯುವಿರಿ. ಇದರಿಂದ ಪ್ರಶಂಸೆ ಸಿಗುವುದು.

Also read: ಜ್ಯೋತಿಷ್ಯ ಶಾಸ್ತ್ರ : ನಿಮ್ಮ ರಾಶಿಯ ತತ್ವ ಮತ್ತು ಫಲ ತಿಳಿದುಕೊಳ್ಳಿ!!!

ದಿನ-ಭವಿಷ್ಯ: 16 ನವೆಂಬರ್, 2018!!