ದಿನ ಭವಿಷ್ಯ: 17 ಆಗಸ್ಟ್, 2019!!

0
190

Astrology in kannada | kannada news ದಿನ ಭವಿಷ್ಯ: 17 ಆಗಸ್ಟ್, 2019!!

ದಿನ ಭವಿಷ್ಯ: 17 ಆಗಸ್ಟ್, 2019!!

ಮೇಷ:

ಮಾನಸಿಕವಾಗಿ ಚಿಂತೆ ಕಾಡುವುದರಿಂದ ಕೆಲಸ ಕಾರ್ಯಗಳಲ್ಲಿ ತಪ್ಪು ನುಸುಳುವ ಸಾಧ್ಯತೆ ಇದೆ. ಆಲಸ್ಯ, ಜಡತ್ವವನ್ನು ತೊರೆದು ಕಾರ್ಯದಲ್ಲಿ ಪ್ರವೃತ್ತರಾಗುವುದರಿಂದ ಕೆಲಸದಲ್ಲಿ ಜಯವನ್ನು ಕಾಣುವಿರಿ.

ವೃಷಭ:

ಹಮ್ಮಿಕೊಂಡ ಕೆಲಸ ಕಾರ್ಯಗಳು ಸುಗಮವಾಗಿ ಆಗುವವು. ಆದರೆ ಅದಕ್ಕಾಗಿ ವಿಪರೀತ ಹಣ ಖರ್ಚಾಗುವುದು. ಮಿತ್ರರು ಸಕಾಲದಲ್ಲಿ ನೆರವು ನೀಡುವುದರಿಂದ ಉತ್ತಮ ಫಲಿತಾಂಶ ಕಾಣುವಿರಿ.

ಮಿಥುನ:

ಮಾತಾ ದುರ್ಗಾದೇವಿಯ ಪ್ರಾರ್ಥನೆಯಿಂದ ಈ ದಿನದ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಿ. ದುರ್ಗೆಯು ದುಷ್ಟ ಜನರನ್ನು ಬಡಿದು ಶಿಷ್ಟರನ್ನು ರಕ್ಷಿಸುವಂತೆ ನೀವು ಮಾಡುವ ಒಳ್ಳೆಯ ಕಾರ್ಯಗಳಿಗೆ ರಕ್ಷೆ ನೀಡುವಳು.

Also read: ಮದುವೆಗೆ ಜಾತಕ ಪರೀಶಲನೆ ಎಷ್ಟು ಮುಖ್ಯ ಹಾಗೂ ಯಾವ ವಿಚಾರಗಳು ಸಂಬಂಧವನ್ನು ಗಟ್ಟಿ ಗೊಳಿಸುತ್ತವೆ ಅಂತ ತಿಳ್ಕೊಳ್ಳಿ..

ಕಟಕ:

ಹತ್ತಿರದವರಿಂದಲೇ ಹೊಸ ಸಮಸ್ಯೆಯು ಎದುರಾಗುವ ಸಾಧ್ಯತೆ ಇದೆ. ಆದರೆ ಮಾತಿನಲ್ಲಿ ಕುಶಲಿಗಳಾದ ನೀವು ಅದನ್ನು ಸಮರ್ಥವಾಗಿ ಬಗೆಹರಿಸುವಿರಿ. ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ. ಹಣಕಾಸು ಉತ್ತಮವಾಗಿರುತ್ತದೆ.

ಸಿಂಹ:

ಭಾವನಾತ್ಮಕ ಒತ್ತಡಗಳಿಗೆ ಸಿಲುಕದಿರಿ. ಪ್ರಯತ್ನಶೀಲರಿಗೆ ಜಯವು ದೊರೆಯುವುದು. ಗುರುವಿನ ಕೃಪೆಗಾಗಿ ಪ್ರಾರ್ಥನೆ ಮಾಡಿ. ಕಾಲು ಕೆಜಿ ಕಡಲೆಕಾಳನ್ನು ದಾನ ಮಾಡಿ. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ.

ಕನ್ಯಾ:

ಚಂದ್ರನ ಉತ್ತಮ ಸ್ಥಿತಿಯು ನಿಮ್ಮನ್ನು ನಿರಾಳವಾಗಿರಲು ಅವಕಾಶ ಮಾಡಿಕೊಡುತ್ತದೆ. ಅಲ್ಲದೆ ಮನಸ್ಸಿನ ತಾಕಲಾಟಗಳಿಗೆ ಮುಕ್ತಿ ದೊರೆಯುವುದು. ಆರೋಗ್ಯದ ಸಲುವಾಗಿ ಅತಿಯಾದ ಔಷಧ ಸೇವನೆ ಮಾಡುವುದು ಉತ್ತಮವಲ್ಲ.

Also read: ಈ ಎರಡು ರಾಶಿಯವರ ಪ್ರೇಮ ಜೀವನ ತುಂಬಾ ಸ್ಪೆಷಲ್ ಅಂತೆ, ನೀವು ಇದೆ ರಾಶಿಯವರ ನೋಡಿಕೊಳ್ಳಿ…

ತುಲಾ:

ಅತ್ಯಂತ ವಿವೇಕಶಾಲಿ ಮತ್ತು ಬುದ್ಧಿಶಾಲಿಯಾದ ನಿಮ್ಮ ಇಡೀ ವ್ಯಕ್ತಿತ್ವವೇ ಒಂದು ದೊಡ್ಡ ಸರಕು. ನಿಮ್ಮ ಪ್ರಾಮಾಣಿಕತನವು ಎಲ್ಲರಿಂದ ಪ್ರಶಂಸೆಗೆ ಒಳಪಡುವುದು. ಕೌಟುಂಬಿಕ ಜೀವನದಲ್ಲಿ ಮಾನಸಿಕ ನೆಮ್ಮದಿ ದೊರೆಯುವುದು.

ವೃಶ್ಚಿಕ:

ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ವೈಫಲ್ಯ ಉಂಟಾಗುವ ಸಾಧ್ಯತೆ ಇದ್ದು ಶಿವನ ಆರಾಧನೆಯಿಂದ ಒಳಿತಾಗುವುದು. ಆದರೆ ಅದಕ್ಕಾಗಿ ಧೃತಿಗೆಡದೆ ಮರಳಿ ಯತ್ನವ ಮಾಡುವುದರಿಂದ ಯಶಸ್ಸನ್ನು ಹೊಂದುವಿರಿ.

ಧನಸ್ಸು:

ಅತ್ಯಂತ ಸ್ವಾಭಿಮಾನಿಯಾದ ನೀವು ಇತರರು ಹೇಳುವ ಮಾತಿನಿಂದ ಕ್ರೋಧಕ್ಕೆ ಒಳಗಾಗುವಿರಿ. ಅತಿಯಾದ ಸ್ವಾಭಿಮಾನವು ಇತರರಿಗೆ ಅಹಂ ಆಗಿ ತೋರುವುದು. ಆದ್ದರಿಂದ ನೆರೆಹೊರೆಯವರೊಡನೆ ಸ್ವಲ್ಪ ಸೌಜನ್ಯದಿಂದ ವರ್ತಿಸಿ.

Also read: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನದ ಆಭರಣಗಳನ್ನು ಹೇಗೆ ಧರಿಸಬೇಕೆಂದು ನಿಮಗೆ ತಿಳಿದಿದೆಯೇ..?

ಮಕರ:

‘ಅತಿ ವಿನಯಂ ದೂರ್ತಲಕ್ಷ ಣಂ’ ಎಂದರು ಹಿರಿಯರು. ಅತಿ ವಿನಯದಿಂದ ನಿಮ್ಮ ಮುಂದೆ ಬರುವ ಜನರಿಂದ ಮೋಸಕ್ಕೆ ಒಳಗಾಗುವ ಸಾಧ್ಯತೆ ಇರುವುದು. ಇದರ ಒಳವಿಚಾರಗಳನ್ನು ಸೂಕ್ಷ ್ಮವಾಗಿ ತಿಳಿದು ಅವರಿಂದ ದೂರವಿರಿ.

ಕುಂಭ:

ಜೀವನದ ಏಳಿಗೆಗಾಗಿ ಸಂಕಲ್ಪ ಮಾಡಿದ್ದೀರಿ. ನಿಮ್ಮ ಸಂಕಲ್ಪವು ನಿಜವಾದ ಕಾಳಜಿಯಿಂದ ಕೂಡಿದ್ದರೆ ಮಾತ್ರ ಭಗವಂತನು ಸಹಾಯ ಮಾಡುವರು. ನಿಮಗೆ ಈ ಹಿಂದೆ ಸಹಾಯ ಮಾಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿ.

ಮೀನ:

Meena1

ಅನ್ಯರ ವಿಚಾರದಲ್ಲಿ ತಲೆ ಹಾಕದಿರಿ. ಅನ್ಯರೂ ನಿಮ್ಮ ವಿಚಾರದಲ್ಲಿ ಮೂಗು ತೂರಿಸುವುದನ್ನು ತಡೆಯಿರಿ. ಮನೆಯಲ್ಲಿ ಮಂಗಳ ಕಾರ್ಯಗಳ ಪ್ರಸ್ತಾಪ ನಡೆಯುವುದು. ಹಣಕಾಸು ಉತ್ತಮವಾಗಿರುವುದು.

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!

ದಿನ ಭವಿಷ್ಯ: 17 ಆಗಸ್ಟ್, 2019!!