ದಿನ ಭವಿಷ್ಯ: 17 ಜುಲೈ, 2019!!

0
403

Astrology in kannada | kannada news ದಿನ ಭವಿಷ್ಯ: 17 ಜುಲೈ, 2019!!

ದಿನ ಭವಿಷ್ಯ: 17 ಜುಲೈ, 2019!!

ಮೇಷ:

ದಿನ ಭವಿಷ್ಯ

ಮೇಷ:- ಕೆಲವು ವಿಷಯಗಳಲ್ಲಿ ತೋರುವ ದುಡುಕುತನದಿಂದಾಗಿ ಕಾರ್ಯ ವೈಫಲ್ಯ ಎದುರಾಗುವುದು. ಆದರೆ ಜಾಗರೂಕತೆಯಿಂದ ಮತ್ತು ತಾಳ್ಮೆಯಿಂದ ಈ ಸಮಸ್ಯೆಗಳನ್ನು ಬಗೆಹರಿಸುವಿರಿ. ಗೆಳೆಯರೊಂದಿಗೆ ವಾದ-ವಿವಾದ ಬೇಡ. ನಿಮ್ಮ ವಿಚಾರಧಾರೆಯು ಎಲ್ಲರ ಗಮನ ಸೆಳೆಯುವುದು..

ವೃಷಭ:

ದಿನ ಭವಿಷ್ಯ

ವೃಷಭ:- ಕೆಲಸ ಕಾರ್ಯಗಳಿಂದ ಕೊಂಚ ಮಟ್ಟಿನ ವಿಶ್ರಾಂತಿ ಪಡೆಯುವಿರಿ. ಸೋಮಾರಿತನವು ನಿಮ್ಮನ್ನು ಸ್ಥೂಲ ಶರೀರಿಯನ್ನಾಗಿ ಮಾಡುವುದು. ಆದಷ್ಟು ಚಟುವಟಿಕೆಯಿಂದಿರಿ. ಗುರು-ಹಿರಿಯರ ಆಶೀರ್ವಾದ ಪಡೆಯುವುದು ಉತ್ತಮ.

ಮಿಥುನ:

ದಿನ ಭವಿಷ್ಯ

ಮಿಥುನ:- ಕಾರ್ಯ ಸಾಧನೆಗಾಗಿ ನೀವು ಕೈಗೊಂಡ ಕ್ರಮವನ್ನು ಮೇಲಾಧಿಕಾರಿಗಳು ಪ್ರಶಂಸಿಸಿ ಅಭಿನಂದಿಸುವರು. ಹವಾದ ಹೊಸ ದಂಪತಿಗಳಿಗೆ ಬಹಳ ದಿನಗಳ ನಂತರ ಸಂತತಿಭಾಗ್ಯ ಒದಗಿಬರಲಿದೆ. ಬರಲಿರುವ ಭಾಗ್ಯವನ್ನು ರಕ್ಷಣೆ ಮಾಡಿಕೊಳ್ಳುವುದು ನಿಮ್ಮ ಮೊದಲ ಕರ್ತವ್ಯವಾಗಿರುತ್ತದೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಆರ್ಥಿಕ ಸಹಾಯ ಕೇಳಲು ಬಂದವರಿಗೆ ಸಹಾಯ ಮಾಡುವಿರಿ. ನಿಮ್ಮ ನೇತತ್ವದಲ್ಲಿಯೇ ಮಂಗಳ ಕಾರ್ಯಗಳು ಜರುಗುವುದು. ಉಪನ್ಯಾಸ ವತ್ತಿಯಲ್ಲಿರುವವರಿಗೆ ಸಮಾಜದಲ್ಲಿ ಗೌರವ ಸಿಗುವುದು. ಮಕ್ಕಳಿಗೆ ಲಲಿತ ಕಲೆಗಳಲ್ಲಿ ಆಸಕ್ತಿ ಮೂಡಲಿದೆ. ನಿಮ್ಮ ಬದುಕಿಗೆ ಸಂಬಂಧ ಪಡದ ಜಟಿಲ ಸಮಸ್ಯೆಯೊಂದು ನಿಮ್ಮನ್ನು ಹೈರಾಣ ಆಗಿಸುವುದು..

ಸಿಂಹ:

ದಿನ ಭವಿಷ್ಯ

ಸಿಂಹ:- ಮಕ್ಕಳನ್ನು ಅವರ ಇಷ್ಠದಂತೆ ಪ್ರೋತ್ಸಾಹಿಸಿರಿ. ಲವಲವಿಕೆಯ ಜೀವನ ನಿಮ್ಮದಾಗುವುದು. ಯಾವುದೇ ಕಾರ್ಯವನ್ನು ನಿಭಾಯಿಸುವ ಛಾತಿ-ಛಲ ಎರಡೂ ನಿಮ್ಮಲ್ಲಿದೆ. ವ್ಯಾಪಾರದಲ್ಲಿನ ಹೊಸ ಒಪ್ಪಂದ ಲಾಭದಾಯಕವಾಗಲಿದೆ. ಸಾಮಾಜಿಕ ಇಲ್ಲವೆ ಧಾರ್ಮಿಕ ಕ್ಷೇತ್ರಗಳಲ್ಲಿ ಮನ್ನಣೆ ಉಂಟಾಗುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಬರಲಿರುವ ಸಂಕಷ್ಟಗಳನ್ನು ತಾಳ್ಮೆಯಿಂದ ಎದುರಿಸುವುದನ್ನು ಕಲಿಯುವಿರಿ. ನಿಮ್ಮ ಸಮಸ್ಯೆಗಳಿಗೆ ಹಿರಿಯರಿಂದ ಪರಿಹಾರ ಕಂಡುಬರಲಿದೆ. ಮನೆ ಕಟ್ಟುವ ವಿಚಾರವಾಗಿ ತಾತ್ಕಾಲಿಕ ಮುಂದೂಡಿಕೆ ಸೂಕ್ತ. ಆದಾಯದ ಮೂಲ ಹೆಚ್ಚಲಿದ್ದು, ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲಿದೆ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ವೈಯಕ್ತಿಕ ಕೆಲಸಗಳ ವಿಷಯದಲ್ಲಿ ಆತುರ ಸಲ್ಲದು. ವ್ಯಾಪಾರ-ವ್ಯವಹಾರದಲ್ಲಿ ಆರ್ಥಿಕ ಸಮಸ್ಯೆ ಅನುಭವಿಸಬೇಕಾಗುವುದು. ದೈನಂದಿನ ಜೀವನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವಸ್ತುಗಳ ಖರೀದಿ ಮಾಡದಿರುವುದು ಲೇಸು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಅಲಕ್ಷ್ಯ ತೋರಬೇಡಿ. ಆಪ್ತರೊಡನೆ ಅಲೋಚಿಸಿ ಮುಂದುವರೆಯಿರಿ. ಆಡುವ ಮಾತಿನ ಮೇಲೆ ಹತೋಟಿ ಇರಲಿ. ತಾಳ್ಮೆ ನಿಮ್ಮ ಮೂಲ ಮಂತ್ರವಾಗಿರಲಿ. ಧಾರ್ಮಿಕ ಕ್ರಿಯೆಗಳು ವಿಶೇಷವಾಗಿ ಮನೆಯಲ್ಲಿ ನಡೆಯುವವು. ವಿದೇಶದಲ್ಲಿ ಓದುತ್ತಿರುವ ಮಗನಿಂದ ಪತ್ರ ಬರುವ ಸಾಧ್ಯತೆ.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗೆ ಬ್ಯಾಂಕಿನಿಂದ ಹಣಕಾಸು ಒದಗಿ ಬರುವುದು. ಮನೋರಂಜನೆ ಹೆಸರಿನಲ್ಲಿ ಕೂಡಿಟ್ಟ ಹಣ ಖರ್ಚಾಗುವುದು. ಮಕ್ಕಳ ಅಭಿವದ್ಧಿ ಕಂಡು ಧನ್ಯತಾಭಾವ ಮೂಡಲಿದೆ. ವೈಯಕ್ತಿಕ ವಿಷಯಗಳನ್ನು ಪರರ ಮುಂದೆ ಹೇಳುವುದು ಸೂಕ್ತವಲ್ಲ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಇಷ್ಟವಿಲ್ಲದಿದ್ದರೂ ಬೇರೆಯವರಿಗೋಸ್ಕರ ಬೇಡದ ವಸ್ತುಗಳನ್ನು ಖರೀದಿಸಬೇಕಾಗುವುದು. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಬಹುದಿನಗಳಿಂದ ಶತ್ರುತ್ವ ಕಡಿಮೆ ಆಗಿ ಆತ್ಮೀಯರೊಬ್ಬರು ಸ್ನೇಹ ಬಯಸಿ ಬರುವರು. ತಾಯಿ ಆರೋಗ್ಯದಲ್ಲಿ ವ್ಯತ್ಯಯ ಕಂಡುಬರಲಿದೆ. ಆತ್ಮವಿಶ್ವಾಸದೊಂದಿಗೆ ಹೆಜ್ಜೆ ಹಾಕಿರಿ. ಜಯಶೀಲರಾಗುವಿರಿ.

ಕುಂಭ:

ದಿನ ಭವಿಷ್ಯ

ಕುಂಭ:- ನಿಮ್ಮ ನಡೆ, ನುಡಿ, ಆಚಾರ, ವಿಚಾರಗಳಲ್ಲಿ ಮತ್ತು ವತ್ತಿ ಪ್ರವತ್ತಿಗಳಲ್ಲಿ ಸಾವಧಾನದಿಂದ ಇರುವುದು ಒಳ್ಳೆಯದು. ಕುಟುಂಬಲ್ಲಿದ್ದ ಭಿನ್ನಾಭಿಪ್ರಾಯ ಬೇರೆಯವರ ಮಧ್ಯಸ್ಥಿಕೆಯಲ್ಲಿ ಬಗೆಹರಿಯಲಿದೆ. ಬಾಳ ಸಂಗಾತಿಯ ಮಾತುಗಳಿಗೆ ಹೆಚ್ಚಿನ ಮಹತ್ವ ಕೊಡದಿರುವುದು ಒಳ್ಳೆಯದು.

ಮೀನ:

ದಿನ ಭವಿಷ್ಯ

ಮೀನ:- ಅನಿರೀಕ್ಷಿತವಾಗಿ ಅನೇಕ ಸಮಸ್ಯೆಗಳು ಎದುರಾಗುವುದು. ಅವುಗಳನ್ನು ಸೂಕ್ಷ್ಮವಾಗಿ ಬಗೆಹರಿಸಿಕೊಳ್ಳುವಿರಿ. ವ್ಯಾಪಾರ-ವ್ಯವಹಾರದಲ್ಲಿ ಸತ್ಯತೆಯು ಎದ್ದು ಕಾಣುವಂತಿರಲಿ. ಗಹೋಪಕರಣಗಳ ಖರೀದಿ ಮಾಡುವಿರಿ. ಸಾಮಾಜಿಕ ಜೀವನ ಉತ್ತಮವಾಗಿದ್ದರೂ ವೈಯಕ್ತಿಕ ಜೀವನದಲ್ಲಿ ಮಾನಸಿಕ ಕಿರಿಕಿರಿಯನ್ನು ಅನುಭವಿಸುವಿರಿ.

Also read: ಪರಿಹಾರ ಜ್ಯೋತಿಷ್ಯದ ಪ್ರಕಾರ ಯಾವ ರಾಶಿಯವರು ಯಾವ ರುದ್ರಾಕ್ಷಿ ಧರಿಸುದರೆ ಶಿವನ ಕೃಪೆಗೆ ಪಾತ್ರವಾಗುವುದು ಅಂತ ತಿಳಿಯಿರಿ..!!

ದಿನ ಭವಿಷ್ಯ: 17 ಜುಲೈ, 2019!!