ದಿನ ಭವಿಷ್ಯ: 17 ಸೆಪ್ಟೆಂಬರ್, 2018!!

0
572
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ: 17 ಸೆಪ್ಟೆಂಬರ್, 2018!!

ಮೇಷ:

ದಿನ ಭವಿಷ್ಯ

ಮೇಷ: ಕ್ರಿಯಾಶೀಲತೆಯುಳ್ಳವರಾದ ನಿಮ್ಮನ್ನು ಮೇಲಧಿಕಾರಿಗಳು ಗುರುತಿಸಿ ಪ್ರಶಂಸಿಸುವರು. ಆದರೆ ನಿಮ್ಮ ಬಗ್ಗೆ ನೀವೆ ಹೊಗಳಿಕೊಳ್ಳುವುದನ್ನು ನಿಲ್ಲಿಸುವುದು ಕ್ಷೇಮಕರ. ಪತ್ನಿಯೊಂದಿಗೆ ಕಳೆದ ಸಮಯವು ನಿಮ್ಮಲ್ಲಿ ಹೆಚ್ಚಿನ ಚೈತನ್ಯ ತುಂಬುವುದು.

ವೃಷಭ:

ದಿನ ಭವಿಷ್ಯ

ವೃಷಭ: ಹಣವಿದೆಯೆಂದು ಸಾಲ ಕೊಡಲು ಹೋಗಬೇಡಿ. ಕೊಟ್ಟಹಣ ವಾಪಾಸ್ಸು ಬರುವುದಿಲ್ಲ. ಹಳೆ ವಾಹನದ ರಿಪೇರಿಗೆ ಹಣ ಸುರಿಯುವ ಬದಲು ಹೊಸತನ್ನು ಖರೀದಿಸುವಿರಿ. ವಿವಾಹ ಯೋಗ್ಯರಿಗೆ ಉತ್ತಮ ಸಂಬಂಧ ಕೂಡಿಬರಲಿದೆ.

ಮಿಥುನ:

ದಿನ ಭವಿಷ್ಯ

ಮಿಥುನ: ನೀವು ಏನೆಂಬುದನ್ನು ಪುನಃ ಸಾಬೀತುಪಡಿಸುವ ಕಾಲ. ಎಷ್ಟು ಎಚ್ಚರವಿದ್ದರೂ ಕಡಿಮೆ. ಗಂಡನ ಮಾತಿನಲ್ಲಿ ನಂಬಿಕೆಯಿಡಿ. ಅನೀರೀಕ್ಷಿತ ಧನಲಾಭ. ಭಾವನಾತ್ಮಕವಾಗಿ ಜನರನ್ನು ಸೆಳೆದು ಮೆಚ್ಚುಗೆ ಗಿಟ್ಟಿಸಿಕೊಳ್ಳುವಿರಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ: ಜಮೀನು ಖರೀದಿಯ ಗೊಂದಲಗಳು ನಿವಾರಣೆಯಾಗುವವು. ಅತಿಥಿ ಆಗಮನದಿಂದ ಸಿಹಿಸುದ್ದಿ ಕೇಳುವಿರಿ. ನೀವು ಕನಸು ಕಂಡಿರುವ ಸಂಗಾತಿಯೊಟ್ಟಿಗೆ ವಿವಾಹ ನಿಶ್ಚಯವಾಗುವುದು. ಆಕೆಗೆ ಉತ್ತಮ ಬೆಲೆಬಾಳುವ ವಸ್ತು ಕೊಡಿಸುವಿರಿ.

ಸಿಂಹ:

ದಿನ ಭವಿಷ್ಯ

ಸಿಂಹ: ಇಂದು ನೆಮ್ಮದಿಯ ದಿನ. ಸಂಗಾತಿಯು ನಿಮ್ಮನ್ನು ಪ್ರೀತಿಯಿಂದ ಪುರಸ್ಕರಿಸುವರು. ನಿಮ್ಮ ಪ್ರೇಮ ವಿವಾಹಕ್ಕೆ ಮನೆಯವರಿಂದ ಒಪ್ಪಿಗೆ ಸೂಚಿಸುವರು. ಸೂಕ್ತ ಸಮಯದಲ್ಲಿ ಮದುವೆಯಾಗುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ: ಅಧಿಕಾರದಲ್ಲಿ ಉನ್ನತ ಸ್ಥಾನಕ್ಕೇರುವ ಸಮಯ. ಮನೆಗೆ ನೂತನ ಗೃಹಾಲಂಕಾರದ ವಸ್ತು ಖರೀದಿಸುವಿರಿ. ಗಂಭೀರ ವಿಚಾರದ ಮಧ್ಯೆ ತಲೆಹರಟೆಯ ಮಾತುಗಳನ್ನು ಕಡಿಮೆ ಮಾಡಿಕೊಳ್ಳಿ. ಸಹೋದ್ಯೋಗಿಗಳ ಸಹಕಾರ ದೊರೆಯುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ: ಗೆಳೆಯನ ಸ್ನೇಹವನ್ನು ಮರಳಿ ಗಳಿಸಲು ಒಂದು ಮುಗುಳು ನಗು ಸಾಕು. ಅಹಂಕಾರವನ್ನು ಬದಿಗೊತ್ತಿ ಸ್ನೇಹಿತನಿಗೆ ಸಹಾಯ ಮಾಡುವಿರಿ. ಮಕ್ಕಳ ಪ್ರಗತಿಯು ನಿಮ್ಮನ್ನು ಸಂತೋಷಪಡಿಸುವುದು. ಆರ್ಥಿಕ ಸ್ಥಿತಿ ಉತ್ತಮ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ: ಮಿತ್ರನ ಪುಕ್ಕಟೆ ಸಲಹೆಯಿಂದ ಅಚ್ಚರಿಯ ಲಾಭವುಂಟಾಗುವುದು. ಮಿತ್ರನೊಂದಿಗೆ ದೂರ ಪ್ರಯಾಣ ಮಾಡಬೇಕಾಗುವುದು. ಎಲೆಕ್ಟ್ರಾನಿಕ್ಸ್‌ ವಸ್ತುಗಳ ಖರೀದಿಸುವಿರಿ. ಸ್ವಂತ ಉದ್ಯೋಗದಲ್ಲಿ ಹೆಚ್ಚಿನ ಪ್ರಗತಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು: ಮನೆಯಲ್ಲಿ ಮಂಗಳಕಾರ್ಯಗಳು ಜರುಗುವವು. ಹಮ್ಮಿಕೊಂಡ ಕಾರ್ಯಗಳು ಯಶಸ್ಸಿನತ್ತ ಸಾಗುವವು. ಸಾಲಗಳ ತೀರುವಳಿಯಾಗಿ ಕೈಯಲ್ಲಿ ನಾಲ್ಕು ಕಾಸು ಉಳಿಯುವುದು. ಆರೋಗ್ಯ ಉತ್ತಮವಾಗಿರುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ: ಶ್ರದ್ಧಾವಾನ್‌ ಲಭತೇ ಜ್ಞಾನಂ ಎನ್ನುವಂತೆ ಶ್ರದ್ಧೆಯಿಂದ ಮಾಡಿದ ಕೆಲಸಗಳು ಯಶಸ್ಸಿನತ್ತ ಸಾಗುವವು. ನಾನಾ ಮೂಲಗಳಿಂದ ಹಣ ಹರಿದು ಬರುವುದರಿಂದ ಕಿಸೆ ಭರ್ತಿಯಾದದ್ದೂ ಗೊತ್ತಾಗುವುದಿಲ್ಲ, ಖಾಲಿಯಾಗಿದ್ದು ತಿಳಿಯದು.

ಕುಂಭ:

ದಿನ ಭವಿಷ್ಯ

ಕುಂಭ: ಕನಸಿನ ಯೋಜನೆ ನೆರವೇರುವ ಸಮಯ. ಕಚೇರಿಯ ಮನಸ್ತಾಪಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಹಳೆಯ ಮೊಬೈಲಿನ ಕಿರಿಕಿರಿಯಿಂದ ಬೇಸತ್ತು ಹೊಸ ಮೊಬೈಲ್‌ ಖರೀದಿಸುವ ಯೋಚನೆ ಮಾಡುವಿರಿ.

ಮೀನ:

ದಿನ ಭವಿಷ್ಯ

ಮೀನ: ಸ್ವಾರ್ಥಿಯಾಗಿ ಬದುಕುವ ಚಿಂತನೆ ಬಿಟ್ಟು ಎಲ್ಲರ ನೆರವಿಗೂ ಧಾವಿಸಿ. ನಿಮ್ಮ ವಿಚಾರಧಾರೆಗಳನ್ನು, ನಿಮ್ಮ ಸ್ನೇಹಿತರ ಸಲಹೆಯನ್ನು ಪುರಸ್ಕರಿಸಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಆರೋಗ್ಯದ ಕಡೆ ಗಮನವಿರಲಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 17 ಸೆಪ್ಟೆಂಬರ್, 2018!!