ದಿನ ಭವಿಷ್ಯ: 18 ನವೆಂಬರ್, 2018!!

0
356

Astrology in kannada | kannada news ದಿನ-ಭವಿಷ್ಯ: 18 ನವೆಂಬರ್, 2018!!

ದಿನ-ಭವಿಷ್ಯ: 18 ನವೆಂಬರ್, 2018!!

ಮೇಷ:

ದಿನ ಭವಿಷ್ಯ

ಮೇಷ:- ನಿಮ್ಮ ಬುದ್ಧಿಶಕ್ತಿ ಹಾಗೂ ಸಾಮಾಜಿಕವಾಗಿ ಸ್ಪಂದಿಸುವ ನಿಮ್ಮ ರೀತಿಯಿಂದಾಗಿ ಜನರು ನಿಮ್ಮತ್ತ ಆಕರ್ಷಿತರಾಗುವರು. ಎಲ್ಲರೂ ನಿಮ್ಮನ್ನು ಕೊಂಡಾಡುವರು. ವಿಶೇಷವಾದ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ.

ವೃಷಭ:

ದಿನ ಭವಿಷ್ಯ

ವೃಷಭ:- ಹೊಸ ಸಾಹಸಕ್ಕೆ ಕೈಹಾಕಲು ಆತ್ಮೀಯರು ಒತ್ತಡ ತರುವ ಸಾಧ್ಯತೆ ಇರುತ್ತದೆ. ನಿಮ್ಮದೇ ಆದ ನಿಲುವನ್ನು ನೀವು ಬಿಟ್ಟು ಕೊಡದಿರಿ. ನಿಮ್ಮ ಇತಿಮಿತಿಗಳನ್ನು ಅರಿತು ಕಾರ್ಯಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ. ಹಣಕಾಸಿನ ಸ್ಥಿತಿ ಉತ್ತಮವಾಗುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ಮಾತಿನ ಜಾಣ್ಮೆಯಿಂದ ಎಲ್ಲರನ್ನು ಎಲ್ಲಾ ಕಾಲಕ್ಕೂ ಮರಳು ಮಾಡಲು ಆಗುವುದಿಲ್ಲ. ಹಾಗಾಗಿ ಆದಷ್ಟು ನಿಮ್ಮ ವ್ಯವಹಾರದಲ್ಲಿ ಪ್ರಾಮಾಣಿಕತೆಯಿಂದ ವರ್ತಿಸಿದಲ್ಲಿ ಎಲ್ಲರೂ ನಿಮಗೆ ಸಹಾಯ ಮಾಡುವರು. ಯಾರನ್ನು ಉಪೇಕ್ಷೆ ಮಾಡದಿರಿ.

Also read: ಈ ಎರಡು ರಾಶಿಯವರ ಪ್ರೇಮ ಜೀವನ ತುಂಬಾ ಸ್ಪೆಷಲ್ ಅಂತೆ, ನೀವು ಇದೆ ರಾಶಿಯವರ ನೋಡಿಕೊಳ್ಳಿ…

ಕಟಕ:

ದಿನ ಭವಿಷ್ಯ

ಕಟಕ:- ಆರೋಗ್ಯವೇ ಭಾಗ್ಯ. ಸ್ವಲ್ಪ ಆರೋಗ್ಯದ ವಿಷಯದಲ್ಲಿ ತೊಂದರೆ ಉಂಟಾಗಲಿದೆ. ಅನಾರೋಗ್ಯ ನಿವಾರಣೆಗೆ ಸ್ವತಃ ಮನೆ ಮದ್ದನ್ನು ಉಪಯೋಗಿಸದೆ ಸೂಕ್ತ ವೈದ್ಯರನ್ನು ಭೇಟಿ ಮಾಡಿ. ಇಲ್ಲವೆ ಒಂದಕ್ಕೆ ದುಪ್ಪಟ್ಟು ಹಣ ಖರ್ಚಾಗುವುದು.

ಸಿಂಹ:

ದಿನ ಭವಿಷ್ಯ

ಸಿಂಹ:- ಸಣ್ಣದಾದ ಮಾತುಗಳಿಗೆ ರೆಕ್ಕೆ, ಪುಕ್ಕ ಸೇರಿ ನಿಮ್ಮ ಮೇಲೆ ಅಪನಂಬಿಕೆ ಉಂಟಾಗುವ ಸಂದರ್ಭ ಎದುರಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಾತುಕತೆಯಲ್ಲಿ ಅನಗತ್ಯ ವಿಚಾರಗಳನ್ನು ಎಳೆದು ತರಬೇಡಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿ. ಮಕ್ಕಳ ಪ್ರಗತಿಯು ಮನಸ್ಸಿಗೆ ಖುಷಿಯನ್ನು ತಂದುಕೊಡುವುದು. ಆಂಜನೇಯ ಸ್ತೋತ್ರ ಪಠಿಸಿ.

Also read: ಕೈಯಲ್ಲಿ ಭೂತ, ಭವಿಷ್ಯ, ವರ್ತಮಾನ ಅಡಗಿದೆ ಎಂಬುದು ನಿಮಗೆ ಗೊತ್ತೇ?

ತುಲಾ:

Also read: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನದ ಆಭರಣಗಳನ್ನು ಹೇಗೆ ಧರಿಸಬೇಕೆಂದು ನಿಮಗೆ ತಿಳಿದಿದೆಯೇ..?

ತುಲಾ:- ಗ್ರಹಣ ಬಿಟ್ಟ ಚಂದ್ರಮನಂತೆ ಪ್ರಕಾಶಿಸುವಿರಿ. ನಿಮ್ಮ ಕಾರ್ಯ ಯೋಜನೆಗಳು ನಿಮ್ಮ ಮೇಲಿನ ಅಧಿಕಾರಿಗಳ ಮನಸ್ಸಿಗೆ ಮುದ ನೀಡುವುದು. ಇದರಿಂದ ವೃತ್ತಿಯಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇರುತ್ತದೆ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಯಾವುದು ಪುಕ್ಕಟೆ ದೊರೆಯುವುದಿಲ್ಲ. ಅಂತೆಯೆ ವಿದ್ಯೆಯನ್ನು ವಾಮಮಾರ್ಗದಿಂದ ಕಲಿಯಲು ಆಗುವುದಿಲ್ಲ. ವಿದ್ಯೆ ಸಾಧಕನ ಸ್ವತ್ತು. ಹಾಗಾಗಿ ವಿದ್ಯೆಯ ವಿಚಾರದಲ್ಲಿ ಹೆಚ್ಚಿನ ಶ್ರಮ ಪಡುವುದು ಅನಿವಾರ್ಯ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಆರೋಗ್ಯದ ಕಡೆ ಗಮನ ಇರಲಿ. ಮನೆ ವೈದ್ಯರ ಸಲಹೆಯನ್ನು ಸ್ವೀಕರಿಸಿ. ನಿಮ್ಮ ಮನೋ ದೌರ್ಬಲ್ಯವನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಆಂಜನೇಯ ಸ್ತೋತ್ರ ಪಠಿಸಿ.

Also read: ನಿಮ್ಮ ರಾಶಿಯ ಪ್ರಕಾರ, ಸಾಮಾನ್ಯವಾಗಿ ನಿಮ್ಮ ಸಂಬಂಧಗಳಲ್ಲಾಗುವ ತೊಂದರೆಗಳು.

ಮಕರ:

ದಿನ ಭವಿಷ್ಯ

ಮಕರ:- ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಯಸ್ಸಿನ ಅಂತರ ಅಡ್ಡಿ ಬರಲಾರದು. ನಿಗೂಢ ವಿದ್ಯೆಯನ್ನು ಕಲಿಯುವ ದಿಶೆಯಲ್ಲಿ ಪ್ರವೃತ್ತರಾಗುವಿರಿ. ಒಂದರ್ಥದಲ್ಲಿ ಅದರಲ್ಲೂ ಪ್ರವೇಶ ಪಡೆಯುವಿರಿ. ಈ ಕಲಿಯುಗದಲ್ಲಿ ಕಲಿಕೆಗೆ ನಿರಂತರ ಅವಕಾಶಗಳಿವೆ.

ಕುಂಭ:

ದಿನ ಭವಿಷ್ಯ

ಕುಂಭ:- ಸ್ಪರ್ಧೆಯ ಒತ್ತಡ ನಿಮ್ಮನ್ನು ಹೈರಾಣ ಮಾಡುವುದು. ಕಾಲಕ್ಕೆ ತಕ್ಕಂತೆ ಬದಲಾಗುವುದು ಹಾಗೂ ಅನಿವಾರ್ಯವಾಗುವುದು. ಗುರುಹಿರಿಯರ ಆಶೀರ್ವಾದ ಪಡೆಯಿರಿ. ಇದರಿಂದ ಒಳಿತಾಗುವುದು ಮತ್ತು ಸ್ಪರ್ಧೆಯಲ್ಲಿ ತೇರ್ಗಡೆ ಆಗುವಿರಿ.

ಮೀನ:

ದಿನ ಭವಿಷ್ಯ

ಮೀನ:- ಗ್ರಹಗತಿಗಳು ಹೇಗೆ ಫಲ ನೀಡುವರು ಎಂಬುದು ಕೆಲವೊಮ್ಮೆ ಗೊತ್ತಾಗದೆ ಹೋಗುವ ಸಾಧ್ಯತೆ ಇರುವುದು. ಕೆಲಸದ ಸ್ಥಳದಲ್ಲಿ ತಲೆ ತಿನ್ನುವ ಜನರು ಬಂದು ನಿಮ್ಮ ಆತ್ಮವಿಶ್ವಾಸಕ್ಕೆ ಧಕ್ಕೆ ತರುವವರಾಗುವರು. ಜಾಣ್ಮೆಯಿಂದ ಉತ್ತರಿಸಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ದಿನ-ಭವಿಷ್ಯ: 18 ನವೆಂಬರ್, 2018!!