ದಿನ ಭವಿಷ್ಯ: 18 ಸೆಪ್ಟೆಂಬರ್, 2018!!

0
291
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ: 18 ಸೆಪ್ಟೆಂಬರ್, 2018!!

ಮೇಷ:

ದಿನ ಭವಿಷ್ಯ

ಮೇಷ: ಹಣ, ಯಶಸ್ಸು, ಕೀರ್ತಿ ನಿಮ್ಮನ್ನು ಅರಸಿ ಬರುವವು. ನಿಮ್ಮ ಪರಿಶ್ರಮಕ್ಕೆ ಸೂಕ್ತ ಮನ್ನಣೆ ಸಿಗುವುದು. ಬದುಕಿನಲ್ಲಿ ಗುರಿ ಸಾಧಿಸಿದ ತೃಪ್ತಿ ನಿಮ್ಮದಾಗುವುದು. ವೈಯಕ್ತಿಕ ಜೀವನದಲ್ಲಿಯೂ ನಿರೀಕ್ಷಿತ ಬೆಳವಣಿಗೆಗಳು ಕಂಡು ಬರುವವು.

ವೃಷಭ:

ದಿನ ಭವಿಷ್ಯ

ವೃಷಭ: ಮಾತುಕತೆ ಮೂಲಕ ಯಾವುದೇ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಲು ಸಾಧ್ಯವಿದೆ ಎನ್ನುವುದು ಅರಿವಿಗೆ ಬರುವುದು. ವೃತ್ತಿ ಸ್ಥಳದಲ್ಲಿನ ಸಣ್ಣಪುಟ್ಟ ಗೊಂದಲಗಳಿಗೆ ಪರಿಹಾರ ಸೂಚಿಸಿ ಮೇÇಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ.

ಮಿಥುನ:

ದಿನ ಭವಿಷ್ಯ

ಮಿಥುನ: ಬದ್ಧತೆ ಎಂದರೆ ಏನು ಎಂಬುದನ್ನು ನಿಮ್ಮಿಂದ ಕಲಿಯಬೇಕು ಎಂದು ನಿಮ್ಮ ಮೇಲಿನ ಅಧಿಕಾರಿಗಳು ನಿಮ್ಮ ಕುರಿತು ಪ್ರಶಂಸೆಯ ಮಾತುಗಳನ್ನು ಆಡುವರು. ಕಚೇರಿಯಲ್ಲಿ ಅನಿರೀಕ್ಷಿತ ಕೊಡುಗೆ ಅಥವಾ ಸ್ಥಾನಮಾನಗಳು ಲಭ್ಯವಾಗಲಿದೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ: ಇದ್ದಕ್ಕಿದ್ದಂತೆ ಕೆಲಸದ ಒತ್ತಡ ಹೆಚ್ಚುವುದು. ಹೊಸ ದಿನಚರಿಗೆ ಹೊಂದಿಕೊಳ್ಳಲು ಕೊಂಚ ಕಷ್ಟ ಆಗುವುದು. ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಕೆಲಸದ ಅಬ್ಬರದಲ್ಲಿ ಕುಟುಂಬದ ಸದಸ್ಯರನ್ನು ಕಡೆಗಣಿಸಬೇಡಿ.

ಸಿಂಹ:

ದಿನ ಭವಿಷ್ಯ

ಸಿಂಹ: ಕೆಲವೊಮ್ಮೆ ಕಠಿನ ತೀರ್ಮಾನಗಳನ್ನು ಕೈಗೊಳ್ಳುವುದು ಅನಿವಾರ್ಯವಾಗುವುದು. ಆದರೆ ಇದು ಬೇರೆಯವರಿಗೆ ಅರಗಿಸಿಕೊಳ್ಳುವುದು ಕಷ್ಟವಾಗುತ್ತದೆ. ಅದಕ್ಕಾಗಿ ನೀವು ನಿಮ್ಮ ನಿರ್ಧಾರವನ್ನು ಬದಲಿಸಬೇಕಿಲ್ಲ. ಜನರೇ ನಿಮ್ಮ ತೀರ್ಮಾನಗಳಿಗೆ ಬದ್ಧರಾಗುವರು.

ಕನ್ಯಾ:

ದಿನ ಭವಿಷ್ಯ

ಕನ್ಯಾ: ಕೆಲಸದ ಒತ್ತಡದಿಂದ ಅಸಹನೆ ಕಾಡುವುದು. ಅದರಿಂದ ಸಹೋದ್ಯೋಗಿಗಳು ಬೇಸರಗೊಂಡಾರು. ದಿನದಲ್ಲಿ ಐದು ನಿಮಿಷವಾದರೂ ಧ್ಯಾನ ಮಾಡುವುದು ಒಳ್ಳೆಯದು. ತಲೆನೋವು, ಹಲ್ಲುನೋವು ಕಾಡುವ ಸಾಧ್ಯತೆಯಿದೆ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ: ಸಂದಿಗ್ಧ ಸಂದರ್ಭದಲ್ಲಿ ಔದಾರ್ಯ ಮತ್ತು ಸ್ನೇಹಪರತೆ ನೆರವಿಗೆ ಬರುತ್ತವೆ. ಮಾತಿನಲ್ಲಿ ಸೌಜನ್ಯವಿರಲಿ. ಅದೃಷ್ಟ ನಿಮ್ಮ ಜೊತೆಗೆ ಇರುವುದರಿಂದ ಮಾತುಕತೆಗಳಲ್ಲಿ ಗೆಲುವು ಉಂಟಾಗುವುದು. ವ್ಯವಹಾರಿಕವಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವಿರಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ: ಯಾರೊಬ್ಬರು ಪರಿಪೂರ್ಣರಲ್ಲ. ಇದನ್ನು ಅರಿತಿರಾದರೆ ನೀವಾಗಿಯೇ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವ ಪರಿಪಾಠ ನಿಲ್ಲುವುದು. ಆತ್ಮೀಯರ ಭೇಟಿ ಸಾಧ್ಯತೆ. ಹಳೆಯ ನೆನಪುಗಳು ಬದುಕಿಗೆ ಹೊಸ ಹುರುಪು ನೀಡುವುದು.

ಧನಸ್ಸು:

ದಿನ ಭವಿಷ್ಯ

ಧನಸ್ಸು: ಬಹಳ ದಿನಗಳ ನಿರೀಕ್ಷೆಗೆ ಇಂದು ತೆರೆ ಬೀಳುವುದು. ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಏರುವಿರಿ. ಆರ್ಥಿಕವಾಗಿಯೂ ಬಲಗೊಳ್ಳುವಿರಿ. ಹೊಸ ಆರಂಭಕ್ಕೆ ಸಜ್ಜಾಗಿರಿ. ಹಿರಿಯರ ಬೆಂಬಲ ಮತ್ತು ಮಾರ್ಗದರ್ಶನ ನಿಮಗೆ ದೊರೆಯುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ: ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಯೋಚಿಸಿ. ಇಲ್ಲಿ ಬಿಡಲಾಗದು ಅಲ್ಲಿಗೆ ಹೋಗಲಾಗದು ಎನ್ನುವ ಪರಿಸ್ಥಿತಿ. ಆಪ್ತೇಷ್ಟರ ಸಲಹೆ ಪಡೆದು ಮುಂದಡಿ ಇಡಿ. ಎಲ್ಲವೂ ಒಳಿತಾಗುವುದು.

ಕುಂಭ:

ದಿನ ಭವಿಷ್ಯ

ಕುಂಭ: ಸಣ್ಣಪುಟ್ಟ ವಿಚಾರಗಳಿಗೂ ಭಾವುಕರಾಗುವಿರಿ. ನಿಮ್ಮನ್ನು ಅರ್ಥ ಮಾಡಿಕೊಳ್ಳುವುದು ತೀರಾ ಹತ್ತಿರದವರಿಗೂ ಕಷ್ಟ ಆದೀತು. ಪ್ರೀತಿ ಪ್ರೇಮದ ವಿಚಾರಗಳಲ್ಲಿ ಮಹತ್ವದ ಬೆಳವಣಿಗೆಗಳು ಕಂಡುಬರುವುದಿಲ್ಲ. ಹಾಗಂತ ಈ ಬಗ್ಗೆ ನಿರಾಶೆಗೆ ಅವಕಾಶವಿಲ್ಲ.

ಮೀನ:

ದಿನ ಭವಿಷ್ಯ

ಮೀನ: ಕಿರಿಕಿರಿ ಉಂಟುಮಾಡುತ್ತಿದ್ದ ಸಣ್ಣಪುಟ್ಟ ಅಡೆತಡೆಗಳು ಕೊನೆಗೊಳ್ಳುವವು. ನಿಮ್ಮ ಯೋಜನೆಗಳಲ್ಲಿ ಸ್ಪಷ್ಟತೆ ಮೂಡುವುದು. ಸಂವಹನ ಕೊರತೆ ಉಂಟಾಗದಂತೆ ಎಚ್ಚರ ವಹಿಸಿರಿ. ಆಶಾವಾದದ ಶಕ್ತಿ ಏನೆಂಬುದು ನಿಮಗೆ ಮನವರಿಕೆ ಆಗುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 18 ಸೆಪ್ಟೆಂಬರ್, 2018!!