ದಿನ ಭವಿಷ್ಯ: 18 ಸೆಪ್ಟೆಂಬರ್, 2019!!

0
405

Astrology in kannada | kannada news ದಿನ ಭವಿಷ್ಯ: 18 ಸೆಪ್ಟೆಂಬರ್, 2019!!

ದಿನ ಭವಿಷ್ಯ: 18 ಸೆಪ್ಟೆಂಬರ್, 2019!!

ಮೇಷ:

ದಿನ ಭವಿಷ್ಯ

ಮೇಷ:- ಅನ್ಯಲಿಂಗಿಗಳ ಬಗ್ಗೆ ಹೆಚ್ಚಿನ ಜಾಗೃತಿ ಇರಲಿ. ಸುಖಾಸುಮ್ಮನೆ ನೀವು ಮಾಡದೆ ಇರುವ ತಪ್ಪಿಗೆ ಶಿಕ್ಷೆ ಅನುಭವಿಸ ಬೇಕಾಗುವುದು. ನಿಮ್ಮ ಗೌರವಕ್ಕೆ ಚ್ಯುತಿ ಬರದಂತೆ ಎಚ್ಚರ ವಹಿಸಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

ವೃಷಭ:

ದಿನ ಭವಿಷ್ಯ

ವೃಷಭ:- ದೂರದ ಊರಿಗೆ ಪ್ರವಾಸ ಕಾರ್ಯಕ್ರಮಮೊಂದು ನಿಶ್ಚಯವಾಗುವುದು. ಪ್ರವಾಸ ಕಾಲದಲ್ಲಿ ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ಮನಸ್ಸಿನಲ್ಲಿ ವೃಥಾ ಅನುಮಾನದ ಹುತ್ತ ಬೆಳೆಸಿಕೊಳ್ಳುವುದು ಒಳ್ಳೆಯದಲ್ಲ.

ಮಿಥುನ:

ದಿನ ಭವಿಷ್ಯ

ಮಿಥುನ:- ಅನೇಕ ದಿನಗಳ ಕ್ರಿಯಾಶೀಲತೆಯ ಫಲವಾಗಿ ವಿಶೇಷ ಧನಲಾಭವಾಗುವ ಸಂಭವವಿರುತ್ತದೆ. ಸರ್ವ ಚಿತ್ತಾರ ಮಸಿ ನುಂಗಿತು ಎನ್ನುವಂತೆ ನೀವಾಡುವ ಮಾತಿನಿಂದ ಮಹತ್ತರ ಕೆಲಸಕ್ಕೆ ಸಂಚಕಾರ ಬರುವ ಸಾಧ್ಯತೆ ಇದೆ. ಈ ಬಗ್ಗೆ ಯೋಚಿಸಿ ಮಾತನಾಡಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಬರಿ ಸುಳ್ಳು ಸುದ್ದಿಯ ಮೇಲಿಂದ ವ್ಯಾಜ್ಯವನ್ನು ಎದುರಿಸಬೇಕಾಗುವುದು. ಆದರೆ ದೈವದ ಅನುಗ್ರಹ ನಿಮ್ಮ ಮೇಲಿರುವುದರಿಂದ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ. ಮಾತಾ ದುರ್ಗಾದೇವಿಯ ಆರಾಧನೆ ಮಾಡುವುದು ಒಳಿತು.

ಸಿಂಹ:

ದಿನ ಭವಿಷ್ಯ

ಸಿಂಹ:- ಹೊಳೆ ದಾಟುವವರಿಗೆ ಅಂಬಿಗನ ಸಹಾಯ ಬಯಸಿದಂತೆ ಕೆಲವು ಜನರ ರೀತಿನೀತಿಗಳೆ ವಿಚಿತ್ರವಾಗಿರುತ್ತದೆ. ನಿಮ್ಮಿಂದ ಕೆಲಸ ಆಗುವಾಗ ನಿಮ್ಮನ್ನು ಹೊಗಳಿ ಅಟ್ಟಕ್ಕೆ ಏರಿಸುವರು. ನಂತರ ಅವರೇ ನಿಮ್ಮನ್ನು ಕೆಳಗೆ ತಳ್ಳುವರು. ಈ ಬಗ್ಗೆ ಎಚ್ಚರಕೆ ಇರಲಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಅನೇಕ ರೀತಿಯ ವರ್ಚಸ್ಸಿಗೆ ಕಾರಣವಾಗುವ ಪದೋನ್ನತಿ ಅಥವಾ ವಿಸ್ತೃತವಾದ ಕಾರ್ಯ ನಿರ್ವಹಣೆಯಿಂದ ಮನಸ್ಸಿಗೆ ಮುದ ಉಂಟಾಗುವುದು. ಮಕ್ಕಳು ನಿಮ್ಮ ಶ್ರಮವನ್ನು ನೆನೆಯುವರು ಮತ್ತು ಆರ್ಥಿಕ ಸಹಾಯ ಮಾಡಲು ಮುಂದಾಗುವರು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಆಹಾರ, ವಿಹಾರಗಳ ಬಗ್ಗೆ ಎಚ್ಚರದಿಂದ ಇರಿ. ಫುಡ್‌ ಪಾಯ್ಸನಿಂಗ್‌ ಆಗುವ ಸಾಧ್ಯತೆ ಇರುವುದು. ಯಾವುದಕ್ಕೂ ಊಟ, ತಿಂಡಿಯ ನಂತರ ಒಂದು ಏಲಕ್ಕಿಯನ್ನು ತಿನ್ನಿ. ಪ್ರಯಾಣ ಕಾಲದಲ್ಲಿ ನಾರಸಿಂಹ ದೇವರನ್ನು ನೆನೆಯಿರಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ದಿವ್ಯ ಅಲೌಕಿಕ ವಿಚಾರಗಳಲ್ಲಿನ ನಿಮ್ಮ ಆಸಕ್ತಿ ಹಾಗೂ ಭಕ್ತಿಭಾವಗಳು ವಿಶಿಷ್ಟ ಶಕ್ತಿಯನ್ನು ನಿಮಗೆ ಕೊಡುವುದು. ಇದರಿಂದ ನಿಮಗೆ ಆತ್ಮಸ್ಥೈರ್ಯ ಉಂಟಾಗಿ ಕೆಲಸ ಕಾರ್ಯಗಳಲ್ಲಿ ಹೊಸ ಹುಮ್ಮಸ್ಸು ಮೂಡುವುದು.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಪ್ರಶಂಸೆಯ ಮಾತುಗಳಿಂದ ಹಿಗ್ಗದಿರಿ. ಧೂರ್ತರು ನಿಮ್ಮ ತೇಜೋವಧೆ ಮಾಡಲು ಹವಣಿಸುತ್ತಿರುವುದರಿಂದ ಕುಲದೇವತಾ ಪ್ರಾರ್ಥನೆ ಮಾಡಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಗುರು, ಹಿರಿಯರ ಆಶೀರ್ವಾದದಿಂದ ಕಚೇರಿ ಕೆಲಸಗಳಲ್ಲಿ ಅನುಕೂಲವಾಗುವುದು. ಬಂಧುಗಳ ನಡುವೆ ಇದ್ದ ವೈರತ್ವವು ಹಿರಿಯರ ಮಧ್ಯಸ್ಥಿಕೆಯಿಂದ ತಿಳಿಯಾಗುವುದು. ಸಂಗಾತಿಯ ಆರೋಗ್ಯದ ಕಡೆ ಗಮನ ನೀಡಿ.

ಕುಂಭ:

ದಿನ ಭವಿಷ್ಯ

ಕುಂಭ:- ಉತ್ತಮ ಆನಂದಕ್ಕೆ ಕಾರಣವಾಗುವಂತಹ ದಿನವಾಗಿದೆ. ನಿಮ್ಮ ಮೇಲಧಿಕಾರಿಗಳು ನಿಮ್ಮನ್ನು ತುಂಬು ಹೃದಯದಿಂದ ಅಭಿನಂದಿಸುವರು. ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆಗಳು ಹೆಚ್ಚಾಗುವುದು.

ಮೀನ:

ದಿನ ಭವಿಷ್ಯ

ಮೀನ:- ಸಂಗಾತಿ ಸಿಕ್ಕಿದರೆ ಸಾಕು ಎಂದು ಅವಸರದಿಂದ ತೀರ್ಮಾನ ಕೈಗೊಳ್ಳದಿರಿ. ವಧು, ವರರ ಜಾತಕಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿಸಿ ವಿವಾಹಕ್ಕೆ ಒಪ್ಪಿಗೆಯನ್ನು ಸೂಚಿಸಿ. ವಿವಾಹ ಸಂಬಂಧ ತೀರ್ಮಾನ ಕೈಗೊಳ್ಳದಿರುವುದು ಒಳ್ಳೆಯದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 18 ಸೆಪ್ಟೆಂಬರ್, 2019!!