ದಿನ-ಭವಿಷ್ಯ: 19 ಮಾರ್ಚ್, 2019!!

0
260

Astrology in kannada | kannada news ದಿನ-ಭವಿಷ್ಯ: 19 ಮಾರ್ಚ್, 2019!!

ದಿನ-ಭವಿಷ್ಯ: 19 ಮಾರ್ಚ್, 2019!!

ಮೇಷ:

ದಿನ ಭವಿಷ್ಯ

ಮೇಷ:- ನಿಮ್ಮ ಕಷ್ಟದ ದಿನಗಳು ಕೆಲವೇ ದಿನಗಳಲ್ಲಿ ಕರಗಿ ಹೋಗಲಿವೆ. ಉತ್ತಮ ಗ್ರಹ ಸಂಚಾರದಿಂದ ನಿಮ್ಮನ್ನು ವಿರೋಧಿಸುತ್ತಿದ್ದವರು ನಿಮಗೆ ಹಣಕಾಸಿನ ಸಹಾಯ ಮಾಡಲು ಮುಂದೆ ಬರುವರು. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.

ವೃಷಭ:

ದಿನ ಭವಿಷ್ಯ

ವೃಷಭ:- ಆಸ್ತಿಯ ಸಂಬಂಧ ನಿಷ್ಠುರತೆಯನ್ನು ಪ್ರದರ್ಶಿಸುವ ಅನಿವಾರ್ಯತೆ ನಿಮಗೆ ಎದುರಾಗುವುದು. ತಾಳ್ಮೆಗೂ ಒಂದು ಮಿತಿ ಇರುತ್ತದೆ. ಹಾಗಾಗಿ ಕೋಪಗೊಳ್ಳುವುದರಲ್ಲಿ ಒಂದು ಅರ್ಥವಿರುತ್ತದೆ. ನನೆಗುದಿಗೆ ಬಿದ್ದಿದ್ದ ಕಾರ್ಯಕ್ಕೆ ಚಾಲನೆ ದೊರೆಯುವುದು.

ಮಿಥುನ:

ದಿನ ಭವಿಷ್ಯ

ಮಿಥುನ:-ಖರ್ಚಿನ ದೃಷ್ಟಿಯಿಂದ ಹೊಸದಾದ ಒತ್ತಡ ಎದುರಾದರೂ ಬೇರೆ ರೂಪಗಳಿಂದ ಹಣವು ಹರಿದು ಬರುವುದರಿಂದ ಅನುಕೂಲವಾಗುವುದು. ನಿಮ್ಮ ಕಾರ್ಯಗಳು ಸುಗಮವಾಗುವುದು. ನಿಮ್ಮ ಸಂತಸಕ್ಕೆ ಮಡದಿ ಮಕ್ಕಳು ಸಹಾಯ ಮಾಡುವರು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ನಿಮಗೆ ತಿಳಿಯದಂತೆ ಕೆಲವು ಹಿತಶತ್ರುಗಳ ಕಾಟ ಆರಂಭವಾಗುವುದು. ಬೂದಿ ಮುಚ್ಚಿದ ಕೆಂಡದಂತೆ ಇರುವ ಕೆಲವರು ಏಕಾಏಕಿ ನಿಮ್ಮ ಮೇಲೆ ಏರಿ ಬರುವ ಸಂದರ್ಭವಿರುತ್ತದೆ. ಲಕ್ಷ್ಮೀನಾರಸಿಂಹದೇವರನ್ನು ಪ್ರಾರ್ಥಿಸಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಪ್ರವಾಸ ಕಾರ್ಯಕ್ರಮವನ್ನು ಮುಂದೂಡುವುದು ಒಳಿತು. ಇನ್ನು ಸ್ವಲ್ಪ ದಿನದಲ್ಲಿ ನಿಮ್ಮ ಸಮಸ್ಯೆಗಳು ತಿಳಿಗೊಳ್ಳುವುದು. ಗುರುವಿನ ಸ್ತೋತ್ರವನ್ನು ಪಠಿಸಿ. ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸುವಿರಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಮನೆಗೆದ್ದು ಮಾರುಗೆಲ್ಲು ಎಂದರು ಅನುಭಾವಿಗಳು. ಹಾಗಾಗಿ ಮನೆಯ ಸದಸ್ಯರೊಡನೆ ಮನಸ್ತಾಪ ಮಾಡಿಕೊಳ್ಳದಿರಿ. ಮಕ್ಕಳ ಪ್ರಗತಿಯು ನಿಮಗೆ ಸಂತಸವನ್ನು ನೀಡುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಗ್ರಹಗಳ ಪ್ರತಿಕೂಲ ಸಂಚಾರದ ದೆಸೆಯಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಹಿನ್ನಡೆ ಉಂಟಾಗುವುದು. ಹಾಗಾಗಿ ದೊಡ್ಡ ಕಾರ್ಯಗಳನ್ನು ಆರಂಭಿಸುವುದು ಸೂಕ್ತವಲ್ಲ. ಗುರುಹಿರಿಯರ ಆಶೀರ್ವಾದವನ್ನು ಪಡೆಯಿರಿ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಚಾಣಾಕ್ಷ ಮತಿಗಳಾದ ನೀವು ಯೋಚಿಸದೆ ಯಾವ ಕೆಲಸವನ್ನು ಮಾಡಲಾರಿರಿ. ಆದರೆ ಅತಿಯಾದ ಆತ್ಮವಿಶ್ವಾಸದಿಂದ ಮಾಡುವ ಕೆಲಸವು ಕೆಟ್ಟು ಹೋಗುವ ಸಾಧ್ಯತೆಗಳಿದ್ದು ಹೆಚ್ಚಿನ ಬೀಗುವಿಕೆಗಿಂತ ಬಾಗಿ ನಡೆಯುವುದೇ ಒಳ್ಳೆಯದು.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ಅರಿತು ನಡೆದರೆ ಆರು ವರ್ಷ ಮರೆತು ನಡೆದರೆ ಮೂರು ವರ್ಷ ಎಂಬಂತೆ ಕಚೇರಿಯ ಹಿರಿಯರ ಸಾಂಗತ್ಯದಲ್ಲಿ ನಿಮ್ಮ ಕೆಲಸಗಳು ಸುಗಮವಾಗಿರುವುದು. ಕಚೇರಿಯ ಅಧಿಕಾರಿಗಳೊಡನೆ ವಿನಾಕಾರಣ ಮನಃಸ್ತಾಪ ಮಾಡಿಕೊಳ್ಳದಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ನೀವು ಇಚ್ಛಿಸಿದ ಕಾರ್ಯಗಳು ಕೈಗೂಡುವವು. ನಿಮಗೆ ಸಹಾಯ ಮಾಡಲು ನಾ ಮುಂದು ತಾ ಮುಂದು ಎಂದು ಜನರು ಮುಂದೆಬರುವರು. ಹಣಕಾಸಿನ ಸ್ಥಿತಿಯು ಉತ್ತಮವಾಗಿರುವುದು.

ಕುಂಭ:

ದಿನ ಭವಿಷ್ಯ

ಕುಂಭ:- ಮನೆ ಕೆಲಸ, ಕಚೇರಿ ಕೆಲಸಗಳ ಒತ್ತಡ ನಿಮ್ಮನ್ನು ಬಾಧಿಸುವ ಸಾಧ್ಯತೆ ಇದೆ. ಕೊಟ್ಟ ಸಾಲವು ವಾಪಸ್‌ ಬರದೆ ಆರ್ಥಿಕ ಸಂಕಷ್ಟವನ್ನು ಎದುರಿಸುವಿರಿ. ವೈಯಕ್ತಿಕ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

ಮೀನ:

ದಿನ ಭವಿಷ್ಯ

ಮೀನ:- ಏಕಾಏಕಿ ಹೊಸ ಕಾರ್ಯಗಳನ್ನು ಆರಂಭಿಸುವುದು ಅಷ್ಟು ಸೂಕ್ತವಲ್ಲ. ಸ್ವಲ್ಪ ತಾಳ್ಮೆ ವಹಿಸಿ. ಮುಂದೆ ಒಳಿತಾಗುವುದು. ಕುಲದೇವತಾ ಸ್ಮರಣೆ ಮಾಡಿ. ಆರೋಗ್ಯದ ವಿಷಯದಲ್ಲಿ ಅಲಕ್ಷ್ಯ ಬೇಡ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ-ಭವಿಷ್ಯ: 19 ಮಾರ್ಚ್, 2019!!