ದಿನ ಭವಿಷ್ಯ: 19 ಸೆಪ್ಟೆಂಬರ್, 2019!!

0
284

Astrology in kannada | kannada news ದಿನ ಭವಿಷ್ಯ: 19 ಸೆಪ್ಟೆಂಬರ್, 2019!!

ದಿನ ಭವಿಷ್ಯ: 19 ಸೆಪ್ಟೆಂಬರ್, 2019!!

ಮೇಷ:

ದಿನ ಭವಿಷ್ಯ

ಮೇಷ:- ಈದಿನದ ನಿಮ್ಮ ಮನೋಕಾಮನೆಗಳು ಯಶಸ್ಸಿನತ್ತ ಸಾಗುವುದು. ಪರಿಶ್ರಮದಿಂದ ಧನಸಂಪಾದನೆಗೆ ಮುಂದಾಗಿರಿ. ದೈವಬಲದ ದೆಸೆಯಿಂದ ಹೆಚ್ಚಿನ ಅನುಕೂಲವಾಗುವುದು. ವಿದ್ಯಾರ್ಥಿಗಳು ಸಾಕಷ್ಟು ಓದಿನ ಕಡೆ ಗಮನ ಹರಿಸಬೇಕು.

ವೃಷಭ:

ದಿನ ಭವಿಷ್ಯ

ವೃಷಭ:- ನಿಮ್ಮ ಮನೋಧೈರ್ಯವನ್ನು ಕೆಡಿಸುವಂತಹ ಅನ್ಯರ ಮಾತುಗಳನ್ನು ಬೇಗನೆ ನಂಬದಿರಿ. ಮನಸ್ಸಿನ ಸಂತುಲವನ್ನು ಕಾಯ್ದುಕೊಂಡರೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಕೇವಲ ಔಷಧಿಗಳಿಂದ ಖಾಯಿಲೆ ವಾಸಿಯಾಗುವುದಿಲ್ಲ. ಅದರ ಬಗ್ಗೆ ನಂಬಿಕೆಯೂ ಬೇಕು.

ಮಿಥುನ:

ದಿನ ಭವಿಷ್ಯ

ಮಿಥುನ:- ಅನೇಕ ರೀತಿಯ ಅಡೆತಡೆಗಳನ್ನು ದಾಟಿಕೊಂಡು ಬಂದಿರುವಿರಿ. ನಿಮ್ಮ ಈದಿನದ ಸಂಕಲ್ಪ ಶಕ್ತಿಯು ಹೆಚ್ಚು ಪ್ರಖರವಾಗಿದ್ದು ಮಹತ್ತರ ಕೆಲಸವನ್ನು ಗೆಲ್ಲಲಿದ್ದೀರಿ. ಆದರೆ ಅದರ ಸಾಮಥ್ರ್ಯವು ನಿಮ್ಮಲ್ಲಿ ಅಹಂಕಾರ ಬರದಂತೆ ನೋಡಿಕೊಳ್ಳಿರಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಗುರು ಹಿರಿಯರ ಸೇವೆ ಎಂದರೆ ಅವರನ್ನು ಒಂದೆಡೆ ಕೂಡಿ ಅರ್ಚನೆ ಮಾಡುವುದಲ್ಲ. ಅವರಿಗೆ ಬೇಕಾದ ಇಷ್ಟನಿಷ್ಟಗಳನ್ನು ಪೂರೈಸುವುದು. ಅವರಿಗೆ ನೋವಾಗದಂತೆ ಇರುವುದೇ ಸೇವೆ. ಇಂತಹ ಸೇವೆಯಿಂದ ಈದಿನ ಒಳಿತಾಗುವುದು.

ಸಿಂಹ:

ದಿನ ಭವಿಷ್ಯ

ಸಿಂಹ:- ಸಿಂಹವು ಗಾಂಭೀರ್ಯಕ್ಕೆ ಹೆಸರಾದ ಪ್ರಾಣಿ. ಅಂತೆಯೇ ನೀವು ಉದ್ಯೋಗದಲ್ಲಿ ಗಾಂಭೀರ್ಯತೆಯನ್ನು ಕಾಯ್ದುಕೊಳ್ಳಿರಿ. ಸಣ್ಣಪುಟ್ಟ ಟೀಕೆಗಳಿಗೆ ಆತ್ಮ ಸಂಯಮವನ್ನು ಕಳೆದುಕೊಳ್ಳದಿರಿ. ಕುಲದೇವತಾ ಪ್ರಾರ್ಥನೆ ಮಾಡಿರಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಜವಾಬ್ದಾರಿಯನ್ನು ನಿರ್ವಹಿಸಿ, ಅಡೆತಡೆಗಳನ್ನು ಎದುರಿಸಿ ನಿಲ್ಲುವಂತಹ ಶಕ್ತಿಯು ಇಂದು ತನ್ನಿಂದ ತಾನೇ ಲಭಿಸುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿದ್ದು, ನಿಮ್ಮ ಬಹುದಿನದ ಕನಸು ನನಸಾಗುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಗೆಳೆಯನೊಬ್ಬನ ಸಹಾಯವು ಇಂದು ನಿಮಗೆ ದೊರೆಯಲಿರುವುದು. ಮತ್ತು ಭಗವಂತ ನಿಮ್ಮ ಮೇಲೆ ಅಪಾರ ಕರುಣೆಯನ್ನು ತೋರುವುದರಿಂದ ಆರಂಭಿಸಿದ ಕಾರ್ಯಗಳೆಲ್ಲವೂ ಕೈಗೂಡುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಈಗ ಯಾರನ್ನು ನಂಬದೆ ಭಗವಂತನನ್ನೆ ಮೊರೆ ಹೋಗುವುದು ಸೂಕ್ತ. ತಣ್ಣೀರನ್ನು ಆರಿಸಿ ಕುಡಿಯುವ ಕಾಲವಾದ್ದರಿಂದ ನಡೆ-ನುಡಿಯಲ್ಲಿ ಎಚ್ಚರಿಕೆ ವಹಿಸಿರಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಊರದೇವರ ನೋಡಬೇಕಣ್ಣ ಎಂದರು ಅನುಭಾವಿಗಳು. ಅಂತೆಯೇ ಇಂದಿನ ಸುಸ್ಥಿತಿಗೆ ಕುಲದೇವರ ಅನುಗ್ರಹವೇ ಕಾರಣ. ಹಾಗಾಗಿ ಕುಲದೇವರ ಸನ್ನಿಧಿಗೆ ಹೋಗಿ ಬನ್ನಿರಿ. ಮತ್ತು ಈದಿನ ಎಲ್ಲಾ ಕೆಲಸಗಳಲ್ಲೂ ಜಯ ಗಳಿಸುವಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಯಾರದೋ ಸಹಾಯ ಬರಬಹುದು ಎಂಬ ಅತಿಯಾದ ನಿರೀಕ್ಷೆಯಲ್ಲಿಯೇ ಈದಿನದ ಬಹುಪಾಲು ಸಮಯ ವ್ಯರ್ಥವಾಗುವುದು. ಹಾಗಾಗಿ ಅವರ ನಿರೀಕ್ಷೆ ಮಾಡದೆ ಅನ್ಯರ ಸಹಾಯವನ್ನು ಪಡೆಯಿರಿ ಒಳಿತಾಗುವುದು.

ಕುಂಭ:

ದಿನ ಭವಿಷ್ಯ

ಕುಂಭ:- ಕಾಲವು ಶೀಘ್ರಗತಿಯಲ್ಲಿ ಉರುಳುತ್ತಿದೆ ಎನಿಸುತ್ತಿದೆ. ನೀವು ಮಾಡಬೇಕಾದ ಕಾರ್ಯಗಳು ಬಹಳಷ್ಟಿದ್ದು ಆದ್ಯತೆಯ ಮೇರೆಗೆ ಕೆಲಸ ಪೂರೈಸಿರಿ. ಮನೆಯಲ್ಲಿ ನಿಮ್ಮ ಮದುವೆಯ ಬಗ್ಗೆ ಮಾತುಕತೆಗಳು ನಡೆಯುವುದು.

ಮೀನ:

ದಿನ ಭವಿಷ್ಯ

ಮೀನ:- ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದು ಯಾರೂ ಗಮನಿಸುತ್ತಿಲ್ಲ ಎಂದು ಭಾವಿಸಿದಂತೆ ನೀವು ಮಾಡುವುದು ಬೇಡ. ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಹೊಂದಿರುವ ನೀವು ಎಲ್ಲಾ ನಡೆಯನ್ನು ಗಮನಿಸುವ ಜನರಿದ್ದಾರೆ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 19 ಸೆಪ್ಟೆಂಬರ್, 2019!!