ದಿನ ಭವಿಷ್ಯ: 2 ಅಕ್ಟೋಬರ್, 2018!!

0
633
ದಿನ ಭವಿಷ್ಯ

Astrology in kannada | kannada news | ದಿನ ಭವಿಷ್ಯ: 2 ಅಕ್ಟೋಬರ್, 2018

ದಿನ ಭವಿಷ್ಯ: 2 ಅಕ್ಟೋಬರ್, 2018!!

ಮೇಷ:

ದಿನ ಭವಿಷ್ಯ

ಮೇಷ:-ಧನಾತ್ಮಕ ಚಿಂತನೆಯಿಂದಾಗಿ ಇಷ್ಟಕಾರ್ಯ ಸಿದ್ಧಿಯಾಗುವುದು. ದೇಹದಲ್ಲಿ ಉತ್ತಮ ಆರೋಗ್ಯ ಇರುವುದು. ಮನಸ್ಸು ಲವಲವಿಕೆಯಿಂದ ಕೂಡಿದ್ದು ನೂತನ ಸ್ನೇಹಿತರನ್ನು ಮಾಡಿಕೊಳ್ಳುವಿರಿ. ಬಂದು ಮಿತ್ರರೊಡನೆ ಭೋಜನ ಕೂಟದಲ್ಲಿ ಭಾಗವಹಿಸುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ವೃಷಭ:

ದಿನ ಭವಿಷ್ಯ

ವೃಷಭ:- ನಿಮ್ಮ ಕೆಲಸದ ಒತ್ತಡದ ನಡುವೆ ಮಕ್ಕಳೊಡನೆ ಕಾಲ ಕಳೆಯಲು ಆಗುತ್ತಿಲ್ಲ ಎಂಬ ಚಿಂತೆ ಕಾಡುವುದು. ದೇಹಕ್ಕೆ ವಿಶ್ರಾಂತಿಯ ನೆಪದಲ್ಲಿ ಕಚೇರಿಗೆ ರಜೆ ಹಾಕಿ ಮಕ್ಕಳೊಡನೆ ಕಾಲ ಕಳೆಯಿರಿ. ಮನಸ್ಸು ಹಗುರವಾಗುವುದು. ಮತ್ತು ಮುಂದಿನ ಕೆಲಸ ಕಾರ್ಯಗಳನ್ನು ಉತ್ಸಾಹದಿಂದ ಮಾಡುವಿರಿ.

ಮಿಥುನ:

ದಿನ ಭವಿಷ್ಯ

ಮಿಥುನ:- ಈ ದಿನ ಕೆಲಸ ಬಾಹುಳ್ಯದಿಂದ ಸರಿಯಾದ ಸಮಯಕ್ಕೆ ಆಹಾರ ಸೇವಿಸಲು ಆಗುವುದಿಲ್ಲ. ಇದೇ ಕಾರಣಕ್ಕೆ ಸಂಜೆಯ ವೇಳೆಗೆ ಅಲ್ಪ ಆಲಸ್ಯ ಕಾಡುವ ಸಂಭವವಿದೆ. ಮನೆಗೆದ್ದು ಮಾರುಗೆಲ್ಲು ಎನ್ನುವಂತೆ ಮೊದಲು ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಇಂದು ನಿಮ್ಮ ಮಾತೇ ಅಂತಿಮ. ಕೆಲಸ ಕಾರ್ಯಗಳಲ್ಲಿ ನೀವು ತೆಗೆದುಕೊಂಡ ತೀರ್ಮಾನವನ್ನು ಎಲ್ಲರೂ ಪಾಲಿಸುವರು. ಶತ್ರು ನಾಶ, ಆರೋಗ್ಯ ವೃದ್ಧಿ, ಉತ್ಸಾಹ ಉಂಟಾಗುವುದು. ಕೌಟುಂಬಿಕ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಕೆಲವು ವಿಚಾರಗಳನ್ನು ಬಹಿರಂಗಗೊಳಿಸದಿರುವುದೇ ಮೇಲು.

ಸಿಂಹ:

ದಿನ ಭವಿಷ್ಯ

ಸಿಂಹ:- ನೀವು ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಅಂತೆಯೇ ನೀವು ಮುಂದೆ ಮಾಡಬೇಕೆನ್ನುವ ಕ್ರೀಯಾಶೀಲ ಕೆಲಸಗಳಿಗೆ ಸ್ನೇಹಿತರ ನೆರವು ಪಡೆಯುವಿರಿ. ಹಿರಿಯರೊಡನೆ ಅನಗತ್ಯ ವಾದ ಬೇಡ. ಸಂಬಂಧಿಕರೊಂದಿಗೆ ನಿಷ್ಠುರ ಮಾತುಕತೆ ಮಾಡದಿರುವುದು ಕ್ಷೇಮಕರ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ಕೊಂಚ ಏರುಪೇರು ಆಗುವ ಸಂಭವವಿದೆ. ಮನೆ ವೈದ್ಯರ ಸಲಹೆ ಪಡೆಯಿರಿ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಇದ್ದು ಪರೀಕ್ಷೆಯಲ್ಲಿ ಸಮರ್ಪಕವಾಗಿ ಉತ್ತರಿಸುವಿರಿ. ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಅಲ್ಪ ಹಿನ್ನಡೆ ತೋರುವುದು. ಶಿವನ ಆರಾಧನೆ ಮಾಡುವುದು ಒಳ್ಳೆಯದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:-ಸಿವಿಲ್‌ ಎಂಜಿನಿಯರ್‌ ಮತ್ತು ಕಟ್ಟಡ ಸಾಮಗ್ರಿ ಮಾರಾಟಗಾರರಿಗೆ ಉತ್ತಮ ದಿನ. ನಿಮ್ಮ ಯೋಜನೆಯಂತೆ ಕಾರ್ಯಗಳು ಸುಲಲಿತವಾಗುವುದು. ಮಕ್ಕಳು ಮಾಡುವ ತುಂಟತನದಿಂದ ಬೇಸರ ಮೂಡುವುದು. ಆಧ್ಯಾತ್ಮ ಸೇವಾ ಕಾರ್ಯದಲ್ಲಿ ತೊಡಗಿಕೊಂಡರೆ ಮನಸ್ಸು ಶಾಂತವಾಗುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಪರಾಕ್ರಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಮೊಬೈಲ್‌, ಟಿ.ವಿ. ಮುಂತಾದ ಸಂವಹನ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ ಒದಗಿ ಬರುವುದು. ಆಂಜನೇಯ ಮಂತ್ರ ಪಠಿಸಿರಿ ಮತ್ತು ದೀನದಲಿತರಿಗೆ ಆಹಾರ ನೀಡಿರಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು:-ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎನ್ನುವಂತೆ ಈ ದಿನ ನೀವಾಡುವ ಮಾತಿನಲ್ಲಿ ತಪ್ಪನ್ನು ಹುಡುಕುವ ಜನರು ಎದುರಾಗುವರು. ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದು ಸಾಧುವಲ್ಲ. ಸರಿಯಾದ ಸಮಯಕ್ಕೆ ಭೋಜನ ಸ್ವೀಕರಿಸಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಸಜ್ಜನರ ಸಂಘವದು ಹೆಜ್ಜೇನು ಸವಿದಂತೆ ಎನ್ನುವಂತೆ ಈ ದಿನ ಉಲ್ಲಾಸದಿಂದ ಸಮಯ ಕಳೆಯುವಿರಿ. ಮೇಲಧಿಕಾರಿಗಳಿಂದ ಪ್ರಶಂಸೆ ಸಿಗುವುದು. ದೇಹದಲ್ಲಿ ಉತ್ತಮ ಆರೋಗ್ಯ ಇರುವುದು. ಧನಾತ್ಮಕ ಚಿಂತನೆಯಿಂದ ಮನಸ್ಸು ಪ್ರಫುಲ್ಲಿತವಾಗುವುದು. ಹಿರಿಯರ ಆರೋಗ್ಯದ ಕಡೆ ಗಮನ ನೀಡಿರಿ.

ಕುಂಭ:

ದಿನ ಭವಿಷ್ಯ

ಕುಂಭ:- ಈ ದಿನ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನು ಕಾಣಬೇಕಾಗುವುದು. ನೂತನ ಕಾರ್ಯಗಳನ್ನು ಮುಂದೂಡುವುದು ಒಳ್ಳೆಯದು. ಊಟದಲ್ಲಿ ರುಚಿ ಕಡಿಮೆ ಎನಿಸುವುದು. ಆಪ್ತ ಸ್ನೇಹಿತರಿಂದ ಬೇಸರ ಉಂಟಾಗುವ ಸಾಧ್ಯತೆಯಿದೆ. ಮನೋನಿಯಾಮಕ ರುದ್ರದೇವರನ್ನು ಭಜಿಸಿರಿ.

ಮೀನ:

ದಿನ ಭವಿಷ್ಯ

ಮೀನ:- ಹುಡುಕುವ ಬಳ್ಳಿ ಕಾಲಿಗೆ ತೊಡರಿಕೊಂಡಂತೆ ಈ ದಿನ ನಿಮ್ಮ ಕಾರ್ಯಗಳು ಶೀಘ್ರಗತಿಯಲ್ಲಿ ಸಾಗುವುದು. ವಿವಾಹ ಯೋಗ್ಯರಿಗೆ ಕಂಕಣಭಾಗ್ಯ ಒದಗಿ ಬರುವುದು. ಕೆಲವರಿಗೆ ವಿದೇಶ ಪ್ರವಾಸದ ಆಮಂತ್ರಣ ಬರುವ ಸಾಧ್ಯತೆ ಇದೆ. ಗುರು-ಹಿರಿಯರ ಹಿತವಚನವನ್ನು ಪಾಲಿಸಿರಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 2 ಅಕ್ಟೋಬರ್, 2018