ದಿನ ಭವಿಷ್ಯ: 20 ಆಗಸ್ಟ್, 2018!!

0
521
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ: 20 ಆಗಸ್ಟ್, 2018!!

ಮೇಷ:

ದಿನ ಭವಿಷ್ಯ

ಮೇಷ:- ಮಾನಸಿಕ ಸಂತೋಷ ಮತ್ತು ಅವಕಾಶಗಳ ಕೊರತೆ ಉಂಟು ಮಾಡಲು ಹಿತಶತ್ರುಗಳು ಕಾದಿರುತ್ತಾರೆ. ನಿಮ್ಮ ಸಣ್ಣಪುಟ್ಟ ತಪ್ಪುಗಳನ್ನೇ ದೊಡ್ಡದು ಮಾಡಿ ಪ್ರಚಾರ ಮಾಡುವರು. ಆದಷ್ಟು ಮೌನವಾಗಿರಿ. ಆಂಜನೇಯ ಸ್ತೋತ್ರ ಪಠಿಸಿರಿ.

ವೃಷಭ:

ದಿನ ಭವಿಷ್ಯ

ವೃಷಭ:- ನಿಮ್ಮ ಒಳ್ಳೆಯತನವು ಈ ದಿನ ಮತ್ತೊಮ್ಮೆ ಸಾಬೀತಾಗುವುದು. ನೆರೆಹೊರೆಯವರಿಗೆ ಸ್ನೇಹದ ಹಸ್ತ ಚಾಚುವಿರಿ. ಮನೆಯಲ್ಲಿನ ಕೆಲಸ ಕಾರ್ಯಗಳು ತ್ವರತಗತಿಯಲ್ಲಿ ಸಾಗುವುದರಿಂದ ಮಧ್ಯಾಹ್ನದ ವೇಳೆಗೆ ವಿಶ್ರಾಂತಿಗೆ ಸಾಕಷ್ಟು ಸಮಯ ದೊರೆಯುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ವಿರಸದಿಂದ ಸರಸ. ಹಾಗಾಗಿ ಪತಿ-ಪತ್ನಿಯರಲ್ಲಿ ಈ ದಿನ ವಿರಸ ತೋರಿದರೂ ಮಧ್ಯಾಹ್ನದ ವೇಳೆಗೆ ಎಲ್ಲವೂ ಸುಗಮವಾಗುವುದು. ಹಣಕಾಸು ಕೂಡಾ ವಿವಿಧ ಮೂಲಗಳಿಂದ ಹರಿದು ಬರುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ನಿಮ್ಮ ಆರೋಗ್ಯದ ವಿಚಾರದಲ್ಲಿ ಜಾಗರೂಕರಾಗಿರಿ. ಹಣದ ವಿಚಾರದಲ್ಲಿ ಆತುರ ತೋರಿ ಇಕ್ಕಟ್ಟಿಗೆ ಸಿಲುಕಿಕೊಳ್ಳದಿರಿ. ಗುರು-ಹಿರಿಯರ ಆಶೀರ್ವಾದ ಪಡೆಯಿರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಪಂಚಮ ಶನಿಯ ಕಾಡಾಟ ಇನ್ನು ಸ್ವಲ್ಪ ದಿನ ಇರುತ್ತದೆ.

ಸಿಂಹ:

ದಿನ ಭವಿಷ್ಯ

ಸಿಂಹ:- ಕೆಲವು ಗ್ರಹಗಳ ಶುಭ ಸಂಚಾರದಿಂದಾಗಿ ನ್ಯಾಯಯುತವಾದ ದುಡಿಮೆಯಿಂದ ಹಣವನ್ನು ಗಳಿಸುವಿರಿ. ನಿಮ್ಮನ್ನು ಹೊಗಳಿ ಹೊನ್ನ ಶೂಲಕ್ಕೆ ಏರಿಸುವವರು ಬಹಳ ಜನ. ಈ ಬಗ್ಗೆ ಜಾಗೃತರಾಗಿರಿ. ಯೋಗ್ಯತೆಗೆ ತಕ್ಕ ಗೌರವ ಆದರಗಳು ಬರುವವು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ನಿಮ್ಮ ವಿಚಾರಧಾರೆಗಳು ಸೂಕ್ತವಾದರೂ ಅವನ್ನು ಸಮಾಜದ ಎದುರು ಪ್ರಸ್ತುತ ಪಡಿಸುವಲ್ಲಿ ವಿಫಲರಾಗುವಿರಿ. ಹಾಗಾಗಿ ಜನರು ನಿಮ್ಮ ವಿದ್ಯೆಯ ಬಗ್ಗೆ ಅನುಮಾನ ಪಡುವಂತೆ ಆಗುವುದು. ಆದರೆ ನೀವು ಸಕಾರಾತ್ಮಕವಾಗಿ ಚಿಂತಿಸುವಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ನಿಮ್ಮ ಇಚ್ಛಾಶಕ್ತಿಯು ನಿಮ್ಮನ್ನು ಸಂರಕ್ಷಿಸುವ ವಜ್ರಾಯುಧವಾಗಿರುತ್ತದೆ. ಈ ಹಿಂದೆ ನೀವು ಮಾಡಿದ ತಪ್ಪುಗಳನ್ನು ಎದುರು ಇಟ್ಟುಕೊಂಡು ಮಾತನಾಡುವ ಮಂದಿಗೆ ಉತ್ತರ ಕೊಡದಿರಿ. ನೀವು ಈಗ ಸಾಕಷ್ಟು ಬದಲಾಗಿರುವುದು ಅವರಿಗೆ ಗೊತ್ತಿಲ್ಲ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ನಿಮ್ಮ ಧೈರ್ಯ ಸಾಹಸಗಳಿಗೆ ಹಲವಾರು ಅವಕಾಶಗಳು ಲಭಿಸುತ್ತವೆ. ಕೆಲವು ಒತ್ತಡಗಳು ಇರುತ್ತವೆ. ಆದರು ಗುರುವಿನ ಶ್ರೀರಕ್ಷೆಯಿಂದ ಎಲ್ಲವೂ ಮಂಜಿನಂತೆ ಕರಗಿ ಹೋಗುವುದು.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಅನೇಕ ರೀತಿಯ ಸಫಲ ಯೋಜನೆಗಳನ್ನು ಯೋಜನಾಬದ್ಧವಾಗಿ ರೂಪಿಸಿದರೂ ಅವುಗಳು ಕಾರ‍್ಯರೂಪಕ್ಕೆ ಬರುವಲ್ಲಿ ಹಲವು ಅಡೆತಡೆಗಳನ್ನು ಎದುರಿಸಬೇಕಾಗುವುದು. ಸಜ್ಜನರೇ ನಿಮ್ಮ ಕ್ರಿಯಾಶೀಲತೆಯನ್ನು ದುರ್ಬಲಗೊಳಿಸುವರು. ಶಿವನ ಆರಾಧನೆ ಮಾಡಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಸಕಾರಾತ್ಮಕ ಚಿಂತನೆಗಳಿಂದ ಎಲ್ಲಾ ಕೆಲಸಗಳು ಕೈಗೂಡುವವು. ನನ್ನಿಂದ ಏನೂ ಆಗುವುದಿಲ್ಲ ಎನ್ನುವ ಮಾತಿಗಿಂತ ಎಲ್ಲವೂ ನನ್ನಿಂದಲೇ ಆಗುತ್ತದೆ ಎಂದು ನೂರು ಬಾರಿ ಹೇಳಿಕೊಳ್ಳಿರಿ. ಕಾರ್ಯದಲ್ಲಿ ಯಶಸ್ಸು ಹೊಂದುವಿರಿ.

ಕುಂಭ:

ದಿನ ಭವಿಷ್ಯ

ಕುಂಭ:- ನಿಮ್ಮ ತಾರ್ಕಿಕ ಮನೋಭಾವನೆ ಹಾಗೂ ಅದಕ್ಕೆ ಪೂರಕವಾಗಿ ನಯ ನಾಜೂಕುತನದಿಂದ ಮಾತನಾಡುವ ಕಲೆಯು ಎಂತಹವರಿಂದಲೂ ನಿಮಗೆ ಗೌರವ ತರುವ ವಿಷಯಗಳಾಗಿವೆ. ಹಿರಿಯರನ್ನು ನೆನೆದು ಈ ದಿನ ಹಿರಿತನದಿಂದ ಬಾಳಿರಿ.

ಮೀನ:

ದಿನ ಭವಿಷ್ಯ

ಮೀನ:- ಗುರುವಿನ ಕಾರುಣ್ಯ ದೊಡ್ಡದು. ನಿಮ್ಮ ಹಲವು ತಪ್ಪುಗಳನ್ನು ಮನ್ನಿಸಿ ನೀವು ಮಾಡಿದ ಅಲ್ಪ ಸೇವೆಯೆ ಮಹತ್‌ ಎಂದು ಗಮನಿಸಿ ನಿಮ್ಮ ಸಕಲ ಕಾರ್ಯಗಳಲ್ಲೂ ಯಶಸ್ಸನ್ನು ತಂದು ಕೊಡುವರು. ನೀವು ಕೂಡಾ ಗುರುವಿನ ಔದಾರ‍್ಯವನ್ನು ಬೆಳೆಸಿಕೊಳ್ಳಿರಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 20 ಆಗಸ್ಟ್, 2018!!