ದಿನ-ಭವಿಷ್ಯ: 20 ಅಕ್ಟೋಬರ್, 2018!!

0
344
ದಿನ ಭವಿಷ್ಯ

Astrology in kannada | kannada news

ದಿನ-ಭವಿಷ್ಯ: 20 ಅಕ್ಟೋಬರ್, 2018!!

ಮೇಷ:

ದಿನ ಭವಿಷ್ಯ

ಮೇಷ:- ನಿಮ್ಮ ಪಾಡಿಗೆ ನೀವಿದ್ದರೂ ನಿಮ್ಮನ್ನು ಮಾತನಾಡಿಸಿ ತಪ್ಪು ಹುಡುಕುವ ಮಂದಿಯಿಂದ ಈ ದಿನ ಎಚ್ಚರದಿಂದಿರಿ. ಮೂರ್ಖರ ಜೊತೆ ವಾದ ಮಾಡಿ ಪ್ರಯೋಜನವಿಲ್ಲ. ಆದಷ್ಟು ಈ ದಿನ ಮೌನವಾಗಿದ್ದು ಗಣಪತಿಯ ಆರಾಧನೆ ಮಾಡಿರಿ.

ವೃಷಭ:

ದಿನ ಭವಿಷ್ಯ

ವೃಷಭ:- ಹಿರಿಯರ ಆಶೀರ್ವಾದದಿಂದ ಈ ದಿನ ನಿಮ್ಮ ಕಾರ್ಯಗಳು ಕೈಗೂಡುವವು. ಹಾಗಾಗಿ ಹಿರಿಯರ ಸಹಾಯವನ್ನು ಕಡೆಗಣಿಸದಿರಿ. ನಿಮಗೆ ಇರದ ಅನುಭವಗಳ ಭಂಡಾರ ಹಿರಿಯರಿಂದ ಇಂದು ನಿಮಗೆ ಲಭ್ಯವಾಗಲಿದೆ.

ಮಿಥುನ:

ದಿನ ಭವಿಷ್ಯ

ಮಿಥುನ:- ಕುಟುಂಬ ಕಲಹದಿಂದ ಮನಸ್ಸಿಗೆ ಅಶಾಂತಿ ಉಂಟಾಗುವುದು. ಹಿರಿಯರ ಮಧ್ಯಸ್ಥಿಕೆಯಿಂದ ಕಲಹವು ಶಮನಗೊಳ್ಳುವುದು. ಪತಿ-ಪತ್ನಿಯರು ಈ ದಿನ ಶಿವನ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿರಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಪರಾಕ್ರಮ ಕೆಲಸಗಳು ಸುಸೂತ್ರವಾಗಿ ನಡೆಯುವುದು. ಆದಾಗ್ಯೂ ನಿಮ್ಮ ಎದುರಾಳಿಗಳು, ಪ್ರತಿಸ್ಪರ್ಧಿಗಳು ತಲೆನೋವಿಗೆ ಕಾರಣರಾಗುತ್ತಾರೆ. ಭಕ್ತಿಯಿಂದ ಲಕ್ಷ್ಮೀನಾರಸಿಂಹ ದೇವರನ್ನು ಇಲ್ಲವೆ ವೀರಭದ್ರ ದೇವರನ್ನು ಸ್ಮರಿಸಿಕೊಳ್ಳಿರಿ.

ಸಿಂಹ:

ದಿನ ಭವಿಷ್ಯ

ಸಿಂಹ:- ನಿಮ್ಮ ಎಲ್ಲಾ ಕಾರ್ಯಗಳು ಸುಗಮವಾಗಿ ಸಾಗುವವು. ಆದರೆ ನಿಮ್ಮ ಕಠೋರ ಮಾತು ಇತರೆಯವರನ್ನು ಘಾಸಿಗೊಳಿಸುವುದು. ಇದರಿಂದಾಗಿ ಅವರು ಹಣಕಾಸಿನ ವ್ಯವಹಾರದಲ್ಲಿ ಸಂಶಯ ತಾಳುವರು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಕೈ ಧಾರಾಳತನವಿರುವ ನೀವು ಇಂದಿನಿಂದ ಹಣ ಕೂಡಿಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಏಕೆಂದರೆ ನಿಮ್ಮ ಆಪತ್‌ ಕಾಲದಲ್ಲಿ ಯಾರೂ ನಿಮಗೆ ಸಹಾಯ ಮಾಡುವುದಿಲ್ಲ. ಈ ಬಗ್ಗೆ ನಿಮಗೆ ಮಕ್ಕಳು ಸಹಕರಿಸುವರು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ನಿಮಗೆ ವಹಿಸಿದ ಕಾರ್ಯವನ್ನು ಶ್ರದ್ಧೆಯಿಂದ ಮಾಡಿರಿ. ಇದರಿಂದ ನಿಮ್ಮ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಹಣಕಾಸು ಕೂಡಾ ನಿಮಗೆ ಸಕಾಲದಲ್ಲಿ ಒದಗಿ ಬರುವುದು. ಮನೆಯ ಕುಟುಂಬದ ಹಿರಿಯರ ಆರೋಗ್ಯದ ಕಡೆ ಗಮನ ನೀಡಿರಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:– ದ್ವಿತೀಯ ವಾಕ್‌ ಸ್ಥಾನದಲ್ಲಿ ಸಂಚರಿಸುವ ಸಂದರ್ಭದಲ್ಲಿ ಮಾತಿನಿಂದ ಸಮಸ್ಯೆಗಳು ಎದುರಾಗುವುದು. ಹಾಗಾಗಿ ಈ ದಿನ ಎಚ್ಚರಿಕೆ ಅಗತ್ಯ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಆಂಜನೇಯ ಸ್ತೋತ್ರ ಪಠಿಸಿರಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ತಣ್ಣೀರನ್ನು ಆರಿಸಿ ಕುಡಿಯುವ ಕಾಲವಿದು. ಹಾಗಾಗಿ ನಿಮ್ಮ ಎದುರಾಳಿಯು ಆಡಿದ ಮಾತಿಗೆ ತಕ್ಷ ಣವೇ ಪ್ರತಿಕ್ರಿಯಿಸುವುದು ಈ ದಿನ ಸೂಕ್ತವಲ್ಲ. ಹಾಗಾಗಿ ಇದು ನಿಮ್ಮ ಸೋಲಲ್ಲ. ಸೋತಂತೆ ನಟಿಸಿ ಗೆಲ್ಲಲು ಪ್ರಯತ್ನಿಸಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಗುರು ಕೃಪೆಯಿಂದ ಪಡೆದ ಹಣವು ಶನಿಯ ವ್ಯಯಸ್ಥಾನದ ಸಂಚಾರದಿಂದಾಗಿ ವೃಥಾ ಸರ್ಕಾರಕ್ಕೆ ದಂಡ ತೆರುವ ಮೂಲಕ ಖರ್ಚಾಗುವುದು. ಸಂಚಾರ ನಿಯಮ ಪಾಲಿಸಿ ಮತ್ತು ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳಿ.

ಕುಂಭ:

ದಿನ ಭವಿಷ್ಯ

ಕುಂಭ:- ವ್ಯಾಪಾರ-ವ್ಯವಹಾರಸ್ಥರಿಗೆ ಸಾಧಾರಣ ಫಲ ಕಂಡು ಬರುವುದು. ಕೃಷಿಕರಿಗೆ ಸರ್ಕಾರದ ಧನ ಸಹಾಯ ದೊರೆಯುವುದು. ಮನೆಯ ಇತರೆ ಕಾರ್ಯಗಳು ಮಂದಗತಿಯಿಂದ ಸಾಗುವುದು. ಕುಲದೇವರನ್ನು ಪ್ರಾರ್ಥಿಸಿರಿ.

ಮೀನ:

ದಿನ ಭವಿಷ್ಯ

ಮೀನ:- ರಾಜಕೀಯ ನೇತಾರರಿಗೆ ಗುರುವಿನ ರಕ್ಷೆ ಇರುವುದರಿಂದ ಸಮಾಜದಲ್ಲಿ ನಿಮ್ಮ ಮಾತಿಗೆ ಬೆಲೆ ಬರುವುದು. ಸಂಘಸಂಸ್ಥೆಗಳ ಚುನಾವಣೆಗಳಲ್ಲಿ ಯಶಸ್ಸನ್ನು ಹೊಂದುವಿರಿ. ಇದರಿಂದ ಜನಪ್ರಿಯತೆ ಹೆಚ್ಚುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ-ಭವಿಷ್ಯ: 20 ಅಕ್ಟೋಬರ್, 2018!!