ದಿನ ಭವಿಷ್ಯ: 20 ಸೆಪ್ಟೆಂಬರ್, 2018!!

0
330
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ: 20 ಸೆಪ್ಟೆಂಬರ್, 2018!!

ಮೇಷ:

ದಿನ ಭವಿಷ್ಯ

ಮೇಷ : ಮನೆಯಲ್ಲಿ ಶುಭ ಕಾರ್ಯಗಳು ನಡೆಯುವವು. ನೆಮ್ಮದಿಯ ವಾತಾವರಣ. ಮನೆ ಪ್ರಶಾಂತತೆಯಿಂದ ಕೂಡಿರುತ್ತದೆ. ಸ್ನೇಹಿತರು ನಿಮ್ಮನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸುವರು. ಆರ್ಥಿಕ ಸ್ಥಿತಿ ಸದೃಢವಾಗಿರುವುದು.

ವೃಷಭ:

ದಿನ ಭವಿಷ್ಯ

ವೃಷಭ: ಮನೆಯ ಹಿರಿಯರ ಆರೋಗ್ಯದ ಬಗ್ಗೆ ಎಚ್ಚರ. ಸ್ತ್ರೀಯರು ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು. ಸಿಟ್ಟಿನ ಭರದಲ್ಲಿ ಕೊಯ್ದುಕೊಂಡ ಮೂಗನ್ನು ಜೋಡಿಸಲು ಆಗುವುದಿಲ್ಲ. ಹೆಚ್ಚಿನ ತಾಳ್ಮೆ ಅಗತ್ಯ.

ಮಿಥುನ:

ದಿನ ಭವಿಷ್ಯ

ಮಿಥುನ: ನಗುವಾಗ ಎಲ್ಲಾ ನೆಂಟರು ಅಳುವಾಗ ಯಾರೂ ಇಲ್ಲ ಎನ್ನುವಂತಹ ಪರಿಸ್ಥಿತಿ. ಇದುವರೆಗೂ ನಿಮ್ಮ ಸುತ್ತಲಿದ್ದ ಜನರು ಕ್ರಮೇಣ ಕಡಿಮೆಯಾಗುತ್ತಿರುವರು. ಕಾರಣ ನಿಮ್ಮ ಆರ್ಥಿಕ ಸ್ಥಿತಿ ದಿನೇ ದಿನೇ ಕಡಿಮೆಯಾಗುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ: ಆರೋಗ್ಯ ಉತ್ತಮ. ಹಣಕಾಸು ಕೂಡಾ ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಒದಗಿ ಬರುವುದು. ಗುರುಹಿರಿಯರು ನಿಮ್ಮ ಕಾರ್ಯ ವೈಖರಿಯನ್ನು ಮೆಚ್ಚುವರು. ಸಂಗಾತಿಯ ಬೇಕು ಬೇಡಗಳನ್ನು ಪೂರೈಸುವತ್ತ ಗಮನ ನೀಡಿ.

ಸಿಂಹ:

ದಿನ ಭವಿಷ್ಯ

ಸಿಂಹ: ವಾಣಿಜ್ಯ ರಂಗದವರಿಗೆ ಲಾಭ. ಗೆಳೆಯರಿಂದ ಸಹಾಯ ಸಾಧ್ಯತೆ. ನಿಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ನಿಮ್ಮ ನಿಷ್ಟೂರತೆಯು ಇತರರಿಗೆ ಮುಜುಗರ, ಕಿರಿಕಿರಿಯನ್ನುಂಟು ಮಾಡುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ: ಹಿರಿಯರು ಹೆತ್ತವರೊಂದಿಗೆ ವಾಗ್ವಾದಕ್ಕಿಳಿಯಬೇಡಿ. ದೈವದ ಅವಕೃಪೆಯು ನಿಮ್ಮ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನುಂಟು ಮಾಡುವುದು. ಈ ಸಂದರ್ಭ ಹಿರಿಯರೊಡನೆ ಕೋಪತಾಪ ಪ್ರದರ್ಶಿಸುವುದು ಒಳ್ಳೆಯದಲ್ಲ. ತಾಳ್ಮೆ ಇರಲಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ: ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ. ಗ್ರಾಹಕರು ನಿಮ್ಮ ಕರ್ತವ್ಯನಿಷ್ಠೆಯನ್ನು ಕೊಂಡಾಡುವರು. ಹಾಗಾಗಿ ಇನ್ನು ಹೆಚ್ಚು ಕೆಲಸದಲ್ಲಿ ತಲ್ಲೀನರಾಗುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಪ್ರಯಾಣದಲ್ಲಿ ಎಚ್ಚರ ಅಗತ್ಯ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ: ಕೈಗೆ ಬಂದ ತುತ್ತು ಬಾಯಿಗಿಲ್ಲದಂತೆ ಆಗುವುದು. ವೃತ್ತಿಯಲ್ಲಿ ಆಯ್ಕೆಯಾದರೂ ಅದಕ್ಕೆ ಸಂಬಂಧಪಟ್ಟ ಕಾಗದಗಳು ಕೈಸೇರುವುದು ವಿಳಂಬವಾಗುವುದು. ಕುಲದೇವರ ಪ್ರಾರ್ಥನೆಯೊಂದಿಗೆ ಶನಿ ಸ್ತೋತ್ರ ಪಠಿಸಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು: ಆರ್ಥಿಕ ವಿಷಯದಲ್ಲಿ ಚೇತರಿಕೆ ಕಂಡುಬರುವುದು. ಪಿತ್ರಾರ್ಜಿತ ಆಸ್ತಿಯ ಬಗ್ಗೆ ಇತ್ಯರ್ಥವಾಗುವುದು. ನಿಮ್ಮ ಪಾಲಿಗೆ ಬರಬೇಕಾದ ಭಾಗ / ಹಣ ಕೈಸೇರುವುದು. ವ್ಯವಹಾರದಲ್ಲಿ ನಿಮ್ಮ ಸಂಗಾತಿಯ ಮಧ್ಯಪ್ರವೇಶ ತಡೆಯಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ: ಆರೋಗ್ಯದಲ್ಲಿ ವ್ಯತ್ಯಯ ಕಂಡುಬರುವುದು. ಅಜೀರ್ಣ ಅಥವಾ ಉದರ ಶೂಲೆಯಂತಹ ತೊಂದರೆಗಳು ನಿತ್ಯ ಕಾರ್ಯಗಳಿಗೆ ಅಡೆತಡೆಯನ್ನು ಉಂಟು ಮಾಡುವುದು. ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

ಕುಂಭ:

ದಿನ ಭವಿಷ್ಯ

ಕುಂಭ: ರೊಟ್ಟಿ ಜಾರಿ ತುಪ್ಪದಲ್ಲಿ ಬಿತ್ತು ಎನ್ನುವಂತೆ ಶಿಕ್ಷ ಣ ಕ್ಷೇತ್ರದಲ್ಲಿ ನಿಮಗೆ ಮಾರ್ಗದರ್ಶಕರಾಗಿ ಉತ್ತಮರು ದೊರೆಯುವರು. ನಿಮ್ಮ ಸಂಶೋಧನಾ ದಾರಿ ಸುಗಮವಾಗುವುದು. ಗುರುಬಲವಿದ್ದು ತೂರಿಕೊಳ್ಳುವುದು ಒಳ್ಳೆಯದು.

ಮೀನ:

ದಿನ ಭವಿಷ್ಯ

ಮೀನ: ಕಲ್ಲಿನಂತೆ ಕುಳಿತು ಗಡಿಯಾರದಂತೆ ಕೆಲಸ ಮಾಡುವ ನಿಮ್ಮನ್ನು ಕೆಲವೇ ಮಂದಿ ಉಪಯೋಗಿಸಿಕೊಳ್ಳುವರು. ಕೆಲವರು ನಿಮ್ಮನ್ನು ಸಾಂಬಾರಿನಲ್ಲಿಯ ಕರಿಬೇವಿನಂತೆ ಹೊರಗೆ ಇಡುವರು. ಯಾವುದಕ್ಕೂ ಚಿಂತಿಸುವ ಅಗತ್ಯವಿಲ್ಲ.
Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 20 ಸೆಪ್ಟೆಂಬರ್, 2018!!