ದಿನ ಭವಿಷ್ಯ: 21 ಆಗಸ್ಟ್, 2018!!

0
309
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ: 21 ಆಗಸ್ಟ್, 2018!!

ಮೇಷ:

ದಿನ ಭವಿಷ್ಯ

ಮೇಷ:– ಭಾವನಾತ್ಮಕ ಒತ್ತಡಗಳಿಗೆ ಸಿಲುಕದಿರಿ. ಪ್ರಯತ್ನಶೀಲರಿಗೆ ಜಯವು ದೊರೆಯುವುದು. ಗುರುವಿನ ಕೃಪೆಗಾಗಿ ಪ್ರಾರ್ಥನೆ ಮಾಡಿರಿ. ಈ ದಿನ ಕಾಲು ಕೆಜಿ ಕಡಲೆಕಾಳನ್ನು ದಾನ ಮಾಡಿರಿ. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ.

ವೃಷಭ:

ದಿನ ಭವಿಷ್ಯ

ವೃಷಭ:– ಚಂದ್ರನ ಉತ್ತಮ ಸ್ಥಿತಿಯು ನಿಮ್ಮನ್ನು ನಿರಾಳವಾಗಿರಲು ಅವಕಾಶ ಮಾಡಿಕೊಡುತ್ತದೆ. ಮನಸ್ಸಿನ ತಾಕಲಾಟಗಳಿಗೆ ಮುಕ್ತಿ ದೊರೆಯುವುದು. ಆರೋಗ್ಯದ ಸಲುವಾಗಿ ಅತಿಯಾದ ಔಷಧ ಸೇವನೆ ಮಾಡುವುದು ಉತ್ತಮವಲ್ಲ.

ಮಿಥುನ:

ದಿನ ಭವಿಷ್ಯ

ಮಿಥುನ:- ಅತ್ಯಂತ ವಿವೇಕಶಾಲಿ ಮತ್ತು ಬುದ್ಧಿಶಾಲಿಯಾದ ನಿಮ್ಮ ಇಡೀ ವ್ಯಕ್ತಿತ್ವ ಒಂದು ದೊಡ್ಡ ಸರಕು. ನಿಮ್ಮ ಪ್ರಾಮಾಣಿಕತನ ಎಲ್ಲರಿಂದ ಪ್ರಶಂಸೆಗೆ ಒಳಪಡುವುದು. ಕೌಟುಂಬಿಕ ಜೀವನದಲ್ಲಿ ಮಾನಸಿಕ ನೆಮ್ಮದಿ ದೊರೆಯುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:– ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ವೈಫಲ್ಯ ಉಂಟಾಗುವ ಸಾಧ್ಯತೆ ಇದ್ದು ಶಿವನ ಆರಾಧನೆಯಿಂದ ಒಳಿತಾಗುವುದು. ಆದರೆ ಅದಕ್ಕಾಗಿ ಧೃತಿಗೆಡದೆ ಮರಳಿ ಯತ್ನವ ಮಾಡುವುದರಿಂದ ಯಶಸ್ಸನ್ನು ಹೊಂದುವಿರಿ.

ಸಿಂಹ:

ದಿನ ಭವಿಷ್ಯ

ಸಿಂಹ:– ಅತ್ಯಂತ ಸ್ವಾಭಿಮಾನಿಯಾದ ನೀವು ಇತರರು ಹೇಳುವ ಮಾತಿನಿಂದ ಕ್ರೋಧಕ್ಕೆ ಒಳಗಾಗುವಿರಿ. ಅತಿಯಾದ ಸ್ವಾಭಿಮಾನವು ಇತರರಿಗೆ ಅಹಂ ಆಗಿ ತೋರುವುದು. ಆದ್ದರಿಂದ ನೆರೆಹೊರೆಯವರೊಡನೆ ಸ್ವಲ್ಪ ಸೌಜನ್ಯದಿಂದ ವರ್ತಿಸಿರಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಅತಿ ವಿನಯಂ ಧೂರ್ತಲಕ್ಷ ಣಂ ಎಂದರು ಹಿರಿಯರು. ಈ ದಿನ ಅತಿ ವಿನಯದಿಂದ ನಿಮ್ಮ ಮುಂದೆ ಬರುವ ಜನರಿಂದ ಮೋಸಕ್ಕೆ ಒಳಗಾಗುವ ಸಾಧ್ಯತೆ ಇರುವುದು. ಇದರ ಒಳ ವಿಚಾರಗಳನ್ನು ಸೂಕ್ಷ ್ಮವಾಗಿ ತಿಳಿದು ಅವರಿಂದ ದೂರವಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:– ಜೀವನದ ಏಳ್ಗೆಗಾಗಿ ಸಂಕಲ್ಪ ಮಾಡಿದ್ದೀರಿ. ನಿಮ್ಮ ಸಂಕಲ್ಪವು ನಿಜವಾದ ಕಾಳಜಿಯಿಂದ ಕೂಡಿದ್ದರೆ ಮಾತ್ರ ಭಗವಂತನು ಸಹಾಯ ಮಾಡುವರು. ನಿಮಗೆ ಈ ಹಿಂದೆ ಸಹಾಯ ಮಾಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:– ಅನ್ಯರ ವಿಚಾರದಲ್ಲಿ ತಲೆ ಹಾಕದಿರಿ. ಅನ್ಯರು ಕೂಡಾ ನಿಮ್ಮ ವಿಚಾರದಲ್ಲಿ ಮೂಗು ತೂರಿಸುವುದನ್ನು ತಡೆಯಿರಿ. ಗುರುವಿನ ಕೃಪೆಯಿಂದ ಮನೆಯಲ್ಲಿ ಮಂಗಳ ಕಾರ್ಯಗಳ ಪ್ರಸ್ತಾಪ ನಡೆಯುವುದು.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಜನ್ಮಸ್ಥ ಶನಿಯು ಮಾನಸಿಕ ವಿಕಾರವನ್ನುಂಟು ಮಾಡುವುದರಿಂದ ಕೆಲಸ ಕಾರ್ಯಗಳಲ್ಲಿ ತಪ್ಪು ನುಸುಳುವ ಸಾಧ್ಯತೆ ಇದೆ. ಆಲಸ್ಯ, ಜಡತ್ವವನ್ನು ತೊರೆದು ಕಾರ್ಯದಲ್ಲಿ ಪ್ರವೃತ್ತರಾಗುವುದರಿಂದ ಕೆಲಸದಲ್ಲಿ ಜಯವನ್ನು ಕಾಣುವಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:– ಗುರು ಕಾರುಣ್ಯದಿಂದ ಈ ದಿನ ಹಮ್ಮಿಕೊಂಡ ಕೆಲಸ ಕಾರ್ಯಗಳು ಸುಗಮವಾಗಿ ಆಗುವವು. ಆದರೆ ಅದಕ್ಕಾಗಿ ವಿಪರೀತ ಹಣ ಕೈಬಿಡುವುದು. ಮಿತ್ರರು ಸಕಾಲದಲ್ಲಿ ನೆರವು ನೀಡುವುದರಿಂದ ಉತ್ತಮ ಫಲಿತಾಂಶ ಕಾಣುವಿರಿ.

ಕುಂಭ:

ದಿನ ಭವಿಷ್ಯ

ಕುಂಭ:- ಮಾತಾ ದುರ್ಗಾದೇವಿಯ ಪ್ರಾರ್ಥನೆಯಿಂದ ಈ ದಿನದ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಿರಿ. ದುರ್ಗೆಯು ದುಷ್ಟ ಜನರನ್ನು ಬಡಿದು ಶಿಷ್ಟರನ್ನು ರಕ್ಷಿಸುವಂತೆ ಈ ದಿನ ನೀವು ಮಾಡುವ ಒಳ್ಳೆಯ ಕಾರ್ಯಗಳಿಗೆ ರಕ್ಷೆ ನೀಡುವಳು.

ಮೀನ:

ದಿನ ಭವಿಷ್ಯ

ಮೀನ:- ಹತ್ತಿರದವರಿಂದಲೇ ಹೊಸ ಸಮಸ್ಯೆಯು ಎದುರಾಗುವ ಸಾಧ್ಯತೆಯಿದೆ. ಆದರೆ ಮಾತಿನಲ್ಲಿ ಕುಶಲಿಗಳಾದ ನೀವು ಅದನ್ನು ಸಮರ್ಥವಾಗಿ ಬಗೆಹರಿಸುವಿರಿ. ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿರಿ. ಹಣಕಾಸು ಉತ್ತಮವಾಗಿರುತ್ತದೆ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 21 ಆಗಸ್ಟ್, 2018!!