ದಿನ ಭವಿಷ್ಯ: 21 ಅಕ್ಟೋಬರ್, 2020!!

0
954

Astrology in kannada | kannada news ದಿನ ಭವಿಷ್ಯ: 21 ಅಕ್ಟೋಬರ್, 2020!!

ದಿನ ಭವಿಷ್ಯ: 21 ಅಕ್ಟೋಬರ್, 2020!!

ಮೇಷ:

ದಿನ ಭವಿಷ್ಯ

ಮನಸ್ಸಿಗೆ ಖುಷಿಕೊಡುವ ಕೆಲಸಗಳಲ್ಲಿ ತೊಡಗಿಕೊಳ್ಳುವಿರಿ. ಕಚೇರಿಯಲ್ಲಿ ನಿಮ್ಮ ದುಡಿಮೆಗೆ ತಕ್ಕ ಮನ್ನಣೆ ದೊರೆಯುವುದು. ವೃತ್ತಿ ಸಂಬಂಧ ದೂರ ಪ್ರಯಾಣದ ಸಾಧ್ಯತೆಯಿದೆ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.

ವೃಷಭ:

ದಿನ ಭವಿಷ್ಯ

ಕೆಲವರು ಬೇಕಂತಲೇ ನಿಮ್ಮನ್ನು ಉದ್ರೇಕಿಸುವರು. ಅಂತಹ ಹುನ್ನಾರಗಳ ಬಗ್ಗೆ ಎಚ್ಚರ ಇರಲಿ. ಕಠೋರವಾಗಿ ಮಾತನಾಡುವ ಸಂದರ್ಭ ಬಂದರೆ ಹೆದರಬೇಡಿ. ಕಟು ಮಾತುಗಳ ಮೂಲಕವೇ ಕೆಲವರಿಗೆ ಸ್ಪಷ್ಟ ಸಂದೇಶ ರವಾನೆ ಮಾಡುವಿರಿ.

ಮಿಥುನ:

ದಿನ ಭವಿಷ್ಯ

ಜೀವನ ಸರಿಯಾದ ದಿಕ್ಕಿನಲ್ಲಿಯೇ ಸಾಗುತ್ತಿದೆ ಎಂದು ನಿರ್ಲಿಪ್ತರಾಗಬೇಡಿ. ಇದೇ ಅಂತಿಮವಲ್ಲ. ಇನ್ನಷ್ಟು ಯೋಜಿತ ರೀತಿಯಲ್ಲಿ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ. ಸ್ನೇಹಿತರೊಂದಿಗೆ ಬೆರೆಯಿರಿ. ಮತ್ತು ಹೊಸ ವಿಷಯವನ್ನು ಅರಿಯಿರಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಎಲ್ಲವೂ ನೀವು ಅಂದುಕೊಂಡಂತೆಯೇ ನಡೆಯುವುದರಿಂದ ಮನಸ್ಸಿಗೆ ಸಂತೋಷ ಸಿಗುವುದು. ಉದ್ಯೋಗ ಬದಲಾವಣೆ ಬಗ್ಗೆ ಯೋಚನೆ ಮಾಡುತ್ತಿರುವವರು ಧೈರ್ಯದಿಂದ ಮುನ್ನಡಿ ಇಡಬಹುದು. ಸಂಬಂಧಗಳ ನಿರ್ವಹಣೆಯಲ್ಲಿ ಎಚ್ಚರ ಅಗತ್ಯ.

ಸಿಂಹ:

ದಿನ ಭವಿಷ್ಯ

ಈ ದಿನ ನಿಮ್ಮ ವರ್ತನೆ ಸಹೋದ್ಯೋಗಿಗಳಿಗೆ ಅಚ್ಚರಿ ಮೂಡಿಸುವುದು. ಸದಾ ದೂರ್ವಾಸ ಮುನಿಯಂತಿರುವ ವ್ಯಕ್ತಿ ಶಾಂತಮೂರ್ತಿಯಾದದ್ದು ಹೇಗೆ ಎಂಬ ಪ್ರಶ್ನೆ ಕಾಡುವುದು. ಆದರೆ ಈದಿನ ಹಲವು ವಿಚಾರಗಳು ನಿಮ್ಮ ಎಣಿಕೆಯಂತೆ ಆಗುತ್ತಿರುವುದೇ ಈ ಬದಲಾವಣೆಗೆ ಕಾರಣ.

ಕನ್ಯಾ:

ದಿನ ಭವಿಷ್ಯ

ಕೆಲವು ಸಂಗತಿಗಳು ನಿಮ್ನನ್ನು ಗಾಢವಾಗಿ ಕಾಡುತ್ತಿವೆ. ಅವುಗಳನ್ನು ಈ ದಿನ ಬಗೆಹರಿಸಿಕೊಳ್ಳಿರಿ. ಅನಿವಾರ್ಯವಾಗಿ ನಿರ್ವಹಿಸುತ್ತಿದ್ದ ಜವಾಬ್ದಾರಿಯಿಂದ ಮುಕ್ತರಾಗುವಿರಿ. ನಿಮ್ಮ ಕೈಯಲ್ಲಿ ಆಗುವ ಕೆಲಸದ ಕಡೆ ಗಮನ ಹರಿಸಿದರೆ ಸಾಕು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ಸಾಮಾಜಿಕ ಕ್ಷೇತ್ರಗಳಲ್ಲಿ ಮನ್ನಣೆ ಸಿಗಲಿದೆ. ಕಚೇರಿಯಲ್ಲೂ ನಿಮ್ಮ ಸಾಮರ್ಥ್ಯ‌ಕ್ಕೆ ತಕ್ಕ ಸ್ಥಾನಮಾನ ದೊರೆಯುವುದು. ನಿಮ್ಮಲ್ಲಿ ಕಾರ್ಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವಿರಿ. ಹಣಕಾಸು ಕೂಡಾ ಇದಕ್ಕೆ ಪೂರಕವಾಗಿ ಹರಿದು ಬರುವುದು.

ವೃಶ್ಚಿಕ:

ದಿನ ಭವಿಷ್ಯ

ಸಂಕಷ್ಟ ಸಂದರ್ಭವನ್ನು ಬಹುಜಾಣ್ಮೆಯಿಂದ ನಿಭಾಯಿಸುವಿರಿ. ವೃತ್ತಿಯಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಿರುವುದರಿಂದ ಅದನ್ನು ಸ್ವೀಕರಿಸಲು ಮನಸ್ಸು ಅಧೈರ‍್ಯ ಪಡುತ್ತಿರುತ್ತದೆ. ಆದರೆ ಅದರಿಂದ ಒಳಿತಾಗುವುದು. ಬದಲಾವಣೆಯನ್ನು ಒಪ್ಪಿಕೊಳ್ಳಿರಿ.

ಧನಸ್ಸು:

ದಿನ ಭವಿಷ್ಯ

ಕಚೇರಿಯಲ್ಲಿ ವಿಪರೀತ ಒತ್ತಡದ ಸಂದರ್ಭ ಎದುರಾಗುವುದು. ಕ್ರಮವರಿತ ಫೈಲುಗಳ ತಪಾಸಣೆಯಿಂದ ಒಳಿತಾಗುವುದು. ಮೇಲಧಿಕಾರಿಗಳ ಮುಲಾಜಿಗೆ ಒಳಗಾಗಿ ಇಲ್ಲವೆ ಮತ್ತೊಬ್ಬರ ಆಮಿಷಕ್ಕೆ ಒಳಗಾಗಿ ಕೆಲಸ ಮಾಡಬೇಡಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ನೀವು ಜಾಮೀನು ನೀಡಿದ್ದ ವ್ಯಕ್ತಿ ಸಾಲದ ಕಂತು ಪಾವತಿಸದ ಕಾರಣ ನಿಮಗೆ ನೋಟೀಸು ಬರುವ ಸಾಧ್ಯತೆ. ಸಾಲ ವಸೂಲಿಗೆ ನಾಜೂಕಿನಿಂದ ವ್ಯವಹರಿಸಿರಿ. ಭಗವಂತನ ಮೊರೆ ಹೋಗಿರಿ. ನಿಮ್ಮ ಕೆಲಸಗಳು ಸುಗಮವಾಗಿ ಆಗುವುದು.

ಕುಂಭ:

ದಿನ ಭವಿಷ್ಯ

ಒತ್ತಡದಿಂದ ಬಿಡುಗಡೆ ಮತ್ತು ನಿರಾಳತೆಯ ಭಾವ. ಕೆಲವರು ನಿಮ್ಮ ಮೂಡ್‌ ಹಾಳು ಮಾಡಬೇಕೆಂದು ಉದ್ದೇಶಪೂರ್ವಕ ಗಾಸಿಪ್‌ಗಳನ್ನು ಹರಡಿಸಬಹುದು. ಆದರೆ ಅವುಗಳ ಬಗ್ಗೆ ಗಮನ ಕೊಡದೆ ಇರುವುದು ಒಳ್ಳೆಯದು.

ಮೀನ:

ದಿನ ಭವಿಷ್ಯ

ಮನೆ ಮತ್ತು ಕಚೇರಿ ಎರಡೂ ಕಡೆ ನಡೆಯುವ ಕೆಲ ಬೆಳವಣೆಗೆಗಳು ನಿಮ್ಮನ್ನು ಹೈರಾಣಾಗಿಸಬಹುದು. ಆರೋಗ್ಯದ ಬಗ್ಗೆ ಕೊಂಚ ನಿಗಾ ಇರಲಿ. ವಿಶೇಷವಾಗಿ ಆಹಾರದ ವಿಚಾರದಲ್ಲಿ ಎಚ್ಚರಿಕೆ ಇರಲಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 21 ಅಕ್ಟೋಬರ್, 2020!!