ದಿನ ಭವಿಷ್ಯ: 22 ಫೆಬ್ರವರಿ, 2019!!

0
356
ದಿನ ಭವಿಷ್ಯ

Astrology in kannada | kannada news ದಿನ-ಭವಿಷ್ಯ: 22 ಫೆಬ್ರವರಿ, 2019!!

ದಿನ-ಭವಿಷ್ಯ: 22 ಫೆಬ್ರವರಿ, 2019!!

ಮೇಷ:

ದಿನ ಭವಿಷ್ಯ

ಮೇಷ:- ನಿಮ್ಮ ಎದುರು ನಿಂತು ಮಾತನಾಡುವ ಧೈರ್ಯವಿಲ್ಲದ ಶತ್ರುಗಳು ಬೇರೆ ರೀತಿಯ ವ್ಯೂಹವನ್ನು ರಚಿಸುವರು. ಈ ಬಗ್ಗೆ ಹೆಚ್ಚು ಜಾಗೃತರಾಗಿ. ಕಲ್ಮಶ ರಹಿತ ನಿಮ್ಮ ಧೈರ್ಯ ಧೋರಣೆಗಳು ನಿರೀಕ್ಷಿತ ಯಶಸ್ಸನ್ನು ತಂದುಕೊಡುವುದು.

ವೃಷಭ:

ದಿನ ಭವಿಷ್ಯ

ವೃಷಭ:- ಯಾರದೋ ಮುಲಾಜಿಗೆ ಕಟ್ಟುಬಿದ್ದು ಹಣಕಾಸಿನ ವಿಷಯದಲ್ಲಿ ಜಾಮೀನು ಪತ್ರಕ್ಕೆ ಸಹಿ ಹಾಕದಿರಿ. ಈ ದಿನ ತುಸು ನಿರಾಳತೆ ಇರುವುದು. ದುಡಿದ ಹಣವು ನೀರಿನಂತೆ ಖರ್ಚಾಗುವ ಸಾಧ್ಯತೆ ಇರುತ್ತದೆ. ಆಂಜನೇಯನ ಸ್ಮರಣೆ ಮಾಡಿ.

ಮಿಥುನ:

ದಿನ ಭವಿಷ್ಯ

ಮಿಥುನ:- ಕಚೇರಿಯ ವಾತಾವರಣದಲ್ಲಿ ಮೇಲಧಿಕಾರಿಗಳ ಜತೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿರುವ ನೀವು, ಕಚೇರಿಯಲ್ಲಿನ ಎಲ್ಲಾ ಸರ್ಕಾರಿ ಸವಲತ್ತುಗಳನ್ನು ಅನಾಯಾಸವಾಗಿ ಪಡೆಯುವಿರಿ. ನಿಮ್ಮ ಈ ಪ್ರಗತಿಯು ಇತರೆಯವರಿಗೆ ಅಸೂಯೆಯನ್ನು ತರುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಸ್ಥಿರಾಸ್ಥಿ ಕೊಂಡುಕೊಳ್ಳುವ ಪ್ರಯತ್ನ ನಡೆಯುತ್ತದೆ. ಮನೆಯ ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಆದರೆ ವೈಯಕ್ತಿಕವಾಗಿ ಶೀರೋವೇದನೆಯು ನಿಮ್ಮ ಮೂಡನ್ನು ಹಾಳುಮಾಡುವುದು.

ಸಿಂಹ:

ದಿನ ಭವಿಷ್ಯ

ಸಿಂಹ:- ‘ಹೊತ್ತು ಬಂದಂತೆ ಛತ್ರಿ ಹಿಡಿಯಬೇಕು’ ಎನ್ನುವಂತೆ ಸದ್ಯದ ಪರಿಸ್ಥಿತಿಯನ್ನು ನಿಮ್ಮ ಪರವಾಗಿ ಮಾಡಿಕೊಳ್ಳಲು ಸಾಕಷ್ಟು ಕಸರತ್ತನ್ನು ಮಾಡುವಿರಿ. ಮನೋವೇಗವನ್ನು ಹೊಂದಿರುವ ಆಂಜನೇಯ ಸ್ಮರಣೆಯಿಂದ ನಿಮ್ಮ ಕಾರ್ಯ ಕೈಗೂಡುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಕಲಿತ ವಿದ್ಯೆಯು ಯಾವಾಗಲೂ ನಶಿಸುವುದಿಲ್ಲ. ಆದರೆ ಕಾಲಕಾಲಕ್ಕೆ ಅದನ್ನು ಸಾಣೆ ಹಿಡಿಯಬೇಕು. ಉಪಯೋಗಿಸದೆ ಇದ್ದು ಚೂಪಾದ ಚೂರಿಯು ಮೊಂಡು ಆಗುವ ಸಾಧ್ಯತೆ ಇರುತ್ತದೆ. ಇದರಿಂದ ನಿತ್ಯ ಬದುಕಿನ ಸತ್ಯದರ್ಶನವಾಗುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ‘ಅವಸರವು ಅವಘಡಕ್ಕೆ ಮೂಲ’ ಎನ್ನುವಂತೆ ನೀವು ಮಾಡುವ ಕೆಲಸ ಕಾರ್ಯದಲ್ಲಿ ಅವಸರ ಬೇಡ. ತಾಳ್ಮೆಯಿಂದ ವ್ಯವಹರಿಸಿ. ಸಂಗಾತಿಯ ಸಲಹೆ ಸ್ವೀಕರಿಸಿ. ಮುದ್ದು ಮಗುವಿನ ಮಾತು ನಿಮಗೆ ಸಹಾಯ ನೀಡುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಯಾವುದೇ ಕಾರ್ಯವು ರಾತ್ರಿಬೆಳಗಾಗುವುದರೊಳಗೆ ಪೂರ್ಣಗೊಳ್ಳುವುದಿಲ್ಲ. ಎಲ್ಲದಕ್ಕೂ ಒಂದು ಕಾಲಮಿತಿ ಇರುತ್ತದೆ. ನಿಧಾನವಾದರೂ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುದು. ದೇವರಲ್ಲಿ ವಿಶ್ವಾಸವಿಡಿ. ಆತನು ನಿಮಗೆ ಸೂಕ್ತ ಮಾರ್ಗದರ್ಶನ ನೀಡುವನು.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ತೆರೆಮರೆಯ ಕಾರ್ಯಗಳು ಫೋಟೋಗ್ರಫಿ ರಂಗದಲ್ಲಿರುವವರಿಗೆ ಅಲ್ಪ ಹಿನ್ನಡೆ ಉಂಟಾಗುವ ಸಾಧ್ಯತೆ ಇರುತ್ತದೆ. ದುರ್ಗಾಮಾತೆಯನ್ನು ಮನಸಾ ಭಜಿಸಿ. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಮನೆಯ ಸದಸ್ಯರೊಟ್ಟಿಗೆ ಸೌಹಾರ್ದತೆ ಬೆಳೆಸಿಕೊಳ್ಳಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಯಾವ ಕೆಲಸ ಮಾಡಲು ಹೋದರೂ ಅದಕ್ಕೆ ನೂರೆಂಟು ವಿಘ್ನಗಳು. ಹಾಗಾಗಿ ನಿತ್ಯದ ಜೀವನ ನಡೆಸುವುದಾದರೂ ಹೇಗೆ ಎಂಬ ಚಿಂತೆ ನಿಮ್ಮನ್ನು ಕಾಡುವುದು. ಆದರೆ ಕುಲದೇವರ ಅನುಗ್ರಹದಿಂದ ನಿಮ್ಮ ಬಾಳಲ್ಲಿ ಬೆಳಕಿನ ಕಿರಣ ಮೂಡುವುದು.

ಕುಂಭ:

ದಿನ ಭವಿಷ್ಯ

ಕುಂಭ:- ಕೆಲಸದ ಸ್ಥಳದಲ್ಲಿ ಒತ್ತಡ ಇದ್ದರೂ ಕೆಲ ಪರಿಣಾಮಕಾರಿ ಹಂತಕ್ಕೆ ಏರುವ ಮುನ್ಸೂಚನೆಗಳು ನಿಮಗೆ ಗೋಚರಿಸುವುದು. ನಿಮ್ಮ ಕುಟುಂಬದ ಇಷ್ಟದೇವತೆಯನ್ನು ಭೇಟಿ ಮಾಡಿ. ಚಿಕ್ಕ ಮಕ್ಕಳೊಂದಿಗೆ ಸಂಜೆ ಸಂತೋಷವಾಗಿ ಕಳೆಯುವಿರಿ.

ಮೀನ:

ದಿನ ಭವಿಷ್ಯ

ಮೀನ:- ನಿಮ್ಮ ಮಾತುಗಳು ಇತರರು ಕೇಳುತ್ತಿಲ್ಲ ಅಥವಾ ನಿಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುವುದು. ಅದಕ್ಕಾಗಿ ಚಿಂತಿಸುವ ಅವಶ್ಯಕತೆಯಿಲ್ಲ. ನಿಮ್ಮನ್ನು ನೀವು ಅರಿತುಕೊಳ್ಳಲು ಶುಭ ದಿನವಾಗಿದೆ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ-ಭವಿಷ್ಯ: 22 ಫೆಬ್ರವರಿ, 2019!!