ದಿನ ಭವಿಷ್ಯ: 22 ಜುಲೈ, 2018!!

0
371

ದಿನ ಭವಿಷ್ಯ: 22 ಜುಲೈ, 2018!!

Astrology in kannada | kannada news

ಮೇಷ:

ಮನಸ್ತಾಪಗಳಿಗೆ ಒಳಗಾಗದಿರಿ. ಶಾಂತ ಮನಸ್ಸಿನಿಂದ ಕಾರ್ಯದಲ್ಲಿ ತೊಡಗಿ. ನೀವು ಹೊಣೆಗಾರಿಕೆಯನ್ನು ಅರಿತು ಕೆಲಸ ಮಾಡುವುದರಿಂದ ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಮಾಡುವಿರಿ. ಹಣವೂ ಕೀರ್ತಿಯನ್ನು ಹಿಂಬಾಲಿಸಿ ಬರುವುದು.

ವೃಷಭ:

ನಿಮ್ಮ ನೆರೆಹೊರೆಯವರು ನೀವು ಅವರಿಗೆ ಮಾಡಿದ ಅಲ್ಪ ಸಹಾಯವನ್ನೇ ನೆನೆದು ನಿಮ್ಮನ್ನು ಕೊಂಡಾಡುವರು. ಇದರಿಂದ ನಿಮಗೂ ಸಂತೋಷವಾಗುವುದು. ಮಕ್ಕಳ ಪ್ರಗತಿ ಉತ್ತಮವಾಗಿರುತ್ತದೆ.

ಮಿಥುನ:

ಗಹನವಾದ ಚರ್ಚೆಯು ವ್ಯಾಟ್ಸ್‌ಆ್ಯಪ್‌ನಲ್ಲಿ ಬರುವುದು. ಇದಕ್ಕೆ ಪ್ರತಿಕ್ರಿಯಿಸದೆ ಅವರ ವಿಚಾರಧಾರೆಗಳನ್ನು ಮೆಲುಕು ಹಾಕಿ. ಜಗತ್ತು ಯಾವ ರೀತಿಯಲ್ಲಿ ಚಿಂತಿಸುತ್ತದೆ ಎಂದು ತಿಳಿದು ಮನಸ್ಸು ಖಿನ್ನತೆ ಅನುಭವಿಸುವುದು.

Also read: ಮದುವೆಗೆ ಜಾತಕ ಪರೀಶಲನೆ ಎಷ್ಟು ಮುಖ್ಯ ಹಾಗೂ ಯಾವ ವಿಚಾರಗಳು ಸಂಬಂಧವನ್ನು ಗಟ್ಟಿ ಗೊಳಿಸುತ್ತವೆ ಅಂತ ತಿಳ್ಕೊಳ್ಳಿ..

ಕಟಕ:

ಮನೆಯ ಶುಭ ಸಮಾರಂಭಕ್ಕೆ ಬಿಡುವಿಲ್ಲದ ಓಡಾಟದಿಂದ ಈ ದಿನ ದೈಹಿಕವಾಗಿ ಸ್ವಲ್ಪ ಸುಸ್ತು ಅನುಭವಿಸುವಿರಿ. ಮಧ್ಯಾಹ್ನದ ನಂತರ ದೇಹಕ್ಕೆ ಮತ್ತು ಮನಸ್ಸಿಗೆ ವಿಶ್ರಾಂತಿ ಕೊಟ್ಟು ಸುಖ ನಿದ್ದೆ ಮಾಡಿ.

ಸಿಂಹ:

ತುಂಬಾ ದಿನಗಳಿಂದ ಆಗಬೇಕಾಗಿದ್ದ ಸರ್ಕಾರಿ ಕೆಲಸಗಳು ಇಂದು ಕೈಗೂಡಬಹುದು. ಬಾಕಿ ಸಾಲಗಳು ತೀರುತ್ತವೆ. ಮಗನ ಮದುವೆಯ ವಿಷಯದ ಬಗ್ಗೆ ಶುಭ ಸೂಚನೆ ಬರಲಿದೆ.

ಕನ್ಯಾ:

ಹಿರಿಯರ ಆರೋಗ್ಯದತ್ತ ಗಮನವಿರಲಿ. ಬಂಧು ಬಾಂಧವರೊಂದಿಗೆ ಹಿತಮಿತವಾಗಿ ಮಾತನಾಡಿ. ದೂರದೃಷ್ಟಿಯಿಂದ ಹಮ್ಮಿಕೊಳ್ಳುವ ಕೆಲಸಗಳಿಗೆ ಸ್ನೇಹಿತರಿಂದ ಬೆಂಬಲ ವ್ಯಕ್ತವಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

Also read: ಈ ಎರಡು ರಾಶಿಯವರ ಪ್ರೇಮ ಜೀವನ ತುಂಬಾ ಸ್ಪೆಷಲ್ ಅಂತೆ, ನೀವು ಇದೆ ರಾಶಿಯವರ ನೋಡಿಕೊಳ್ಳಿ…

ತುಲಾ:

ನಿಮ್ಮ ಹಳೆಯ ಸ್ನೇಹಿತನ ಆಗಮನದಿಂದ ನಿಮ್ಮ ಮನಸ್ಸಿಗೆ ಬಲ ಬರುವುದು. ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಪತ್ರ ನೋಡಿ ಮಕ್ಕಳ ಬಗ್ಗೆ ಹೆಮ್ಮೆ ಎನಿಸುವುದು. ಇದನ್ನು ಸ್ನೇಹಿತರೊಂದಿಗೆ ಹಂಚಿಕೊಂಡು ಸಂತಸ ಪಡುವಿರಿ.

ವೃಶ್ಚಿಕ:

ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ಇರಿ. ಷೇರು ಮಾರುಕಟ್ಟೆಯಲ್ಲಿ ಹೆಚ್ಚು ಹಣ ತೊಡಗಿಸುವುದು ಸೂಕ್ತವಲ್ಲ. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ಹಸುವಿಗೆ ಅಕ್ಕಿ ಮತ್ತು ಬೆಲ್ಲ ತಿನ್ನಿಸಿ.

ಧನಸ್ಸು:

ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಒಳ್ಳೆಯ ಸಮಯ. ವಿದ್ಯಾರ್ಥಿಗಳು ಬರುವ ಪರೀಕ್ಷೆಗಾಗಿ ಹೆಚ್ಚು ತಯಾರು ನಡೆಸಬೇಕು. ಇಂದು ಮಾಡುವ ಅಲ್ಪ ಶ್ರಮಕ್ಕೆ ವಿಶೇಷ ಪ್ರತಿಫಲ ದೊರೆಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

Also read: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನದ ಆಭರಣಗಳನ್ನು ಹೇಗೆ ಧರಿಸಬೇಕೆಂದು ನಿಮಗೆ ತಿಳಿದಿದೆಯೇ..?

ಮಕರ:

ದಿನಸಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಿದೆ. ಇಂದು ನಿಮಗೆ ಶುಭ ದಿನ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಕೊಟ್ಟು ಅವರನ್ನು ಸರಿ ದಾರಿಗೆ ತರುವುದು ಉತ್ತಮ.

ಕುಂಭ:

ದೀರ್ಘಕಾಲದ ಬದ್ಧತೆಗಳಿಗೆ ಕೈ ಹಾಕುವ ಮುನ್ನ ಯೋಚಿಸಿ. ತೈಲ ವಹಿವಾಟಿನಲ್ಲಿ ಆದಾಯ ಹೆಚ್ಚಾಗುವುದು. ಕೃಷಿ ಕಾರ್ಮಿಕರಿಗೆ, ಔಷಧಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಿದೆ.

ಮೀನ:

Meena1

ಯಾರದೋ ಮಾತುಗಳಿಂದ ಸ್ಥಿಮಿತ ಕಳೆದುಕೊಳ್ಳದಿರಿ. ಸಮಚಿತ್ತದಿಂದ ವರ್ತಿಸಿ, ಸಂಭ್ರಮದಿಂದಿರಿ. ಮನಸ್ಸಿನ ಬೇಸರ ಕಳೆಯಲು ಪಾರ್ಕ್‌ ಇಲ್ಲವೆ ದೇವಸ್ಥಾನಗಳಿಗೆ ಭೇಟಿ ಕೊಡಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!

ದಿನ ಭವಿಷ್ಯ: 22 ಜುಲೈ, 2018!!