ದಿನ ಭವಿಷ್ಯ: 22 ಜುಲೈ, 2019!!

0
206

Astrology in kannada | kannada news ದಿನ ಭವಿಷ್ಯ: 22 ಜುಲೈ, 2019!!

ದಿನ ಭವಿಷ್ಯ: 22 ಜುಲೈ, 2019!!

ಮೇಷ:

ದಿನ ಭವಿಷ್ಯ

ಮೇಷ:- ಒಳ್ಳೆಯ ಕೆಲಸವೊಂದನ್ನು ಮಾಡಲು, ನಿಮ್ಮನ್ನು ಆದರಿಸುವ ಜನರೇ ವಿಶೇಷ ಸ್ಫೂರ್ತಿ ಆಗಲಿದ್ದಾರೆ. ಹಾಗಾಗಿ ಸೋಲಿನ ಮನೋಭೂಮಿಕೆಯಿಂದ ಹೊರಬನ್ನಿ. ಜಗತ್ತು ವಿಶಾಲವಾಗಿದ್ದು ನಿಮ್ಮಲ್ಲಿನ ಒಳ್ಳೆಯತನಕ್ಕೆ ಗೌರವ ಸಿಗಲಿದೆ.

ವೃಷಭ:

ದಿನ ಭವಿಷ್ಯ

ವೃಷಭ:- ಹೊಸದಾದ ಯೋಜನೆಗಳನ್ನು ಹಮ್ಮಿಕೊಳ್ಳುವಿರಿ. ಅದರಿಂದ ಅದ್ಭುತ ಎಂದೆನಿಸುವ ಅನೇಕ ಕಾರ್ಯಗಳನ್ನು ಮಾಡುವಿರಿ. ಮನೆಯಲ್ಲಿನ ಏಕತಾನತೆಯಿಂದ ಹೊರಬಂದು ಸಮಾಜದ ಜನರೊಂದಿಗೆ ಬೆರೆಯಿರಿ.

ಮಿಥುನ:

ದಿನ ಭವಿಷ್ಯ

ಮಿಥುನ:- ಯಾರನ್ನು ಅಲಕ್ಷಿಸಲು ಹೋಗಬೇಡಿ. ಸಮಯ ಬಂದಾಗ ಒಂದು ಹುಲ್ಲುಕಡ್ಡಿಯ ನೆರವೂ ಬೇಕಾಗುತ್ತದೆ. ನಿಮ್ಮನ್ನು ಆದರಿಸುವ ಜನರೊಂದಿಗೆ ನಿಮ್ಮನ್ನು ವಿರೋಧಿಸುವವರ ಸ್ನೇಹವನ್ನು ಪಡೆದಲ್ಲಿ ಅನುಕೂಲವಾಗುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಪರರ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ತೋರಿ ಅವರ ವ್ಯವಹಾರದಲ್ಲಿ ಮೂಗು ತೂರಿಸದಿರಿ. ನಿಮ್ಮಲ್ಲಿ ಸಲಹೆ ಕೇಳಿದರೆ ಮಾತ್ರ ಅವರಿಗೆ ಉತ್ತರಿಸಿ. ಇಲ್ಲವೆ ಮಧ್ಯವರ್ತಿಗಳಾಗಿ ಸಹಾಯ ಮಾಡಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಗುರು, ಹಿರಿಯರ ಬಳಿ ತಗ್ಗಿ ಬಗ್ಗಿ ನಡೆಯುವುದು ಒಳ್ಳೆಯದು. ಇದರಿಂದ ಜೀವನದ ನಿಗೂಢ ರಹಸ್ಯಗಳನ್ನು ತಿಳಿಯಲು ಸಹಕಾರಿಯಾಗುವುದು ಮತ್ತು ನಿಮ್ಮ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುತ್ತವೆ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಯಾವುದೇ ಪರಿಸ್ಥಿತಿಯಲ್ಲಿಯೂ ಸಿಟ್ಟಿನ ಕೈಲಿ ಬುದ್ಧಿ ಕೊಡದಿರಿ. ಇದರಿಂದ ಹೆಚ್ಚಿನ ತೊಂದರೆ ನಿಮಗಾಗುವುದು. ನಿಮ್ಮ ತಾಳ್ಮೆ ಪರೀಕ್ಷಿಸುವ ಇಲ್ಲವೆ ನೀವು ಸಿಟ್ಟುಗೊಳ್ಳುವಂತೆ ಮಾಡುವ ಜನರು ನಿಮ್ಮ ಸುತ್ತ ಇರುವರು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಹಳೆಯ ಕಡತಗಳ ನಾಶಕ್ಕೆ ಮುಂದಾಗದಿರಿ. ಆ ಕಡತಗಳಲ್ಲಿ ಕೆಲವು ಮಹತ್ತರ ಪತ್ರಗಳು ಇರುವ ಸಾಧ್ಯತೆ ಇರುತ್ತವೆ. ಅವು ಒಂದು ವೇಳೆ ಅಚಾತುರ್ಯ ದಿಂದ ನಾಶವಾದಲ್ಲಿ ಜೀವನ ಪರ್ಯಂತ ಪಶ್ಚಾತ್ತಾಪ ಪಡಬೇಕಾಗುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ದುಂದುವೆಚ್ಚ ಮಾಡುವ ಹವ್ಯಾಸ ನಿಮ್ಮದಲ್ಲ. ಆದರೆ ಇತ್ತೀಚಿನ ದಿಢೀರ್‌ ಹಣದ ಸಂಚಲನದಿಂದಾಗಿ ಅಧಿಕ ಖರ್ಚು ಮಾಡುವ ಮನಸ್ಸು ಬರಬಹುದು. ಆದರೆ ಖರ್ಚು ವೆಚ್ಚಗಳ ಕಡೆ ಕಡಿವಾಣ ಹಾಕುವುದು ಒಳ್ಳೆಯದು.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಯಾರು ರಾಜ್ಯವಾಳಿದರೇನು? ರಾಯನಿಗೆ ರಾಜ್ಯಭಾರ ಸಿಕ್ಕರೆ ಮನೆಯಲ್ಲಿ ರಾಗಿ ಬೀಸುವುದು ತಪ್ಪಲ್ಲ. ಹಾಗಾಗಿ ನಿಮ್ಮ ರಟ್ಟೆ ಬಲದ ಮೇಲೆ ವಿಶ್ವಾಸವಿಟ್ಟು ದುಡಿಯಿರಿ ಒಳಿತಾಗುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಹೊಸಬರ ಪರಿಚಯ ಸಾಧ್ಯತೆ ಇದೆ. ಅವರೊಂದಿಗೆ ನಗುಮುಖದಿಂದ ವ್ಯವಹಾರ ಮಾಡಿ. ಇದರಿಂದ ಧನಲಾಭದ ಕುರಿತಾದ ಸರಳ ಮಾರ್ಗಗಳು ಗೋಚರಿಸುತ್ತವೆ. ಅಗತ್ಯಕ್ಕೆ ತಕ್ಕಷ್ಟು ಹಣ ಡ್ರಾ ಮಾಡುವುದು ಒಳ್ಳೆಯದು.

ಕುಂಭ:

ದಿನ ಭವಿಷ್ಯ

ಕುಂಭ:- ವಿದೇಶ ಪ್ರವಾಸ ಗಂಟು ಬೀಳುವಂಥ ಅವಕಾಶಗಳು ಬರುವ ಸಾಧ್ಯತೆ ಇದೆ. ಆದರೆ ನೀವು ಈ ಬಗ್ಗೆ ಚಿಂತಿಸದೆ ಇರುವುದರಿಂದ ವಿದೇಶ ಪ್ರವಾಸ ಮಾಡುವ ಯೋಗ ತಪ್ಪಿಹೋಗುವ ಸಾಧ್ಯತೆ ಇರುತ್ತದೆ.

ಮೀನ:

ದಿನ ಭವಿಷ್ಯ

ಮೀನ:- ಮನ ಬಿಚ್ಚಿ ಮಾತನಾಡುವ ನಿಮ್ಮ ಶಕ್ತಿಯೇ ಕೆಲವೊಮ್ಮೆ ದೌರ್ಬಲ್ಯ ಎನಿಸುವುದು. ಹಾಗಾಗಿ ಎಲ್ಲರೊಡನೆ ಎಲ್ಲಾ ವಿಷಯಗಳನ್ನು ಚರ್ಚಿಸದಿರಿ. ಹಣಕಾಸಿನ ಮುಗ್ಗಟ್ಟು ಬಾಧಿಸುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 22 ಜುಲೈ, 2019!!