ದಿನ ಭವಿಷ್ಯ: 22 ನವೆಂಬರ್, 2018!!

0
663
ದಿನ ಭವಿಷ್ಯ

Astrology in kannada | kannada news ದಿನ-ಭವಿಷ್ಯ: 22 ನವೆಂಬರ್, 2018!!

ದಿನ-ಭವಿಷ್ಯ: 22 ನವೆಂಬರ್, 2018!!

ಮೇಷ:

ದಿನ ಭವಿಷ್ಯ

ಮೇಷ:- ‘ಶ್ರಮ ಮೇವ ಜಯತೇ’ ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಫಲಾಫಲಗಳು ದೊರೆಯುವವು. ಮಾತು ಎಷ್ಟೇ ಸಹೃದಯತೆಯಿಂದ ಇದ್ದರೂ ಕೇಳಿಸಿಕೊಳ್ಳುವ ಸಹೃದಯರು ಸಿಗುವುದಿಲ್ಲ. ಹಾಗಾಗಿ ಯಾರಿಗೂ ಉಪದೇಶ ನೀಡಲು ಮುಂದಾಗದಿರಿ.

ವೃಷಭ:

ದಿನ ಭವಿಷ್ಯ

ವೃಷಭ:- ನಿಮ್ಮ ಬಗೆಗಿನ ಗೌರವ ಆದರಗಳು ಜನರಲ್ಲಿ ಅಪಾರವಾಗಿವೆ. ಅವರು ಅವನ್ನು ಬಹಿರಂಗವಾಗಿಯೂ ಪ್ರಕಟಗೊಳಿಸುವರು. ಇದರಿಂದ ನಿಮಗೆ ಆತ್ಮತೃಪ್ತಿಯೂ ಮತ್ತು ಧನ್ಯತಾಭಾವವೂ ಮೂಡುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ದೂರದ ಊರಿನಿಂದ ಅಥವಾ ವಿದೇಶದಿಂದ ಬಂದಂತಹ ಸ್ನೇಹಿತರು, ಬಂಧುಗಳು ನಿಮ್ಮ ಜತೆಯಲ್ಲಿ ವ್ಯಾಜ್ಯ ಮಾಡುವ ಸಾಧ್ಯತೆ ಇರುವುದು. ಆದರೆ ಗುರುವಿನ ಅನುಗ್ರಹ ಇರುವುದರಿಂದ ನಿಮ್ಮ ನಡೆ, ನುಡಿಯು ಸತ್ಯವಾಗಿದೆ ಎಂದು ಅರಿತುಕೊಳ್ಳುವರು.

Also read: ಶಕ್ತಿ ದೇವಾ ಹನುಮಂತನಿಗೆ ಪೂಜಿಸುವ ವಿಧಾನ

ಕಟಕ:

ದಿನ ಭವಿಷ್ಯ

ಕಟಕ:- ಮನೆ, ಮಠ ಅಥವಾ ಸಂಘ ಪರಿವಾರಗಳಲ್ಲಿ ನಿಮ್ಮ ಮಾತೇ ಅಂತಿಮವಾಗಬೇಕೆಂಬ ಹುಚ್ಚು ಆಲೋಚನೆಗೆ ತಡೆಯೊಡ್ಡಿ. ಎಲ್ಲಾ ಕಾರ್ಯವೂ ನನ್ನಿಂದಲೇ ಆಯಿತು ಎನ್ನುವುದಕ್ಕಿಂತ ನಿಮ್ಮ ಸಹಕಾರದಿಂದ ಆಯಿತು ಎನ್ನಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಮಕ್ಕಳ ಬಗೆಗೆ ಎಷ್ಟೇ ಚಿಂತಿಸಿದರೂ ಪರಿಹಾರ ಮಾರ್ಗ ಸಿಗುತ್ತಿಲ್ಲ ಎಂಬ ಚಿಂತೆ ನಿಮ್ಮನ್ನು ಕಾಡುವುದು. ಆದರೆ ಉನ್ನತ ಸ್ಥಾನದಲ್ಲಿರುವ ನೀವು ಕೆಳನಿಂತು ಸಾಮಾನ್ಯ ಜನರಂತೆ ಚಿಂತಿಸಿ ಆಗ ನಿಮ್ಮ ಕಾರ್ಯಗಳು ಸುಲಲಿತವಾಗುವವು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಅಂತರಂಗ ಮತ್ತು ಬಹಿರಂಗಗಳನ್ನು ಸಮತೋಲನದಿಂದ ಸಂಭಾಳಿಸಿ. ಹಣಕಾಸಿನ ವಿಚಾರದಲ್ಲಿ ಲೆಕ್ಕ ಪರಿಶೋಧಕರ ಸಲಹೆ ಪಡೆಯಿರಿ. ಆಪತ್ತು ಎದುರಾಗುವ ಮುನ್ನ ಅದರ ಪರಿಹಾರ ಸೂತ್ರಗಳನ್ನು ಕಂಡುಕೊಳ್ಳುವುದು ಒಳ್ಳೆಯದು.

Also read: ಕೈಯಲ್ಲಿ ಭೂತ, ಭವಿಷ್ಯ, ವರ್ತಮಾನ ಅಡಗಿದೆ ಎಂಬುದು ನಿಮಗೆ ಗೊತ್ತೇ?

ತುಲಾ:

ದಿನ ಭವಿಷ್ಯ

ತುಲಾ:- ಕಬ್ಬು ಸಿಹಿ ಇದೆ ಎಂದು ಸಿಪ್ಪೆಯ ಸಹಿತ ಅಗೆಯಲು ಆಗುವುದಿಲ್ಲ. ಅಂತೆಯೆ ಕೆಲವು ವಿಚಾರಗಳ ಬಗ್ಗೆ ಮೂಲಕ್ಕೆ ಕೈಹಾಕಲು ಮುಂದಾಗದಿರಿ. ಇದರಿಂದ ನೋವಿಗೆ ದಾರಿ ಆಗುವುದು. ಅರಿತು ಆಳಿದರೆ ಆರು ವರ್ಷ ಮರೆತು ಬಾಳಿದರೆ ಮೂರು ವರ್ಷ ಎಂಬುದು ನೆನಪಿರಲಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಕ್ರಮವರಿತು ಕೆಲಸ ಮಾಡುವ ನೀವು ಹಂತ ಹಂತವಾಗಿ ಬೆಳೆದು ಎತ್ತರ ಸ್ಥಾನದಲ್ಲಿರುವಿರಿ. ಹಾಗಾಗಿ ನಿಮ್ಮ ಬಳಿ ಸಹಾಯ ಸಹಕಾರ ಕೇಳಲು ಜನರು ಬರುವರು. ಅವರನ್ನು ತಿರಸ್ಕಾರದಿಂದ ಕಾಣದಿರಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಹಳೆಯ ಅನಾವಶ್ಯಕವಾದ ಕಡತಗಳನ್ನು ನಾಶ ಮಾಡುವ ಸಂದರ್ಭದಲ್ಲಿ ಬೇಕಾದ ಕಡತಗಳನ್ನು ನಾಶಗೊಳಿಸದಿರಿ. ಆದಷ್ಟು ಕಬ್ಬಿಣಕ್ಕೆ ಸಂಬಂಧಪಟ್ಟ ವಸ್ತುಗಳ ವಿಲೇವಾರಿಯಲ್ಲಿ ಜಾಗ್ರತೆ ಇರಲಿ. ಇಲ್ಲವೆ ಅದಕ್ಕೆ ಸಂಬಂಧಪಟ್ಟಂತೆ ಸಮಸ್ಯೆ ಬರಬಹುದು.

Also read: ನಿಮ್ಮ ಕೈ ಬೆರಳುಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ, ಹೇಗೆ ಅಂತೀರಾ ಮುಂದೆ ಓದಿ…

ಮಕರ:

ದಿನ ಭವಿಷ್ಯ

ಮಕರ:- ಅನವಶ್ಯಕ ವಿಚಾರಗಳಲ್ಲಿ ಹಣ ಸುರಿಯಬೇಡಿ. ಅರ್ಥಾತ್‌ ಯಾರಾದರೂ ನೌಕರಿ ಕೊಡಿಸುತ್ತೇನೆಂದು ಹೇಳಿ ಹಣ ಕೇಳುವ ಸಂದರ್ಭವಿರುತ್ತದೆ. ಈ ಬಗ್ಗೆ ಸೂಕ್ತ ಮಧ್ಯವರ್ತಿಯ ಮೂಲಕ ಮಾತುಕತೆ ನಡೆಸಿ.

ಕುಂಭ:

ದಿನ ಭವಿಷ್ಯ

ಕುಂಭ:- ವಿರಸವೇ ಮರಣ ಸರಸವೇ ಜೀವನ ಎನ್ನುವಂತೆ ಎಲ್ಲರೊಂದಿಗೆ ವಿನೋದವಾಗಿ ಸ್ನೇಹಪೂರ್ಣವಾಗಿ ವರ್ತಿಸುವ ಗುಣವೇ ನಿಮ್ಮನ್ನು ಅತ್ಯುನ್ನತ ಸ್ಥಾನಕ್ಕ ಕೊಂಡೊಯ್ಯುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿರುವುದು.

ಮೀನ:

ದಿನ ಭವಿಷ್ಯ

ಮೀನ:- ನಿಮ್ಮ ಕುರಿತಾಗಿ ಇಲ್ಲಸಲ್ಲದ ಹಲವಾರು ಅಪಸ್ವರಗಳು ಬಂದರೂ ಆ ಬಗ್ಗೆ ಕಿವಿಗೊಡದೆ ಮಾನಸಿಕವಾಗಿ ಧೈರ್ಯದಿಂದ ಇರಿ. ಇದರಿಂದ ನಿಮಗೆ ಅನುಕೂಲವಾಗುವುದು. ಮನೆಯ ಸದಸ್ಯರು ನಿಮಗೆ ಸಹಕಾರಿಯಾಗಿ ನಿಲ್ಲುವರು.

Also read: ಈ ವಾಸ್ತು tipsಗಳನ್ನು ಫಾಲೋ ಮಾಡುದ್ರೆ ಕೋಟಿ ಕೋಟಿ ಹಣ ಗಳಿಸಬಹುದು…

ದಿನ-ಭವಿಷ್ಯ: 22 ನವೆಂಬರ್, 2018!!