ದಿನ ಭವಿಷ್ಯ: 23 ಜೂನ್, 2018!!

0
546

Astrology in kannada | kannada news

ದಿನ ಭವಿಷ್ಯ: 23 ಜೂನ್, 2018!

ಮೇಷ:

ಕೈಗೆ ಎಟುಕದೆ ಇಷ್ಟು ದಿನ ಕಾಡುತ್ತಿದ್ದ ಕಾರ್ಯವೊಂದು ದಿಢೀರನೆ ನಿಮ್ಮ ಪ್ರಯತ್ನದಿಂದ ಸಿದ್ಧಿಸುವುದು. ರಿಯಲ್‌ ಎಸ್ಟೇಟ್‌ ದಂಧೆಗಳಲ್ಲಿ ಹಣ ಹೂಡುವ ಮುನ್ನ ಎರಡು ಬಾರಿ ಚಿಂತಿಸಿ. ದುರ್ಗಾ ಸ್ತೋತ್ರವನ್ನು ಪಠಿಸಿ.

ವೃಷಭ:

ಬಾಳಸಂಗಾತಿಯೊಡನೆ ಸ್ನೇಹದಿಂದ ವರ್ತಿಸಿದಲ್ಲಿ ಆಕೆಯು ಕೂಡಾ ಪ್ರಸನ್ನವದನಳಾಗಿ ನಿಮ್ಮ ಕೆಲಸ ಕಾರ್ಯಕ್ಕೆ ಬೆಂಬಲ ಸೂಚಿಸುವರು. ಆರೋಗ್ಯದ ಕಡೆ ಗಮನ ಇರಲಿ. ಆಂಜನೇಯ ಸ್ತೋತ್ರ ಪಠಿಸಿ.

ಮಿಥುನ:

ಹಣಕಾಸು ವ್ಯವಹಾರ ಅಥವಾ ಲೇವಾದೇವಿ ವ್ಯವಹಾರದಲ್ಲಿ ಸೂಕ್ತ ದಾಖಲೆ ಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸಹಿ ಮಾಡಿ. ಇಲ್ಲದೆ ಇದ್ದಲ್ಲಿ ನೀವು ಅನಗತ್ಯ ತೊಂದರೆಗೆ ಸಿಲುಕಿಕೊಳ್ಳುವಿರಿ.

Also read: ಮದುವೆಗೆ ಜಾತಕ ಪರೀಶಲನೆ ಎಷ್ಟು ಮುಖ್ಯ ಹಾಗೂ ಯಾವ ವಿಚಾರಗಳು ಸಂಬಂಧವನ್ನು ಗಟ್ಟಿ ಗೊಳಿಸುತ್ತವೆ ಅಂತ ತಿಳ್ಕೊಳ್ಳಿ..

ಕಟಕ:

ಚರರಾಶಿಯವರಾದ ನೀವು ಸಂಚರಿಸುವ ಮೂಲಕ ನಿಮ್ಮ ವಿಚಾರಧಾರೆಗಳನ್ನು ರೈತಾಪಿ ಜನರಿಗೆ ತಿಳಿಸುವಿರಿ. ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣುವರು. ಆರ್ಥಿಕ ಸ್ಥಿತಿ ಉತ್ತಮವಾಗಿದೆ.

ಸಿಂಹ:

ಮನೆಯಲ್ಲಿ ಅತಿಯಾದ ಬಿಗುವನ್ನುಂಟು ಮಾಡಿ. ಮಕ್ಕಳು ನಿಮ್ಮ ಭಾವನೆಗಳಿಗೆ ಸ್ಪಂದಿಸದೆ ಇರುವುದು ನಿಮಗೆ ಬೇಸರವನ್ನುಂಟು ಮಾಡುತ್ತದೆ. ಕುಲದೇವತಾ ಸ್ಮರಣೆ ಮಾಡಿ.

ಕನ್ಯಾ:

ಭೂಮಿ ಸಂಬಂಧವಾದ ಕಾಗದ ಪತ್ರಗಳು ಕೈಸೇರುವ ಸಾಧ್ಯತೆ ಇರುತ್ತದೆ ಮತ್ತು ಕೆಲವು ವಿಚಾರಗಳಲ್ಲಿ ಹಿರಿಯರ ಮಧ್ಯಸ್ಥಿಕೆಯಿಂದ ಕೆಲಸವು ಸುಗಮವಾಗಿ ಆಗುತ್ತದೆ. ಹಣಕಾಸಿನ ಚಿಂತೆ ಇರುವುದಿಲ್ಲ.

Also read: ಈ ಎರಡು ರಾಶಿಯವರ ಪ್ರೇಮ ಜೀವನ ತುಂಬಾ ಸ್ಪೆಷಲ್ ಅಂತೆ, ನೀವು ಇದೆ ರಾಶಿಯವರ ನೋಡಿಕೊಳ್ಳಿ…

ತುಲಾ:

ವಿವಾದಗಳನ್ನು ದಾಟಿ ಹೊರ ಬಂದಿರುವಿರಿ. ಹಲವು ರೀತಿಯ ಕಾರ್ಯಗಳು ನಿಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಲಿವೆ. ಆಂಜನೇಯನ ಸ್ತೋತ್ರವನ್ನು ಪಠಿಸುವ ಮೂಲಕ ಆನಂದದ ಸಮಯವನ್ನು ಕಳೆಯುವಿರಿ.

ವೃಶ್ಚಿಕ:

ಗುರು ಒಲಿದರೆ ಕೊರಡು ಕೊನರುವುದಯ್ಯಾ ಎಂದರು ಅನುಭಾವಿಗಳು. ಅಂತೆಯೇ ಗುರುಗಳ ದೇವಸ್ಥಾನಕ್ಕೆ ಭೇಟಿ ಕೊಡಿ. ನಿಮ್ಮ ಬಾಳಿನಲ್ಲಿ ಬೆಳಕು ಮೂಡುವುದು. ನಿಮ್ಮ ವ್ಯವಹಾರಕ್ಕೆ ಅನುಕೂಲವಾಗುವಂತೆ ಸಹಾಯ ಸಿಗುವುದು.

ಧನಸ್ಸು:

ವ್ಯಾಪಾರ ವ್ಯವಹಾರದಲ್ಲಿ ಎಚ್ಚರಿಕೆಯಿಂದ ವ್ಯವಹಾರ ಮಾಡಿ. ನಗದು ವ್ಯವಹಾರಕ್ಕೆ ಉತ್ತಮ ದಿನ. ಉದ್ರಿ ವ್ಯವಹಾರಗಳನ್ನು ಆದಷ್ಟು ತಡೆ ಹಿಡಿಯಿರಿ. ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ. ಸಂಜೆ ಬಡವರಿಗೆ ಆಹಾರ ನೀಡಿ.

Also read: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನದ ಆಭರಣಗಳನ್ನು ಹೇಗೆ ಧರಿಸಬೇಕೆಂದು ನಿಮಗೆ ತಿಳಿದಿದೆಯೇ..?

ಮಕರ:

ಖರ್ಚಿನ ದಾರಿಗಳು ಅನೇಕ ರೀತಿಯಲ್ಲಿ ತೆರೆದುಕೊಳ್ಳುವುದು. ಹಾಗಾಗಿ ಕೂಡಿಟ್ಟ ಹಣವು ನೀರಿನಂತೆ ಖರ್ಚಾಗುವುದು. ಅನಗತ್ಯ ವಸ್ತುಗಳ ಖರೀದಿಯನ್ನು ಮಾಡದಿರುವುದು ಕ್ಷೇಮ.

ಕುಂಭ:

ಹಲವು ಅವಕಾಶಗಳ ಮೂಲಕ ವ್ಯಕ್ತಿತ್ವ ಮತ್ತು ವರ್ಚಸ್ಸು ಬೆಳೆಸಿಕೊಳ್ಳುವಿರಿ. ಕುಲದೇವತೆಯ ಆರಾಧನೆಯನ್ನು ತಪ್ಪದೆ ಮಾಡಿ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು.

ಮೀನ:

Meena1

ಮನೋಕಾಮನೆಗಳು ಪೂರ್ಣಗೊಳ್ಳಲು ಹಲವು ಅಡೆತಡೆಗಳನ್ನು ಎದುರಿಸಬೇಕಾಗುವುದು. ಮಕ್ಕಳ ಅಸಹಕಾರವು ನಿಮಗೆ ಮುಜುಗರವನ್ನುಂಟು ಮಾಡುವುದು. ದಕ್ಷಿಣಾಮೂರ್ತಿಯನ್ನು ಧ್ಯಾನಿಸಿ.

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!