ದಿನ ಭವಿಷ್ಯ: 24 ಆಗಸ್ಟ್, 2018!!

0
403
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ: 24 ಆಗಸ್ಟ್, 2018!!

ಮೇಷ:

ದಿನ ಭವಿಷ್ಯ

ಪ್ರಮುಖ ಕೆಲಸ ಕಾರ್ಯಗಳಲ್ಲಿ ಇಂದು ಯಶಸ್ಸು ದೊರೆಯುವುದು. ಜೀವನ ಮತ್ತು ವೃತ್ತಿಯ ಬದುಕಿನಲ್ಲಿ ಬದಲಾವಣೆ ಕಂಡುಬರುವುದು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದರಿಂದ ಹಣಕಾಸಿನ ಚಿಂತೆ ಇಲ್ಲ.

ವೃಷಭ:

ದಿನ ಭವಿಷ್ಯ

ಆಶಾವಾದ ಮತ್ತು ಧನಾತ್ಮಕ ಚಿಂತನೆ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತಗೊಳಿಸುವುದು. ಈ ದಿನ ನಿಮ್ಮ ಮನಸ್ಸಿಗೆ ಒಪ್ಪುವಂತಹ ಶುಭ ವಾರ್ತೆ ಕೇಳುವಿರಿ. ಮಕ್ಕಳ ಅಭ್ಯುದಯವು ನಿಮಗೆ ಹೊಸ ಹುರುಪನ್ನು ತಂದುಕೊಡುವುದು.

ಮಿಥುನ:

ದಿನ ಭವಿಷ್ಯ

ಸರಿ ಕಂಡದ್ದನ್ನು ಧೈರ್ಯವಾಗಿ ಎಲ್ಲರ ಮುಂದೆ ಮಾತನಾಡುವಿರಿ. ಇದರಿಂದ ವಿರೋಧಿಗಳು ಹಿಮ್ಮೆಟ್ಟುವರು. ಆರೋಗ್ಯದ ಕಡೆ ಗಮನ ಕೊಡುವುದು ಒಳಿತು. ಆರ್ಥಿಕ ಸಮಸ್ಯೆಯು ಈದಿನ ಬರಲಾರದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ನೀವು ಹೋಗುತ್ತಿರುವ ದಾರಿ ಸರಿಯಾದುದೇ. ಆದರೆ ನಿಮ್ಮ ಸಂಗಡ ಇತರರನ್ನು ಕರೆದುಕೊಂಡು ಹೋಗಬೇಕೆನ್ನುವ ನಿಮ್ಮ ಜಾಣ್ಮೆ ಮೆಚ್ಚಬೇಕಾದ್ದು. ಈ ಬಗ್ಗೆ ಸಮಾಜದಲ್ಲಿ ಗೌರವಿಸಲ್ಪಡುವಿರಿ. ಹಣಕಾಸು ಉತ್ತಮವಾಗಿರುವುದು.

ಸಿಂಹ:

ದಿನ ಭವಿಷ್ಯ

ಹಣದ ಹರಿವು ಹೆಚ್ಚಾಗಲಿದೆ. ಖರ್ಚು-ವೆಚ್ಚಗಳ ಮೇಲೆ ನಿಗಾ ಇಡಿ. ಕುಟುಂಬದವರ ಅಭಿಪ್ರಾಯಗಳಿಗೆ ಮನ್ನಣೆ ಕೊಡುವುದರಿಂದ ನೀವು ಕಳೆದುಕೊಳ್ಳುವುದು ಏನಿಲ್ಲ. ಇದರಿಂದ ನಿಮಗೆ ಹೆಚ್ಚಿನ ಗೌರವ ಬರುವುದು.

ಕನ್ಯಾ:

ದಿನ ಭವಿಷ್ಯ

ಯಾರೊಂದಿಗೂ ಇಂದು ಅಸಮಾಧಾನ ವ್ಯಕ್ತಪಡಿಸುವುದು ಒಳ್ಳೆಯದಲ್ಲ. ಇನ್ನೊಬ್ಬರ ವ್ಯಾಜ್ಯದಲ್ಲಿ ಮೂಗು ತೂರಿಸದಿರಿ. ವೈಯಕ್ತಿಕ ಕಾರ್ಯ ಕಲಾಪಗಳಲ್ಲಿ ಯಶಸ್ಸು ದೊರೆಯುವುದು. ಮಕ್ಕಳ ಪ್ರಗತಿಯು ಮಾನಸಿಕ ನೆಮ್ಮದಿಯನ್ನುಂಟು ಮಾಡುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ವೃತ್ತಿಪರರಿಗೆ ವಿಶ್ರಾಂತಿ ಲಭಿಸುತ್ತದೆ. ಬಂಧುಮಿತ್ರರಿಂದ ವಿಮರ್ಶೆ ಟೀಕೆಗಳು ಬರುವ ಸಾಧ್ಯತೆ ಇರುವುದು. ಸಹೋದರನಿಂದ ಸಹಾಯ ದೊರೆಯುವುದು. ಪ್ರಯಾಣದಲ್ಲಿ ಎಚ್ಚರ ಅಗತ್ಯ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ವೃಶ್ಚಿಕ:

ದಿನ ಭವಿಷ್ಯ

ಸರಿ ಕಂಡಿದ್ದನ್ನು ಧೈರ್ಯವಾಗಿ ಮಾತನಾಡಿ, ದೈವ ಬೆಂಬಲ ಇದೆ. ನಿಮ್ಮ ನೇರ ನಿಷ್ಠುರ ನುಡಿಯಿಂದಾಗಿ ಕೆಲವೇ ಉತ್ತಮ ಸ್ನೇಹಿತರನ್ನು ಗುರುತು ಮಾಡಿಕೊಳ್ಳುವಿರಿ. ಬಾಳಸಂಗಾತಿಯ ಬೆಂಬಲವಿರುತ್ತದೆ.

ಧನಸ್ಸು:

ದಿನ ಭವಿಷ್ಯ

ಆಶಾವಾದವೇ ಜೀವನ. ನಿರಾಶಾವಾದವೇ ಮರಣ ಎನ್ನುವಂತೆ ಈದಿನ ಆಶಾವಾದದಿಂದ ಇರುವ ದಿನ. ನಿಮ್ಮ ಎಲ್ಲ ಧನಾತ್ಮಕ ಕಾರ್ಯಗಳು ಕೈಗೂಡುವುದು. ಈದಿನ ಶುಭ ವಾರ್ತೆಯನ್ನು ಕೇಳುವಿರಿ. ಅದರಿಂದ ಸಂತಸವಾಗುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ನಿಮ್ಮ ಕಾರ್ಯ ಯೋಜನೆಗಳು ನೀವು ಬಯಸಿದಂತೆ ಆಗುವುದರಿಂದ ವಿರೋಧಿಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸುವುದು. ನಿಮ್ಮ ಸಹೋದ್ಯೋಗಿಗಳು ನಿಮ್ಮ ಬೆನ್ನು ಚಪ್ಪರಿಸಿ ನಿಮ್ಮನ್ನು ಹುರಿದುಂಬಿಸುವರು.

ಕುಂಭ:

ದಿನ ಭವಿಷ್ಯ

ನೀವು ಸರಿಯಾದ ದಾರಿಯಲ್ಲಿ ಕ್ರಮಿಸುತ್ತಿರುವುದರೆಂದೇ ನಿಮ್ಮನ್ನು ಕಂಡರೆ ಎಲ್ಲರಿಗೂ ಗೌರವ ಪ್ರೀತಿ. ಇದನ್ನು ಕಾಪಾಡಿಕೊಂಡು ಹೋಗುವುದು ನಿಮ್ಮ ಜವಾಬ್ದಾರಿ. ನಿಮ್ಮ ಬುದ್ಧಿವಂತಿಕೆಯ ಬಗ್ಗೆ ಎಲ್ಲೆಡೆ ಚರ್ಚೆ ಆಗುವುದು.

ಮೀನ:

ದಿನ ಭವಿಷ್ಯ

ಪ್ರೇಮಾನುಬಂಧಗಳು ಬಲವಾಗುತ್ತವೆ. ಸರಿಯಾದ ದಿಕ್ಕಿನಲ್ಲಿ ಚಿಂತಿಸುವಿರಿ. ನಿಮ್ಮ ಗಟ್ಟಿ ನಿರ್ಧಾರಗಳು ಜೀವನದ ಗತಿಯನ್ನೇ ಬದಲಾಯಿಸುವುದು. ಇದಕ್ಕೆ ಪೂರಕವಾಗಿ ಕೌಟುಂಬಿಕವಾಗಿ ಬೆಂಬಲ ವ್ಯಕ್ತವಾಗುವುದು. ಸಂತಸದ ದಿನ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 24 ಆಗಸ್ಟ್, 2018!!