ದಿನ ಭವಿಷ್ಯ: 24 ಸೆಪ್ಟೆಂಬರ್, 2018!!

0
885
ದಿನ ಭವಿಷ್ಯ

Astrology in kannada | kannada news | ದಿನ ಭವಿಷ್ಯ

ದಿನ ಭವಿಷ್ಯ: 24 ಸೆಪ್ಟೆಂಬರ್, 2018!!

ಮೇಷ:

ದಿನ ಭವಿಷ್ಯ

ಮೇಷ: ದೈನಂದಿನ ವಿಷಯಕ್ಕೆ ಹೆಚ್ಚಿನ ಸಮಯ ವ್ಯಯಿಸುತ್ತಿರಿ. ಸಾಮಾನ್ಯ ಗೃಹಬಳಕೆ ವಸ್ತುಗಳ ಬಗ್ಗೆ ಗಮನ ಹರಿಸುವಿರಿ. ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡುವುದು ಒಳ್ಳೆಯದು. ಆರ್ಥಿಕ ಸಂಕಷ್ಟ ಎದುರಾಗುವುದು.

ವೃಷಭ:

ದಿನ ಭವಿಷ್ಯ

ವೃಷಭ: ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚು ಸಫಲರಾಗುತ್ತೀರಿ ಎಂದರೆ ನಿಮ್ಮ ಮನೋದೌರ್ಬಲ್ಯವನ್ನು ಮೆಟ್ಟಿ ನಿಂತಿರುವಿರಿ ಎಂದು ಅರ್ಥ. ಬದುಕು ಹಸನಾಗಿರುವುದು. ಬೇಡದ ಚಿಂತನೆಗಳನ್ನು ದೂರ ಮಾಡಿರಿ. ಗುರುವಿನ ಆಶೀರ್ವಾದ ನಿಮ್ಮ ಮೇಲಿದೆ.

ಮಿಥುನ:

ದಿನ ಭವಿಷ್ಯ

ಮಿಥುನ: ಸ್ಥಿರಾಸ್ಥಿ ಖರೀದಿಗೆ ಸಂಬಂಧಪಟ್ಟ ಮಾತುಕತೆಗಳು ಫಲಪ್ರದವಾಗುವುದು. ಕೆಲವರು ನೂತನ ವಾಹನ ಖರೀದಿಯ ಬಗ್ಗೆ ಚಿಂತನೆ ನಡೆಸುವರು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.

Also read: ನಿಮ್ಮ ರಾಶಿಯ ಪ್ರಕಾರ, ಸಾಮಾನ್ಯವಾಗಿ ನಿಮ್ಮ ಸಂಬಂಧಗಳಲ್ಲಾಗುವ ತೊಂದರೆಗಳು.

ಕಟಕ:

ದಿನ ಭವಿಷ್ಯ

ಕಟಕ: ಇದುವರೆಗೂ ಹರಿದು ಬರುತ್ತಿದ್ದ ಹಣಕಾಸು ನಿಂತು ಹೋಗುವ ಸಾಧ್ಯತೆ. ಹಣಕಾಸಿನ ವಿಷಯವಾಗಿ ಬೇರೊಂದು ಉಪಾಯವನ್ನು ಮಾಡಲೇಬೇಕಿದೆ. ಸ್ನೇಹಿತರು ಇಲ್ಲವೆ ಬಂಧುಗಳು ನಿಮಗೆ ಸಕಾಲದಲ್ಲಿ ಸಹಾಯ ಮಾಡುವರು.

ಸಿಂಹ:

ದಿನ ಭವಿಷ್ಯ

ಸಿಂಹ: ಯಾವುದೇ ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದೆ ನೀವು ನಿಮ್ಮ ಕಾರ್ಯಕ್ಷೇತ್ರದಲ್ಲಿ ತಲ್ಲೀನರಾಗುವುದರಿಂದ ನಿಮ್ಮನ್ನು ವಿರೋಧಿಸುತ್ತಿದ್ದವರು ಹಿಂದೆ ಸರಿಯುವರು. ಗುರುವಿನ ಶ್ರೀರಕ್ಷೆ ಇರುವುದರಿಂದ ಯಾವುದಕ್ಕೂ ಹೆದರುವ ಪ್ರಮೇಯವಿಲ್ಲ.

ಕನ್ಯಾ:

ದಿನ ಭವಿಷ್ಯ

ಕನ್ಯಾ: ಹಣದ ಹೂಡಿಕೆಗಳು ಈಗ ಆಪತ್ಕಾಲದಲ್ಲಿ ನೆರವು ನೀಡುವುದು. ಮಗನ ತುರ್ತು ಕೆಲಸಗಳಿಗಾಗಿ ಹಣ ಸಂದಾಯ ಮಾಡಬೇಕಾಗುವುದು. ದೂರದ ಪ್ರಯಾಣದ ತಯಾರಿಯೂ ನಡೆಯಲಿದೆ. ಸ್ನೇಹಿತರು ನಿಮಗೆ ಸಹಾಯ ಮಾಡುವರು.

Also read: ಯಾವ ಯಾವ ರಾಶಿಗೆ ಯಾವ ಯಾವ ಬಣ್ಣಗಳು ಅದೃಷ್ಟ ತರುತ್ತದೆ ಗೊತ್ತೇ??

ತುಲಾ:

ದಿನ ಭವಿಷ್ಯ

ತುಲಾ: ನೀವಾಡುವ ಮಾತು ಎಲ್ಲೆಡೆಯೂ ಗೌರವವನ್ನು ತಂದು ಕೊಡುತ್ತದೆ. ಸಂಚರಿಸುವ ಮೂಲಕ ನೀವು ಧಾರ್ಮಿಕ ಕೆಲಸ ಕಾರ್ಯಗಳಿಗೆ ಹಣ ಖರ್ಚು ಮಾಡಬೇಕಾಗುವುದು. ಮನಸ್ಸು ಕೂಡಾ ಧಾರ್ಮಿಕತೆಯತ್ತ ಹೊರಳುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ: ಸವಾಲು ಎದುರಿಸುವಲ್ಲಿ ಅಥವಾ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಇಂದು ನೀವು ಪ್ರಮುಖ ಪಾತ್ರ ವಹಿಸುವಿರಿ. ನ್ಯಾಯವಾದ ತೀರ್ಮಾನದಿಂದ ಉಭಯತರ ವ್ಯಕ್ತಿಗಳಿಗೂ ಪ್ರೀತಿಪಾತ್ರರಾಗುವಿರಿ. ವಿದ್ಯಾರ್ಥಿಗಳು ಉತ್ತಮ ಪ್ರಗತಿಯನ್ನು ಸಾಧಿಸುವರು.

ಧನಸ್ಸು:

ದಿನ ಭವಿಷ್ಯ

ಧನಸ್ಸು: ನಿರುದ್ಯೋಗಿಗಳಿಗೆ ಉತ್ತಮ ಶುಭ ಯೋಗವನ್ನುಂಟು ಮಾಡುವುದು. ದೂರದಿಂದ ಬರುವ ವಾರ್ತೆಯು ಶುಭವನ್ನು ಹೊತ್ತು ತರುವುದು. ಆಂಜನೇಯ ದೇವಸ್ಥಾನದಲ್ಲಿ ಅಭಿಷೇಕ ಮಾಡಿಸಿರಿ. ಮತ್ತೊಬ್ಬರ ಹಣಕಾಸಿನ ವ್ಯವಹಾರದಲ್ಲಿ ಕೈಹಾಕಬೇಡಿರಿ.

Also read: ಹುಟ್ಟಿದ ದಿನಾಂಕದ ಮೇಲೆ ನಿಮ್ಮ ಲಕ್ಕಿ ನಂಬರ್ ಗಳನ್ನು ತಿಳಿದುಕೊಳ್ಳಿ../a>

ಮಕರ:

ದಿನ ಭವಿಷ್ಯ

ಮಕರ: ನಿಮ್ಮ ಪ್ರಯತ್ನಗಳು ಗುರುವಿನ ಕೃಪೆಯಿಂದ ಸಫಲವಾಗುತ್ತದೆ. ಹಿರಿಯ ಅಧಿಕಾರಿಗಳು ನಿಮ್ಮ ಬೆಂಗಾವಲಿಗೆ ನಿಲ್ಲುವರು. ಕಲೆ-ಸಾಂಸ್ಕೃತಿಕ ಚಟುವಟಿಕೆಗಳಿಂದ ಜನಾನುರಾಗಿಯಾಗುತ್ತೀರಿ. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.

ಕುಂಭ:

ದಿನ ಭವಿಷ್ಯ

ಕುಂಭ: ಒಡ ಹುಟ್ಟಿದವರ ಸಹಕಾರದಿಂದ ರಚನಾತ್ಮಕ ಕೆಲಸಗಳ ನಿರ್ವಹಣೆ ಮಾಡುವಿರಿ. ಮಕ್ಕಳ ಆಟಪಾಠಗಳು ಮತ್ತು ಮಗುವಿನ ಬಾಲಭಾಷೆಯು ಇಂದು ನಿಮ್ಮನ್ನು ಹೆಚ್ಚು ಆಕರ್ಷಿಸುವುದು.

ಮೀನ:

ದಿನ ಭವಿಷ್ಯ

ಮೀನ: ದೈವ ಬಲವಿರುವಾಗ ಅನ್ಯರ ಹಂಗೇಕೆ? ಈದಿನ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಆಸ್ತಿಗೆ ಸಂಬಂಧಪಟ್ಟ ತಕರಾರುಗಳು ನಿಮ್ಮ ಮಧ್ಯಸ್ಥಿಕೆಯಿಂದ ಸುಖಾಂತ್ಯವಾಗುವುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು.

Also read: ಯಾವ ನಕ್ಷತ್ರ ಕ್ಕೆ ಯಾವ ಅಕ್ಷರದ ಹೆಸರು?? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

ದಿನ ಭವಿಷ್ಯ: 24 ಸೆಪ್ಟೆಂಬರ್, 2018!!