ದಿನ ಭವಿಷ್ಯ: 25 ಆಗಸ್ಟ್, 2018!!

0
466
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ: 25 ಆಗಸ್ಟ್, 2018!!

ಮೇಷ:

ದಿನ ಭವಿಷ್ಯ

ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ದಾಸರು ಹಾಡಿದಂತೆ ಈದಿನ ಅನನ್ಯ ಭಕ್ತಿಯಿಂದ ಭಗವಂತನ ಮುಂದೆ ನಿಮ್ಮ ಕಷ್ಟಗಳನ್ನು ನಿವೇದನೆ ಮಾಡಿಕೊಳ್ಳಿರಿ. ಪರಮ ದಯಾಳುವಾದ ಭಗವಂತ ಇಂದು ನಿಮ್ಮ ಬೆಂಬಲಕ್ಕೆ ಬರುವನು.

ವೃಷಭ:

ದಿನ ಭವಿಷ್ಯ

ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂದು ಪರಿತಪಿಸುವ ದಿನವಲ್ಲ. ಈದಿನ ನೀವು ಬಯಸಿದ ಕಾರ್ಯ ಸಾಧುವಾಗುವುದು. ಇಲ್ಲವೇ ಇದಕ್ಕೆ ಪೂರಕವಾದ ವಿಚಾರವು ನಿಮ್ಮ ಕಿವಿಗೆ ಬೀಳುವುದು.

ಮಿಥುನ:

ದಿನ ಭವಿಷ್ಯ

ವಿವಿಧ ಮೂಲಗಳಿಂದ ಅಥವಾ ಜೀವವಿಮಾ ನಿಗಮದಿಂದ ಹಣಕಾಸು ಕೈ ಸೇರುವ ಸಾಧ್ಯತೆ. ಕೆಲವರಿಗೆ ವೃತ್ತಿಯಿಂದ ನಿವೃತ್ತರಾಗುವ ಸಂದರ್ಭ ಎದುರಾಗುವುದು. ಕಾಲಕ್ಕೆ ತಕ್ಕಂತೆ ಬದಲಾಗುವುದು ಅನಿವಾರ್ಯ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಮಳೆ ಹನಿ ನಿಂತರೂ ಮರದ ಹನಿ ನಿಲ್ಲುವುದಿಲ್ಲ ಎನ್ನುವಂತೆ ಗುರುವಿನ ಬೆಂಬಲ ಇದ್ದರೂ ಶನಿಯ ಸಂಚಾರವು ನಿಮ್ಮ ಕಾರ್ಯದಲ್ಲಿ ವಿಳಂಬತೆಯನ್ನುಂಟು ಮಾಡುವರು. ಅನಗತ್ಯ ಖರ್ಚನ್ನು ತಡೆಹಿಡಿಯುವುದು ಜಾಣತನ.

ಸಿಂಹ:

ದಿನ ಭವಿಷ್ಯ

ಕಷ್ಟದ ದಿನಗಳು ಚೈನಿನ ಸರಪಳಿಯಂತೆ ಒಂದಕ್ಕೊಂದು ಅಂಟಿಕೊಂಡೇ ಇರುತ್ತದೆ. ಅಂತಹ ಕಷ್ಟದ ಸಂಕೋಲೆಗಳಿಂದ ಬಿಡುಗಡೆ ಹೊಂದಲು ಭಗವಂತನ ನಾಮಸ್ಮರಣೆ ಒಂದೇ ವಜ್ರಾಯುಧ. ಹಾಗಾಗಿ ಕುಲದೇವರನ್ನು ಭಕ್ತಿಯಿಂದ ಬೇಡಿಕೊಳ್ಳಿರಿ.

ಕನ್ಯಾ:

ದಿನ ಭವಿಷ್ಯ

ಕೂತು ಮಲಗಬೇಕೆಂದು ಹಿರಿಯರು ಹೇಳುವರು. ಅಂತೆಯೇ ದಿಢೀರ್‌ ಶ್ರೀಮಂತನಾಗಬೇಕೆಂದು ಹಲವು ಯೋಜನೆಗಳನ್ನು ಹಮ್ಮಿಕೊಂಡಲ್ಲಿ ನೀವು ಅದರಿಂದ ಸೋಲು ಅನುಭವಿಸುವಿರಿ. ಹಿರಿಯರ, ಅನುಭವಿಗಳ ಮಾತನ್ನು ಆಲಿಸಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

‘ಮಾತೇ ಮುತ್ತು ಮಾತೇ ಶತ್ರು’ ಎನ್ನುವಂತೆ ಈದಿನ ನಿಮ್ಮ ಮಾತಿನ ವರಸೆಯು ಬಹು ಜನರನ್ನು ಆಕರ್ಷಿಸುತ್ತದೆ. ಅದು ನಿಮ್ಮ ಆರ್ಥಿಕ ಸಂಕಷ್ಟವನ್ನು ಕಡಿಮೆ ಮಾಡುವುದು. ಉತ್ತಮ ಯೋಜನೆಗಳಿಗೆ ಸಕಾಲವಾಗಿದೆ.

ವೃಶ್ಚಿಕ:

ದಿನ ಭವಿಷ್ಯ

ಇತಿಮಿತಿ ಅರಿತು ಇಡುವ ಹೆಜ್ಜೆಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಇದರಿಂದಾಗಿ ನಿಮ್ಮ ಅಭ್ಯುದಯಗಳ ದಾರಿ ಸುಗಮವಾಗುವುದು. ಸಹೋದರರ ಸಂಬಂಧವನ್ನು ಉತ್ತಮ ಸಂವಹನದಿಂದ ಗಟ್ಟಿಕೊಳ್ಳುವುದು.

ಧನಸ್ಸು:

ದಿನ ಭವಿಷ್ಯ

ಆರೋಗ್ಯದ ಕುರಿತು ಎಚ್ಚರ ಇರಲಿ. ಸಾಧ್ಯವಾದರೆ ಇಷ್ಟ ಗುರುವಿನ ಪ್ರಾರ್ಥನೆ ಮಾಡಿರಿ. 100 ಗ್ರಾಂ ಕಡಲೇಕಾಳನ್ನು ದಾನ ಮಾಡಿರಿ. ಇಲ್ಲವೇ ಹಸುವಿಗೆ ನೀಡಿರಿ. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ವಸ್ತುತಃ ನಿಮ್ಮ ಬುದ್ಧಿಮತ್ತೆಯನ್ನು ಯಾರೂ ಸರಿಗಟ್ಟಲಾರರು. ಆದರೂ ಸೂಕ್ತ ಸಲಹೆಗಳು ಇತರರಿಂದ ಬಂದಲ್ಲಿ ಸ್ವೀಕರಿಸಿ. ತಾಯಿಯ ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡುಬರುವುದು. ಮಕ್ಕಳು ವಿದ್ಯಾಭ್ಯಾಸದಲ್ಲಿ ಚುರುಕುತನ ತೋರುವರು.

ಕುಂಭ:

ದಿನ ಭವಿಷ್ಯ

ನಂಬಿಕಸ್ಥರೇ ಹಣದ ವಿಷಯದಲ್ಲಿ ಮೋಸ ಮಾಡುವ ಸಾಧ್ಯತೆ ಇರುವುದು. ಈ ಬಗ್ಗೆ ಜಾಗ್ರತೆ. ಹಣಕಾಸಿನ ವಿಚಾರವಾಗಿ ಅನ್ಯರೊಡನೆ ಚರ್ಚೆ ಮಾಡದಿರಿ. ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಆರಾಧಿಸಿ. ಮನಸ್ಸಿಗೆ ಧೈರ್ಯ ತುಂಬಿರಿ.

ಮೀನ:

ದಿನ ಭವಿಷ್ಯ

ನಿಮ್ಮ ಬಳಿ ಅಗಾಧವಾದ ಪ್ರತಿಭೆ ಇದ್ದು ಅದು ಇಂದು ಸಾರ್ವಜನಿಕವಾಗಿ ಅನಾವರಣಗೊಳ್ಳಲಿದೆ. ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರುವ ಸಾಧ್ಯತೆ ಇದ್ದು, ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 25 ಆಗಸ್ಟ್, 2018!!