Astrology in kannada | kannada news ದಿನ-ಭವಿಷ್ಯ: ಜನವರಿ 25, 2019!!
ದಿನ-ಭವಿಷ್ಯ: ಜನವರಿ 25, 2019!!
ಮೇಷ:
ಮೇಷ:- ನೆರೆಹೊರೆಯವರಲ್ಲಿ ನಿಮ್ಮ ಬಗೆಗಿನ ಗೌರವಾದರಗಳಿಗೆ ಹೆಚ್ಚಿನ ಪ್ರಾಧಾನ್ಯ ದೊರೆಯುವುದು. ಪರರಿಗೆ ಉಪಕಾರ ಮಾಡುವ ಬುದ್ಧಿಯು ನಿಮ್ಮಲ್ಲಿ ಸದಾ ಜಾಗೃತವಾಗಿರುವುದು. ಇದಕ್ಕೆ ಪೂರಕವಾಗಿ ಧನಕಾರಕ ಗುರುವು ನಿಮ್ಮ ಸಹಾಯಕ್ಕೆ ಇರುವರು.
ವೃಷಭ:
ವೃಷಭ:- ಸುಸ್ತು, ಮೈಕೈನೋವು, ಏನೋ ಚಿಕ್ಕದು ಎಂದು ಅಲಕ್ಷಿಸಬೇಡಿ. ಹಾಗಂತ ನೀವೇ ಸ್ವಯಂ ವೈದ್ಯಕೀಯವನ್ನು ಮಾಡಿಕೊಳ್ಳದೆ ಸೂಕ್ತ ವೈದ್ಯರ ಸಲಹೆಯ ಮೇರೆಗೆ ಔಷಧಿಗಳನ್ನು ತೆಗೆದುಕೊಳ್ಳಿ. ಮನಸ್ಸಿನ ಚಂಚಲತೆ ನಿವಾರಣೆಗಾಗಿ ಈಶ್ವರನ ಆರಾಧನೆ ಮಾಡಿ.
ಮಿಥುನ:
ಮಿಥುನ:- ಅನಿರೀಕ್ಷಿತವಾದ ಬೆಳವಣಿಗೆಯೊಂದರಲ್ಲಿ ಅಸಾಧ್ಯವಾದ ಸ್ನೇಹ ಕುದುರುವಂತಹದು. ಆ ಮೂಲಕ ನಿಮಗೆ ಹಣಕಾಸಿನ ನೆರವು ದೊರೆಯುವುದು ಮತ್ತು ಕುಟುಂಬ ವರ್ಗದವರ ಸಹಕಾರವೂ ದೊರೆಯುವುದು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುದು.
Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!
ಕಟಕ:
ಕಟಕ:- ಮಾನಸಿಕ ಕ್ಷೋಭೆಗಳು ಬೆಂಬಿಡದೆ ಕಾಡುವುದು. ಲಕ್ಷ್ಮೀನಾರಸಿಂಹ ದೇವರನ್ನು ಸ್ಮರಿಸಿ. ಸಾಧ್ಯವಾದರೆ ಲಕ್ಷ್ಮೀನಾರಸಿಂಹ ದೇವರ ದೇವಾಲಯಕ್ಕೆ ಭೇಟಿ ನೀಡಿ. ಸಂಜೆಯ ವೇಳೆಗೆ ನಿಮಗೆ ಬರಬೇಕಾಗಿದ್ದ ಹಣವು ಬರುವ ಸಾಧ್ಯತೆ ಇರುತ್ತದೆ.
ಸಿಂಹ:
ಸಿಂಹ:- ಹಣಕಾಸಿನ ವಿಷಯದಲ್ಲಿ ನಿಮಗೆ ಅಷ್ಟೇನೂ ಉತ್ತಮವಲ್ಲ. ಕೆಲವು ಬಹುಮುಖ್ಯ ವಸ್ತುಗಳ ಖರೀದಿಗಾಗಿ ಸ್ನೇಹಿತರ ಬಳಿ ಕೇಳುವ ಸಾಧ್ಯತೆ ಎದುರಾಗುವುದು. ಮಡದಿ ಮಕ್ಕಳ ಮೇಲೆ ವಿನಾಕಾರಣ ಕೋಪಗೊಳ್ಳದಿರಿ.
ಕನ್ಯಾ:
ಕನ್ಯಾ:- ನಿಮ್ಮ ಹಳೆಯ ಕಡತಗಳಲ್ಲಿನ ಅನವಶ್ಯಕ ಕಾಗದ ಪತ್ರಗಳನ್ನು ಸ್ವಚ್ಛಮಾಡಿ. ನಿಮ್ಮ ಬೀರು, ಕಪಾಟುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಇದರಿಂದ ಧನಾತ್ಮಕ ಶಕ್ತಿಗಳು ನಿಮ್ಮ ಕೋಣೆಯನ್ನು ಆವರಿಸಿ ನಿಮಗೆ ಮುದ ನೀಡುವುದು.
Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!
ತುಲಾ:
ತುಲಾ:- ಬಿಸಿನೆಸ್ ಎಂದು ದಿನದ ಬಹುಪಾಲು ಮನೆಯ ಹೊರಗಡೆ ಸುತ್ತಾಡದಿರಿ. ಮನೆ ಮಂದಿಯ ಇಷ್ಟಾನಿಷ್ಟಗಳ ಬಗ್ಗೆ ಗಮನ ಕೊಡಿ. ಅದರಲ್ಲೂ ಹಿರಿಯರ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಿ.
ವೃಶ್ಚಿಕ:
ವೃಶ್ಚಿಕ:- ಗ್ರಹ ಸ್ಥಿತಿಗಳು ಎಂತಹ ಸದೃಢ ಮನುಷ್ಯನನ್ನು ಅಧೀರರನ್ನಾಗಿ ಮಾಡಿ ಬಿಡುತ್ತವೆ. ಹಾಗಾಗಿ ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ನಿಮ್ಮ ಕುಲದೇವರನ್ನು ಪ್ರಾರ್ಥಿಸುವುದು ಒಳ್ಳೆಯದು. ಮನೆಯ ಹಿರಿಯರು ಅಸಹಕಾರ ತೋರುವರು.
ಧನಸ್ಸು:
ಧನಸ್ಸು:- ನಿತ್ಯದ ಪಡಿಪಾಟಲುಗಳು ಇದ್ದದ್ದೇ. ಆದರೆ ಅವುಗಳ ಮಧ್ಯೆಯೇ ಜೀವಿಸಿ ಅವುಗಳನ್ನು ಮೆಟ್ಟಿ ನಿಲ್ಲುವುದೇ ಜೀವನದ ಆಟ. ಕೆಲಸ ಕಾರ್ಯಗಳು ಮಂದ ಪ್ರಗತಿಯಲ್ಲಿ ಸಾಗಿದರೂ ಗುರುವಿನ ಶುಭ ಸಂಚಾರದಿಂದಾಗಿ ಅಂತಿಮವಾಗಿ ಶುಭಫಲ ಕಾಣುವಿರಿ.
ಮಕರ:
ಮಕರ:- ಯಾವುದೇ ಭಯ ಹಿಂಜರಿಕೆಗಳು ನಿಮ್ಮನ್ನು ಕಾಡುವವು. ‘ಚಿಂತ್ಯಾಕ ಮಾಡುತೀ ಚಿನ್ಮಯನಿದ್ದಾನೆ’ ಎನ್ನುವ ಹಾಗೆ ಭಗವಂತನು ನಿಮ್ಮ ಇಷ್ಟಾನಿಷ್ಟಗಳನ್ನು ಗಮನಿಸುತ್ತಿರುವನು. ಸೂಕ್ತ ಸಮಯದಲ್ಲಿ ನಿಮಗೆ ಸಹಾಯ ನೀಡುವನು.
ಕುಂಭ:
ಕುಂಭ:- ಮೋಕ್ಷ ಕಾರಕನಾದ ಕೇತು ಧಾರ್ಮಿಕ ಭಾವನೆಗಳಿಗೆ ಇಂಬು ನೀಡುವನು ಮತ್ತು ಪ್ರಾಪಂಚಿಕ ಸುಖಿಗಳ ಬಗ್ಗೆ ಅನಾದರವನ್ನುಂಟು ಮಾಡುವನು. ಹಾಗಂತ ಪೂರ್ಣ ಪ್ರಮಾಣದ ವೈರಾಗ್ಯ ಉತ್ತಮವಲ್ಲ. ಕರ್ತವ್ಯವನ್ನು ಮಾಡಿ ಫಲಾಫಲಗಳನ್ನು ಭಗವಂತ ನೀಡುವನು.
ಮೀನ:
ಮೀನ:- ನಿಮ್ಮ ಮನಸ್ಸಿಗೆ ಬೇಡವಾದ ಘಟನೆಗಳು ಜರುಗುವುದರಿಂದ ಮಾನಸಿಕ ತಲ್ಲಣ ಉಂಟಾಗುವುದು. ಜಗನ್ನಿಯಾಮಕಿ ದೇವಿ ಸ್ತೋತ್ರವನ್ನು ಪಠಿಸಿ. ದುರ್ಗಾ ಮಂದಿರಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿ.
Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ
ದಿನ-ಭವಿಷ್ಯ: ಜನವರಿ 25, 2019