ದಿನ-ಭವಿಷ್ಯ: 25 ಅಕ್ಟೋಬರ್, 2018!!

0
337
ದಿನ ಭವಿಷ್ಯ

Astrology in kannada | kannada news | ದಿನ-ಭವಿಷ್ಯ: 25 ಅಕ್ಟೋಬರ್, 2018!!

ದಿನ-ಭವಿಷ್ಯ: 25 ಅಕ್ಟೋಬರ್, 2018!!

ಮೇಷ:

ದಿನ ಭವಿಷ್ಯ

ಇನ್ನು ಕೆಲವೇ ದಿನಗಳಲ್ಲಿ ಅಷ್ಟಮ ಶನಿಯಿಂದ ಬಿಡುಗಡೆ ಹೊಂದುವ ನೀವು ಈದಿನ ಸಣ್ಣ ಪುಟ್ಟ ಅನಾರೋಗ್ಯವನ್ನು ಎದುರಿಸ ಬೇಕಾಗುವುದು. ಕುಲದೇವತೆಯ ಪ್ರಾರ್ಥನೆಯನ್ನು ಮಾಡುವುದು ಒಳ್ಳೆಯದು. ಪ್ರಯಾಣದಲ್ಲಿ ಜಾಗ್ರತೆ ಅಗತ್ಯ.

ವೃಷಭ:

ದಿನ ಭವಿಷ್ಯ

ಉತ್ತಮ ಕಂಠವನ್ನು ಹೊಂದಿರುವ ನೀವು ಸುಶ್ರಾವ್ಯವಾಗಿ ಹಾಡು ಹೇಳಬಲ್ಲಿರಿ. ಆದರೆ ಏಕೋ ಹಾಡನ್ನು ಬಹಿರಂಗವಾಗಿ ಹೇಳುತ್ತಿಲ್ಲ. ಹಾಡುಗಾರಿಕೆಯಿಂದ ಇತರರಿಗೆ ಸಂತೋಷ ಕೊಡುವ ಶಕ್ತಿ-ಯುಕ್ತಿ ಎರಡೂ ಇದ್ದು ಅದರ ಸದುಪಯೋಗ ಮಾಡಿಕೊಳ್ಳಿರಿ.

ಮಿಥುನ:

ದಿನ ಭವಿಷ್ಯ

ಯಾವುದೇ ರೀತಿಯ ಅಡ್ಡ ಮಾರ್ಗವನ್ನು ಹಿಡಿಯದಿರಿ ಮತ್ತು ಅಡ್ಡದಾರಿಗಳ ಬಗ್ಗೆ ಯೋಚನೆಯನ್ನು ಮಾಡದಿರಿ. ನೇರವಾದ ಮಾರ್ಗವು ನಿಮ್ಮನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸುವುದು. ಅಲ್ಲದೆ ಸಾಮಾಜಿಕವಾಗಿ ಗೌರವಿಸಲ್ಪಡುವಿರಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಪಂಚಮ ಶನಿಯ ಕಾಡಾಟದಿಂದ ತಪ್ಪಿಸಿಕೊಳ್ಳಲು ಗುರು-ಹಿರಿಯರ ಆಶೀರ್ವಾದವನ್ನು ಪಡೆಯಿರಿ. ಹಿರಿಯರನ್ನು ಗೌರವ ಪೂರ್ವಕವಾಗಿ ಆದರಿಸಿರಿ. ಇದರಿಂದ ಮಹತ್ತರವಾದ ಕೆಲಸವನ್ನು ಸಾಧಿಸಬಹುದು.

ಸಿಂಹ:

ದಿನ ಭವಿಷ್ಯ

ನಿಮ್ಮ ಬಂಧು ವರ್ಗ ಅಥವಾ ನಿಮಗೆ ಹತ್ತಿರದವರೇ ನಿಮಗೆ ನೋವಾಗುವಂತಹ ಮಾತುಗಳನ್ನು ಆಡುವ ಸಾಧ್ಯತೆ ಇರುತ್ತದೆ. ಆತ್ಮಸಾಕ್ಷಿ ಶುದ್ಧವಾಗಿರುವುದರಿಂದ ಈಬಗ್ಗೆ ಅನಗತ್ಯ ಭಯ ಬೇಡ.

ಕನ್ಯಾ:

ದಿನ ಭವಿಷ್ಯ

ಮಕ್ಕಳು ಶುಭಕಾರಕವಾದ ವಾರ್ತೆಯನ್ನು ತರಲಿದ್ದಾರೆ. ವಿಶೇಷವಾದ ಸಂತೋಷ ಸಮಾಧಾನಗಳು ನಿಮ್ಮದಾಗುವುದು. ಬಾಕಿ ಬರಬೇಕಾಗಿದ್ದ ಹಣಕಾಸು ಒದಗಿ ಬರುವ ಸಾಧ್ಯತೆ ಇರುತ್ತದೆ. ಆರೋಗ್ಯ ಉತ್ತಮವಾಗಿರುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ಖರ್ಚಿನ ದಾರಿಯನ್ನು ಸ್ಪಷ್ಟವಾಗಿ ನಿಯಂತ್ರಿಸಿ. ತಿಳಿದಿರುವುದಕ್ಕಿಂತಲೂ ಜಾಸ್ತಿ ಖರ್ಚು ವೆಚ್ಚಗಳು ಎದುರಾಗುವುದು. ಸದ್ಯದರಲ್ಲಿಯೇ ನಿಮ್ಮ ಜೀವನದಲ್ಲಿ ಹರಡಿಕೊಂಡಿರುವ ಕಷ್ಟದ ಕಾರ್ಮೋಡಗಳು ಕರಗಿ ಸುಖವಾಗುವುದು. ತಾಳ್ಮೆಯಿಂದ ಇರಿ.

ವೃಶ್ಚಿಕ:

ದಿನ ಭವಿಷ್ಯ

ನೀವು ಹೋಗುತ್ತಿರುವ ಅಥವಾ ಬೆಳೆಯುತ್ತಿರುವ ಪ್ರಗತಿಯನ್ನು ಕಂಡು ಇತರರು ಕರುಬುವರು ಮತ್ತು ನಿಮ್ಮ ಪ್ರಯತ್ನಗಳನ್ನು ವಿಫಲಗೊಳಿಸಲು ಅನೇಕ ರೀತಿಯ ಕಾರ್ಯತಂತ್ರವನ್ನು ಇತರರು ರೂಪಿಸುವರು. ಆದಾಗ್ಯೂ ಗುರುವಿನ ಬಲ ನಿಮ್ಮ ಕಡೆ ಇರುತ್ತದೆ.

ಧನಸ್ಸು:

ದಿನ ಭವಿಷ್ಯ

ನಿಮ್ಮ ಸಹೋದರ ಸಹೋದರಿಯರ ಜತೆಯಲ್ಲಿ ವಾದ ವಿವಾದ ಬೇಡ. ನಿಮಗೆ ಇಷ್ಟವಾದದ್ದನ್ನು ನೇರವಾಗಿ ಹೇಳಿರಿ. ಇದರಿಂದ ಉಭಯತರರಿಗೂ ಅನುಕೂಲವಾಗುವುದು. ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇರುತ್ತದೆ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಗುರುವಿನ ಶುಭ ಸಂಚಾರದಿಂದ ಹಣಕಾಸಿನ ವಿಷಯದಲ್ಲಿ ಪ್ರಗತಿ ಕಂಡು ಬರುವುದು. ಮನೋಕಾಮನೆಗಳು ಪೂರ್ಣಗೊಳ್ಳುವುದು. ಆದರೆ ನೀವು ಚಿತ್ತಚಾಂಚಲ್ಯಕ್ಕೆ ಒಳಗಾಗದೆ ದೃಢ ಚಿತ್ತದಿಂದ ಕಾರ್ಯವನ್ನು ನಿರ್ವಹಿಸಬೇಕಾಗುವುದು.

ಕುಂಭ:

ದಿನ ಭವಿಷ್ಯ

ನಿಮ್ಮ ಪ್ರಯತ್ನಗಳಿಗೆ ಸದ್ಯಕ್ಕೆ ಫಲ ದೊರೆಯುತ್ತಿಲ್ಲ ಎಂದು ಚಿಂತಿಸದಿರಿ. ಈಗ ಆಗುತ್ತಿರುವ ಘಟನೆಗಳು ನಿಮಗೆ ಒಂದು ಪಾಠವೆಂದು ಭಾವಿಸಿ ಮುನ್ನುಗ್ಗಿ ಹೋರಾಟ ಮಾಡಿ. ಸದ್ಯದರಲ್ಲಿಯೇ ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವುದು.

ಮೀನ:

ದಿನ ಭವಿಷ್ಯ

ತಲೆ ಗಟ್ಟಿ ಇದೆ ಎಂದು ಯಾರೂ ಬಂಡೆಗೆ ತಲೆ ಚಚ್ಚಿಕೊಳ್ಳುವುದಿಲ್ಲ. ಅಂತೆಯೇ ನಿಮಗೆ ಗುರುಬಲವಿದೆ ಎಂದು ಎಲ್ಲ ವಿಷಯಗಳಲ್ಲೂ ಯಶಸ್ಸು ಹೊಂದುತ್ತೇನೆ ಎಂಬ ಭ್ರಮೆ ಬೇಡ. ತಗ್ಗಿ-ಬಗ್ಗಿ ನಡೆದಲ್ಲಿ ಇಚ್ಛಿತ ಕಾರ್ಯಗಳಲ್ಲಿ ಯಶಸ್ಸು ಹೊಂದುವಿರಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 25 ಅಕ್ಟೋಬರ್, 2018!!