Astrology in kannada | kannada news | ದಿನ ಭವಿಷ್ಯ
ದಿನ ಭವಿಷ್ಯ: 27 ಆಗಸ್ಟ್, 2018!!
ಮೇಷ:
ಉಷ್ಣಸಂಬಂಧಿ ಅಥವಾ ವಾತ ಸಂಬಂಧಿ ದೋಷಗಳು ಕಾಡುವವು. ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ಆತ್ಮೀಯ ಗೆಳೆಯನ ಭೇಟಿ ಸಂಭವ. ವಾಹನ ಖರೀದಿಗಾಗಿ ಹಣ ಖರ್ಚು ಮಾಡುವಿರಿ.
ವೃಷಭ:
ಸಂಗಾತಿ ಮತ್ತು ಮಕ್ಕಳ ಸಹಕಾರದಿಂದ ಯೋಜಿತ ಕಾರ್ಯ ನಿರಾಯಾಸವಾಗಿ ನೆರವೇರುವುದು. ಗುರುಸ್ತೋತ್ರ ಪಠಿಸಿ. ಗುರುಹಿರಿಯರ ಆಶೀರ್ವಾದ ಪಡೆಯಿರಿ. ವೃತ್ತಿಯಲ್ಲಿ ಸಂತಸ ತರುವ ದಿನ.
ಮಿಥುನ:
ಧೈರ್ಯಂ ಸರ್ವತ್ರ ಸಾಧನಂ ಎನ್ನುವಂತೆ ಇಂದು ಮುನ್ನುಗ್ಗಿ ಮಾಡಿದ ಕೆಲಸಗಳು ಯಶಸ್ಸಿನತ್ತ ಸಾಗುವವು. ಬಂದದ್ದೆಲ್ಲಾ ಬರಲಿ ಗೋವಿಂದನ ದಯೆವೊಂದಿರಲಿ ಎನ್ನುವಂತೆ ಆಂಜನೇಯ ಸ್ತೋತ್ರ ಪಠಿಸಿ.
Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!
ಕಟಕ:
ಕೆಲಸದಲ್ಲಿ ಚುರುಕುತನ ಕಂಡುಬರುವುದಿಲ್ಲ. ಸುಬ್ರಹ್ಮಣ್ಯಸ್ವಾಮಿಯ ಆರಾಧನೆಯಿಂದ ಒಳಿತಾಗುವುದು. ದೀನದಲಿತರಿಗೆ ಆಹಾರ ದಾನ ಮಾಡಿ. ಪ್ರಯಾಣದಲ್ಲಿ ಎಚ್ಚರ. ಆರ್ಥಿಕ ಸ್ಥಿತಿ ಸಾಧಾರಣ ಮಟ್ಟದ್ದಾಗಿರುತ್ತದೆ.
ಸಿಂಹ:
ನಡೆಯುವ ವ್ಯಕ್ತಿ ಎಡವುದು ಸಹಜ. ಆದರೆ ಅದಕ್ಕೆ ಹೆದರಿ ಮುನ್ನಡಿ ಇಡದೆ ಇರುವುದು ಮುಂದಿನ ಪ್ರಗತಿಗೆ ತೊಂದರೆಯಾಗುವುದು. ಭವಿಷ್ಯದ ನಿರ್ಧಾರ ಕೈಗೊಳ್ಳಲು ಸೂಕ್ತ ಸಮಯ. ಗುರು ಸ್ತೋತ್ರ ಪಠಿಸಿ.
ಕನ್ಯಾ:
ಕೆಲಸಗಳ ಬದಲಾವಣೆಯೇ ವಿಶ್ರಾಂತಿ ಎಂದರು ಅನುಭವಿಗಳು. ಹಾಗಾಗಿ ಬಿಡುವಿಲ್ಲದ ಕೆಲಸದ ನಡುವೆಯೂ ಮಕ್ಕಳ/ಮೊಮ್ಮಕ್ಕಳ ಜತೆ ಕಾಲ ಕಳೆಯಿರಿ. ಸಂಗಾತಿಯ ಸಲಹೆಗಳನ್ನು ತಿರಸ್ಕರಿಸದಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!
ತುಲಾ:
ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವಿರಿ. ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡುಬರುವುದು. ಕುಟುಂಬದ ಹಿರಿಯರ ಅಭಿಪ್ರಾಯಗಳಿಗೆ ಮನ್ನಣೆ ಕೊಡಿ, ಹೆಚ್ಚು ಉಲ್ಲಾಸದಿಂದ ಕಾಲ ಕಳೆಯುವಿರಿ.
ವೃಶ್ಚಿಕ:
ಸರಕಾರಿ ನೌಕರರಿಗೆ ಬಡ್ತಿ ದೊರೆಯುವ ಸಾಧ್ಯತೆ. ಖಾಸಗಿ ನೌಕರರಿಗೂ ಉತ್ತಮ ಅನುಕೂಲ. ಮಕ್ಕಳ ಕಲರವ ಮನೆಯಲ್ಲಿ ನಿನಾದಿಸುವುದು. ಮನೆಯಲ್ಲಿ ಸಂಭ್ರಮದ ವಾತಾವರಣ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಧನಸ್ಸು:
ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ ಕಡಿಮೆಯಾಗುವುದು. ಕೌಟುಂಬಿಕ ಜೀವನದಲ್ಲಿ ಸಣ್ಣಪುಟ್ಟ ವಿರಸಗಳು ತಲೆದೋರುವವು. ಉಷ್ಣ ಸಂಬಂಧದಿಂದ ಕೆಮ್ಮು ಜಾಸ್ತಿಯಾಗುವ ಸಂಭವ. ಕರಿದ ಪದಾರ್ಥಗಳ ಸೇವನೆ ಕಡಿಮೆ ಮಾಡಿ.
ಮಕರ:
ಭೂಮಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಮುನ್ನಡೆ ಸಾಧಿಸುವಿರಿ. ಔಷಧಿ ವ್ಯಾಪಾರಸ್ಥರಿಗೆ ಉತ್ತಮ ದಿನ. ಗುರುವಿನ ಶುಭ ದೃಷ್ಟಿಯಿಂದಾಗಿ ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡುಬರುವುದು. ನೆಮ್ಮದಿಯ ದಿನ.
ಕುಂಭ:
ಸರಕಾರದ ಕೆಲಸಕಾರ್ಯಗಳು ತ್ವರಿತಗತಿಯಲ್ಲಿ ಸಾಗುವವು. ಮಹತ್ವಾಕಾಂಕ್ಷೆ ಈಡೇರುವುದು. ಪ್ರತಿಯೊಂದು ಕಾರ್ಯದಲ್ಲೂ ಮುಂದಾಳತ್ವ ವಹಿಸುವಿರಿ. ಕೌಟುಂಬಿಕವಾಗಿ ಸಂತಸದ ದಿನ.
ಮೀನ:
ಪರಾಕ್ರಮ ಹಾಗೂ ಧೈರ್ಯದ ಕೆಲಸದಲ್ಲಿ ಪ್ರಚಂಡ ಜಯ. ಬಂಧುಪ್ರೇಮ, ಉದ್ಯೋಗದಲ್ಲಿ ಪ್ರಗತಿ. ವಾದಸ್ಪರ್ಧೆಯಲ್ಲಿ ಯಶಸ್ಸು, ಶತ್ರುನಾಶ, ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.
Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ
ದಿನ ಭವಿಷ್ಯ: 27 ಆಗಸ್ಟ್, 2018!!