ದಿನ-ಭವಿಷ್ಯ: 28 ಅಕ್ಟೋಬರ್, 2018!!

0
390

Astrology in kannada | kannada news | ದಿನ-ಭವಿಷ್ಯ: 28 ಅಕ್ಟೋಬರ್, 2018!!

ದಿನ-ಭವಿಷ್ಯ: 28 ಅಕ್ಟೋಬರ್, 2018!!

ಮೇಷ:

ದಿನ ಭವಿಷ್ಯ

ಹಿಂದಿನ ಅನುಭವಗಳ ನೆಲೆಯಲ್ಲಿ ಜಾಗ್ರತೆಯ ಹೆಜ್ಜೆ ಇಡಿ. ಕಿರಿಕಿರಿ ಮಾಡುವವರನ್ನು ನಿಯಂತ್ರಿಸಿ. ಜಯವಿರುವವರೆಗೂ ಭಯವಿಲ್ಲ. ಧೈರ್ಯವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಯಶಸ್ಸು ನಿಮ್ಮದಾಗುವುದು.

ವೃಷಭ:

ದಿನ ಭವಿಷ್ಯ

ಬಂಧುವರ್ಗದವರು ಅಥವಾ ಸಹೋದರ ಸಹೋದರಿಯರೇ ತಗಾದೆ ಎಬ್ಬಿಸಬಹುದು. ಜಾಗ್ರತೆಯಿಂದ ಇರಿ. ಮನೆತನದ ಕೆಲವು ವಿಚಾರಗಳನ್ನು ಗುಪ್ತವಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ನೀವು ಬೇರೆಯವರ ಮುಂದೆ ಇದ್ದದ್ದನ್ನು ಇದ್ದಂತೆ ಹೇಳಿ ಸಮಸ್ಯೆಗೆ ಸಿಲುಕಿಕೊಳ್ಳುವಿರಿ.

ಮಿಥುನ:

ದಿನ ಭವಿಷ್ಯ

ಕೆಲವು ಸಮಸ್ಯೆಗಳು ಎದುರಾಗುವವು. ಆದಾಗ್ಯೂ ಅವುಗಳನ್ನು ಎದುರಿಸುವ ಶಕ್ತಿಯನ್ನು ಗುರು ನಿಮಗೆ ನೀಡುವನು. ಗುರುವಿನ ಶುಭ ಆಶೀರ್ವಾದ ಇರುವುದರಿಂದ ಹೆಚ್ಚಿನ ತೊಂದರೆಯಿಲ್ಲ. ಬರಬೇಕಾಗಿದ್ದ ಹಣ ಬರುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಸುಲಭವಾಗಿ ಪರಿಹಾರವಾಗುವ ವಿಷಯಕ್ಕೆ ಕಾದಾಡದೆ ಮಾತುಕತೆ ಮುಂದುವರೆಸಿ. ಇದರಿಂದ ಒಳಿತಾಗುವುದು. ಆಸ್ತಿಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿ.

ಸಿಂಹ:

ದಿನ ಭವಿಷ್ಯ

ದೂರದ ಊರಿಂದ ಬರುವ ಬಂಧುಗಳಿಂದ ಅನಿರೀಕ್ಷಿತವಾಗಿ ನಿಮ್ಮ ಬಹುದಿನದ ಸಮಸ್ಯೆಗೆ ಪರಿಹಾರ ಸಿಗುವುದು. ಇದರಿಂದ ಮಗನ ಮದುವೆ ಮಾಡುವ ಆಸೆ ಚಿಗುರುವುದು. ಗ್ರಹಗಳ ಆಟವು ಯಾವ ರೀತಿಯಲ್ಲಿ ಆದರೂ ಇರಬಹುದು, ಸ್ವೀಕರಿಸಿ.

ಕನ್ಯಾ:

ದಿನ ಭವಿಷ್ಯ

ಹಿರಿಯರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ ಮತ್ತು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಕೂಡಿಟ್ಟ ಹಣವೆಲ್ಲಾ ನೀರಿನಂತೆ ಖರ್ಚಾಗುತ್ತಿರುವದರಿಂದ ಹಣದ ಉಳಿತಾಯಕ್ಕೆ ಸಂಚಕಾರ ಬರಲಿದೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಇರಲಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ಬಹುಮುಖ್ಯವಾದ ಕಡತವೊಂದು ಕಣ್ಮರೆಯಾಗುವುದರಿಂದ ಚಿಂತೆಗೆ ಒಳಗಾಗುವಿರಿ. ಆದರೆ ವ್ಯವಧಾನದಿಂದ ಹುಡುಕಿದಲ್ಲಿ ಸಂಜೆ ವೇಳೆ ಆ ಕಡತವು ದೊರೆಯುವ ಸಾಧ್ಯತೆ ಇರುವುದು. ಕಾರ್ತವೀರ್ಯಾರ್ಜುನನ ಮಂತ್ರ ಪಠಿಸಿ.

ವೃಶ್ಚಿಕ:

ದಿನ ಭವಿಷ್ಯ

ನೀವು ಎಷ್ಟೇ ಶ್ರಮ ವಹಿಸಿ ಕೆಲಸ ಮಾಡಿದರೂ ಈಚಲ ಮರದ ಅಡಿಯಲ್ಲಿ ಕುಳಿತು ಮಜ್ಜಿಗೆ ಕುಡಿದಂತೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಇಲ್ಲದ ತಪ್ಪುಗಳನ್ನು ತೋರಿಸಿ ನಿಮ್ಮನ್ನು ಅವಮಾನಗೊಳಿಸುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರದಿಂದ ಇರಿ.

ಧನಸ್ಸು:

ದಿನ ಭವಿಷ್ಯ

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆ ತಿಳಿದು ಭ್ರಮೆಯಲ್ಲಿ ಚಡಪಡಿಸುವಂತಹ ಸಂದಿಗ್ಧ ಪರಿಸ್ಥಿತಿ ಎದುರಾಗುವುದು. ಶ್ರೀರಾಮ ರಕ್ಷಾ ಸ್ತೋತ್ರ ಪಠಿಸಿ. ವಿಷ್ಣುವಿನ ಆರಾಧನೆ ಮೂಲಕ ಶುಭ ತಂದುಕೊಳ್ಳಬಹುದಾಗಿದೆ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ದಶಮಸ್ಥಾನದ ಗುರು ವೃತ್ತಿಯಲ್ಲಿ ಬೇಸರವನ್ನುಂಟು ಮಾಡುವನು ಮತ್ತು ಕೆಲಸ ಬದಲಾವಣೆ ಮಾಡುವ ಸಂದರ್ಭ ಬರುವುದು. ಹಾಗಂತ ಮಾಡುವಂತಹ ವೃತ್ತಿಗೆ ರಾಜೀನಾಮೆ ನೀಡುವುದು ಸೂಕ್ತವಲ್ಲ. ಇರುವ ಕೆಲಸವನ್ನೇ ಅಚ್ಚುಕಟ್ಟಾಗಿ ಮಾಡಿ.

ಕುಂಭ:

ದಿನ ಭವಿಷ್ಯ

ವಿಷ್ಣು ಸಹಸ್ರನಾಮದ ಮಹಿಮೆ ಅಪಾರ. ಅವಶ್ಯಕವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಇಲ್ಲವೆ ಆಂಜನೇಯ ಗುಡಿಯಲ್ಲಿ ದೀಪಾರಾಧನೆ ಮಾಡಿ. ಸಾಧ್ಯವಾದರೆ ಹೆಸರುಕಾಳನ್ನು ದಾನ ಮಾಡಿ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.

ಮೀನ:

ದಿನ ಭವಿಷ್ಯ

ಮನೆ ಸದಸ್ಯರ ಮೇಲೆ ವಿನಾಕಾರಣ ಕೋಪಗೊಳ್ಳುವಿರಿ. ಆದರೆ ಎಷ್ಟೇ ಕೂಗಾಡಿದರೂ ನಿಮ್ಮ ಕೋಪ ಕೆಲಸಕ್ಕೆ ಬಾರದ ವಿಷಯ. ನೀವೇ ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಿ. ಇದರಿಂದ ಒಳಿತಾಗುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ-ಭವಿಷ್ಯ: 28 ಅಕ್ಟೋಬರ್, 2018!!